ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಸುಗಮ ಆರೋಗ್ಯದೊಂದಿಗೆ ಜೀವಿಸಲು ಆಯುರ್ವೇದ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ ಶ್ರೀನಿವಾಸ್ ಗೌಡ ಅವರು ತಿಳಿಸಿದರು.
ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್,
ಕೋಲಾರ (23): ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಸುಗಮ ಆರೋಗ್ಯದೊಂದಿಗೆ ಜೀವಿಸಲು ಆಯುರ್ವೇದ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ ಶ್ರೀನಿವಾಸ್ ಗೌಡ ಅವರು ತಿಳಿಸಿದರು. ಇಂದು ನಗರದ ಸುವರ್ಣ ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್ , ಜಿಲ್ಲಾ ಆಯುಷ್ ಇಲಾಖೆ ಕೋಲಾರ ಇವರ ಸಹಯೋಗದಲ್ಲಿ ಧನ್ವಂತರಿ ಜಯಂತಿ ಅಂಗವಾಗಿ 7 ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ -2022 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು. ಹಿಂದಿನ ಕಾಲದಲ್ಲಿ ಆಯುರ್ವೇದ ಪದ್ಧತಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನರು ಅಳವಡಿಸಿಕೊಳ್ಳುತ್ತಿದ್ದರು. ಹಳೆಯ ಕಾಲದ ಆಯುರ್ವೇದ ಪದ್ಧತಿಯನ್ನು ಎಂದಿಗೂ ಮರೆಯಬಾರದು. ನಮ್ಮ ಉತ್ತಮ ಆರೋಗ್ಯಕ್ಕೆ ಆಯುರ್ವೇದ ಪದ್ಧತಿ ಬಹು ಮುಖ್ಯ ಅಂಶವಾಗಿರುತ್ತದೆ. ಪ್ರತಿಯೊಬ್ಬರು ಪೌಷ್ಠಿಕಾಂಶವುಳ್ಳ ಆಹಾರವನ್ನು ಸೇವಿಸಬೇಕು. ಜಂಕ್ ಫುಡ್ ಅನ್ನು ಹೆಚ್ಚಾಗಿ ಸೇವಿಸುವುದರಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ.ರೋಗಗಳನ್ನು ಮುಕ್ತಗೊಳಿಸಲು ಪ್ರತಿನಿತ್ಯ ಯೋಗವನ್ನು ಅಭ್ಯಾಸ ಮಾಡಬೇಕು. ತಿಂಗಳಿಗೊಮ್ಮೆ ಅರಳೆಣ್ಣೆ ಸ್ನಾನ ಮಾಡುವುದರಿಂದ ನಮ್ಮ ದೇಹಕ್ಕೆ ಒಳ್ಳೆಯ ಆರೋಗ್ಯ ಸಿಗುತ್ತದೆ ಎಂದು ತಿಳಿಸಿದರು.
ಈ ಗಿಡಮೂಲಿಕೆ ಬಳಸಿದ್ರೆ 5 ನಿಮಿಷಗಳಲ್ಲಿ ನಿದ್ರೆ ಬರುತ್ತೆ! ಟ್ರೈ ಮಾಡಿ ನೋಡಿ
ಕೋಲಾರ ವಿಧಾನ ಪರಿಷತ್ ಸದಸ್ಯರಾದ ಗೋವಿಂದರಾಜು ಅವರು ಮಾತನಾಡಿ ಆಯುರ್ವೇದ ಪದ್ಧತಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೆಚ್ಚಿನ ಮಹತ್ವವನ್ನು ನೀಡಿದೆ. ಆಯುಷ್ ಆಸ್ಪತ್ರೆಗಳನ್ನು ಪ್ರತಿಯೊಬ್ಬರು ಸದ್ಬಳಕೆ ಮಾಡಿಕೊಳ್ಳಬೇಕು. ಅತಿಯಾದ ಮಾಂಸಹಾರ ಸೇವನೆ ಮಾಡಬಾರದು ಇದರಿಂದ ಆರೋಗ್ಯದ ಮೇಲೆ ಅನೇಕ ದುಷ್ಪರಿಣಾಮಗಳು ಉಂಟಾಗುತ್ತವೆ.
National Ayurveda Day: ಕಾಯಿಲೆ ಬಿದ್ದಾಗ ಟ್ಯಾಬ್ಲೆಟ್ ತಿನ್ಬೇಕಾಗಿಲ್ಲ, ಮನೆಮದ್ದು ಬಳಸಿ ಸಾಕು
ಯೋಗದಿಂದಲೇ ಋಷಿ ಮುನಿಗಳು ಆಹಾರವಿಲ್ಲದೆ ಅನೇಕ ದಿನಗಳು ಜೀವಿಸುತ್ತಿದ್ದರು. ಸ್ವಯಂ ಪ್ರೇರಿತರಾಗಿ ಯೋಗ ಮಾಡಲು ಪ್ರತಿಯೊಬ್ಬರು ಮುಂದಾಗಿ.ಯೋಗಿ ಆದವನಿಗೆ ಮಾತ್ರ ಯೋಗ ಒಲಿಯುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ರಾಘವೇಂದ್ರ ಶೆಟ್ಟಿಗಾರ್, ಸಂಪನ್ಮೂಲ ವ್ಯಕ್ತಿಗಳಾದ ರಾಜೇಂದ್ರ ಮೂವಿ, ಡಾ.ಭಾರತಿ ಡಿ. ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.