MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Health
  • Sweet Potato for Children : ಚಳಿಗಾಲದಲ್ಲಿ ಮಕ್ಕಳಿಗೆ ಈ ಸೂಪರ್ ಫುಡ್ ನೀಡಿ ಆರೋಗ್ಯ ಹೆಚ್ಚಿಸಿ

Sweet Potato for Children : ಚಳಿಗಾಲದಲ್ಲಿ ಮಕ್ಕಳಿಗೆ ಈ ಸೂಪರ್ ಫುಡ್ ನೀಡಿ ಆರೋಗ್ಯ ಹೆಚ್ಚಿಸಿ

ಇಂದು ನಿಮಗೆ  ಗೆಣಸು (sweet potato) ತಿನ್ನುವುದರ ಪ್ರಯೋಜನಗಳನ್ನು ತಿಳಿಸುತ್ತೇವೆ. ಚಳಿಗಾಲದಲ್ಲಿ ಸುಲಭವಾಗಿ ಸಿಗುವ ಇದು ಮಕ್ಕಳ ಆರೋಗ್ಯಕ್ಕೆ  ಅತ್ಯಂತ ಪ್ರಯೋಜನಕಾರಿ.  ವಿಟಮಿನ್ ಎ ಜೊತೆಗೆ, ಗೆಣಸಿನಲ್ಲಿ ವಿಟಮಿನ್ ಸಿ, ವಿಟಮಿನ್ ಇ, ವಿಟಮಿನ್ ಕೆ, ವಿಟಮಿನ್ ಬಿ1, ವಿಟಮಿನ್ ಬಿ6 ಮತ್ತು ವಿಟಮಿನ್ ಬಿ9 ಸಹ ಇದ್ದು, ಇದು ಮಗುವಿನ ದೈಹಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.  

2 Min read
Suvarna News | Asianet News
Published : Dec 20 2021, 11:21 AM IST| Updated : Dec 20 2021, 11:26 AM IST
Share this Photo Gallery
  • FB
  • TW
  • Linkdin
  • Whatsapp
19

ಗೆಣಸಿನಲ್ಲಿ ಕಂಡುಬರುವ ಪೋಷಕಾಂಶಗಳು 
ಗೆಣಸಿನಲ್ಲಿ ಕಂಡುಬರುವ ಪೋಷಕಾಂಶಗಳ ವಿಷಯಕ್ಕೆ ಬಂದಾಗ, ಇದು ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್, ರಂಜಕ, ಪೊಟ್ಯಾಸಿಯಮ್ ಮತ್ತು ಸೋಡಿಯಂನಿಂದ (sodium) ಸಮೃದ್ಧವಾಗಿದೆ. ಇದರಲ್ಲಿ ಸತುವೂ ಸಹ ಅಡಕವಾಗಿರುತ್ತದೆ. ಈ ಎಲ್ಲಾ ಪೋಷಕಾಂಶಗಳು ಶಿಶುಗಳಿಗೆ ಅತ್ಯಗತ್ಯ.

29

ಸಿಹಿ  ಗೆಣಸಿನ ಪ್ರಯೋಜನಗಳು

1.ಕಣ್ಣುಗಳಿಗೆ ಪ್ರಯೋಜನಕಾರಿಯಾಗಿರುವ ಗೆಣಸಿನಲ್ಲಿ  ಕಂಡುಬರುವ ವಿಟಮಿನ್ ಎ ಮಕ್ಕಳ ಕಣ್ಣುಗಳ ಬಗ್ಗೆ ವಿಶೇಷ ಕಾಳಜಿ ವಹಿಸುತ್ತದೆ. ಇದನ್ನು ಸೇವಿಸುವುದರಿಂದ ದೃಷ್ಟಿ ಉತ್ತಮವಾಗಿರುತ್ತದೆ ಅಲ್ಲದೆ ಮಕ್ಕಳ ಕಣ್ಣಿನ ಸಮಸ್ಯೆಗಳು ದೂರವಾಗುತ್ತವೆ ಎನ್ನಲಾಗಿದೆ. 

39
sweet potato

sweet potato

2. ಚಯಾಪಚಯ ಕ್ರಿಯೆಯನ್ನು ಬಲಪಡಿಸುತ್ತದೆ - ಗೆಣಸನ್ನು ಸೇವಿಸುವುದರಿಂದ ಚಯಾಪಚಯ ಕ್ರಿಯೆಯನ್ನು ಬಲಪಡಿಸಲು ಸಾಧ್ಯವಾಗುತ್ತದೆ. ಇದರಿಂದ ತೂಕ ನಿಯಂತ್ರಣದಲ್ಲಿಡುತ್ತದೆ. ಅಜೀರ್ಣ ಮೊದಲಾದ ಸಮಸ್ಯೆಗಳು ದೂರವಾಗುತ್ತವೆ. 

49

3. ದೈಹಿಕ ಬೆಳವಣಿಗೆಗೆ ಪ್ರಯೋಜನಕಾರಿ - ಗೆಣಸನ್ನು ನಿಯಮಿತವಾಗಿ ಸೇವಿಸುವುದರಿಂದ ಶಿಶುಗಳ ದೈಹಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದರಲ್ಲಿ ಕಂಡುಬರುವ ಪೋಷಕಾಂಶಗಳು ಪ್ರತಿಯೊಂದು ಅಂಗದ ಬೆಳವಣಿಗೆಗೆ ಕಾರಣವಾಗುತ್ತವೆ.

59

4. ರೋಗ ನಿರೋಧಕ ಶಕ್ತಿಯನ್ನು (immunity power)ಬಲಪಡಿಸುತ್ತದೆ - ಗೆಣಸಿನಲ್ಲಿ  ಕಂಡುಬರುವ ವಿಟಮಿನ್ ಸಿ ಮತ್ತು ಇ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಮಕ್ಕಳಿಗೆ ಯಾವುದೇ ರೋಗಗಳು ಸುಳಿಯದಂತೆ ಕಾಪಾಡುತ್ತದೆ. ಆದುದರಿಂದ ಇದನ್ನು ನಿಯಮಿತವಾಗಿ ಸೇವಿಸುವುದು ಉತ್ತಮ. 

69

5.ಮಲಬದ್ಧತೆಯನ್ನು ನಿವಾರಿಸುತ್ತದೆ - ಸಿಹಿ ಗೆಣಸು ಸೇವನೆಯಿಂದ ಚಿಕ್ಕ ಮಕ್ಕಳಲ್ಲಿ ಮಲಬದ್ಧತೆ (constipation)  ಸಮಸ್ಯೆ ನಿವಾರಣೆ. ಇದರಲ್ಲಿ ಆಹಾರದ ನಾರಿನಾಂಶವು ಇದೆ, ಇದು ಮಲಬದ್ಧತೆಯನ್ನು ನಿವಾರಿಸುತ್ತದೆ. 

79

6. ಶಕ್ತಿಯುತ ಮಗು- ಸಿಹಿ ಆಲೂಗಡ್ಡೆಯಲ್ಲಿ ಪಿಷ್ಟ ಮತ್ತು ವಿಟಮಿನ್ ಇದ್ದು, ಇದು ಮಗುವನ್ನು ಶಕ್ತಿಯುತವಾಗಿಸುತ್ತದೆ. ಸಿಹಿ ಗೆಣಸು ಒಂದು ಸೂಪರ್ ಆಹಾರವಾಗಿದೆ, ಆದ್ದರಿಂದ ಖಂಡಿತವಾಗಿಯೂ ಅದನ್ನು ಮಕ್ಕಳಿಗೆ ತಿನ್ನಿಸಿ. ಮಕ್ಕಳು ಬಲಶಾಲಿಯಾಗಲು ಸಹಾಯ ಮಾಡಿ. 

89
Potatoes are rich in vitamin C, which is nature's immunity pill, as well as good amounts of potassium. Moreover, sweet potatoes contain vitamin A and other important nutrients.

Potatoes are rich in vitamin C, which is nature's immunity pill, as well as good amounts of potassium. Moreover, sweet potatoes contain vitamin A and other important nutrients.

ಈ ಸಮಯದಲ್ಲಿ ಮಕ್ಕಳಿಗೆ ಸಿಹಿ ಗೆಣಸು ತಿನ್ನಿಸಬೇಕೆ? 
6 ತಿಂಗಳ ನಂತರ ಮಗುವಿಗೆ ಸಿಹಿ ಗೆಣಸು ತಿನ್ನಿಸಬಹುದು, ಆದರೆ ಸಿಹಿ ಗೆಣಸನ್ನು ಸಂಪೂರ್ಣವಾಗಿ ಬೇಯಿಸಿ ಮೃದುವಾಗಿರಬೇಕು ಎಂದು ಆಹಾರ ತಜ್ಞೆ ಡಾ. ರಂಜನಾ ಸಿಂಗ್ ಹೇಳುತ್ತಾರೆ. 

99

ಮಗು ಗೆಣಸನ್ನು (weet potato) ತಿನ್ನಲು ನಿರಾಕರಿಸಿದರೆ, ಅದನ್ನು ಒತ್ತಾಯಿಸಬೇಡಿ. ಎಲ್ಲಾ ವಿಧದ ಸಿಹಿ ಗೆಣಸು ಶಿಶುಗಳಿಗೆ ಪ್ರಯೋಜನಕಾರಿಯಾಗಿದೆ. ಅವುಗಳಲ್ಲಿ ವಿಟಮಿನ್ ಎ, ಆಂಥೋಸ ಯಾನಿನ್ ಇದೆ. ಇದರಿಂದ ಮಗುವಿನ ರೋಗ ನಿರೋಧಕ ಶಕ್ತಿ ಬಲಪಡಿಸುತ್ತದೆ.

About the Author

SN
Suvarna News
ಆರೋಗ್ಯ
ಜೀವನಶೈಲಿ
ಚಳಿಗಾಲ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved