
ಬೆಂಗಳೂರು (ಮಾ.20) : ರಾಜ್ಯ ಸೇರಿದಂತೆ ದೇಶದಲ್ಲಿ ಕೊರೋನಾ ಸೋಂಕು ಪುನಃ ಉಲ್ಬಣಿಸುವ ಸಾಧ್ಯತೆ ಇರುವುದರಿಂದ ಸೋಂಕಿನ ವಿರುದ್ಧ ಹೋರಾಡಲು ಉತ್ತಮ ಪೌಷ್ಟಿಕ, ತಾಜಾ ಹಾಗೂ ಶುದ್ಧ ಆಹಾರ ಸೇವಿಸುವ ಮೂಲಕ ಆರೋಗ್ಯವನ್ನು ಸುಧಾರಿಸಿಕೊಳ್ಳುವಂತೆ ಆರೋಗ್ಯ ಇಲಾಖೆ(Health depertment) ಸಲಹಾ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಕೊರೋನಾ(Corona virus) ವಿರುದ್ಧ ಹೋರಾಡಲು ಆರೋಗ್ಯ ಕಾಪಾಡಿಕೊಳ್ಳುವುದು ಬಹುಮುಖ್ಯ. ಹೀಗಾಗಿ ಪೌಷ್ಟಿಕ, ತಾಜಾ ಹಾಗೂ ಶುದ್ಧ ಆಹಾರ ಸೇವಿಸಬೇಕು. ಉಪ್ಪು, ಸಕ್ಕರೆಯನ್ನು ಕಡಿಮೆ ಸೇವಿಸಬೇಕು. ಮನೆಯಲ್ಲಿಯೇ ಅಡುಗೆ ಮಾಡಿ, ಹೊರಗಡೆ ತಿನ್ನುವುದನ್ನು ತ್ಯಜಿಸಬೇಕು ಎಂಬುದನ್ನೂ ಸೇರಿದಂತೆ 20ಕ್ಕೂ ಹೆಚ್ಚು ಆಹಾರ ಸೇವನೆ ಸಲಹೆಗಳನ್ನು ನೀಡಿದೆ.
Covid New Variant: ಭಾರತದಲ್ಲಿ ಹೊಸ ಕೋವಿಡ್ ರೂಪಾಂತರ XBB 1.16: 76 ಮಾದರಿಗಳು ಪತ್ತೆ
ಸಲಹೆಗಳೇನು?:
ಪ್ರತಿ ದಿನ ತಾಜಾ ಮತ್ತು ಸಂಸ್ಕರಿಸದ ಆಹಾರ ಸೇವಿಸಬೇಕು. ಹಣ್ಣುಗಳು, ಹಸಿರು ತರಕಾರಿ, ಸೊಪ್ಪುಗಳು, ದ್ವಿದಳ ಧಾನ್ಯಗಳು, ಮೆಕ್ಕೆ ಜೋಳ, ರಾಗಿ, ಗೋಧಿಯಂತಹ ಧಾನ್ಯಗಳು, ಆಲೂಗಡ್ಡೆ, ಗೆಣಸಿನಂತಹ ಬೇರುಗಳು, ಮಾಂಸ, ಮೊಟ್ಟೆ, ಮೀನು, ಹಾಲನ್ನು ಸೇವಿಸಬಹುದು. ಆದರೆ, ಕೌಟುಂಬಿಕ ವಾಡಿಕೆಯಂತೆ ಮಿತವಾಗಿ ಬಳಸಬೇಕು.
ತಾಜಾ ಹಣ್ಣಿನ ರಸ, ಡ್ರೈಫä್ರಟ್ಸ್‌ಗೆ ಸಕ್ಕರೆ ಸೇರಿಸದೆ ಸೇವಿಸಬೇಕು. ತಿಂಡಿ ಸೇವಿಸುವಾಗ ಹೆಚ್ಚು ಉಪ್ಪು ಹಾಗೂ ಸಕ್ಕರೆಯುಳ್ಳ ಆಹಾರಕ್ಕಿಂತ ಕಚ್ಚಾ ತರಕಾರಿ, ತಾಜಾ ಹಣ್ಣುಗಳನ್ನು ಆಯ್ದುಕೊಳ್ಳಬೇಕು. ತರಕಾರಿ ಹಾಗೂ ಹಣ್ಣುಗಳನ್ನು ಹೆಚ್ಚು ಹೊತ್ತು ಬೇಯಿಸಿದರೆ ಅವುಗಳಲ್ಲಿನ ಜೀವಸತ್ವಗಳು ನಾಶವಾಗುತ್ತವೆ ಎಂದು ಹೇಳಿದೆ.
ಮಕ್ಕಳಿಗೆ ಪ್ರತಿ ದಿನ ಮೂರು ಬಾರಿ ಹಾಲು ಕುಡಿಸಬೇಕು. 2 ವರ್ಷದೊಳಗಿನ ಮಕ್ಕಳಿಗೆ ಸಂಪೂರ್ಣ ಹಾಲು, 2 ವರ್ಷ ಮೇಲ್ಪಟ್ಟಮಕ್ಕಳಿಗೆ ಕೆನೆ ತೆಗೆದ ಹಾಲನ್ನು ನೀಡಬೇಕು. ಮಧುಮೇಹ, ಹೆಚ್ಚು ರಕ್ತದೊತ್ತಡ, ಬೊಜ್ಜುತನ, ಹೃದ್ರೋಗ, ಕ್ಯಾನ್ಸರ್, ಮೂತ್ರಪಿಂಡ ರೋಗ ಇತ್ಯಾದಿಗಳಿಂದ ಬಳಲುತ್ತಿರುವವರು ವೈದ್ಯಕೀಯ ಸಲಹೆಯನ್ನು ಕಡ್ಡಾಯವಾಗಿ ಪಡೆದು ವೈದ್ಯರು, ಪೌಷ್ಟಿಕ ಸಮಾಲೋಚಕರು ಸೂಚಿಸಿದ ಆಹಾರ ಸೇವಿಸಬೇಕು ಎಂಬುದನ್ನು ಸೇರಿಸಿದಂತೆ 20 ಆರೋಗ್ಯ ಸಲಹೆಗಳನ್ನು ನೀಡಿದ್ದಾರೆ.
ನವಜಾತ ಶಿಶು ಆರೈಕೆ:
ತಾಯಿಯು ಮಗು ಜನನವಾದ ಒಂದು ಗಂಟೆಯೊಳಗೆ ಎದೆ ಹಾಲುಣಿಸುವುದನ್ನು ಪ್ರಾರಂಭಿಸಬೇಕು. ಮಗುವಿಗೆ 2 ವರ್ಷಗಳಾಗುವವರೆಗೂ ಎದೆಹಾಲು ಮುಂದುವರೆಸಬೇಕು. 6 ತಿಂಗಳವರೆಗೆ ಎದೆಹಾಲು ಮಾತ್ರ ನೀಡಿ, 6 ತಿಂಗಳ ಬಳಿಕ ಆರೋಗ್ಯಕರ ಪೂರಕ ಆಹಾರ ನೀಡಬಹುದು. ಮಗು ಅಥವಾ ತಾಯಿಗೆ ಸೋಂಕು ಲಕ್ಷಣ ಕಾಣಿಸಿಕೊಂಡರೆ ಕೈಗಳ ಶುಚಿತ್ವ ಕಾಪಾಡಿಕೊಳ್ಳುವುದು ಸೇರಿದಂತೆ ಕೊರೋನಾ ಮುನ್ನೆಚ್ಚರಿಕೆಗಳನ್ನು ಪಾಲಿಸಬೇಕು ಎಂದು ತಿಳಿಸಲಾಗಿದೆ
ಮತ್ತೆ ಶುರುವಾಯ್ತಾ ಬೆಂಗಳೂರಿಗೆ ಕೊರೊನಾ ಕಾಟ!
ವೈದ್ಯಕೀಯ ಸಿಬ್ಬಂದಿಗೆ ಸಲಹೆ:
ಇನ್ನು ಆರೋಗ್ಯ ಸಿಬ್ಬಂದಿಗೂ ಹಲವು ಸಲಹೆ ನೀಡಿದ್ದು, ಉಸಿರಾಟ ಸಮಸ್ಯೆಯ ಯಾವುದೇ ರೋಗಿಯನ್ನು ಉಪಚರಿಸುವಾಗ ಕಡ್ಡಾಯವಾಗಿ ಮಾಸ್‌್ಕ ಧರಿಸಬೇಕು. ಎಲ್ಲಾ ಕೊರೋನಾ ಸೋಂಕಿನ ಮುನ್ನೆಚ್ಚರಿಕೆ ಪಾಲಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.