ಭಾರತದಲ್ಲಿ ಕೋವಿಡ್‌ನ ಮತ್ತಷ್ಟು ರೂಪಾಂತರ, ಸೋಂಕು ಹೆಚ್ಚಳ ಸಾಧ್ಯತೆ: WHO

By Kannadaprabha News  |  First Published Apr 9, 2023, 11:21 AM IST

ಭಾರತದಲ್ಲಿ ಎಕ್ಸ್‌.ಬಿ.ಬಿ.1.16 ಅನ್ನು ಈಗಾಗಲೇ ಹಲವು ರೂಪಾಂತರಿಗಳು ಬದಲಾಯಿಸಿವೆ. ಇವುಗಳು ದೇಶದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಳವಾಗಲು ಕಾರಣವಾಗಿವೆ. ಪ್ರಕರಣಗಳ ಸಂಖ್ಯೆ ಹೆಚ್ಚಳವಾದರೂ ಸಾವಿನ ಸಂಖ್ಯೆ ಕಡಿಮೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.


ನವದೆಹಲಿ: ಕಳೆದ ಕೆಲ ತಿಂಗಳಿನಿಂದ ಭಾರತದಲ್ಲಿ ಕೋವಿಡ್‌ ಸೋಂಕಿನ ಹೆಚ್ಚಳಕ್ಕೆ ಕಾರಣವಾಗಿದ್ದ ಎಕ್ಸ್‌ಬಿಬಿ.1.16 ಇದೀಗ ಮತ್ತಷ್ಟುರೂಪಾಂತರಗೊಂಡಿದ್ದು, ಈ ಬಗ್ಗೆ ಪರಿಶೀಲನೆ ಅಗತ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ. ಭಾರತದಲ್ಲಿ ಎಕ್ಸ್‌.ಬಿ.ಬಿ.1.16 ಅನ್ನು ಈಗಾಗಲೇ ಹಲವು ರೂಪಾಂತರಿಗಳು ಬದಲಾಯಿಸಿವೆ. ಇವುಗಳು ದೇಶದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಳವಾಗಲು ಕಾರಣವಾಗಿವೆ. ಪ್ರಕರಣಗಳ ಸಂಖ್ಯೆ ಹೆಚ್ಚಳವಾದರೂ ಸಾವಿನ ಸಂಖ್ಯೆ ಕಡಿಮೆ ಇದೆ. ಈ ರೂಪಾಂತರಿಗಳಿಂದ ಕೇವಲ ನೆಗಡಿ ಮತ್ತು ಕೆಮ್ಮಿನ ಲಕ್ಷಣಗಳು ಮಾತ್ರ ಕಾಣಿಸಿಕೊಳ್ಳುತ್ತಿವೆ. ವಿಶ್ವ ಆರೋಗ್ಯ ಸಂಸ್ಥೆ ಭಾರತದಲ್ಲಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದೆ ಎಂದು ಡಬ್ಲ್ಯುಎಚ್‌ಒನ ಕೋವಿಡ್‌-19 ಟೆಕ್ನಕಲ್‌ ಹೆಡ್‌ ವ್ಯಾಸ್‌ ಕೆರ್ಖೋವ್‌ ಹೇಳಿದ್ದಾರೆ.

ಈ ರೂಪಾಂತರಿಗಳಿಂದ ದೇಶದಲ್ಲಿ ಕೋವಿಡ್‌ ಪ್ರಕರಣಗಳು ಕಳೆದ 2 ದಿನಗಳಿಂದ ಹೆಚ್ಚಳವಾಗುತ್ತಿವೆ. ಇವುಗಳಿಂದ ಗಂಟಲು ನೋವು, ಮೈಕೈ ನೋವು, ತಲೆ ನೋವು (Headache) ಮತು ಹೊಟ್ಟೆಯಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಹಾಗಾಗಿ ಕೋವಿಡ್‌ ತುತ್ತಾದವರಿಗೆ ಮನೆಯಲ್ಲೇ ಐಸೋಲೇಟ್‌ ಆಗಲು, ಸಾಮಾಜಿಕ ಅಂತರ (Social distance) ಕಾಯ್ದುಕೊಳ್ಳಲು, ಮಾಸ್ಕ್‌ ಧರಿಸಲು ಸೂಚಿಸಲಾಗಿದೆ.

Latest Videos

undefined

Covid Case ಹೆಚ್ಚಳ, ಮತ್ತೊಮ್ಮೆ ಬೂಸ್ಟರ್‌ ಡೋಸ್‌ ನೀಡಲು ಡಬ್ಲ್ಯುಎಚ್‌ಒ ಸಲಹೆ

‘ರಾಜ್ಯಗಳಿಗೆ ಇನ್ನು ಕೇಂದ್ರದಿಂದ ಕೋವಿಡ್‌ ಲಸಿಕೆ ಪೂರೈಕೆ ಇಲ್ಲ’
ರಾಜ್ಯಗಳಿಗಾಗಿ ಇನ್ನು ತಾನು ಕೋವಿಡ್‌ ಲಸಿಕೆ ಖರೀದಿಸಿಕೊಡುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ ಎಂದು ತೆಲಂಗಾಣ ಆರೋಗ್ಯ ಸಚಿವ ಟಿ. ಹರೀಶ್‌ ರಾವ್‌ ಅವರು ಹೇಳಿದ್ದಾರೆ. ಶುಕ್ರವಾರ ಕೋವಿಡ್‌-19 ಮತ್ತೆ ಏರುತ್ತಿರುವ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಮನಸುಖ್‌ ಮಾಂಡವೀಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಯಿತು ಎಂದು ರಾವ್‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈಗ ಲಸಿಕೆ ಕಂಪೆನಿಗಳಲ್ಲಿ ಸಾಕಷ್ಟುದಾಸ್ತಾನು ಇದೆ. ಹೀಗಾಗಿ ರಾಜ್ಯ ಸರ್ಕಾರಗಳು ನೇರವಾಗಿ ಕಂಪನಿಗಳಿಂದಲೇ ಮುಕ್ತ ಮಾರುಕಟ್ಟೆಯಲ್ಲಿ ಲಸಿಕೆ ಕೊಂಡುಕೊಳ್ಳಬಹುದು ಎಂದು ಮಾಂಡವೀಯ ಸಲಹೆ ನೀಡಿದರು ಎಂದು ಅವರು ಹೇಳಿದ್ದಾರೆ.

ಒಂದೇ ದಿನ 6155 ಕೋವಿಡ್‌ ಕೇಸ್‌: ಪಾಸಿಟಿವಿಟಿ ಶೇ.5.63ಕ್ಕೆ ಏರಿಕೆ
ಭಾರತದಲ್ಲಿ ದಿನೇದಿನೇ ಕೋವಿಡ್‌ ಸೋಂಕು ಹೆಚ್ಚುತ್ತಿದ್ದು, ಶನಿವಾರ ಬೆಳಗ್ಗೆ ಅಂತ್ಯವಾದ 24 ಗಂಟೆ ಅವಧಿಯಲ್ಲಿ 6155 ಹೊಸ ಪ್ರಕರಣಗಳು ದಾಖಲಾಗಿವೆ. ದೈನಂದಿನ ಪಾಸಿಟಿವಿಟಿ ಪ್ರಮಾಣವು ಶೇ.5.63ಕ್ಕೆ ಏರಿಕೆಯಾಗಿದೆ. ಸೋಂಕಿಗೆ ದೇಶದಲ್ಲಿ ಒಟ್ಟು 11 ಮಂದಿ ಸಾವನ್ನಪ್ಪಿದ್ದು, ಮೃತರ ಪ್ರಮಾಣವು ಸೋಂಕಿತರ ಶೇ.1.19ರಷ್ಟಿದೆ. ದೇಶದಲ್ಲಿ ಹೊಸ ಪ್ರಕರಣಗಳ ದಾಖಲಾತಿ ಹೆಚ್ಚಿರುವುದರಿಂದ ಸಕ್ರಿಯ ಪ್ರಕರಣಗಳು 31,194ಕ್ಕೆ ಏರಿಕೆಯಾಗಿದೆ. ಗುಣಮುಖರ ಪ್ರಮಾಣವು ಶೇ.98.74ಕ್ಕೆ ಕುಸಿದಿದೆ.

ದೇಶದಲ್ಲಿ ಈವರೆಗೂ 4.47 ಕೋಟಿ ಮಂದಿ ಸೋಂಕಿಗೆ ಗುರಿಯಾಗಿದ್ದು,ಅದರಲ್ಲಿ 4.41 ಕೋಟಿ ಮಂದಿ ಗುಣಮುಖರಾಗಿದ್ದಾರೆ ಹಾಗೂ 5.30 ಲಕ್ಷ ಜನ ಸಾವನ್ನಪ್ಪಿದ್ದಾರೆ. ಇದುವರೆಗೂ 220.66 ಕೋಟಿ ಕೋವಿಡ್‌ ಲಸಿಕೆ (Vaccine) ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ (Health ministry) ತಿಳಿಸಿದೆ.

COVID-19 : ಆಪ್ತರನ್ನು ಗುರುತಿಸೋದೂ ಕಷ್ಟ! ಕೊರೊನಾದಿಂದ ಕಾಡ್ತಿದೆ ಮತ್ತೊಂದು ಸಮಸ್ಯೆ

ಕೋವಿಡ್ ಹೆಚ್ಚಳದಿಂದ ಭಾರತದಲ್ಲಿ ಮಾರ್ಗಸೂಚಿ ಜಾರಿ, ಮತ್ತೆ ಬಂತು ಮಾಸ್ಕ್!
ವಿಶ್ವದ ಹಲವು ರಾಷ್ಟ್ರಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಇತ್ತ ಭಾರತದಲ್ಲೂ ಕೊರೋನಾ ಮತ್ತೆ ಕಾಣಿಸಿಕೊಂಡಿದೆ. ಪ್ರತಿ ದಿನ ಸರಾಸರಿ 3,000 ಪ್ರಕರಣ ದಾಖಲಾಗುತ್ತಿದೆ. ಸಕ್ರೀಯ ಕೋವಿಡ್ ಪ್ರಕರಣ ಸಂಖ್ಯೆ ಏರಿಕೆಯಾಗಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಕೆಲ ಮಾರ್ಗಸೂಚಿ (Guidelines) ಬಿಡುಗಡೆ ಮಾಡಿದೆ. ವಿದೇಶಿ ಪ್ರಯಾಣಿಕರು, ಹಾಗೂ ವಿಮಾನ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. ವಿಮಾನ ಪ್ರಯಾಣಿಕರು (Passnegers) ಮಾಸ್ಕ್ ಧರಿಸುವಂತೆ ಸೂಚಿಸಿದೆ. 

click me!