Christmas, New Year ಖುಷೀಲಿ ಬೇಕಾಬಿಟ್ಟಿ ಡ್ರಿಂಕ್ಸ್ ಮಾಡಿದ್ರೆ ತ್ವಚೆ ಹಾಳಾಗುತ್ತೆ

By Vinutha Perla  |  First Published Dec 25, 2022, 1:04 PM IST

ಕ್ರಿಸ್‌ಮಸ್‌ ಎಂದರೆ ಸಾಕು ತಕ್ಷಣಕ್ಕೆ ನೆನಪಾಗುವುದು ಕೇಕ್‌, ಕುಕ್ಕೀಸ್ ಹಾಗೂ ವೈನ್‌. ಹಾಗಂತ ಹಬ್ಬದ ನೆಪದಲ್ಲಿ ಬೇಕಾಬಿಟ್ಟಿ ಅಲ್ಕೋಹಾಲ್ ಸೇವನೆ ಚರ್ಮವನ್ನು ಹಾಳು ಮಾಡುವುದು ಖಂಡಿತ. ಹಾಗಾಗಬಾರದು ಅಂದ್ರೆ ಏನ್ಮಾಡ್ಬೇಕು. ಇಲ್ಲಿದೆ ಹೆಚ್ಚಿನ ಮಾಹಿತಿ.


ಕ್ರಿಸ್‌ಮಸ್‌, ಇಯರ್ ಎಂಡ್ ಸನಿಹದಲ್ಲಿದೆ. ಈಗ ಪಾರ್ಟಿ ಮಾಡಲು ಕಾರಣಗಳು ಬೇಕಿಲ್ಲ. ಹಬ್ಬದ ನೆಪದಲ್ಲಿ, ರಜಾ ದಿನವೆಂದು ಕುಟುಂಬ ಸದಸ್ಯರು, ಸ್ನೇಹಿತರು ಒಂದೆಡೆ ಸೇರುತ್ತಾರೆ. ಕೇಕ್, ವಿಸ್ಕಿ, ವೈನ್‌ಗಳನ್ನು ಜೊತೆಯಾಗಿ ಸವಿಯುತ್ತಾರೆ. ಆದರೆ ನೀವು ಜಾಲಿ ಹಾಲಿಡೇಸ್ ಎಂದು ಬೇಕಾಬಿಟ್ಟಿ ಅಲ್ಕೋಹಾಲ್ ಸೇವಿಸುವ ತಪ್ಪನ್ನು ಮಾಡಬಾರದು. ಇದು ನಿಮ್ಮ ಆರೋಗ್ಯವನ್ನು (Health) ಹದಗೆಡಿಸಬಹುದು. ಮದ್ಯದ ಅತಿಯಾದ ಸೇವನೆಯು ಹ್ಯಾಂಗೊವರ್‌ಗೆ ಕಾರಣವಾಗುತ್ತದೆ ಎಂದು ನಿಮಗೆ ತಿಳಿದಿದೆ. ಆದರೆ ಅಲ್ಕೋಹಾಲ್ ತ್ವಚೆಯ ಮೇಲೆ ಸಹ ಅಡ್ಡ ಪರಿಣಾಮಗಳನ್ನು ಬೀರುತ್ತದೆ. ಅದಕ್ಕಾಗಿಯೇ ವಿಶೇಷ ಸಂದರ್ಭದಲ್ಲಿಯೂ ಮಿತ ಪ್ರಮಾಣದಲ್ಲಿ ಕುಡಿಯುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು.

ಅಲ್ಕೋಹಾಲ್ ಚರ್ಮಕ್ಕೆ ಹಾನಿ ಮಾಡುತ್ತದೆ
ಅಲ್ಕೋಹಾಲ್ ಸೇವಿಸಿದಾಗ ಚರ್ಮಕ್ಕೆ (Skin) ದೊಡ್ಡ ಪ್ರಮಾಣದ ಹಾನಿಯಾಗುತ್ತದೆ. ಅಲ್ಕೋಹಾಲ್‌, ಮೇದೋಜ್ಜೀರಕ ಗ್ರಂಥಿಯಿಂದ ಯಕೃತ್ತಿನವರೆಗೆ ಚರ್ಮದವರೆಗೆ ಹಾನಿ ಮಾಡುತ್ತದೆ. ಇದರ ಮೊದಲ ಪರಿಣಾಮವೆಂದರೆ ನಿರ್ಜಲೀಕರಣ. ಅಲ್ಕೋಹಾಲ್ ಚರ್ಮದಿಂದ ದ್ರವವನ್ನು ಹೊರತೆಗೆಯುವುದರಿಂದ ಚರ್ಮವು ಯಾವಾಗಲೂ ಶುಷ್ಕವಾಗಿರುತ್ತದೆ. ಎರಡ್ಮೂರು ದಶಕಗಳಿಂದ ಮದ್ಯಪಾನ (Drinking) ಮಾಡುತ್ತಿರುವ ಮಹಿಳೆ (Woman) ಮತ್ತು ಮದ್ಯ ಸೇವಿಸದ ಅದೇ ವಯಸ್ಸಿನ ಮಹಿಳೆಯನ್ನು ನೋಡಿದರೆ ಅವರ ತ್ವಚೆಯಲ್ಲಿ ಅಗಾಧ ವ್ಯತ್ಯಾಸ ಕಾಣಿಸುತ್ತದೆ. ಕುಡಿಯುತ್ತಿರುವವನಿಗೆ ಆ ನಿರ್ಜಲೀಕರಣದ ಹಾನಿಯಿಂದ ಹೆಚ್ಚು ಸುಕ್ಕುಗಳು ಉಂಟಾಗುತ್ತವೆ ಎಂದು ತಜ್ಞರು ಹಂಚಿಕೊಂಡಿದ್ದಾರೆ. ವಾಸ್ತವವಾಗಿ, ಇದು ನಿಮ್ಮ ನಿಜವಾದ ವಯಸ್ಸಿಗಿಂತ 10 ವರ್ಷ ಹೆಚ್ಚು ವಯಸ್ಸಾಗಿ ಕಾಣುವಂತೆ ಮಾಡುತ್ತದೆ.

Latest Videos

undefined

ಕ್ರಿಸ್ಮಸ್- ನ್ಯೂ ಇಯರ್ ಪಾರ್ಟಿಗಳಲ್ಲಿ ಮೈ ಮರೆತ್ರೆ ಹೃದಯಕ್ಕೆ ತೊಂದ್ರೆ ಎಚ್ಚರ!

ಚರ್ಮಕ್ಕೆ ಹಾನಿಯಾಗಬಾರದು ಎಂದರೆ ಎಷ್ಟು ಕುಡಿಯಬಹುದು ?
ವಯಸ್ಸು ಮತ್ತು ಅಲ್ಕೋಹಾಲ್ ಸೇವನೆಗೆ ಸಂಬಂಧವಿದೆ. ನೀವು 20 ವರ್ಷ ವಯಸ್ಸಿನವರಾಗಿದ್ದರೆ ಅಲ್ಕೋಹಾಲ್ ಸುಮಾರು ಮೂರು ಗಂಟೆಗಳಲ್ಲಿ ನಿಮ್ಮ ದೇಹ (Body)ವನ್ನು ಬಿಡುತ್ತದೆ. ನೀವು ಬೆಳೆದು 40 ವರ್ಷಕ್ಕೆ ಕಾಲಿಡುತ್ತಿದ್ದಂತೆ, ಆ ಪಾನೀಯವು ನಿಮ್ಮ ದೇಹವನ್ನು ಬಿಡಲು ಸರಾಸರಿ 33 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಹೀಗಾಗಿ, ವಾರದಲ್ಲಿ ಒಂದು ಅಥವಾ ಎರಡು ಬಾರಿ ಮಾತ್ರ ಕುಡಿಯಬೇಕು. ಇದರಿಂದ ಚರ್ಮಕ್ಕೆ ಕಡಿಮೆ  ಹಾನಿಯಾಗುತ್ತದೆ.

ನಿರ್ಜಲೀಕರಣವನ್ನು ತಪ್ಪಿಸಲು ಸಲಹೆಗಳು
ಕುಡಿಯುವ ಅಲ್ಕೋಹಾಲ್ ಪ್ರಮಾಣವನ್ನು ಮಿತಿಗೊಳಿಸಬೇಕು. ಅಲ್ಲದೆ ನಿರ್ಜಲೀಕರಣವನ್ನು ತಪ್ಪಿಸಲು ಅಲ್ಕೊಹಾಲ್‌ಯುಕ್ತ ಪಾನೀಯಗಳ ನಡುವೆ ಸಾಕಷ್ಟು ನೀರು (Water) ಅಥವಾ ತಂಪು ಪಾನೀಯಗಳನ್ನು ಕುಡಿಯಬೇಕು. ವಿಭಿನ್ನ ಅಲ್ಕೋಹಾಲ್‌ಗಳು ಚರ್ಮದ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರುತ್ತವೆ. ತಜ್ಞರು ಹೇಳುವಂತೆ ವೋಡ್ಕಾ, ಜಿನ್ ಮತ್ತು ಟಕಿಲಾದಂತಹ ಅಲ್ಕೋಹಾಲ್ ದೇಹದ ಮೇಲೆ ಹೆಚ್ಚು ಪರಿಣಾಮವನ್ನು ಉಂಟು ಮಾಡುವುದಿಲ್ಲ. ಇದು ಯಾವುದೇ ತೊಂದರೆ (Problem)ಗಳಿಲ್ಲದೆ ನಿಮ್ಮ ದೇಹದಿಂದ ಹೊರಬರುತ್ತದೆ.

News Year 2023: ಗೋವಾಕ್ಕೆ ಟೂರ್ ಪ್ಲ್ಯಾನ್ ಮಾಡಿದ್ರೆ ಈ ಮಿಸ್ಟೇಕ್ಸ್ ಅವೈಯ್ಡ್ ಮಾಡಿ…

ಅಲ್ಕೋಹಾಲ್‌ ಸೇವನೆಯ ಮೊದಲು ಮತ್ತು ಕುಡಿಯುವಾಗ ತಿನ್ನಿರಿ
ಕುಡಿಯುವ ಅವಧಿಯ ಮೊದಲು ಮತ್ತು ಸಮಯದಲ್ಲಿ ತಿನ್ನುವುದು ಉತ್ತಮ, ತಜ್ಞರು ಸಲಹೆ ನೀಡುತ್ತಾರೆ. ನಿಮ್ಮ ಹೊಟ್ಟೆ ಖಾಲಿಯಾಗಿರುವಾಗ ನೀವು ಕುಡಿಯುತ್ತಿದ್ದರೆ, ಅಲ್ಕೋಹಾಲ್ ನಿಮ್ಮ ರಕ್ತಪ್ರವಾಹಕ್ಕೆ ವೇಗವಾಗಿ ಪ್ರವೇಶಿಸುತ್ತದೆ ಮತ್ತು ಇದು ದೇಹದ ಮೇಲೆ ತಕ್ಷಣಕ್ಕೆ ಹಾನಿಕಾರಕ ಪರಿಣಾಮ ಬೀರಬಹುದು.. ಇದು ನಿಮ್ಮ ಕುಡಿತವನ್ನು ನಿರ್ವಹಿಸುವುದನ್ನು ಕಷ್ಟಕರವಾಗಿಸುತ್ತದೆ, ಆದ್ದರಿಂದ ನಿಮ್ಮ ಮೊದಲ ಪಾನೀಯದ ಮೊದಲು ಮತ್ತು ನೀವು ಕುಡಿಯುವಾಗ ತಿನ್ನುವುದು ಒಳ್ಳೆಯದು.

ಗಂಡಸರಿಗೆ ಸಮನಾಗಿ ಎಂಬಂತೆ ನಾರಿಯೂರೂ ಕುಡಿತಕ್ಕೆ ಬಲಿಯಾಗುತ್ತಿರುವುದೇಕೆ?

click me!