ನೆನಪಿನ ಶಕ್ತಿ ವೃದ್ಧಿಸಿಕೊಳ್ಳೋದು ಬಹಳ ಮುಖ್ಯ. ವಯಸ್ಸಾದಂತೆ ಮರೆವು ಹೆಚ್ಚಾಗುತ್ತದೆ. ಈ ಖಾಯಿಲೆ ಬೇಗ ಬರಬಾರದು ಅಂದ್ರೆ ಜೀವನ ಶೈಲಿ ಬದಲಾಗಬೇಕು. ಆರೋಗ್ಯಕ ಆಹಾರ, ವ್ಯಾಯಾಮ ನಮ್ಮನ್ನು ಮಾತ್ರೆಯಿಂದ ದೂರ ಇಡುತ್ತೆ.
ಇದು ಸ್ಪರ್ಧಾಯುಗ. ಇಲ್ಲಿ ನೂರಕ್ಕೆ 99.99 ಅಂಕ ಬಂದ್ರೂ ಮುಂದೆ ಕಷ್ಟ ಎನ್ನುವ ಪರಿಸ್ಥಿತಿ ಇದೆ. ಹಾಗಾಗಿಯೇ ಪ್ರತಿಯೊಬ್ಬ ವ್ಯಕ್ತಿಯೂ ತೀಕ್ಷ್ಣವಾದ ಬುದ್ಧಿಯನ್ನು ಹೊಂದಲು ಬಯಸ್ತಾನೆ. ಗೂಗಲ್ ನಂತೆ ಎಲ್ಲ ವಿಷ್ಯ ಗೊತ್ತಿರಬೇಕು, ಕಂಪ್ಯೂಟರ್ ಗಿಂತ ಫಾಸ್ಟ್ ಆಗಿ ಕೆಲಸ ಮಾಡ್ಬೇಕು ಎಂಬುದು ಎಲ್ಲರ ಆಸೆ. ಆದ್ರೆ ಎಲ್ಲರಿಗೂ ಇದು ಸಾಧ್ಯವಾಗೋದೇ ಇಲ್ಲ. ಮಕ್ಕಳಿಗೆ ಇರುವಷ್ಟು ನೆನಪಿನ ಶಕ್ತಿ ವಯಸ್ಸಾದಂತೆ ಕಡಿಮೆಯಾಗ್ತಾ ಹೋಗುತ್ತದೆ. ಹಾಗೆ ಎಲ್ಲರ ಬುದ್ಧಿಶಕ್ತಿ ಒಂದೇ ರೀತಿ ಇರೋದಿಲ್ಲ.
ಮೆದುಳು (Brain) ಆರೋಗ್ಯವಾಗಿದ್ರೆ ನೀವು ಚುರುಕಾಗಲು ಸಾಧ್ಯ. ಕೆಲವು ಸರಳವಾದ ದೈನಂದಿನ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ಮೆದುಳಿನ ಆರೋಗ್ಯ (Health) ವನ್ನು ಕಾಪಾಡಿಕೊಳ್ಳಬಹುದು.
ಬುದ್ದಿ ಚುರುಕಾಗ್ಬೇಕೆಂದ್ರೆ ಹೀಗ್ ಮಾಡಿ :
ಸರಿಯಾದ ನಿದ್ರೆ (Sleep) : ರಾತ್ರಿ ಉತ್ತಮ ನಿದ್ರೆಯಲ್ಲಿ ನಿಮ್ಮ ಬುದ್ಧಿ ಅಡಗಿದೆ. ನೀವು 7 – 8 ಗಂಟೆ ಗಾಢವಾದ್ರೆ ನಿದ್ರೆ ಮಾಡೋದು ಬಹಳ ಮುಖ್ಯ. ಪ್ರತಿ ದಿನ ಒಂದೇ ಸಮಯಕ್ಕೆ ಮಲಗಿ ಒಂದೇ ಸಮಯಕ್ಕೆ ಏಳಿ. ದುಗ್ಧರಸ ವ್ಯವಸ್ಥೆಯ ಮೇಲೆ ಸಕಾರಾತ್ಮಕ (Positive) ಪರಿಣಾಮವನ್ನು ಬೀರುತ್ತದೆ, ಇದು ನೆನಪುಗಳನ್ನು ಎನ್ಕೋಡ್ ಮಾಡಲು ನೆರವಾಗುತ್ತದೆ.
ಪದೇ ಪದೇ ಗರ್ಭಪಾತವಾಗೋದರಿಂದ ಮಹಿಳೆ ಮೇಲೆ ಏನು ಪರಿಣಾಮ ಬೀರುತ್ತೆ?
ವ್ಯಾಯಾಮ (Exercise) ಮಾಡಿ : ವ್ಯಾಯಾಮವು ಬರೀ ನಮ್ಮ ದೇಹದ ಆರೋಗ್ಯವನ್ನು ಮಾತ್ರ ಕಾಪಾಡೋದಿಲ್ಲ. ಇದು ನಮ್ಮ ಮಾನಸಿಕ ಆರೋಗ್ಯಕ್ಕೂ ಒಳ್ಳೆಯದು.
ಬುದ್ದಿ ಶಕ್ತಿ ಹೆಚ್ಚಾಗಲು ಆರೋಗ್ಯಕರ ಆಹಾರ : ಹಣ್ಣುಗಳು ಹಾಗೂ ತರಕಾರಿಗಳ ಸೇವನೆ ಬಹಳ ಮುಖ್ಯ. ಹಣ್ಣು ಮತ್ತು ತರಕಾರಿ ಜನರ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬಹಳ ಬೇಗ ನೆನಪಿನ ಶಕ್ತಿ ಕಳೆದುಕೊಳ್ಳುವ ಅಪಾಯದಿಂದ ನಮ್ಮನ್ನು ಇವು ರಕ್ಷಿಸುತ್ತವೆ.
ಖಿನ್ನತೆಯಿಂದ ದೂರವಿರಿ : ಖಿನ್ನತೆಯಿಂದ ಬಳಲುವ ಜನರ ನೆನಪಿನ ಶಕ್ತಿ ನಿಧಾನವಾಗಿ ಕಡಿಮೆಯಾಗ್ತಾ ಹೋಗುತ್ತದೆ. ಮದ್ಯಪಾನಿಗಳಲ್ಲಿ ಕೂಡ ನಾವು ಇದನ್ನು ನೋಡ್ಬಹುದು. ಹಾಗಾಗಿ ನಾವು ಖಿನ್ನತೆಯಿಂದ ದೂರವಿರಬೇಕು. ಆದಷ್ಟು ಬೇಗ ಇಂಥ ಸಮಸ್ಯೆಯಿಂದ ಹೊರಗೆ ಬರಬೇಕು.
ಧ್ಯಾನ : ಪ್ರತಿ ದಿನ ನೀವು ಧ್ಯಾನ ಮಾಡಬೇಕು. ದಿನಕ್ಕೆ 10 – 15 ನಿಮಿಷ ನೀವು ಧ್ಯಾನ ಮಾಡಿದ್ರೆ ನಿಮ್ಮ ಬುದ್ಧಿ ಚುರುಕಾಗುತ್ತದೆ. ಮರೆವಿನ ಖಾಯಿಲೆ ದೂರವಾಗುತ್ತದೆ. ಧ್ಯಾನಕ್ಕೆ ಶಾಂತ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬೇಕು. ವೃದ್ಧಾಪ್ಯದಲ್ಲಿ ನೆನಪಿನ ಶಕ್ತಿ ಕಡಿಮೆಯಾಗೋದು ಸಹಜ. ಆದ್ರೆ ನೀವು ಅದನ್ನು ವ್ಯಾಯಾಮ ಹಾಗೂ ಆಹಾರದಿಂದ ಮುಂದೂಡಬಹುದು.
ಮೆದುಳು ಚುರುಕಾಗಲು ಈ ಆಹಾರ ಸೇವನೆ ಮಾಡಿ : ನಾವು ಸೇವನೆ ಮಾಡುವ ಆಹಾರದಲ್ಲಿಯೇ ನಮ್ಮ ಆರೋಗ್ಯವಿದೆ. ಹಸಿರು ತರಕಾರಿ, ಎಲೆಗಳು, ಪಾಲಕ್, ಬ್ರೊಕೊಲಿಗಳು ಮೆದುಳಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇವು ಪೋಷಕಾಂಶಗಳ ಸಮೃದ್ಧ ಮೂಲವಾಗಿದೆ. ಈ ಸೊಪ್ಪಿನಲ್ಲಿ ವಿಟಮಿನ್ ಕೆ, ಲುಟೀನ್, ಫೋಲೇಟ್ ಮತ್ತು ಬೀಟಾ-ಕ್ಯಾರೋಟಿನ್ ನಂತಹ ಜೀವಸತ್ವಗಳು ಸಮೃದ್ಧವಾಗಿವೆ. ಇವುಗಳ ಸೇವನೆಯಿಂದ ನಿಮ್ಮ ಮೆದುಳಿನ ಆರೋಗ್ಯ ಸುಧಾರಿಸುತ್ತದೆ.
ಸೂಪರ್ ಫುಡ್ ಸ್ಟ್ರಾಬರಿ ತಿನ್ನೋದ್ರಿಂದ ಆಗೋ ಲಾಭ ಒಂದೆರಡಲ್ಲ!
ಒಮೆಗಾ 3 ಕೊಬ್ಬಿನಾಮ್ಲಗಳು ಕೂಡ ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು. ಕೊಬ್ಬಿನ ಮೀನುಗಳಲ್ಲಿ ಇದು ಕಂಡುಬರುತ್ತವೆ.
ನೇರಳೆ ಹಣ್ಣು ಮೆದುಳಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ವಾರದಲ್ಲಿ ಒಮ್ಮೆಯಾದ್ರೂ ಸ್ಟ್ರಾಬೆರಿ ಮತ್ತು ಬ್ಲೂಬೆರ್ರಿಗಳನ್ನು ಸೇರಿಸುವ ಮಹಿಳೆಯರ ನೆನಪಿನ ಶಕ್ತಿ, ಉಳಿದ ಮಹಿಳೆಯರಿಗೆ ಹೋಲಿಸಿದ್ರೆ ಎರಡುವರೆ ವರ್ಷ ಹೆಚ್ಚಿತ್ತು ಎಂಬುದು ಕಂಡು ಬಂದಿದೆ.
ಮೆದುಳಿನ ಆರೋಗ್ಯ ಚೆನ್ನಾಗಿರಬೇಕೆಂದ್ರೆ ನೀವು ವಾಲ್ ನಟ್ಸ್ ಸೇವನೆ ಮಾಡಿ. ಇದು ಹೃದಯದ ಆರೋಗ್ಯಕ್ಕೂ ಬಹಳ ಒಳ್ಳೆಯದು.