ತುಪ್ಪದ ಜೊತೆ ಜೇನುತುಪ್ಪ? ತಪ್ಪು ತಪ್ಪು !

Suvarna News   | Asianet News
Published : Mar 28, 2022, 01:36 PM IST
ತುಪ್ಪದ ಜೊತೆ ಜೇನುತುಪ್ಪ? ತಪ್ಪು ತಪ್ಪು !

ಸಾರಾಂಶ

ಜೇನುತುಪ್ಪ ಜೊತೆ ತುಪ್ಪ ಬೆರೆಸಿ ತಿಂದ್ರೆ ರುಚಿ ದುಪ್ಪಟ್ಟಾಗುತ್ತದೆ. ಅನೇಕರು ಈ ಕಾಂಬಿನೇಷನ್ ಇಷ್ಟಪಡ್ತಾರೆ. ಆದ್ರೆ ರುಚಿ ನೀಡುವ ಈ ಆಹಾರ ಆರೋಗ್ಯಕ್ಕೆ ಹಾಳು ಎಂಬುದು ನಿಮಗೆ ಗೊತ್ತಾ?    

ಆಯುರ್ವೇದ (Ayurveda) ದಲ್ಲಿ ಜೇನುತುಪ್ಪ (Honey) ಮತ್ತು ತುಪ್ಪ (Ghee) ಎರಡನ್ನೂ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಅಷ್ಟೇ ಅಲ್ಲ ಇದು ನಮ್ಮ ಆರೋಗ್ಯಕ್ಕೂ ಬಹಳ ಒಳ್ಳೆಯದು. ಆದರೆ ಜೇನುತುಪ್ಪ ಮತ್ತು ತುಪ್ಪವನ್ನು ಮಿಕ್ಸ್ ಮಾಡಿ ಎಂದೂ ಸೇವನೆ ಮಾಡ್ಬಾರದು. ಆಯುರ್ವೇದದ ಪ್ರಕಾರ, ಜೇನುತುಪ್ಪ ಮತ್ತು ತುಪ್ಪದ ಸಮಾನ ಮಿಶ್ರಣವು ಆರೋಗ್ಯ ಸುಧಾರಿಸುವ ಬದಲು ಅನಾರೋಗ್ಯದ ಅಪಾಯವನ್ನು ಹೆಚ್ಚಿಸುತ್ತದೆ.  
ಜೇನುತುಪ್ಪವನ್ನು ಮಾತ್ರ ಸೇವಿಸಿದರೆ ಅದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಜೇನುತುಪ್ಪವು ನಮ್ಮ ದೇಹದಲ್ಲಿ ಹೀಟಿಂಗ್ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಜೇನುತುಪ್ಪವು ಔಷಧೀಯ ಗುಣಗಳಿಂದ ತುಂಬಿದೆ. ಆದರೆ ಅದನ್ನು ಸೇವಿಸುವ ವಿಧಾನ ತಿಳಿದಿರಬೇಕು. ತುಪ್ಪದ ಜೊತೆ ಸೇರಿಸಿದ್ರೆ ಅದು ವಿಷವಾಗುತ್ತದೆ. ಇಂದು ಜೇನುತುಪ್ಪ ಹಾಗೂ ತುಪ್ಪವನ್ನು ಒಟ್ಟಿಗೆ ಸೇವನೆ ಮಾಡಿದ್ರೆ ಏನು ಅಡ್ಡಪರಿಣಾಮವಾಗುತ್ತದೆ ಎಂಬುದನ್ನು ಇಂದು ನೋಡೋಣ. 

ಜೇನುತುಪ್ಪ –ತುಪ್ಪದ ಮಿಶ್ರಣ ಹೇಗೆ ವಿಷ?: ಇದು ವಿಷವೆಂದು ನಾವು ಹೇಳ್ತಿಲ್ಲ. ಪ್ರಾಚೀನ ಕಾಲದಿಂದಲೂ ಜೇನುತುಪ್ಪದ ಜೊತೆ ತುಪ್ಪ ಬೆರೆಸಿ ತಿನ್ನುವುದನ್ನು ಒಪ್ಪುವುದಿಲ್ಲ. ಜೇನುತುಪ್ಪವು ನೈಸರ್ಗಿಕವಾಗಿ ಕಂಡುಬರುವ ಆಹಾರವಾಗಿದೆ. ಅದ್ರಲ್ಲಿ 35-40 ಪ್ರತಿಶತ ಫ್ರಕ್ಟೋಸ್ ಮತ್ತು 25-35 ಪ್ರತಿಶತಷ್ಟು ಗ್ಲೂಕೋಸ್ ಮತ್ತು ಸುಕ್ರೋಸ್ ಮತ್ತು ಮಾಲ್ಟೋಸ್‌ನಲ್ಲಿ ಸಮೃದ್ಧವಾಗಿದೆ. ಜೇನುತುಪ್ಪದಲ್ಲಿ ಕೆಲವು ಖನಿಜಗಳಿವೆ. ಇದು ಇತರ ಸಿಹಿ ವಸ್ತುಗಳಲ್ಲಿ ಕಂಡುಬರುವುದಿಲ್ಲ. ಇದಲ್ಲದೆ ಜೇನುತುಪ್ಪ ಕ್ಲೋಸ್ಟ್ರಿಡಿಯಮ್ ಬೊಟುಲಿನಮ್ ಎಂಬ ಬ್ಯಾಕ್ಟೀರಿಯಾವನ್ನು ಹೊಂದಿರುತ್ತದೆ.

ದ್ರಾಕ್ಷಿ ಎಂಬ ಸಣ್ಣ ಹಣ್ಣಿನ ದೊಡ್ಡ ಪ್ರಯೋಜನಗಳನ್ನು ತಿಳಿಯಿರಿ

ತುಪ್ಪ, ಪ್ರೋಟೀನ್, ಒಮೆಗಾ -3 ಕೊಬ್ಬಿನಾಮ್ಲಗಳು, ಆರೋಗ್ಯಕರ ಕೊಬ್ಬುಗಳು, ವಿಟಮಿನ್ ಎ ಮತ್ತು ಬ್ಯುಟರಿಕ್ ಆಮ್ಲದಂತಹ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಉದ್ದಿನಬೇಳೆ, ಕರಿಬೇವು, ತರಕಾರಿಗಳು ಮತ್ತು ಖಿಚಡಿಗೆ ಕೇವಲ ಒಂದು ಚಮಚ ದೇಸಿ ತುಪ್ಪವನ್ನು ಸೇರಿಸುವುದು ಅವುಗಳ ರುಚಿ ಹೆಚ್ಚಾಗುತ್ತದೆ. ಬ್ಯಾಕ್ಟೀರಿಯಾ ಬೆಳೆಯಲು ಹಾಲು ಅತ್ಯುತ್ತಮ ಉತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಹಾಲು ಅಥವಾ ಹಾಲಿನ ಉತ್ಪನ್ನಗಳಿಗೆ ಜೇನುತುಪ್ಪವನ್ನು ಸೇರಿಸಿದಾಗ, ಇವೆರಡರಲ್ಲಿರುವ  ಬ್ಯಾಕ್ಟೀರಿಯಾಗಳು ಕೆಲವು ವಿಷಗಳನ್ನು ಉತ್ಪತ್ತಿ ಮಾಡುತ್ತವೆ. ಇದು ಉಸಿರಾಟದ ತೊಂದರೆಗಳು, ಹೊಟ್ಟೆ ನೋವುಗಳಿಗೆ ಕಾರಣವಾಗಬಹುದು. ಕ್ಯಾನ್ಸರ್ ಕೂಡ ಸಂಭವಿಸಬಹುದು. ಒಟ್ಟಿನಲ್ಲಿ, ಜೇನುತುಪ್ಪ ಮತ್ತು ತುಪ್ಪದ ಸಂಯೋಜನೆಯು ಆರೋಗ್ಯಕ್ಕೆ ಒಳ್ಳೆಯದಲ್ಲ.

ಪಂಜಾಮೃತದಲ್ಲಿ ಜೇನುತುಪ್ಪ – ತುಪ್ಪ : ತುಪ್ಪ ಮತ್ತು ಜೇನುತುಪ್ಪವನ್ನು ಒಟ್ಟಿಗೆ ಬೆರೆಸಿದ್ರೆ ವಿಷವೆನ್ನಲಾಗುತ್ತದೆ ಎಂದಾದ್ಮೇಲೆ ಪಂಚಾಮೃತದಲ್ಲಿ ಏಕೆ ಬಳಸಲಾಗುತ್ತದೆ ಎಂದು ನೀವು ಪ್ರಶ್ನೆ ಮಾಡಬಹುದು. ಅದಕ್ಕೆ ಉತ್ತರ ಇಲ್ಲಿದೆ. ಪಂಚಾಮೃತವನ್ನು ಐದು ಪದಾರ್ಥಗಳಿಂದ ಮಾಡುತ್ತಾರೆ. ಇದನ್ನು ಪೂಜೆಯ ಸಮಯದಲ್ಲಿ ಅಭಿಷೇಕ ಮಾಡಲು ಬಳಸಲಾಗುತ್ತದೆ. ನಂತರ ಅದನ್ನು ಪ್ರಸಾದವಾಗಿಯೂ ನೀಡಲಾಗುತ್ತದೆ. ಇದನ್ನು ತಯಾರಿಸಲು ಹಾಲು, ಮೊಸರು, ಜೇನುತುಪ್ಪ, ತುಪ್ಪ ಮತ್ತು ಸಕ್ಕರೆಯನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಪಂಚಾಮೃತದಲ್ಲಿ ತುಪ್ಪ ಮತ್ತು ಜೇನುತುಪ್ಪವನ್ನು ಸಮಪ್ರಮಾಣದಲ್ಲಿ ಬೆರೆಸದಿರುವುದು. ಇದಲ್ಲದೆ ಪಂಚಾಮೃತವನ್ನು ಪ್ರಸಾದ ರೂಪದಲ್ಲಿ ವಿತರಿಸಲಾಗುತ್ತದೆ. ಆದ್ದರಿಂದ ಇದನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಲಾಗುತ್ತದೆ. ಸಾಮಾನ್ಯವಾಗಿ ಪಂಚಾಮೃತವನ್ನು ಕೇವಲ 1 ಟೀ ಚಮಚದಷ್ಟು ಸೇವನೆ ಮಾಡ್ತೇವೆ. ಇದು ದೇಹಕ್ಕೆ ಹಾನಿಯುಂಟು ಮಾಡುವುದಿಲ್ಲ. 

ಬೇಸಿಗೆಯಲ್ಲಿ ತಿನ್ನೋಕೆ ಕಲ್ಲಂಗಡಿ ಒಳ್ಳೇದಾ ? ಕರಬೂಜ ಹಣ್ಣು ಒಳ್ಳೇದಾ ?

ಜೇನು –ತುಪ್ಪದ ಸೇವನೆಯಿಂದ ಕಾಡ್ಬಹುದು ಈ ಸಮಸ್ಯೆ : ತುಪ್ಪ ಮತ್ತು ಜೇನುತುಪ್ಪವನ್ನು ಸಮಪ್ರಮಾಣದಲ್ಲಿ ಸೇವಿಸುವುದರಿಂದ ದೇಹಕ್ಕೆ ಹಾನಿಯಾಗುತ್ತದೆ ಎಂದು ಆಯುರ್ವೇದದಲ್ಲಿ ಹೇಳಲಾಗಿದೆ. ಇದರಿಂದ ಚರ್ಮರೋಗಗಳು, ಹುಣ್ಣುಗಳು, ಜೀರ್ಣಾಂಗವ್ಯೂಹದ ಕಾಯಿಲೆಗಳು, ಜ್ವರ, ಪೈಲ್ಸ್ ಮತ್ತು ಮೂತ್ರದ ಅಸ್ವಸ್ಥತೆಗಳಂತಹ ತೊಂದರೆಗಳು ಉಂಟಾಗುತ್ತವೆ.
ಜೇನುತುಪ್ಪ ಮತ್ತು ತುಪ್ಪ ಎರಡೂ ಆರೋಗ್ಯಕ್ಕೆ ಒಳ್ಳೆಯದು. ಆದರೆ ನೀವು ಅದನ್ನು ಹೇಗೆ ಸೇವನೆ ಮಾಡ್ತೀರಿ ಎಂಬುದು ಮುಖ್ಯ. 
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಆರೋಗ್ಯಕರ ತುಳಸಿ ಅಗೆದು ತಿಂದ್ರೆ ಅಪಾಯ, ಧರ್ಮ- ಆಯುರ್ವೇದ ಹೇಳೋದೇನು?
ಅತಿಯಾದ್ರೆ ಅಮೃತವೂ ವಿಷ, ಇವನ್ನೆಲ್ಲಾ ಮಿತಿ ಮೀರಿ ತಿಂದ್ರೆ ಅಷ್ಟೇ..