
ಬಣ್ಣಗಳ ಸಹಾಯದಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ವಾಸಿಮಾಡುವ ವೈದ್ಯರೂ ಇದ್ದಾರೆ. ಇದಕ್ಕೆ ಕಲರ್ ಥೆರಪಿ (Colour Therapy) ಎಂದು ಕರೆಯಲಾಗುತ್ತದೆ. ಕಲರ್ ಥೆರಪಿ ಎಂದರೆ ಬಣ್ಣಗಳ ಸಹಾಯದಿಂದ ಚಿಕಿತ್ಸೆ ಮಾಡುವ ಒಂದು ಪದ್ಧತಿ. ಇದನ್ನು ಕ್ರೋಮೊಥೆರಪಿ ಎಂದೂ ಕರೆಯುತ್ತಾರೆ. ಇದು ಬಣ್ಣದ ಬೆಳಕು, ಬಣ್ಣದ ವಸ್ತುಗಳು ಅಥವಾ ಬಣ್ಣಗಳ ಚಿತ್ರಣವನ್ನು ಬಳಸಿ ಚಿಕಿತ್ಸೆಯನ್ನು ಮಾಡುತ್ತದೆ. ಪ್ರಾಚೀನ ಈಜಿಪ್ಟ್ ಮತ್ತು ಆಯುರ್ವೇದ ಔಷಧದಲ್ಲಿ ಈ ಚಿಕಿತ್ಸೆ ಮಾಡಲಾಗುತ್ತದೆ. ಕಲರ್ ಥೆರಪಿಯಲ್ಲಿ, ವಿಭಿನ್ನ ಬಣ್ಣಗಳು ವಿಭಿನ್ನ ಪರಿಣಾಮಗಳನ್ನು ಬೀರುತ್ತವೆ. ಉದಾಹರಣೆಗೆ, ಕೆಂಪು ಬಣ್ಣವು ಉತ್ತೇಜಕ ಮತ್ತು ಬಲಪಡಿಸುವ ಪರಿಣಾಮವನ್ನು ಹೊಂದಿದೆ ಎಂದು ಹೇಳಲಾಗುತ್ತದೆ, ಆದರೆ ನೀಲಿ ಬಣ್ಣವು ಶಾಂತಗೊಳಿಸುವ ಮತ್ತು ತಂಪುಗೊಳಿಸುವ ಪರಿಣಾಮವನ್ನು ಹೊಂದಿದೆ ಎಂದು ಹೇಳಲಾಗುತ್ತದೆ.
ಏನು ಕೇವಲ ಒಂದು ಪಾರ್ಟ್ನಲ್ಲಿ ಬಣ್ಣ ಹಚ್ಚುವುದರಿಂದ ಆರೋಗ್ಯ ಸಮಸ್ಯೆಗೆ ಪರಿಹಾರ ಸಿಗತ್ತಾ ಎಂದು ಮೂಗು ಮುರಿಯುವವರೂ ಇಲ್ಲವೆಂದೇನಿಲ್ಲ. ಏನೇ ಸಮಸ್ಯೆ ಇದ್ದರೂ ಮಾತ್ರೆಯೊಂದೇ ಪರಿಹಾರ ಎಂದುಕೊಳ್ಳುವ ದೊಡ್ಡ ವರ್ಗವೇ ಇದೆ. ಆದ್ದರಿಂದ ನಮ್ಮ ಭಾರತೀಯ ಪುರಾತನ ಪದ್ಧತಿಯಾದ ಆಯುರ್ವೇದ ಎಂದರೆ ಅಸಡ್ಡೆ ಮಾಡುವವರೂ ಇದ್ದಾರೆ. ಆದರೆ, ಆಯುರ್ವೇದ, ಹೋಮಿಯೋಪಥಿಯಿಂದ ಅಸಾಧ್ಯ ಎನ್ನುವ ಎಷ್ಟೋ ಕಾಯಿಲೆಗಳನ್ನು ಗುಣಪಡಿಸಿಕೊಳ್ಳುತ್ತಿರುವ ಸಾವಿರಾರು ಉದಾಹರಣೆಗಳು ಇವೆ. ಇದೀಗ ಇಲ್ಲಿ ಕಲರ್ ಥೆರಪಿಯ ಬಗ್ಗೆ ಮಾತನಾಡಲಾಗುತ್ತಿದೆ. ಕಲರ್ ಥೆರಪಿಯನ್ನು ಮನೆ ಅಥವಾ ಕೆಲಸದ ಸ್ಥಳದಲ್ಲಿ ಬಣ್ಣಗಳನ್ನು ಆರಿಸುವ ಮೂಲಕ ಅಥವಾ ಬಣ್ಣದ ಬೆಳಕಿನ ಕಿರಣಗಳನ್ನು ಬಳಸಿ ಅಭ್ಯಾಸ ಮಾಡಬಹುದು. ಬಣ್ಣಗಳ ಚಿಕಿತ್ಸೆಯ ಪ್ರಯೋಜನಗಳು ಹೀಗಿವೆ: ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ, ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ, ಭಾವನಾತ್ಮಕ ಸಮತೋಲನವನ್ನು ಸುಧಾರಿಸುತ್ತದೆ, ಶಕ್ತಿ ಮತ್ತು ಚೈತನ್ಯವನ್ನು ಹೆಚ್ಚಿಸುತ್ತದೆ, ನಿದ್ರೆಯನ್ನು ಸುಧಾರಿಸುತ್ತದೆ, ಸೃಜನಶೀಲತೆಯನ್ನು ಹೆಚ್ಚಿಸುತ್ತದೆ.
ಕೂದಲು ಉದುರುವಿಕೆ ಎನ್ನುವುದು ಬಹಳ ಸಾಮಾನ್ಯವಾಗಿರುವ ವಿಷಯವಾಗಿದೆ. ಆಹಾರ ಪದ್ಧತಿ, ನೀರು ಇತ್ಯಾದಿಗಳು ಇದಕ್ಕೆ ಕಾರಣ ಹೌದಾದರೂ, ಯಾವುದೋ ನಟಿ ಬಂದು ಜಾಹೀರಾತು ಮಾಡಿದಳು ಎನ್ನುವ ಕಾರಣಕ್ಕೆ ಅದನ್ನು ಖರೀದಿಸಿ ಇನ್ನಷ್ಟು ಇಲ್ಲದ ಸಮಸ್ಯೆಗಳನ್ನು ತಂದುಕೊಳ್ಳುತ್ತಿರುವವರೇ ಹಲವರು. ನಟ-ನಟಿಯರ ಕೆಲಸ ಲಕ್ಷಾಂತರ ರೂಪಾಯಿ ಹಣ ಪಡೆದು ಜನರನ್ನು ಮರಳು ಮಾಡುವುದು ಅಷ್ಟೇ ಎನ್ನುವ ಪರಿಕಲ್ಪನೆ ಇದೀಗ ಹಲವರಿಗೆ ತಿಳಿಯುತ್ತಿದ್ದರೂ ಅವರು ಮಾಡುವ ಮೋಡಿಗೆ ಒಳಗಾಗಿಬಿಡುತ್ತಾರೆ. ಆದರೆ ಅದನ್ನು ಬಿಟ್ಟು ಕೂದಲು ಉದುರುವಿಕೆಗೆ ಕಲರ್ ಥೆರಪಿಯಿಂದಲೂ ಪರಿಹಾರ ಸಾಧ್ಯ ಎನ್ನುವುದನ್ನು ಹೇಳಿದ್ದಾರೆ ವೈದ್ಯರು.
ಕೂದಲು ಉದುರುವಿಕೆಗೆ ಬಹುದೊಡ್ಡ ಕಾರಣ, ಬ್ಲಡ್ ಕೊರತೆ ಎಂದಿದ್ದಾರೆ. ಕೂದಲಿಗೆ ಬೇಕಾದ ನ್ಯೂಟ್ರೀಷನ್ ಸಿಗುತ್ತಿರುವುದಿಲ್ಲ. ನ್ಯೂಟ್ರಿಷನ್ ಇದ್ದರೂ ಸ್ಟ್ರೆಸ್ ಜಾಸ್ತಿಯಾಗಿ ಬಾಡಿ ಹೀಟ್ ಆಗಿ ಕೂದಲು ಉದುರುತ್ತದೆ. ಇದಕ್ಕೆ ಮುಖ್ಯಕಾರಣ ಯಕೃತ್ತು ಮತ್ತು ಹೊಟ್ಟೆ (Liver and Stomach) ಇದನ್ನು ಸರಿ ಮಾಡುವುದಕ್ಕಾಗಿ ಯಕೃತ್ತು ಮತ್ತು ಹೊಟ್ಟೆಯನ್ನು ಪ್ರತಿನಿಧಿಸುವ ಭಾಗವಾಗಿರುವ ಕೈಯ ಕೆಳಭಾಗದಲ್ಲಿ ಗಾಢ ಹಸಿರು ಬಣ್ಣದಿಂದ ರೌಂಡ್ ಮಾಡಿಕೊಳ್ಳಬೇಕು. ವಾರಕ್ಕೆ ಎರಡು ದಿನ ಹೀಗೆ ಮಾಡಿಕೊಳ್ಳಬೇಕು. ಇದರ ಜೊತೆಗೆ ದೇಹಕ್ಕೆ ತಂಪು ಕೊಡಬೇಕು. ಅದನ್ನು ಕೊಡುವುದುಕ್ಕಾಗಿ ತೋರುಬೆರಳಿನ ಹಿಂಭಾಗದಲ್ಲಿ ಗಾಢ ಹಸಿರು ಬಣ್ಣ ಹಚ್ಚಬೇಕು. ಜೊತೆಗೆ ಊಟದಲ್ಲಿ ಮಲ್ಟಿ ವಿಟಮಿನ್ ಇರುವ ಆಹಾರ, ಸೀಸನಲ್ ಫುಡ್, ಸ್ಟ್ರಸ್ ಕಡಿಮೆ ಆಗಲು ಎರಡೂ ಹೆಬ್ಬೆರಳುಗಳಿಗೆ ಕಪ್ಪು ಕಲರ್ ಹಚ್ಚಬೇಕು. (ವಿಡಿಯೋದಲ್ಲಿ ಈ ಕೆಳಗೆ ಮಾಹಿತಿ ನೀಡಲಾಗಿದೆ)
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.