ಪ್ರವಾಸ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಕೆಲಸದಲ್ಲಿ(Work) ಗಡುವು ಮಾಡಿಕೊಂಡಾದರೂ ಪ್ರಯಾಣ(Traveling) ಕೈಗೊಳ್ಳುತ್ತೇವೆ. ಹೀಗೆ ಬಹುದಿನಗಳ ಪ್ರಯಾಣ ಮಾಡುವಾಗ ಆರೋಗ್ಯ ಚೆನ್ನಾಗಿಟ್ಟುಕೊಳ್ಳುವುದು ಅಷ್ಟೇ ಮುಖ್ಯ. ವರ್ಷಾಂತ್ಯದಲ್ಲಿ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚು. ಹಾಗಾಗಿ ಪ್ರಯಾಣದಲ್ಲಿ ಆರೋಗ್ಯದ ಕಾಳಜಿಯನ್ನು ಹೀಗೆ ವಹಿಸಿ.
ಪ್ರಯಾಣ ಮಾಡುವುದರಿಂದ ಹೊಸ ಚೈತನ್ಯ, ತಾಜಾ(Fresh) ತನ ಹೊಂದುತ್ತೇವೆ. ಕೆಲಸದ ಒತ್ತಡ(Stress), ಜಂಜಾಟಗಳಿಂದ ಹೊರಗುಳಿಯುತ್ತೇವೆ. ಪ್ರಯಾಣದಲ್ಲಿ ಸಂತೋಷ (Happy), ಸಂಭ್ರಮಿಸುವುದೊಂದೇ (Enjoyment) ಕೇಂದ್ರವಾಗಿರುತ್ತದೆ. ಪ್ರವಾಸದಲ್ಲಿ ಪ್ರಯಾಣ ಮಾಡುವಾಗ ಆರೋಗ್ಯಕರ ದಿನಚರಿಯನ್ನು ಕಾಪಾಡಿಕೊಳ್ಳುವುದು ಬಹಳ ಕಷ್ಟ. ಈ ಸಮಯದಲ್ಲಿ ಹುರಿದ ಮಸಾಲೆಯುಕ್ತ (Spicy Food) ಆಹಾರ ತಿನ್ನಲು ಮನಸ್ಸಾಗುತ್ತದೆ. ದಿನವಿಡೀ ತಿರುಗಾಡುವುದು, ನಂತರ ಬೀದಿ ಆಹಾರವನ್ನು (Street Food) ತಿನ್ನುವುದು ಅಥವಾ ಹಸಿದಾಗ ರೆಸ್ಟೋರೆಂಟ್ (Restaurant), ಹೋಟೆಲ್‌ನಲ್ಲಿ (Hotel) ಕುಳಿತುಕೊಳ್ಳುವುದು ನಿಮ್ಮ ಅಮೂಲ್ಯ ಸಮಯವನ್ನು ಸಂಪೂರ್ಣ ಹಾಳು ಮಾಡುತ್ತದೆ. ಈ ರೀತಿಯ ಆಹಾರಗಳನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯೂ (Immunity Power) ಕಡಿಮೆಯಾಗುತ್ತದೆ.
ಪ್ರಯಾಣದ ಸಮಯದಲ್ಲಿ ತಲೆನೋವು(Headache) ಮತ್ತು ಬೆನ್ನುನೋವಿನಂತಹ (Back Pain) ಸಮಸ್ಯೆಗಳು ಉಂಟಾಗುತ್ತದೆ. ಪ್ರಯಾಣ ಮಾಡುವಾಗ ಆರೋಗ್ಯವಾಗಿರಲು ಮತ್ತು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಬಹಳ ಮುಖ್ಯ. ಅದಕ್ಕಾಗಿ ಪ್ರತೀ ದಿನ ವ್ಯಾಯಾಮ(Exercise), ವಿಟಮಿನ್(Vitamin) ಪೂರಕಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು. ರೋಗನಿರೋಧಕ ವ್ಯವಸ್ಥೆಯು ಸೋಂಕುಗಳು(Infection) ಮತ್ತು ರೋಗಗಳಿಂದ ದೂರವಿರಿಸಲು ಸಹಾಯ ಮಾಡುತ್ತದೆ. ಬಲವಾದ ರೋಗನಿರೋಧಕ ಶಕ್ತಿಯ ಕೊರತೆಯಿಂದಾಗಿ, ಸೂಕ್ಷ್ಮಜೀವಿಗಳು ಮತ್ತು ಪರಾವಲಂಬಿಗಳು ದೇಹವನ್ನು ಪ್ರವೇಶಿಸಬಹುದು ಮತ್ತು ಅನಾರೋಗ್ಯಕ್ಕೆ ಒಳಗಾಗಬಹುದು.
ಆರೋಗ್ಯಕರ ಆಹಾರ(Healthy Food) ಮತ್ತು ದೈನಂದಿನ ವ್ಯಾಯಾಮ(Dailey Exercise) ಮಾಡುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಪ್ರಯಾಣ ಮಾಡುವಾಗ, ಸಮಯ ಸಿಕ್ಕಾಗ ಯೋಗ(Yoga) ಅಥವಾ ಸ್ಟ್ರೆಚಿಂಗ್ ವ್ಯಾಯಾಮ, ಧ್ಯಾನ(Meditation) ಮಾಡಬಹುದು. ಇದಲ್ಲದೆ, ಆಂಟಿಆಕ್ಸಿಡೆAಟ್‌ಗಳನ್ನು(Antioxidant) ಒಳಗೊಂಡಿರುವ ಕಿವಿ(Kiwi), ನಿಂಬೆ(Lemon), ಕೋಸುಗಡ್ಡೆ, ಹಣ್ಣುಗಳು(Fruits) ಮತ್ತು ಬಾಳೆಹಣ್ಣು(Banana) ಸೇರಿದಂತೆ ಅನೇಕ ಆಹಾರಗಳನ್ನು ಸೇವಿಸಿ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. Vitamin C ಮತ್ತು D ನಂತಹ ಅಗತ್ಯ ವಿಟಮಿನ್ ಇರುವ ಆಹಾರಗಳನ್ನು ಸೇವಿಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ.
Jungle Safari: ಜಂಗಲ್ ಸಫಾರಿಗೆ ಹೋಗ್ತಿದ್ದೀರಾ? ಹಾಗಿದ್ರೆ ಈ ತಪ್ಪಾಗದಂತೆ ಎಚ್ಚರವಹಿಸಿ
ಬಹುದಿನದ ಪ್ರವಾಸದಲ್ಲಿ ಹೀಗೆ ಮಾಡಿ
1. ಆರೋಗ್ಯಕರ ಉಪಹಾರ ಸೇವಿಸಿ(Light Food): ಪ್ರವಾಸದಲ್ಲಿ ಹೊಟ್ಟೆ ಹಸಿವಾಗುವುದು ಸಾಮಾನ್ಯ. ಏಕೆಂದರೆ ಪ್ರಯಾಣದಿಂದ ದೇಹ ದಣಿದಿರುತ್ತದೆ. ಹಾಗಂತ ಸಿಕ್ಕ ಆಹಾರ ಸೇವಿಸುವುದು ಒಳ್ಳೆಯದಲ್ಲ. ಪ್ರವಾಸದಲ್ಲಿ ಆರೋಗ್ಯಕರ ಆಹಾರವು ಕೆಲಸ ಮಾಡುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಈ ಸ್ಥಿತಿ ತಿಂಡಿ ಮತ್ತು ತ್ವರಿತ ಆಹಾರ ಸೇವಿಸುವುದು ಸಾಮಾನ್ಯ. ಇದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಆಲೂಗೆಡ್ಡೆ ಚಿಪ್ಸ್(Potato Chips) ಮತ್ತು ಮಿಠಾಯಿಗಳಂತಹ ವಸ್ತುಗಳು ಸ್ವಲ್ಪ ಸಮಯದವರೆಗೆ ಹೊಟ್ಟೆ ತುಂಬಿಸಬಹುದು ಆದರೆ ಹೆಚ್ಚಿನ ಉಪ್ಪು(Salt) ಮತ್ತು ಸಕ್ಕರೆಯಿಂದಾಗಿ(Sugar) ದೇಹದ ಶಕ್ತಿಯ ಮಟ್ಟವನ್ನು ಕಡಿಮೆ ಮಾಡುತ್ತದೆ. ಪ್ರಯಾಣದ ಸಮಯದಲ್ಲಿ ಹಸಿವಾದಾಗ ಪಾಪ್‌ಕಾರ್ನ್(Popcorn) ಮತ್ತು ಡ್ರೈ ಫ್ರೂಟ್ಸ್ನಂತಹ(Dry Fruits) ಕೆಲವು ಲಘು ಮತ್ತು ಆರೋಗ್ಯಕರ ತಿಂಡಿಗಳನ್ನು ಸೇವಿಸಬಹುದು. ಇದರ ಹೊರತಾಗಿ, ಪ್ರೋಟೀನ್ ಬಾರ್(Protein Bar) ಜೊತೆಗಿಟ್ಟುಕೊಂಡು ಬೇಕಾದಾಗ ಸೇವಿಸುವುದು ಒಳ್ಳೆಯದು.
2. ಸಾಕಷ್ಟು ನೀರು ಕುಡಿಯಿರಿ (Drink Water): ಪ್ರಯಾಣವನ್ನು ಆನಂದದಿAದ ಅನುಭವಿಸುವ ಭರದಲ್ಲಿ ಬಹುತೇಕ ಅಂಶಗಳನ್ನು ಮರೆತಿರುತ್ತೇವೆ. ಅದರಲ್ಲಿ ನೀರು ಕುಡಿಯುವುದು ಒಂದು. ಆಹಾರ ಜೊತೆಯಲ್ಲಿದ್ದಾಗ ಅಥವಾ ಅತಿಯಾಗಿ ಬಾಯಾರಿಕೆಯಾದಾಗ ಮಾತ್ರ ನೀರು ಕುಡಿಯುತ್ತೇವೆ. ಹೀಗೆ ಮಾಡುವುದರಿಂದ ದೇಹದ ಉಷ್ಣತೆಯು(Body Heat) ಹೆಚ್ಚುತ್ತದೆ. ಜೊತೆಗೆ ದೇಹದಲ್ಲಿ ನೀರಿನಾಂಶದ ಕೊರತೆಯಿಂದಾಗಿ ಬ್ಯಾಕ್ಟೀರಿಯಾ(Bacteria) ಮತ್ತು ವೈರಸ್‌ಗಳು(Virus) ದೇಹಕ್ಕೇ ಬೇಗ ದಾಳಿ ಮಾಡುತ್ತವೆ. ಪ್ರವಾಸದಲ್ಲಿರುವಾಗ ನೀವು ಕನಿಷ್ಠ 8 ರಿಂದ 9 ಗ್ಲಾಸ್ ನೀರನ್ನು(Glass Water) ಕುಡಿಯಬೇಕು. ಮಲಗುವ ಮುನ್ನ ಮತ್ತು ಬೆಳಗ್ಗೆ ಎದ್ದ ನಂತರ ಒಂದು ಲೋಟ ನೀರು ಕುಡಿಯುವುದನ್ನು ಮರೆಯಬೇಡಿ.
3. ಆಲ್ಕೋಹಾಲ್ ಅಥವಾ ಧೂಮಪಾನ ಬೇಡ (Alcohol Or Smoking ): ಸ್ನೇಹಿತರು(Friends) ಅಥವಾ ಪಾಲುದಾರರೊಂದಿಗೆ ಪ್ರವಾಸಕ್ಕೆ ಹೋದಾಗ ಆಗಾಗ್ಗೆ ಮದ್ಯದ ಪಾರ್ಟಿಗಳನ್ನು(Party) ಯೋಜಿಸಲಾಗುತ್ತದೆ. ಪ್ರಯಾಣದಲ್ಲಿ ಮದ್ಯಪಾನ ಅಥವಾ ಧೂಮಪಾನವನ್ನು ಮಿತಿಗೊಳಿಸಬೇಕು. ಏಕೆಂದರೆ ಇದು ನಿದ್ರೆಯ ಮೇಲೆ ಪರಿಣಾಮ ಬೀರುವುದಲ್ಲದೆ ತೀವ್ರ ಆಯಾಸ ಮತ್ತು ಒತ್ತಡಕ್ಕೆ ಕಾರಣವಾಗಬಹುದು.
Traveling Tips : ಕಡಿಮೆ ಖರ್ಚಿನಲ್ಲಿ ಹೋಟೆಲ್ ರೂಮ್ ಬುಕ್ ಮಾಡಲು ಟಿಪ್ಸ್
4. ಸರಿಯಾದ ಪ್ರಮಾಣದ ಆಹಾರ ಸೇವಿಸಿ: ವಾಕಿಂಗ್ ಹೋದಾಗ, ಅತಿಯಾಗಿ ತಿನ್ನುತ್ತೇವೆ. ಇದರಿಂದ ವಾಯು ಅಥವಾ ಅಸಿಡಿಟಿ(Acidity) ಸಮಸ್ಯೆ ಶುರುವಾಗುತ್ತದೆ ಅಥವಾ ತೂಕ ಹೆಚ್ಚುತ್ತದೆ (Weight Gain). ಪ್ರಯಾಣದಲ್ಲಿ ಫಿಟ್ ಆಗಿ ಮತ್ತು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ಬಯಸಿದರೆ ಮಧ್ಯಾಹ್ನದ ಊಟಕ್ಕೆ ಭಾರೀ ಆಹಾರವನ್ನು(Heavy Food) ಸೇವಿಸಿದ್ದರೆ ರಾತ್ರಿಯ ಊಟಕ್ಕೆ ಲಘುವಾಗಿ (Light Food) ತಿನ್ನುವುದು ಒಳ್ಳೆಯದು. ಇದರಿಂದ ರಾತ್ರಿಯಲ್ಲಿ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ(Digestion). ರಾತ್ರಿ ಸಮಯದಲ್ಲಿ ಪ್ರೋಟೀನ್(Protein), ತರಕಾರಿಗಳು(Vegetables), ಪೌಷ್ಟಿಕ ಸೊಪ್ಪುಗಳು, ಸಲಾಡ್‌ಗಳನ್ನು(Salad) ಹೊಂದಬಹುದು.
5. ಕೈ ತೊಳೆಯಿರಿ (Wash Hands): ಪ್ರವಾಸದಲ್ಲಿದ್ದಾಗ ಅಲ್ಲಿ ಇಲ್ಲಿ ಏನನ್ನಾದರೂ ಮುಟ್ಟಿರುತ್ತೇವೆ. ಈ ಸಮಯದಲ್ಲಿ ಗೊತ್ತಿಲ್ಲದೆ ತಿಂಡಿ, ಆಹಾರಗಳನ್ನು ಸೇವಿಸುವಾಗ ಹಾಗೆಯೇ ತಿನ್ನುತ್ತೇವೆ. ಇದು ಒಳ್ಳೆಯ ಅಭ್ಯಾಸವಲ್ಲ. ಆರೋಗ್ಯ ಚೆನ್ನಾಗಿರಲು ಕೈ ನೈರ್ಮಲ್ಯ ಕಾಯ್ದುಕೊಳ್ಳುವುದು. ಕೈಗಳು ಬಾಗಿಲಿನ ಹಿಡಕಿ, ಆಹಾರದ ತಟ್ಟೆ, ಬ್ಯಾಗ್ ಹ್ಯಾಂಡಲ್ ಇತ್ಯಾದಿ ವಸ್ತುಗಳನ್ನು ಮುಟ್ಟುತ್ತೇವೆ. ಅದೇ ಕೈಯಿಂದ ತಿನ್ನುವುದು, ಕಣ್ಣು(Eye) ಮತ್ತು ಬಾಯಿಯನ್ನು (Mouth) ಮುಟ್ಟಿಕೊಳ್ಳುವುದು ಮಾಡುತ್ತೇವೆ. ಹಾಗಾಗಿ ಯಾವುದೇ ಕೆಲಸ ಮಾಡುವ ಮೊದಲು ಕೈಗಳನ್ನು ತೊಳೆದು ಟವೆಲ್‌ನಲ್ಲಿ ಒರೆಸಿಕೊಳ್ಳಿ. ಕಣ್ಣು ಬಾಯಿ ಮುಟ್ಟುವಾಗ ಟಿಶ್ಯು(Tissue), ಕರ್ಚಿಫ್(Napkin) ಜೊತೆಗಿಟ್ಟುಕೊಳ್ಳಿ.