ಬೇಸಿಗೆಯಲ್ಲಿ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು ಎನ್ನುವುದು ನಿಮ್ಮ ಆಶಯವಾಗಿದ್ದರೆ ಆಹಾರದ ಬಗ್ಗೆ ಹೆಚ್ಚು ಕಾಳಜಿ ವಹಿಸಿ. ಅಷ್ಟೇ ಅಲ್ಲ, ಈ ಸಮಯದಲ್ಲಿ ಉಪವಾಸದಂಥ ಕೆಲವು ನಿಯಮಗಳಿಗೆ ಬ್ರೇಕ್ ನೀಡುವುದು ಉಚಿತ.
ಬೇಸಿಗೆಯ (Summer) ದಿನಗಳಲ್ಲಿ ಆರೋಗ್ಯದ (Health) ಬಗ್ಗೆ ಎಷ್ಟು ಕಾಳಜಿ ವಹಿಸಿದರೂ ಸುಸ್ತು (Fatigue), ತಲೆಭಾರ, ಮೈಕೈಗಳಲ್ಲಿ ನೋವು ಕಿರಿಕಿರಿಗಳು ಉಂಟಾಗುತ್ತವೆ. ಇದ್ದಕ್ಕಿದ್ದ ಹಾಗೆ ತಲೆಸುತ್ತಿ ಬಂದು ಬೀಳಬಹುದು, ತೀವ್ರವಾಗಿ ಸುಸ್ತೆನಿಸಿ ಗಂಟಲು ಒಣಗಿ ಬಳಲಬಹುದು. ಈ ಸಮಯದಲ್ಲಿ ದೇಹ ತೀವ್ರ ಪ್ರಮಾಣದಲ್ಲಿ ನಿರ್ಜಲೀಕರಣ(Dehydration)ಗೊಳ್ಳುವುದೇ ಇದಕ್ಕೆ ಪ್ರಮುಖ ಕಾರಣ. ಇದೊಂದೇ ಅಲ್ಲ, ಬೇಸಿಗೆಯ ದಿನಗಳಲ್ಲಿ ವಿವಿಧ ಕಾರಣಗಳಿಂದ ಆರೋಗ್ಯ ಹದಗೆಡುತ್ತದೆ.
ಬೇಸಿಗೆ ಕಾಲದಲ್ಲಿ ಮುಖ್ಯವಾಗಿ ಆಹಾರ(Food)-ವಿಹಾರಗಳ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಕಾಳಜಿ (Care) ವಹಿಸುವುದರಿಂದ ಹೆಚ್ಚು ಔಷಧಗಳನ್ನು (Medicine) ಸೇವನೆ ಮಾಡಬೇಕಾದ ಪ್ರಮೇಯ ಬರುವುದಿಲ್ಲ. ಆಹಾರ ತಜ್ಞರ ಪ್ರಕಾರ, ಬೇಸಿಗೆಯಲ್ಲಿ ಈ ಕಾಲಕ್ಕೆ ಹೊಂದಾಣಿಕೆಯಾಗುವ ಉತ್ತಮ ಆಹಾರಶೈಲಿಯನ್ನು ಪ್ರತಿಯೊಬ್ಬರೂ ಅನುಸರಿಸಬೇಕು.
ಬೇಸಿಗೆಯಲ್ಲಿ ಮಲಬದ್ಧತೆ (Constipation), ಅತಿಸಾರ (Diarrhea), ಆಸಿಡಿಟಿ (Acidity), ಡಿಹೈಡ್ರೇಷನ್ ಸಮಸ್ಯೆ ಹೆಚ್ಚು. ಹೀಗಾಗಿ, ಇವುಗಳನ್ನು ಸೂಕ್ತವಾಗಿ ನಿಭಾಯಿಸುವ ಆಹಾರಗಳನ್ನೇ ಸೇವನೆ ಮಾಡಬೇಕು. ಹಣ್ಣುಗಳ ಜ್ಯೂಸ್ (Juice), ಲಿಂಬೆ ಪಾನಕ, ಎಳನೀರು ಸೇವನೆಯನ್ನು ಹೆಚ್ಚಾಗಿ ಮಾಡಬೇಕು, ಹೆಚ್ಚು ನೀರು ಕುಡಿಯಬೇಕು.
ಹಾಗಿದ್ದರೆ ಬೇಸಿಗೆಯಲ್ಲಿ ಏನೆಲ್ಲ ಮಾಡಬಾರದು ನೋಡಿಕೊಳ್ಳಿ.
ಸಿಹಿ (Sweet) ತಿನ್ನುವ ಆಸೆಯಾದರೆ ಏನು ಮಾಡಬೇಕು?
ತುಂಬ ಜನರಿಗೆ ಸಿಹಿ ತಿಂಡಿಗಳೆಂದರೆ ಭಾರೀ ಇಷ್ಟ. ಆಗಾಗ ತಿನ್ನಬೇಕೆಂದು ಅನಿಸುತ್ತದೆ. ಆದರೆ, ಬೇಸಿಗೆಯಲ್ಲಿ ಸಾಧ್ಯವಾದಷ್ಟು ಸಿಹಿ ತಿನಿಸು ತಿನ್ನುವುದನ್ನು ಅವಾಯ್ಡ್ ಮಾಡುವುದು ಒಳ್ಳೆಯದು. ಅದರಲ್ಲೂ ಬಾಹ್ಯ ಅಥವಾ ಬೇಕರಿಯಲ್ಲಿ ಸಿಗುವ ಸಿಹಿ ತಿಂಡಿಗಳನ್ನಂತೂ ಸೇವಿಸಲೇಬಾರದು. ಮನೆಯಲ್ಲೇ ಸಿದ್ಧಪಡಿಸಿಕೊಂಡು ತಿನ್ನಬಹುದಾದ ತಿಂಡಿಗಳು ಓಕೆ. ಹೊರಗಿನ ಸಿಹಿ ತಿನ್ನಬೇಕೆಂಬ ಮನಸ್ಸಾದರೆ ಮಾವಿನ ಹಣ್ಣನ್ನು ತಿನ್ನಬಹುದು. ಇದನ್ನು ಊಟವಾದ ಬಳಿಕವೇ ಸೇವಿಸಬೇಕು. ಅಪರೂಪಕ್ಕೊಮ್ಮೆ ಐಸ್ ಕ್ರೀಮ್ ತಿನ್ನಬಹುದು. ಇದನ್ನೂ ಸಹ ಪ್ರತ್ಯೇಕ ತಿಂಡಿಯಂತೆ ಸೇವಿಸಬೇಕು.
ಸೆಲೆಬ್ರಿಟಿ ವೆಡ್ಡಿಂಗ್ ಸ್ಟೈಲಿಶ್ಟ್ ಸಭ್ಯಸಾಚಿಗೆ ಬೇಡಿಕೆ ಕಡಿಮೆ ಆಯ್ತಾ ?
ರಕ್ತದೊತ್ತಡದ (Blood Pressure) ಬಗ್ಗೆ ಎಚ್ಚರವಹಿಸಿ
ಬೇಸಿಗೆಯಲ್ಲಿ ಬಹಳಷ್ಟು ಜನರಿಗೆ ಲೋ ಬ್ಲಡ್ ಪ್ರೆಷರ್ ಸಮಸ್ಯೆ ಹೆಚ್ಚು. ಹೀಗಾಗಿ, ಈ ಸಮಯದಲ್ಲಿ ಯಾವುದೇ ಸಮಯದ ಊಟವನ್ನು ತಪ್ಪಿಸಬಾರದು. ತೂಕ ಕಡಿಮೆ ಮಾಡಿಕೊಳ್ಳುವ ಉದ್ದೇಶವಿದ್ದರೂ ಬೆಳಗಿನ ತಿಂಡಿ ಅಥವಾ ಊಟವನ್ನು ತಪ್ಪಿಸಬಾರದು.
ಬಿಸಿಲಿನಿಂದ (Hot) ಬಂದಾಕ್ಷಣ….
ಬೇಸಿಗೆಯಲ್ಲಿ ಸಾಮಾನ್ಯವಾಗಿ ಜನರು ಹೊರಗೆ ಹೋಗಿದ್ದಾಗ ಬಿಸಿಲ ವಾತಾವರಣದಿಂದ ಮನೆಗೆ ಬಂದ ತಕ್ಷಣ ತಣ್ಣನೆಯ (Cold) ನೀರನ್ನು ಕುಡಿಯುತ್ತಾರೆ. ಆದರೆ, ಇದಕ್ಕೂ ಮುನ್ನ ತಾವು ತಮ್ಮ ದೇಹದ ಉಷ್ಣತೆಯನ್ನು ರೂಮಿನ ಉಷ್ಣತೆಯ (Temperature) ಮಟ್ಟಕ್ಕೆ ತಂದುಕೊಳ್ಳಬೇಕು. ಸಾದಾ ನೀರನ್ನು ಕುಡಿಯಬಹುದು. ಹಣ್ಣನ್ನು ತಿನ್ನಬಹುದು, ಇದಾದ ಬಳಿಕವೇ ಊಟ ಅಥವಾ ತಿಂಡಿಯನ್ನು ಸೇವಿಸಬೇಕು. ಬಿಸಿಲಿನಿಂದ ಬಂದಾಕ್ಷಣ ಆಹಾರ ಸೇವನೆ ಮಾಡಿದರೆ ಡಯೇರಿಯಾ ಆಗುವ ಸಾಧ್ಯತೆ ಹೆಚ್ಚು.
ಹೊಟ್ಟೆ ಬರ್ಬಾರ್ದು ಅಂದ್ರೆ ಕುಳಿತು cook ಮಾಡಿ!
ಬ್ರೇಕ್ ಫಾಸ್ಟ್ (Breakfast) ಚೆನ್ನಾಗಿರಲಿ
ಡಯೆಟ್ ಅಥವಾ ವ್ರತಗಳ ನೆಪದಲ್ಲಿ ಬೆಳಗಿನ ತಿಂಡಿಯನ್ನು ಸ್ಕಿಪ್ (Skip) ಮಾಡುವವರು ಬೇಸಿಗೆಯಲ್ಲಿ ಈ ಅಭ್ಯಾಸ ದೂರವಿಡಿ. ಬದಲಿಗೆ ಬೆಳಗಿನ ತಿಂಡಿಯನ್ನು ಚೆನ್ನಾಗಿ ಮಾಡಿ. ಬೆಳಗಿನ ತಿಂಡಿ ತಿನ್ನದೆ ಇದ್ದರೆ ದೇಹದ ಸೈಕಲ್ ಸಂಪೂರ್ಣವಾಗಿ ಹದಗೆಡುತ್ತದೆ. ಹೀಗಾಗಿ, ಬೇಸಿಗೆಯಲ್ಲಿ ಉಪವಾಸ ಮಾಡುವುದು ಉತ್ತಮವಲ್ಲ. ಇಡೀ ದಿನ ಮನೆಯಿಂದ ಹೊರಗಿರುವವರು. ಫೀಲ್ಡ್ ವರ್ಕ್ ನಲ್ಲಿ ತೊಡಗಿಕೊಂಡಿರುವವರು, ಮಾರ್ಕೆಟಿಂಗ್ ಕ್ಷೇತ್ರದವರು ಬೇಸಿಗೆಯ ದಿನಗಳಲ್ಲಿ ಆಹಾರದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಎಲ್ಲೆಂದರಲ್ಲಿ ಸಿಗುವ ಆಹಾರವನ್ನು ಸೇವಿಸದೆ ಗುಣಮಟ್ಟದ ಆಹಾರವನ್ನು ಮಾತ್ರ ಸೇವನೆ ಮಾಡಬೇಕು. ತೆರೆದಿಟ್ಟ ಹಣ್ಣುಗಳ ಸೇವನೆ ಬಿಲ್ಕುಲ್ ಬೇಡ. ಫಾಸ್ಟ್ ಫುಡ್, ಬೇಕರಿ ತಿನಿಸುಗಳಿಂದ ದೂರವಿರಿ. ಆಹಾರ ಬಹಳ ಬೇಗ ಹಳಸಿಹೋಗುವುದರಿಂದ ಫುಡ್ ಪಾಯ್ಸನ್ (Food Poison) ಸಮಸ್ಯೆ ಬಗ್ಗೆ ಎಚ್ಚರಿಕೆ ವಹಿಸಿ.