ಈ 5 ಲಕ್ಷಣ ಕಂಡುಬಂದರೆ ಕರುಳಿನ ಕ್ಯಾನ್ಸರ್ ಬಂದಿರಬಹುದು ಎಂದರ್ಥ.. ಎಚ್ಚರಿಸಿದ ಗ್ಯಾಸ್ಟ್ರೋಎಂಟರಾಲಜಿಸ್ಟ್

Published : Dec 10, 2025, 04:54 PM ISTUpdated : Dec 10, 2025, 04:56 PM IST
colon cancer

ಸಾರಾಂಶ

Early warning signs colon cancer: ಮೊದ ಮೊದಲು ಕೊಲೊನ್ ಅಥವಾ ಕರುಳಿನ ಕ್ಯಾನ್ಸರ್ ವಯಸ್ಸಾದವರಲ್ಲಿ ಮಾತ್ರ ಕಂಡುಬರುತ್ತಿತ್ತು. ಆದರೆ ಇತ್ತೀಚೆಗೆ ಯುವಜನರು ಸಹ ಕೊಲೊನ್ ಕ್ಯಾನ್ಸರ್‌ಗೆ ಬಲಿಯಾಗುತ್ತಿದ್ದಾರೆ.

ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ ಪ್ರಕಾರ, 1999 ಮತ್ತು 2020 ರ ನಡುವೆ 20 ರಿಂದ 24 ವರ್ಷ ವಯಸ್ಸಿನವರಲ್ಲಿ ಕೊಲೊರೆಕ್ಟಲ್ ಕ್ಯಾನ್ಸರ್ ಪ್ರಮಾಣವು ಹೆಚ್ಚಾಗಿದೆ. ಗಮನಾರ್ಹವಾಗಿ 2020 ರಲ್ಲಿ ಮಾತ್ರ 930,000 ಕ್ಕೂ ಹೆಚ್ಚು ಜನರು ಕೊಲೊರೆಕ್ಟಲ್ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿದೆ.

ಕೊಲೊನ್ ಅಥವಾ ಕರುಳಿನ ಕ್ಯಾನ್ಸರ್ ನಿಂದ ಇಷ್ಟೊಂದು ಜನರು ಸಾಯಲು ಕಾರಣವೆಂದರೆ ಅವರು ಅದರ ಆರಂಭಿಕ ಲಕ್ಷಣಗಳಿಗೆ ಗಮನ ಕೊಡುವುದಿಲ್ಲ ಮತ್ತು ಆರಂಭಿಕ ಹಂತದಲ್ಲಿ ಚಿಕಿತ್ಸೆ ಪಡೆಯುವುದಿಲ್ಲ. ಕೊಲೊನ್ ಕ್ಯಾನ್ಸರ್ ಅನ್ನು ಸಾಮಾನ್ಯವಾಗಿ ಆರಂಭಿಕ ಹಂತದಲ್ಲಿ ಪತ್ತೆಹಚ್ಚುವುದು ಕಷ್ಟ. ಆದರೆ ನೀವು ಕೆಲವು ಆರೋಗ್ಯ ಸಮಸ್ಯೆಗಳನ್ನು ಅನುಭವಿಸುತ್ತಲೇ ಇದ್ದರೆ ಮತ್ತು ವೈದ್ಯರನ್ನು ಸಂಪರ್ಕಿಸಿದರೆ ಯಾವುದೇ ರೋಗವನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಬಹುದು.

ಅಮೆರಿಕದ ಕ್ಯಾಲಿಫೋರ್ನಿಯಾದ ಗ್ಯಾಸ್ಟ್ರೋಎಂಟರಾಲಜಿಸ್ಟ್, ಹಾರ್ವರ್ಡ್ ಮತ್ತು ಸ್ಟ್ಯಾನ್‌ಫೋರ್ಡ್‌ನಲ್ಲಿ ತರಬೇತಿ ಪಡೆದ ಡಾ. ಸೌರಭ್ ಸೇಥಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಕೊಲೊನ್ ಕ್ಯಾನ್ಸರ್‌ನ 5 ಚಿಹ್ನೆಗಳನ್ನು ಹಂಚಿಕೊಂಡಿದ್ದಾರೆ. ಈ ಯಾವುದೇ ಚಿಹ್ನೆಗಳನ್ನು ನೀವು ಗಮನಿಸಿದರೆ ಅವುಗಳನ್ನು ನಿರ್ಲಕ್ಷಿಸಬೇಡಿ ಮತ್ತು ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಕೊಲೊನ್ ಕ್ಯಾನ್ಸರ್ ದೊಡ್ಡ ಕರುಳು, ಸಣ್ಣ ಕರುಳು ಮತ್ತು ಗುದನಾಳದಲ್ಲಿನ ಅಸಹಜ ಕೋಶಗಳ ಬೆಳವಣಿಗೆಯಿಂದ ಪ್ರಾರಂಭವಾಗುತ್ತದೆ. ನಂತರ ಆ ಜೀವಕೋಶಗಳು ಅನಿಯಂತ್ರಿತವಾಗಿ ಬೆಳೆದು ದೇಹದ ಇತರ ಭಾಗಗಳಿಗೆ ಹರಡುತ್ತವೆ.

ವಯಸ್ಸು, ಆಹಾರ ಪದ್ಧತಿ, ಅನುವಂಶಿಕತೆ, ಕೊಲೊನ್ ಕ್ಯಾನ್ಸರ್ ಸಂಬಂಧಿತ ರೂಪಾಂತರಗಳು, ಉರಿಯೂತದ ಕರುಳಿನ ಕಾಯಿಲೆಯ ಇತಿಹಾಸ, ಪರಿಸರ ಮತ್ತು ಜೀವನಶೈಲಿಯಿಂದಾಗಿ ಈ ಕೊಲೊನ್ ಕ್ಯಾನ್ಸರ್ ಸಂಭವಿಸಬಹುದು.

ಕೊಲೊನ್ ಕ್ಯಾನ್ಸರ್‌ನ ಎಚ್ಚರಿಕೆ ಚಿಹ್ನೆಗಳು

ಯುವಜನರಲ್ಲಿ ಕೊಲೊನ್ ಕ್ಯಾನ್ಸರ್ ಹೆಚ್ಚುತ್ತಿದೆ ಎಂದು ಡಾ. ಸೇಥಿ ಹೇಳಿದ್ದು, ಎಂದೂ ನಿರ್ಲಕ್ಷಿಸಬಾರದ ಕ್ಯಾನ್ಸರ್‌ನ ಈ 5 ಲಕ್ಷಣಗಳನ್ನು ಸಹ ಹಂಚಿಕೊಂಡಿದ್ದಾರೆ. ಕೊಲೊನ್ ಕ್ಯಾನ್ಸರ್ ಅನ್ನು ಮೊದಲೇ ಪತ್ತೆಹಚ್ಚಿ ಚಿಕಿತ್ಸೆ ನೀಡುವುದರಿಂದ ಸಾವು ತಡೆಯಬಹುದು.

1. ಮಲದಲ್ಲಿ ರಕ್ತ

ಕೊಲೊನ್ ಕ್ಯಾನ್ಸರ್ ನ ಆರಂಭಿಕ ಎಚ್ಚರಿಕೆ ಚಿಹ್ನೆಗಳಲ್ಲಿ ಮಲದಲ್ಲಿ ರಕ್ತ ಇರುವುದು ಒಂದು. ನೀವು ಮಲವಿಸರ್ಜನೆ ಮಾಡುವಾಗ ನಿಮ್ಮ ಮಲದಲ್ಲಿ ರಕ್ತ ಕಂಡುಬಂದರೆ ಅದನ್ನು ನಿರ್ಲಕ್ಷಿಸಬೇಡಿ ಮತ್ತು ತಕ್ಷಣ ವೈದ್ಯರನ್ನು ಸಂಪರ್ಕಿಸಿ.

2. ಮಲದ ಆಕಾರ ಅಥವಾ ಗಾತ್ರದಲ್ಲಿ ಬದಲಾವಣೆ

ನಿಮ್ಮ ಮಲವಿಸರ್ಜನೆಯಲ್ಲಿ ಯಾವುದೇ ಬದಲಾವಣೆಗಳು ಕಂಡುಬಂದರೆ ಅದನ್ನು ಹಗುರವಾಗಿ ಪರಿಗಣಿಸಬೇಡಿ. ನಿಮ್ಮ ಮಲದ ಆಕಾರ ಮತ್ತು ಗಾತ್ರದಲ್ಲಿ ಬದಲಾವಣೆ ಕಂಡುಬಂದರೆ, ಅದು ಕೊಲೊನ್ ಕ್ಯಾನ್ಸರ್‌ನ ಸಂಕೇತವಾಗಿರಬಹುದು. ಆದ್ದರಿಂದ ನೀವು ಅಂತಹ ಬದಲಾವಣೆಗಳನ್ನು ಅನುಭವಿಸುತ್ತಲೇ ಇದ್ದರೆ ಅದರ ಬಗ್ಗೆ ಗಮನ ಹರಿಸಿ ಮತ್ತು ತಕ್ಷಣ ವೈದ್ಯರನ್ನು ಸಂಪರ್ಕಿಸಿ.

3. ದೀರ್ಘಕಾಲದ ಹೊಟ್ಟೆ ನೋವು

ನಿಮಗೆ ಆಗಾಗ್ಗೆ ಹೊಟ್ಟೆ ನೋವು ಬರುತ್ತಿದೆಯೇ?. ಹಾಗಾದರೆ ಅದನ್ನು ಜೀರ್ಣಕಾರಿ ಸಮಸ್ಯೆ ಎಂದು ನಿರ್ಲಕ್ಷಿಸಬೇಡಿ. ಏಕೆಂದರೆ ದೀರ್ಘಕಾಲದ ಹೊಟ್ಟೆ ನೋವು ಕೊಲೊನ್ ಕ್ಯಾನ್ಸರ್‌ನ ಪ್ರಮುಖ ಲಕ್ಷಣವಾಗಿದೆ ಎಂದು ಡಾ. ಸೇಥಿ ಹೇಳುತ್ತಾರೆ. ಆದ್ದರಿಂದ ಯಾವುದೇ ಚಿಕಿತ್ಸೆಯ ಹೊರತಾಗಿಯೂ ನೀವು ಹೊಟ್ಟೆಯ ಪ್ರದೇಶದಲ್ಲಿ ನೋವು ಮತ್ತು ಅಸ್ವಸ್ಥತೆಯನ್ನು ಅನುಭವಿಸುತ್ತಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

4. ತೂಕ ಇಳಿಕೆ

ಯಾವುದೇ ಪ್ರಯತ್ನ ಮಾಡದೆಯೇ ನೀವು ತೂಕ ಇಳಿಸಿಕೊಳ್ಳುತ್ತಿದ್ದೀರಾ?. ಹಾಗಿದ್ದಲ್ಲಿ ಅದು ವಿವಿಧ ಕ್ಯಾನ್ಸರ್‌ಗಳ ಎಚ್ಚರಿಕೆಯ ಸಂಕೇತವಾಗಿರಬಹುದು. ನಿಮ್ಮ ಆಹಾರ ಪದ್ಧತಿ ಮಾತ್ರವಲ್ಲ, ವ್ಯಾಯಾಮ ದಿನಚರಿಯಲ್ಲಿಯೂ ಯಾವುದೇ ಬದಲಾವಣೆಗಳನ್ನು ಮಾಡದೆಯೇ ತೂಕದಲ್ಲಿ ಬದಲಾವಣೆಗಳನ್ನು ಕಂಡರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ ಮತ್ತು ಟೆಸ್ಟ್ ಮಾಡಿಸಿಕೊಳ್ಳಿ.

5. ದೈಹಿಕ ಆಯಾಸ

ನೀವು ಯಾವಾಗಲೂ ತೀವ್ರ ದೈಹಿಕ ಆಯಾಸವನ್ನು ಅನುಭವಿಸುತ್ತೀರಾ?. ರಾತ್ರಿಯಲ್ಲಿ ಸಾಕಷ್ಟು ನಿದ್ರೆ ಮಾಡಿದ ನಂತರವೂ ನೀವು ದುರ್ಬಲರಾಗಿದ್ದೀರಾ?. ಹಾಗಿದ್ದಲ್ಲಿ ಆ ದೈಹಿಕ ಆಯಾಸವನ್ನು ಹಗುರವಾಗಿ ಪರಿಗಣಿಸಬೇಡಿ. ಏಕೆಂದರೆ ಯಾವುದೇ ಕಾರಣವಿಲ್ಲದೆ ನೀವು ಆಗಾಗ್ಗೆ ದೈಹಿಕ ಆಯಾಸವನ್ನು ಅನುಭವಿಸಿದರೆ ಕೊಲೊನ್ ಕ್ಯಾನ್ಸರ್ ಬರುವ ಸಾಧ್ಯತೆಯಿದೆ. ಈ ಸಂದರ್ಭದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ಮೇಲಿನ ಎಲ್ಲಾ ಲಕ್ಷಣಗಳು ಕೊಲೊನ್ ಕ್ಯಾನ್ಸರ್‌ನ ಎಚ್ಚರಿಕೆಯ ಚಿಹ್ನೆಗಳು. ಈ ಎಲ್ಲಾ ಲಕ್ಷಣಗಳು ವಿವಿಧ ಕಾಯಿಲೆ ಬಂದಾಗಲೂ ಕಂಡುಬರಬಹುದು. ಆದ್ದರಿಂದ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಮತ್ತು ಖಚಿತಪಡಿಸಿಕೊಳ್ಳಲು ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಡಾ. ಸೇಥಿ ಹೇಳಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಎಸ್‌ಟಿಡಿ ಟೆಸ್ಟ್ ಮಾಡುವಂತೆ ಪದೇ ಪದೇ ಪೀಡಿಸುತ್ತಿದ್ದ ಗರ್ಲ್‌ಫ್ರೆಂಡ್‌ ಕತೆ ಮುಗಿಸಿದ ವಿದ್ಯಾರ್ಥಿ
ಇವನ್ನೆಲ್ಲಾ ಸ್ಟೀಲ್ ಪಾತ್ರೆಯಲ್ಲಿ ಹಾಕಿಡಬೇಡಿ.. ರುಚಿ, ಪರಿಮಳ ಇರಲ್ಲ, ಆರೋಗ್ಯನೂ ಹಾಳಾಗುತ್ತೆ!