Grow Coriander at Home: ಪಾಟ್​ನಲ್ಲೇ ಸುಲಭದಲ್ಲಿ ಬೆಳೆಯಿರಿ ಕೊತ್ತಂಬರಿ ಸೊಪ್ಪು: ವಿಡಿಯೋ ಜೊತೆ ಮಾಹಿತಿ ಇಲ್ಲಿದೆ..

Published : Jul 10, 2025, 07:52 PM IST
Coriander leaves in pot

ಸಾರಾಂಶ

ಅತಿ ಸುಲಭದಲ್ಲಿ ಕೊತ್ತಂಬರಿ ಸೊಪ್ಪನ್ನು ಮನೆಯಲ್ಲಿಯೇ ಅದರಲ್ಲಿಯೂ ಕುಂಡದಲ್ಲಿಯೇ ಬೆಳೆಯಬಹುದಾಗಿದೆ. ಅದು ಹೇಗೆ? ವಿಡಿಯೋ ಸಹಿತ ಅದರ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ. 

ಬಹುತೇಕ ಅಡುಗೆಗಳಿಗೆ ಕೊತ್ತಂಬರಿ ಸೊಪ್ಪು ಹಾಕಿದರೆ ಅದರ ರುಚಿಯೇ ಬೇರೆಯದ್ದಾಗಿರುತ್ತದೆ. ಇಷ್ಟೇ ಅಲ್ಲದೇ ಕೊತ್ತಂಬರಿ ಸೊಪ್ಪು ಔಷಧವಾಗಿಯೂ ಕೆಲಸ ಮಾಡುತ್ತದೆ. ಆದರೆ ಇಂದು ಮಾರುಕಟ್ಟೆಯಲ್ಲಿ ಸಿಗುವ ಕೊತ್ತಂಬರಿ ಸೊಪ್ಪುಗಳಿಗೆ ರಾಸಾಯನಿಕ ಸಿಂಪಡಣೆ ಮಾಡುವುದೇ ಹೆಚ್ಚು. ಹಚ್ಚ ಹಸಿರಾಗಿ ಇದ್ದರೆ ಅದನ್ನು ಕೊಳ್ಳುವವರು ಜಾಸ್ತಿ ಎನ್ನುವ ಕಾರಣಕ್ಕೆ ಇಂದು ಎಲ್ಲಾ ಸೊಪ್ಪುಗಳಿಗೂ ಹಸಿರಿನ ಬಣ್ಣ ಸ್ಪ್ರೇ ಮಾಡಲಾಗುತ್ತದೆ. ಆದ್ದರಿಂದ ಇಂದು ಸೊಪ್ಪುಗಳು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ಆಗುವುದು ಬಿಟ್ಟು, ಮಾರಣಾಂತಿಕ ಕಾಯಿಲೆಗಳನ್ನೂ ತಂದೊಡ್ಡುತ್ತಿವೆ.

ಈ ಕಾರಣದಿಂದ ಮನೆಯಲ್ಲಿಯೇ ಆದಷ್ಟು ಸೊಪ್ಪುಗಳನ್ನಾದರೂ ಬೆಳೆದುಕೊಂಡರೆ ಒಳ್ಳೆಯದು ಹೌದಾದರೂ, ನಗರ ಪ್ರದೇಶಗಳಲ್ಲಿ ಇದು ತುಂಬಾ ಕಷ್ಟದ ಕೆಲಸವೇ. ಆದರೆ ಕುಂಡದಲ್ಲಿಯೇ ಕೊತ್ತಂಬರಿ ಸೊಪ್ಪನ್ನು ಅತ್ಯಂತ ಸುಲಭದಲ್ಲಿ ಬೆಳೆಯಬಹುದಾಗಿದೆ. ಅದನ್ನು ವಿಡಿಯೋ ಸಹಿತ ಈ ಕೆಳಗೆ ವಿವರಿಸಲಾಗಿದೆ.

ಮೊದಲಿಗೆ ಕೊತ್ತಂಬರಿ ಬೀಜವನ್ನು 24 ಗಂಟೆ ನೀರಿನಲ್ಲಿ ನೆನೆಸಿ ಇಡಬೇಕು. ಮಾರನೆಯ ದಿನ ನೀರನ್ನು ಸೋಸಿ ಬೀಜವನ್ನು ಪ್ರತ್ಯೇಕಗೊಳಿಸಬೇಕು. 5-6 ಅಡಿ ಆಳವಿರುವ ಕುಂಡವನ್ನು ತೆಗೆದುಕೊಳ್ಳಬೇಕು. ಅದಕ್ಕೆ ಗೊಬ್ಬರ ಇರುವ ಮಣ್ಣು ಹಾಕಬೇಕು. ಅದರಲ್ಲಿ ಈ ಕೊತ್ತಂಬರಿ ಬೀಜವನ್ನು ಹರಡಬೇಕು. ಅದನ್ನು ಮಣ್ಣಿನಿಂದ ಮುಚ್ಚಿ ಆಮೇಲೆ ನೀರು ಹಾಕಬೇಕು. 18ನೇ ಸಸಿ ಬೆಳೆಯಲು ಆರಂಭಿಸುತ್ತದೆ. ನಂತರ ಅದರ ಮೇಲೆ ಮತ್ತೊಂದಿಷ್ಟು ಮಣ್ಣನ್ನು ಹಾಕಿ ಮತ್ತೆ ನಿಧಾನವಾಗಿ ನೀರು ಹಾಕಬೇಕು. ಒಂದೇ ಕಡೆ ನೀರು ಹಾಕಿ ಕೈಯಿಂದ ಕುಂಡವನ್ನು ಎತ್ತಿ ಅತ್ತಿತ್ತ ಹರಡುವಂತೆ ಮಾಡಿದರೆ ಒಳ್ಳೆಯದು.

28ನೇ ದಿನ ಅದು ಚೆನ್ನಾಗಿ ಬೆಳೆಯುತ್ತದೆ. ಒಂದು ಮಾತು ನೆನಪಿಡಿ. ಚಳಿಗಾಲದ ಸಮಯದಲ್ಲಿ ಇದನ್ನು ಬೆಳೆದರೆ ಚೆನ್ನಾಗಿ ಸೂರ್ಯನ ಬಿಸಿಲು ಬೀಳುವಲ್ಲಿ ಇಡಬೇಕು. ಮಾರುಕಟ್ಟೆಯಲ್ಲಿ ಸಿಗುವ ಸಾವಯವ ಗೊಬ್ಬರ ಹಾಕಿದರೆ ರಾಸಾಯನಿಕ ಮುಕ್ತ ಒಳ್ಳೆಯ ಕೊತ್ತಂಬರಿ ಸೊಪ್ಪನ್ನು ಸುಲಭದಲ್ಲಿ ಮನೆಯಲ್ಲಿಯೇ ಬೆಳೆದುಕೊಳ್ಳಬಹುದು. 6-7 ಇಂಚು ಬಂದರೆ, ಅದನ್ನು ಕಟ್​ ಮಾಡಿ ತಿನ್ನಬಹುದು. ಈ ಸಮಯದಲ್ಲಿ ಮೇಲಿನ ಎಲೆಗಳನ್ನು ಮಾತ್ರ ಕಟ್​ ಮಾಡಿ. ಹೀಗೆ ಮಾಡಿದರೆ ಅದು ಮತ್ತೆ ಬೆಳೆಯುತ್ತದೆ. Garden Ideas youtube ಚಾನೆಲ್​ನಲ್ಲಿ ಇದನ್ನು ಶೇರ್​ ಮಾಡಲಾಗಿದೆ. ವಿಡಿಯೋ ಈ ಕೆಳಗಿದೆ… 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾತ್ರಿ ಮಲಗುವ ಮುನ್ನ ನೀರು ಕುಡಿಯುತ್ತೀರಾ?, ಈ ವಿಷಯಗಳನ್ನು ನೀವು ತಿಳಿದಿರಲೇಬೇಕು
ಕೊಲೊನ್ ಕ್ಯಾನ್ಸರ್.. 30 ವರ್ಷದ ನಂತ್ರ ಈ ಲಕ್ಷಣ ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ