ಇಂಡಿಯನ್ ಟಾಯ್ಲೆಟ್ V/s ವೆಸ್ಟರ್ನ್ ಟಾಯ್ಲೆಟ್ ಸೀಟ್, ಆರೋಗ್ಯಕ್ಕೆ ಯಾವುದು ಬೆಸ್ಟ್?

By Vinutha Perla  |  First Published Feb 17, 2023, 10:35 AM IST

ಬದಲಾದ ಕಾಲಕ್ಕೆ ತಕ್ಕಂತೆ ಎಲ್ಲವೂ ಬದಲಾಗುತ್ತದೆ. ಹಾಗೆಯೇ ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲಾ ಮನೆಗಳಲ್ಲಿ ವೆಸ್ಟರ್ನ್‌ ಟಾಯ್ಲೆಟ್‌ಗಳ ಬಳಕೆ ಹೆಚ್ಚುತ್ತಿದೆ. ಹಳೆಯ ಕಾಲದ ಕೆಲವೇ ಕೆಲವು ಮನೆಗಳಲ್ಲಿ ಮಾತ್ರ ಇಂಡಿಯನ್‌ ಟಾಯ್ಲೆಟ್ ಬಳಕೆಯಲ್ಲಿದೆ. ಆದ್ರೆ ಇವೆರಡರಲ್ಲೂ ಆರೋಗ್ಯಕ್ಕೆ ಯಾವ ರೀತಿಯ ಟಾಯ್ಲೆಟ್ ಬಳಸೋದು ಉತ್ತಮ ತಿಳಿಯೋಣ.


ಹಿಂದಿನ ಕಾಲದಲ್ಲೆಲ್ಲಾ ಜನರು ಬಯಲು ಶೌಚಾಲಯ ಕ್ರಮವನ್ನು ಅವಲಂಬಿಸಿದ್ದರು. ನಂತರದ ದಿನಗಳಲ್ಲಿ ಶೌಚಾಲಯ ನಿರ್ಮಿಸುವ ಪದ್ಧತಿ ಆರಂಭವಾಯಿತು. ಆರಂಭದಲ್ಲಿ ಊರಿಗೊಂದು ಶೌಚಾಲಯ ನಂತರದ ದಿನಗಳಲ್ಲಿ ಮನೆಗೊಂದು ನಿರ್ಮಾಣ ಕಾರ್ಯ ಶುರುವಾಯಿತು. ಸರ್ಕಾರವೂ ಶೌಚಾಲಯ ನಿರ್ಮಿಸುವ ಯೋಜನೆಗಳನ್ನು ಆರಂಭಿಸಿತು. ಆದರೆ, ಕ್ರಮೇಣ ಫಾರಿನ್ ಕಲ್ಚರ್‌ ಅನುಸರಿಸುವುದರ ಜೊತೆಗೆ ಜನರು ಸಹ ತಮ್ಮ ಮನೆಗಳಲ್ಲಿ ಫಾರಿನ್ ಟಾಯ್ಲೆಟ್ ಕಮೋಡ್‌ನ್ನು ಹಾಕಿಕೊಳ್ಳಲು ಶುರು ಮಾಡಿದರು. ಮನೆಯ ಇಂಟೀರಿಯರ್ ಚೆನ್ನಾಗಿರಬೇಕು ಅನ್ನೋದರ ಜೊತೆಗೆ ಬಹುತೇಕರು ವಿದೇಶಿ ಶೈಲಿಯ ಹೋಮ್ ಡೆಕೋರ್ಸ್‌, ಫರ್ನೀಚರ್ಸ್‌, ಸ್ನಾನಗೃಹಕ್ಕೆ ಬೇಕಾದ ವಸ್ತುಗಳನ್ನು ಬಳಸಲು ಶುರು ಮಾಡಿದರು. ಇದರಿಂದಾಗಿ ವೆಸ್ಟರ್ನ್ ಟಾಯ್ಲೆಟ್‌ ಬಳಕೆ ಹೆಚ್ಚಾಗಿತ್ತು. 

ಹೆಚ್ಚಿನ ಮನೆಗಳು ಪಾಶ್ಚಿಮಾತ್ಯ ಶೌಚಾಲಯ (Western toilet)ಗಳನ್ನು ಸ್ಥಾಪಿಸುತ್ತಿದ್ದರೂ, ಇನ್ನೂ ಅನೇಕರು ಭಾರತೀಯ ಶೈಲಿಯ ಶೌಚಾಲಯವನ್ನು ಬಯಸುತ್ತಾರೆ. ಪಾಶ್ಚಿಮಾತ್ಯ ಶೌಚಾಲಯಗಳು ಆರಾಮದಾಯಕವೆಂದು ಹೇಳಿದರೂ ಇವುಗಳು ಹಲವು ಅನಾನುಕೂಲಗಳನ್ನು ಸಹ ಹೊಂದಿವೆ. ಮನೆಯಲ್ಲಿ ಟಾಯ್ಲೆಟ್ ಸೀಟ್ ಅಳವಡಿಸುವಾಗ, ಯಾವ ಕಮೋಡ್ ಇಡಬೇಕು. ಈ ಪ್ರಶ್ನೆಯ ಬಗ್ಗೆ ತಜ್ಞರು ಏನು ಹೇಳುತ್ತಾರೆ ಅನ್ನೋದನ್ನ ತಿಳಿಯೋಣ.

Latest Videos

undefined

ಟಾಯ್ಲೆಟ್ ನಲ್ಲಿ ತುಂಬಾ ಹೊತ್ತು ಕುಳಿತ್ರೆ ಅನಾರೋಗ್ಯ ಕಾಡೋದು ಗ್ಯಾರಂಟಿ

ಭಾರತೀಯ ಶೌಚಾಲಯ ಬಳಕೆಯ ಪ್ರಯೋಜನಗಳು
ಭಾರತೀಯ ಶೌಚಾಲಯ ದೇಹ (Body)ವನ್ನು ಸದೃಢವಾಗಿರಿಸುತ್ತದೆ: ಭಾರತೀಯ ಶೌಚಾಲಯಗಳಲ್ಲಿ ಕುಳಿತುಕೊಳ್ಳುವ, ಏಳುವ ಅಭ್ಯಾಸ ಪ್ರತಿದಿನದ ವ್ಯಾಯಾಮ (Exercise)ದಂತೆ ಆಗುತ್ತದೆ. ಇದು ಒಟ್ಟಾರೆ ಆರೋಗ್ಯಕ್ಕೆ (Health) ಒಳ್ಳೆಯದು. ನಮ್ಮಲ್ಲಿ ಹೆಚ್ಚಿನವರು ವ್ಯಾಯಾಮದ ಪ್ರಾಮುಖ್ಯತೆಯನ್ನು ತಿಳಿದಿದ್ದರೂ, ಅದನ್ನು ನಿರ್ಲಕ್ಷಿಸುತ್ತಾರೆ. ಭಾರತೀಯ ಟಾಯ್ಲೆಟ್‌ಗಳಲ್ಲಿ ಕುಳಿತುಕೊಳ್ಳುವುದು ಸಣ್ಣ ಮಟ್ಟಿನ ವ್ಯಾಯಾಮ ಚಟುವಟಿಕೆಯಂತೆ ಆಗುತ್ತದೆ. ಇದು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ಕೈ ಮತ್ತು ಕಾಲುಗಳಿಗೆ ಉತ್ತಮ ವ್ಯಾಯಾಮವಾಗಿದೆ ಎಂದು ಹೇಳಲಾಗುತ್ತದೆ.

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ: ಸ್ಕ್ವಾಟಿಂಗ್ ನಿಮ್ಮ ಹೊಟ್ಟೆಯನ್ನು ಹಿಂಡುತ್ತದೆ, ಇದು ಹೊಟ್ಟೆಯಲ್ಲಿರುವ ಆಹಾರವನ್ನು ಒತ್ತುವ, ಒತ್ತಡದ ಮೂಲಕ ಜೀರ್ಣಕ್ರಿಯೆಗೆ (Digestion) ಸಹಾಯ ಮಾಡುತ್ತದೆ. ಪಾಶ್ಚಿಮಾತ್ಯ ಶೈಲಿಯ ಶೌಚಾಲಯದಲ್ಲಿ ಕುಳಿತುಕೊಳ್ಳುವುದು  ಹೊಟ್ಟೆಯ ಮೇಲೆ ಯಾವುದೇ ಒತ್ತಡವನ್ನು ಬೀರುವುದಿಲ್ಲ.

ಭಾರತೀಯ ಶೌಚಾಲಯಗಳು ಪರಿಸರ ಸ್ನೇಹಿ: ಪಾಶ್ಚಿಮಾತ್ಯ ಶೌಚಾಲಯಗಳಲ್ಲಿ ಟಾಯ್ಲೆಟ್ ಪೇಪರ್‌ನ್ನು ಬಳಸಬೇಕಾಗುತ್ತದೆ. ಇದು ಕಾಗದದ ವ್ಯರ್ಥಕ್ಕೆ ಕಾರಣವಾಗುತ್ತದೆ. ಭಾರತೀಯ ಶೌಚಾಲಯಗಳಲ್ಲಿ ಪೇಪರ್ ವೇಸ್ಟ್ ಆಗುವುದಿಲ್ಲ. ಭಾರತೀಯ ಶೌಚಾಲಯಗಳಿಗೆ ಹೋಲಿಸಿದರೆ ಪಾಶ್ಚಿಮಾತ್ಯ ಶೌಚಾಲಯಗಳಿಗೆ ಇನ್ನೂ ಹೆಚ್ಚಿನ ನೀರಿನ ಅಗತ್ಯವಿರುತ್ತದೆ.

ಹೊತ್ತು ಗೊತ್ತಿಲ್ಲದ ಹೊತ್ತಲ್ಲಿ ಟಾಯ್ಲೆಟ್‌ಗೆ ಹೋಗೋದು ಅನಾರೋಗ್ಯದ ಲಕ್ಷಣ!

ಭಾರತೀಯ ಶೌಚಾಲಯಗಳು ಗರ್ಭಿಣಿಯರಿಗೆ ಒಳ್ಳೆಯದು: ಭಾರತೀಯ ಶೌಚಾಲಯಗಳನ್ನು ಬಳಸುವುದು ಗರ್ಭಿಣಿಯರಿಗೆ (Pregnant) ಪ್ರಯೋಜನಕಾರಿಯಾಗಿದೆ ಏಕೆಂದರೆ ಅವುಗಳನ್ನು ಬಳಸುವಾಗ ಅವರು ಕುಳಿತುಕೊಳ್ಳಬೇಕಾಗುತ್ತದೆ. ಗರ್ಭಿಣಿ ಮಹಿಳೆ ಭಾರತೀಯ ಶೌಚಾಲಯದಲ್ಲಿ ಕುಳಿತುಕೊಳ್ಳುವಾಗ ಗರ್ಭಾಶಯದ ಮೇಲೆ ಯಾವುದೇ ಒತ್ತಡವಿಲ್ಲ. ಭಾರತೀಯ ಶೌಚಾಲಯವನ್ನು ನಿಯಮಿತವಾಗಿ ಬಳಸುವುದರಿಂದ ಗರ್ಭಿಣಿಯರು ಸುಗಮ ಮತ್ತು ನೈಸರ್ಗಿಕ ಹೆರಿಗೆಗೆ ಸಿದ್ಧರಾಗುತ್ತಾರೆ ಎಂದು ಹೇಳಲಾಗುತ್ತದೆ.

ಕರುಳಿನ ಕ್ಯಾನ್ಸರ್ ಮತ್ತು ಇತರ ಕಾಯಿಲೆಗಳನ್ನು ತಡೆಯುತ್ತದೆ: ಸ್ಕ್ವಾಟಿಂಗ್ ನಮ್ಮ ದೇಹದಲ್ಲಿನ ಕೊಲೊನ್‌ನಿಂದ ಮಲವನ್ನು ಸಂಪೂರ್ಣವಾಗಿ ಹೊರಹಾಕಲು ಸಹಾಯ ಮಾಡುತ್ತದೆ. ಇದು ಮಲಬದ್ಧತೆ, ಅಪೆಂಡಿಸೈಟಿಸ್ ಮತ್ತು ಕರುಳಿನ ಕ್ಯಾನ್ಸರ್‌ಗೆ ಕಾರಣವಾಗುವ ಇತರ ಅಂಶಗಳ ಸಾಧ್ಯತೆಗಳನ್ನು ತಡೆಯುತ್ತದೆ.

ವೆಸ್ಟರ್ನ್ ಶೌಚಾಲಯ ಬಳಕೆಯಿಂದಾಗುವ ತೊಂದರೆಗಳು
ವೆಸ್ಟರ್ನ್ ಟಾಯ್ಲೆಟ್ ಶೀಟ್ ಕೂಡ ಅನೇಕ ಪ್ರಯೋಜನಗಳನ್ನ ಹೊಂದಿದೆ. ವೆಸ್ಟರ್ನ್ ಟಾಯ್ಲೆಟ್ ವಿಶೇಷವಾಗಿ ಕಾಲುನೋವಿನ ಸಮಸ್ಯೆಯಿಂದ ಕುಳಿತುಕೊಳ್ಳಲು ಸಾಧ್ಯವಾಗದವರಿಗೆ,  ಕೀಲು ನೋವಿನಿಂದ ಬಳಲುತ್ತಿರುವ ಜನರಿಗೆ ತುಂಬಾ ಆರಾಮದಾಯಕವಾಗಿದೆ. ಆದರೆ ಇದರಿಂದಾಗುವ ಅನಾನುಕೂಲಗಳು ಹೆಚ್ಚು. ವಿಪರ್ಯಾಸವೆಂದರೆ ಆರೋಗ್ಯವಂತರೂ ಇದನ್ನು ಬಳಸುತ್ತಿದ್ದಾರೆ. ಆದ್ರೆ, ವಸ್ಟರ್ನ್ ಶೌಚಾಲಯವು ಅನುಕೂಲಗಳನ್ನ ಹೊಂದಿದೆ. ಈ ಕಾರಣದಿಂದಾಗಿ, ವ್ಯಕ್ತಿಯು ಅನಾರೋಗ್ಯಕ್ಕೆ ಒಳಗಾಗುತ್ತಾನೆ. ಪಾಶ್ಚಿಮಾತ್ಯ ಶೌಚಾಲಯಕ್ಕೆ ಹೋಗುವ ಅಭ್ಯಾಸ ದೇಹದ ಸೋಂಕಿನ ಅಪಾಯವನ್ನ ಹೆಚ್ಚಿಸುತ್ತದೆ. ಇದು ಅತಿಸಾರ ಮತ್ತು ಅನೇಕ ಹೊಟ್ಟೆ ಸಮಸ್ಯೆಗಳನ್ನ ಉಂಟು ಮಾಡಬಹುದು. ಯಾಕಂದ್ರೆ, ವೆಸ್ಟರ್ನ್ ಟಾಯ್ಲೆಟ್ ಸೀಟ್ ಬಳಸುವಾಗ ಚರ್ಮ ಸಂಪರ್ಕಕ್ಕೆ ಬರುತ್ತದೆ. ಇದರಿಂದ ರೋಗಾಣುಗಳು ಸುಲಭವಾಗಿ ಹರಡಬಹುದು.

click me!