
ವಯಸ್ಸು 50 ದಾಟ್ತಿದ್ದಂತೆ ಅನೇಕರಿಗೆ ನಿರುತ್ಸಾಹ ಶುರುವಾಗುತ್ತೆ. ಇನ್ನೇನಿದೆ ಲೈಫ್ ನಲ್ಲಿ ಅಂತ ಸೋಫಾ ಸೇರುವ ಪ್ಲಾನ್ ಮಾಡ್ತಾರೆ. ಅರ್ಧ ಜೀವನ ಮುಗಿಸಿ ಬಂದ ಇವರ ಮನಸ್ಸಿನಲ್ಲಿ ತಮಗೆಲ್ಲ ಗೊತ್ತು ಎನ್ನುವ ಭಾವನೆ ಮನೆ ಮಾಡಿರುತ್ತೆ. ಮಕ್ಕಳು ಹೇಳಿದ್ದನ್ನು ಕೇಳ್ದೆ, ಆರೋಗ್ಯದ ಬಗ್ಗೆ ಗಮನ ನೀಡ್ದೆ ಹಳೆ ಪದ್ಧತಿಯನ್ನೇ ಫಾಲೋ ಮಾಡ್ತಾ ಬೇಗ ಮುಪ್ಪು ತಂದುಕೊಳ್ಳುವವರಿದ್ದಾರೆ. ವಯಸ್ಸಾದಂತೆ ಜವಾಬ್ದಾರಿಯನ್ನು ಮಕ್ಕಳಿಗೆ ವಹಿಸೋದು ಸರಿ. ಆದ್ರೆ ಉತ್ತಮ ಆಹಾರ ಸೇವನೆ ಮಾಡ್ದೆ, ವ್ಯಾಯಾಮ, ವಾಕಿಂಗ್ ಮಾಡ್ದೆ ಕುಳಿತಲ್ಲೇ ಕುಳಿತಿದ್ರೆ ಇದು ವಿಶ್ರಾಂತಿ ಅನ್ನಿಸಿಕೊಳ್ಳೋದಿಲ್ಲ. ದೇಹ ರೋಗಗಳನ್ನು ಆಹ್ವಾನಿಸಲು ಶುರು ಮಾಡುತ್ತೆ. ಗೊತ್ತಿಲ್ದೆ ನೀವು ಹಾಸಿಗೆ ಹಿಡಿಯುವಂತೆ ಮಾಡುತ್ತೆ. 50 ವರ್ಷ ದಾಟಿದ ಪ್ರತಿಯೊಬ್ಬರೂ ಆರೋಗ್ಯಕರ ಜೀವನ ಶೈಲಿ ರೂಢಿಸಿಕೊಳ್ಬೇಕು.
50 ರ ನಂತರ ದೇಹವು ಸ್ನಾಯು, ಮೂಳೆ ಸಾಂದ್ರತೆ ಮತ್ತು ಶಕ್ತಿಯನ್ನು ವೇಗವಾಗಿ ಕಳೆದುಕೊಳ್ಳುತ್ತದೆ. ಬೆಳಗಿನ ಅಭ್ಯಾಸಗಳು ರಕ್ತದಲ್ಲಿನ ಸಕ್ಕರೆ, ಜೀರ್ಣಕ್ರಿಯೆ ಮತ್ತು ಇಡೀ ದಿನ ಶಕ್ತಿಯನ್ನು ಹೆಚ್ಚಿಸುತ್ತವೆ.
ಮಾಡಿ 7-8 ಗಂಟೆಗಳ ನಿದ್ರೆಯ ನಂತ್ರ ದೇಹ ಸ್ವಲ್ಪ ನಿರ್ಜಲೀಕರಣಗೊಳ್ಳುತ್ತದೆ. ಈ ಟೈಂನಲ್ಲಿ ನೀವು ಟೀ ಇಲ್ಲ ಕಾಫಿ ಜೊತೆ ಬಿಸ್ಕತ್ ತಿಂದ್ರೆ ಅದು ಶಕ್ತಿ ತುಂಬುವ ಬದಲು ಸುಸ್ತು ಮಾಡುತ್ತೆ. ಡಿಹೈಡ್ರೇಟ್ ಆದ್ರೆ ಆಯಾಸ, ತಲೆನೋವು, ಕರುಳಿನ ಕೆಲ್ಸ ನಿಧಾನಗೊಳ್ಳುತ್ತೆ. ಬಿಸ್ಕತ್ ಹಾಗೂ ಟೀ ನಿಮ್ಮ ಸುಸ್ತನ್ನು ಹೆಚ್ಚು ಮಾಡುತ್ತೆ. ಹಾಗಾಗಿ ಬೆಳಿಗ್ಗೆ ಎದ್ದ ತಕ್ಷಣ ಟೀ ಕುಡಿಯೋ ಬದಲು ಬೆಚ್ಚಗಿನ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಇದು ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ಹೊಟ್ಟೆ ಆಹಾರ ಸೇವಿಸಲು ಸಿದ್ಧವಾಗುತ್ತೆ.
ಮತ್ತೆ ಬಂದಿದೆ ನಿಫಾ ವೈರಸ್… ರೋಗ ಲಕ್ಷಣ ತಿಳ್ಕೊಂಡ್ರೆ ಜೀವ ಉಳಿಸಿಕೊಳ್ಳಬಹುದು
ಬೆಳಿಗ್ಗೆ ಮೆಂತ್ಯ ಬೀಜದ ನೀರು ಬೆಸ್ಟ್
ಒಂದರಿಂದ ಎರಡು ಸ್ಪೂನ್ ಮೆಂತ್ಯ ಬೀಜವನ್ನು ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಎದ್ದ ತಕ್ಷಣ ನೀವು ಈ ನೀರನ್ನು ಕುಡಿಯಿರಿ. ನಂತ್ರ ಮೆಂತ್ಯ ಬೀಜವನ್ನು ಅಗೆದು ತಿನ್ನಿ. ಮೆಂತ್ಯದಲ್ಲಿರುವ ನಾರಿನಂಶವು ಕಾರ್ಬೋಹೈಡ್ರೇಟ್ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತದೆ. ರಕ್ತದಲ್ಲಿನ ಸಕ್ಕರೆಯನ್ನು ಸ್ಥಿರವಾಗಿರಿಸುತ್ತದೆ. 3 ವರ್ಷಗಳ ಅಧ್ಯಯನವೊಂದರ ಪ್ರಕಾರ ಪ್ರತಿದಿನ 10 ಗ್ರಾಂ ಮೆಂತ್ಯ ಬೀಜ ಸೇವನೆ ಮಾಡುವುದು ಮಧುಮೇಹ ಪೂರ್ವ ರೋಗಿಗಳಲ್ಲಿ ಮಧುಮೇಹದ ಕಡಿಮೆ ಮಾಡುತ್ತದೆ.
ಸೂರ್ಯನ ಬೆಳಕು
ಹೆಚ್ಚಿನ ಭಾರತೀಯರು ವಿಟಮಿನ್ ಡಿಯಿಂದ ಬಳಲುತ್ತಿದ್ದಾರೆ. ಬೆಳಿಗ್ಗೆ 15 ರಿಂದ 20 ನಿಮಿಷಗಳ ಕಾಲ ಸೂರ್ಯನ ಬೆಳಕಿನಲ್ಲಿ ನಿಲ್ಲೋದು ಬಹಳ ಮುಖ್ಯ. ಭಾರತದಲ್ಲಿ ಎಷ್ಟೇ ಬಿಸಿಲಿದ್ರೂ ಜನರಿಗೆ ವಿಟಮಿನ್ ಡಿ ಸಮಸ್ಯೆ ಕಾಡುತ್ತದೆ. 50 ವರ್ಷಗಳ ನಂತ್ರ ಚರ್ಮ ಕಿರಿಯ ವಯಸ್ಕರಿಗಿಂತ 3 ಪಟ್ಟು ಕಡಿಮೆ ವಿಟಮಿನ್ ಡಿ ಉತ್ಪಾದಿಸುತ್ತದೆ. ಹಾಗಾಗಿ ಸೂರ್ಯನ ಬೆಳಕಿನಲ್ಲಿ ನಿಲ್ಲೋದು ಬಹಳ ಮುಖ್ಯ. ಬೆಳಗಿನ ಸೂರ್ಯನ ಕಿರಣಕ್ಕೆ ಮೈವೊಡ್ಡಿದ್ರೆ ದೇಹ ಸಿರ್ಕಾಡಿಯನ್ ಲಯವನ್ನು ಮರುಹೊಂದಿಸುತ್ತದೆ. ರಾತ್ರಿ ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ.
ಪ್ರೋಟೀನ್ ಭರಿತ ಉಪಹಾರ
50 ವರ್ಷದ ನಂತ್ರ ನೀವು ಮಾಡಬೇಕಾದ ಇನ್ನೊಂದು ಮುಖ್ಯ ಬದಲಾವಣೆ ಅಂದ್ರೆ ಅದು ಉಪಹಾರ. ಅನೇಕರು ಬೆಳಿಗ್ಗೆ 12 ಆದ್ರೂ ಟೀ – ಬಿಸ್ಕತ್ ನಲ್ಲಿಯೇ ಇರ್ತಾರೆ. ಇದು ಒಂದು ತಪ್ಪಾದ್ರೆ ಇನ್ನೊಂದು ಪ್ರೋಟಿನ್ ಇಲ್ಲದ ಆಹಾರ ಸೇವನೆ. ನೀವು 50ರ ನಂತ್ರ ಸ್ನಾಯುಗಳನ್ನು ಬಲಪಡಿಸಲು ಪ್ರತಿ ದಿನ 25-30 ಗ್ರಾಂ ಪ್ರೋಟೀನ್ ಸೇವನೆ ಮಾಡಿ. ಗ್ರೀಕ್ ಮೊಸರು, ಪನೀರ್ ಪರಾಠ, ಹೆಸರು ಬೇಳೆ, ಅಥವಾ ಕಡಲೆ ಹಿಟ್ಟಿನ ಚಪಾತಿಯನ್ನು ತಿನ್ನಬೇಕು. ಇವು ದೇಹ ರಕ್ಷಿಸಿ, ದೇಹಕ್ಕೆ ಶಕ್ತಿ ನೀಡುತ್ತದೆ.
ಏಷ್ಯಾದಲ್ಲೇ ಅತ್ಯುತ್ತಮ ಜೀವನ ಗುಣಮಟ್ಟ ಹೊಂದಿರುವ ಟಾಪ್ 10 ದೇಶಗಳಿವು! ಭಾರತ, ಪಾಕ್ ಸ್ಥಾನವೆಷ್ಟು?
ವಾಕಿಂಗ್
ಉಪಾಹಾರದ ನಂತ್ರ 10-15 ನಿಮಿಷಗಳ ಕಾಲ ವಾಕ್ ಮಾಡಿ. ಆಹಾರ ಸೇವನೆ ಮಾಡಿದ ತಕ್ಷಣ ವಾಕ್ ಮಾಡೋದ್ರಿಂದ ಸ್ನಾಯುಗಳು ರಕ್ತದಲ್ಲಿನ ಸಕ್ಕರೆಯನ್ನು ತಕ್ಷಣವೇ ಬಳಸಲು ಸಹಾಯ ಮಾಡುತ್ತದೆ. ಇದಲ್ಲದೆ ಜೀರ್ಣಕ್ರಿಯೆ ಸುಧಾರಿಸುತ್ತದೆ. ಹೊಟ್ಟೆ ಉಬ್ಬರ ಕಡಿಮೆಯಾಗುತ್ತದೆ. ದಿನದ ಕೊನೆಯಲ್ಲಿ 45 ನಿಮಿಷ ನೀವು ವಾಕ್ ಮಾಡಿದ್ರೆ ಒಳ್ಳೆಯದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.