ಚಳಿಗಾಲದಲ್ಲಿ ತಣ್ಣನೆ ನೀರಿನಲ್ಲಿ ಸ್ನಾನ ಮಾಡೋದು ಅಸಾಧ್ಯ. ಬಿಸಿ ಬಿಸಿ ನೀರನ್ನು ಮೈಮೇಲೆ ಹಾಕಿಕೊಂಡ್ರೆ ಹಿತವೆನ್ನಿಸುತ್ತದೆ. ಆದ್ರೆ ಈ ಬಿಸಿ ನೀರು ಆರೋಗ್ಯ ವೃದ್ಧಿಸುವ ಬದಲು ಹಾಳು ಮಾಡುತ್ತದೆ.
ಸಣ್ಣವರಿಂದ ದೊಡ್ಡವರವರೆಗೆ ಬಹುತೇಕರನ್ನು ಕಾಡಲು ಶುರು ಮಾಡಿರುವ ರೋಗವೆಂದ್ರೆ ಮಧುಮೇಹ. ಈ ಮಧುಮೇಹಕ್ಕೆ ಸೂಕ್ತ ಔಷಧಿಯಿಲ್ಲ. ಸರಿಯಾದ ಆಹಾರ ಕ್ರಮ ಹಾಗೂ ವ್ಯಾಯಾಮದ ಮೂಲಕ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಮುಖ್ಯವಾಗುತ್ತದೆ.
ಮಧುಮೇಹ (Diabetes) ದಿಂದ ದೃಷ್ಟಿ ಕಳೆದುಕೊಳ್ಳುವುದು, ಮೂತ್ರಪಿಂಡ (Kidney) ವೈಫಲ್ಯ, ಹೃದಯಾಘಾತ ಸೇರಿದಂತೆ ಅನೇಕ ಗಂಭೀರ ಕಾಯಿಲೆಗಳು ಕಾಡುವ ಸಾಧ್ಯತೆಯಿರುತ್ತದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಕೂಡ ಮಧುಮೇಹವನ್ನು ಅಪಾಯಕಾರಿ ರೋಗದಲ್ಲಿ ಸೇರಿಸಿದೆ. ಟೈಪ್ 2 ಮಧುಮೇಹಿಗಳು ರೋಗ ನಿಯಂತ್ರಣಕ್ಕೆ ಆಹಾರ (Food) ದಲ್ಲಿ ಸಮತೋಲನ ಕಾಯ್ದುಕೊಳ್ಳುತ್ತಾರೆ. ನಿಯಮಿತವಾಗಿ ವ್ಯಾಯಾಮ ಕೂಡ ಮಾಡ್ತಾರೆ. ಆದ್ರೆ ಚರ್ಮದ ಆರೋಗ್ಯವನ್ನು ಮರೆಯುತ್ತಾರೆ. ಅದ್ರಲ್ಲೂ ಚಳಿಗಾಲದಲ್ಲಿ ವಿಶೇಷ ಗಮನ ನೀಡುವುದಿಲ್ಲ. ಚಳಿಯ ಕಾರಣಕ್ಕೆ ಬಿಸಿ ಬಿಸಿ ನೀರಿನ ಸ್ನಾನಕ್ಕೆ ಆದ್ಯತೆ ನೀಡ್ತಾರೆ. ಈ ಬಿಸಿ ನೀರು ಮಧುಮೇಹಿಗಳ ಸಮಸ್ಯೆಯನ್ನು ಹೆಚ್ಚು ಮಾಡುವ ಸಾಧ್ಯತೆಯಿರುತ್ತದೆ. ಬಿಸಿ ನೀರಿನ ಸ್ನಾನ ಮಧುಮೇಹಿಗಳಿಗೆ ಮಾತ್ರವಲ್ಲ ಸಾಮಾನ್ಯ ವ್ಯಕ್ತಿಗೂ ಯೋಗ್ಯವಲ್ಲವೆಂದು ತಜ್ಞರು ಹೇಳ್ತಾರೆ. ಮಧುಮೇಹಿಗಳು ಬಿಸಿ ನೀರಿನಲ್ಲಿ ಸ್ನಾನ ಮಾಡಿದ್ರೆ ಏನೆಲ್ಲ ಸಮಸ್ಯೆ ಕಾಡುತ್ತದೆ ಎಂಬುದನ್ನು ನಾವಿಂದು ಹೇಳ್ತೆವೆ.
undefined
ಮಧುಮೇಹಿಗಳು ಬಿಸಿ ನೀರಿನಲ್ಲಿ ಸ್ನಾನ ಮಾಡಿದ್ರೆ ಕಾಡುತ್ತೆ ಈ ಸಮಸ್ಯೆ :
ಚರ್ಮಕ್ಕೆ ಅಪಾಯಕಾರಿ : ಮಧುಮೇಹಿಗಳು ಬಿಸಿನೀರಿನಿಂದ ದೂರವಿರುವುದು ಒಳ್ಳೆಯದು. ಬಿಸಿ ನೀರಿನಲ್ಲಿ ಸ್ನಾನ ಮಾಡುವುದ್ರಿಂದ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ಅವರನ್ನು ಕಾಡುತ್ತದೆ. ಚರ್ಮ ಹಳದಿ ಬಣ್ಣಕ್ಕೆ ತಿರುಗುವುದು, ಕೆಂಪು ದುದ್ದು, ಚರ್ಮದಲ್ಲಿ ಬಿರುಕು, ಚರ್ಮದ ಸೋಂಕು, ಚರ್ಮ ಕಪ್ಪಾಗುವುದು ಹೀಗೆ ಚರ್ಮಕ್ಕೆ ಸಂಬಂಧಿಸಿದ ಕೆಲ ಸಮಸ್ಯೆ ಅವರನ್ನು ಕಾಡುತ್ತದೆ. ನಿಮಗೂ ಚಳಿಗಾಲದಲ್ಲಿ ಈ ಸಮಸ್ಯೆ ಕಾಣಿಸಿಕೊಂಡ್ರೆ ಅತಿಯಾದ ಬಿಸಿ ನೀರು ತಪ್ಪಿಸಿ. ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ.
ಬಿಸಿ ನೀರಿನ ಸ್ನಾನದಿಂದ ಊತ ಸಾಧ್ಯತೆ: ಸಕ್ಕರೆ ಖಾಯಿಲೆ ಇರುವ ರೋಗಿಗಳು ಚಳಿಗಾಲದಲ್ಲಿ ಬಿಸಿ ನೀರಿನಲ್ಲಿ ಸ್ನಾನ ಮಾಡಿದರೆ ಕಾಡುವ ಇನ್ನೊಂದು ಸಮಸ್ಯೆ ಚರ್ಮ ಊದಿಕೊಳ್ಳುವುದು. ಚರ್ಮ ಊದಿಕೊಳ್ಳುವ ಜೊತೆಗೆ ಚರ್ಮದ ಬಣ್ಣ ಕೆಂಪಾಗುತ್ತದೆ. ಇದು ತುರಿಕೆಯನ್ನುಂಟು ಮಾಡುತ್ತದೆ. ಚರ್ಮದ ಮೇಲ್ಭಾಗ ಉದುರಲು ಶುರುವಾಗುತ್ತದೆ. ಸುಮಾರು ಶೇಕಡಾ 30 ರಷ್ಟು ಮಧುಮೇಹ ರೋಗಿಗಳು ಚರ್ಮದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಮಧುಮೇಹ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಯಾವುದೇ ಗಾಯ, ಕೆಮ್ಮು ಮತ್ತು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ಇದ್ದರೆ ಬೇಗ ಕಡಿಮೆಯಾಗುವುದಿಲ್ಲ. ಕೆಲವೊಮ್ಮೆ ಸಣ್ಣ ಗಾಯವೇ ದೊಡ್ಡ ಹುಣ್ಣಾಗಿ ಸಾವಿಗೆ ದಾರಿಯಾಗುತ್ತದೆ ಎಂಬುದು ನೆನಪಿರಲಿ.
ರಾತ್ರಿ ಹಾಯಾಗಿ ಮಲಗಿದ್ರೂ ಬೆಳಗ್ಗೆ ಎದ್ದ ಕೂಡ್ಲೇ ಮೈ ಕೈ ನೋವಪ್ಪಾ..ಯಾಕ್ ಹೀಗಾಗುತ್ತೆ?
ಈ ಎಲ್ಲ ಸಮಸ್ಯೆಗೆ ಕಾರಣವಾಗುತ್ತೆ ಬಿಸಿ ನೀರು : ಪ್ರತಿ ದಿನ ಬಿಸಿ ನೀರಿನಲ್ಲಿ ಸ್ನಾನ ಮಾಡುವುದು ಸೂಕ್ತವಲ್ಲ. ಅದ್ರಲ್ಲೂ ಚಳಿಗಾಲದಲ್ಲಿ ಪ್ರತಿದಿನ ಬಿಸಿ ನೀರಿನಲ್ಲಿ ಸ್ನಾನ ಮಾಡಬಾರದು. ಇದ್ರಿಂದ ಚರ್ಮದ ತೇವಾಂಶ ಕಡಿಮೆಯಾಗುತ್ತದೆ. ಚರ್ಮದ ಆರೋಗ್ಯಕ್ಕೆ ನೈಸರ್ಗಿಕ ತೈಲ, ಕೊಬ್ಬು ಮತ್ತು ಪ್ರೋಟೀನ್ ಸಮತೋಲನದಲ್ಲಿರಬೇಕು. ನೀವು ಬಿಸಿ ನೀರಿನಲ್ಲಿ ಸ್ನಾನ ಮಾಡಿದಾಗ ಈ ಸಮತೋಲನ ಕಳೆದುಹೋಗುತ್ತದೆ.
ನರಕ್ಕೆ ಹಾನಿಯಾಗ್ಬಹುದು ಎಚ್ಚರ : ಮಧುಮೇಹ ರೋಗಿಗಳು ಚಳಿಗಾಲದಲ್ಲಿ ಬಿಸಿನೀರಿನ ಸ್ನಾನ ಮಾಡಿದ್ರೆ ನರಗಳು ಹಾನಿಗೊಳಗಾಗುತ್ತವೆ. ಪಾದಗಳು ಸೂಕ್ಷ್ಮತೆ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಇದ್ರಿಂದ ಪಾದಗಳಲ್ಲಿ ಗುಳ್ಳೆ ಕಾಣಿಸಿಕೊಳ್ಳುತ್ತದೆ.
Hypersomnia Problem: ಏನು ಮಾಡಿದರೂ ನಿದ್ರೆ ತಡೆಯೋಕಾಗೋಲ್ಲ ಅಂದ್ರೆ ಈ ರೋಗವಿರುತ್ತೆ!
ಮಧುಮೇಹ ರೋಗಿಗಳು ಏನು ಮಾಡಬೇಕು? : ಚರ್ಮ ಸಂಬಂಧಿ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಸ್ವಚ್ಛತೆ ಅತಿ ಮುಖ್ಯ. ಮಧುಮೇಹಿಗಳು ಚರ್ಮವನ್ನು ಸ್ವಚ್ಛವಾಗಿಡಬೇಕು. ಅಂಡರ್ ಆರ್ಮ್ಸ್, ಸ್ತನದ ಕೆಳಗೆ, ಕಾಲ್ಬೆರಳುಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ಚರ್ಮದ ಮೇಲೆ ಶವರ್ ಜೆಲ್ ಮತ್ತು ಸೋಪ್ ಬಳಸಬೇಡಿ.