Health Tips: ಅಯ್ಯೋ, ಮರೆತೋಯ್ತು ಅಂತೀರಾ? ದಿನನಿತ್ಯದ ಸಣ್ಣಪುಟ್ಟ ಮರೆವು ಒಳ್ಳೆದೇ ಬಿಡಿ!

By Suvarna NewsFirst Published Aug 22, 2023, 11:58 AM IST
Highlights

ಮರೆವಿಗೆ ಸಂಬಂಧಿಸಿ ಅದೆಷ್ಟೋ ಅಧ್ಯಯನಗಳು ನಡೆದಿವೆ. ಇದೀಗ, ಮರೆಯುವುದರಿಂದ ವ್ಯಕ್ತಿತ್ವಕ್ಕೆ ಲಾಭವಾಗುತ್ತದೆ ಎನ್ನುವ ವಿಚಾರವನ್ನು ವಿಜ್ಞಾನಿಗಳು ಹೇಳಿದ್ದಾರೆ. ಮರೆಯುವ ಪ್ರಕ್ರಿಯೆಯಲ್ಲಿ ಪಾತ್ರವಹಿಸುವ ಮಿದುಳಿನ ಕೋಶಗಳ ಕಾರ್ಯವಿಧಾನ ವಿಶಿಷ್ಟವಾಗಿರುತ್ತದೆ. 
 

“ಮರ್ತೋಯ್ತು...’ ಇದೊಂದು ಶಬ್ದವನ್ನು ದಿನಕ್ಕೆ ಅದೆಷ್ಟು ಬಾರಿ ಬಳಕೆ ಮಾಡುತ್ತೇವೋ ಗೊತ್ತಿಲ್ಲ. ಮನೆಯಲ್ಲಿ, ಸ್ನೇಹಿತರ ನಡುವೆ, ಕಚೇರಿ ಕೆಲಸಗಳಲ್ಲಿ, ಮಕ್ಕಳ ಬಳಿ ಪ್ರತಿದಿನ ಎಷ್ಟೋ ಬಾರಿ “ಛೇ, ಮರೆತೇ ಹೋಯ್ತು’ ಎಂದು ಅಲವತ್ತುಕೊಳ್ಳುತ್ತೇವೆ. ದೈನಂದಿನ ಈ ಮರೆಯುವ ಪ್ರಕ್ರಿಯೆಯಿಂದ ಕೆಲವು ಬಾರಿ ನಮಗೆ ಕಿರಿಕಿರಿ ಆಗುತ್ತದೆ. ಇತರರಿಗೂ ಆಗಿರಬಹುದು. ದುರದೃಷ್ಟವೆಂದರೆ, ಅನೇಕ ಬಾರಿ ಬಹುಮುಖ್ಯವಾಗಿ ಹೇಳಬೇಕಾದುದನ್ನೇ ಮರೆತಿರಬಹುದು. ಆದರೆ, ಇವೆಲ್ಲವೂ ಮಿದುಳಿನಲ್ಲಿ ನಡೆಯುವ ಕ್ರಿಯೆ. ಸಾಮಾನ್ಯವಾಗಿ ಮರೆಯುವ ಈ ಕ್ರಿಯೆಯನ್ನು ಕೆಟ್ಟದ್ದು ಎಂದೇ ನಾವೆಲ್ಲರೂ ಅಂದುಕೊಂಡಿದ್ದೇವೆ. ಆದರೆ, ಇದು ನಿಜಕ್ಕೂ ಮನಸ್ಸಿನ ಮೇಲೆ ಉತ್ತಮ ಪರಿಣಾಮ ಬೀರುವಂಥದ್ದು. ಹಳೆಯ ಯಾವುದೋ ಘಟನೆ, ನೆನಪನ್ನು  ಮರೆತಿದ್ದೇವೆ ಎಂದರೆ ಅದು ಒಂದು ರೀತಿಯಲ್ಲಿ ಹೊಸತರ ಕಲಿಕೆ ಎನ್ನುವುದಾಗಿ ವಿಜ್ಞಾನಿಗಳು ಹೇಳಿದ್ದಾರೆ. ಅಷ್ಟೇ ಅಲ್ಲ, ವ್ಯಕ್ತಿತ್ವದ ಮೇಲೆಯೂ ಅದು ವಿವಿಧ ರೀತಿಯಲ್ಲಿ ಪರಿಣಾಮ ಬೀರುತ್ತದೆ.

ಸಾಮಾನ್ಯವಾಗಿ ನಾವೆಲ್ಲರೂ ಕೆಟ್ಟ ಸನ್ನಿವೇಶಗಳನ್ನು (Bad Moments) ಬಹಳ ಚೆನ್ನಾಗಿ ನೆನಪಿನಲ್ಲಿ ಇರಿಸಿಕೊಂಡಿರುತ್ತೇವೆ. ಖುಷಿಯ (Happy) ಸಂಗತಿಗಳೂ ಸ್ಮರಣೆಯಲ್ಲಿರುತ್ತವೆ. ಸಹಜವಾಗಿ ಕಳೆದುಹೋದ ದಿನಗಳಲ್ಲಿ ನಡೆದ ಸನ್ನಿವೇಶಗಳು, ಭೇಟಿಯಾದ ವ್ಯಕ್ತಿಗಳು, ಅವರ ಕುರಿತಾದ ನೆನಪು (Memory) ಎಲ್ಲವೂ ಮರೆತುಹೋಗಿರುತ್ತವೆ. ನಿರ್ದಿಷ್ಟ ನೆನಪುಗಳನ್ನು ಮರಳಿ ಪಡೆಯುವ ಸಾಮರ್ಥ್ಯ ಪರಿಸರ, ವಾತಾವರಣದ ಮೇಲೆ ಅವಲಂಬಿಸಿರುತ್ತದೆ ಎಂದು ನರ ವಿಜ್ಞಾನಿಗಳು ಹೇಳುತ್ತಾರೆ.. ಮರೆಯುವುದು (Forget) ದೋಷವಲ್ಲ, ಬದಲಿಗೆ ಇದು ಮಿದುಳಿನ (Brain) ಕಾರ್ಯದ ಒಂದು ರೂಪ. ಇದು ಕ್ರಿಯಾತ್ಮಕ ಪರಿಸರದೊಂದಿಗೆ ಕ್ರಿಯಾತ್ಮಕವಾಗಿ ಸಂವಹಿಸಲು ಅನುವು ಮಾಡಿಕೊಡುತ್ತದೆ ಎಂದು  ಬಣ್ಣಿಸುತ್ತಾರೆ.

ಮಂಗನಿಂದ ಮಾನವ ವಿಜ್ಞಾನ ಬದಲಾಗುವ ಸಾಧ್ಯತೆ, ಪೂರ್ವಜರಿಗಿಂತ ಭಿನ್ನ ಪುರಾತನ ತಲೆಬುರುಡೆ ಪತ್ತೆ!

ವ್ಯಕ್ತಿತ್ವಕ್ಕೆ (Personality) ಅನುಕೂಲ
“ಸೆಲ್ ರಿಪೋರ್ಟ್ಸ್’ ಎನ್ನುವ ನಿಯತಕಾಲಿಕದಲ್ಲಿ ಈ ಕುರಿತು ಲೇಖನ ಪ್ರಕಟವಾಗಿದೆ. ದಿನನಿತ್ಯದ ಸಹಜವಾಗಿ ನಾವು ಮರೆತುಬಿಡುವ ಅದೆಷ್ಟೋ ಸಂಗತಿಗಳು ನಿಜಕ್ಕೂ ಮಿದುಳಿನಲ್ಲಿ ಸ್ಟೋರ್ (Store) ಆಗಿರುತ್ತವೆ. ಹಾಗೆಯೇ, ಈ ಮರೆಯುವ ಕ್ರಿಯೆ ಮಿದುಳಿನಲ್ಲಿರುವ ನಿರ್ದಿಷ್ಟ ಸ್ಮರಣೆಯ ಮೇಲೆ ಭಾರೀ ಪರಿಣಾಮ (Effect) ಬೀರುತ್ತವೆ. ಅಚ್ಚರಿಯ ಸಂಗತಿ ಎಂದರೆ, ಮರೆಯುವ ಪ್ರಕ್ರಿಯೆ  ಫ್ಲೆಕ್ಸಿಬಲ್ ವರ್ತನೆಗೆ (Flexible Behavior) ಕಾರಣವಾಗುತ್ತದೆ. ಉತ್ತಮ ನಿರ್ಧಾರ (Better Decision) ಕೈಗೊಳ್ಳಲು ಸಹಕಾರಿಯಾಗುತ್ತದೆ. ಎಷ್ಟೋ ಹಳೆಯ ನೆನಪುಗಳು ಇಂದಿನ ಜೀವನಕ್ಕೆ ಎಳ್ಳಷ್ಟೂ ಸಂಬಂಧಿಸಿಲ್ಲ ಎಂದಾದರೆ, ಅವುಗಳನ್ನು ಮರೆಯುವುದರಿಂದ ಲಾಭವೇ ಹೆಚ್ಚು. ಇದು ಆರೋಗ್ಯದ (Health) ಸುಧಾರಣೆ ದೃಷ್ಟಿಯಿಂದಲೂ ಮಹತ್ವದ್ದು.
ನಿಮಗೆ ಗೊತ್ತೇ? ನಮ್ಮ ಮಿದುಳಿನಲ್ಲಿ ಎನ್ ಗ್ರಾಮ್ (Engram) ಎನ್ನುವ ನಿರ್ದಿಷ್ಟ ಸ್ಮರಣೆಗೆ ಸಂಬಂಧಿಸಿದ ಕೋಶಗಳಿರುತ್ತವೆ. ಎಷ್ಟೋ ಸಂಗತಿಗಳು ಮರೆತುಹೋಗಿದ್ದರೂ ಎಂದೋ ಒಮ್ಮೆ ನೆನಪಾಗುವುದು ಎಲ್ಲರ ಅನುಭವಕ್ಕೆ ಬರುವ ವಿಚಾರ. ಆ ಸಮಯದಲ್ಲಿ ಈ ಎನ್ ಗ್ರಾಮ್ ಕೋಶಗಳು (Cells) ಕ್ರಿಯಾಶೀಲವಾಗಿರುವುದು ಕಂಡುಬಂದಿದೆ. ಇಲಿಗಳ ಮೇಲೆ ಈ ಕುತೂಹಲಕಾರಿ ಪ್ರಯೋಗವನ್ನು ನಡೆಸಲಾಗಿತ್ತು. ಮರೆತುಹೋದ ನೆನಪುಗಳಿಗೆ ಸಂಬಂಧಿಸಿದ ಹೊಸ ಅನುಭವಗಳನ್ನು ಮಿದುಳಿಗೆ ನೀಡಿದಾಗ ಅದುವರೆಗೆ ಕಳೆದುಹೋಗಿದ್ದ ಎನ್ ಗ್ರಾಮ್ ಕೋಶಗಳು ನೈಸರ್ಗಿಕವಾಗಿ ಮತ್ತೆ ಸಕ್ರಿಯ (Active)ಗೊಂಡಿದ್ದವು.

 Personality Tips: ಖುಷಿಖುಷಿಯಾಗಿರೋರು ಈ ಕೆಲಸಗಳನ್ನ ಎಂದಿಗೂ ಮಾಡೋಲ್ಲ

ಮತ್ತೆ ನೆನಪು!
ಮನುಷ್ಯನ ಮನಸ್ಸೇ ವಿಚಿತ್ರ ಎಂದು ಎಷ್ಟೋ ಬಾರಿ ನಮಗೆ ಅನಿಸುತ್ತಿರುತ್ತದೆ. ಹಾಗೆಯೇ ಈ ಮರೆವು, ನೆನಪುಗಳ ಸಹ. ಎನ್ ಗ್ರಾಮ್ ಕೋಶಗಳನ್ನು ಯಶಸ್ವಿಯಾಗಿ ರಿಕಾಲ್ (Recall) ಮಾಡಿದಾಗ ಕಳೆದುಹೋದ ಸ್ಮರಣೆಗಳು ಮತ್ತೆ ಮನದಲ್ಲಿ ಮೂಡುತ್ತವೆ. ಈ ಕೋಶಗಳನ್ನು ಸಕ್ರಿಯಗೊಳಿಸಲು ಸಾಧ್ಯವಾಗದಿದ್ದಾಗ ನೆನಪುಗಳು ಮರುಕಳಿಸುವುದಿಲ್ಲ. ತಜ್ಞರ ಪ್ರಕಾರ, ನೆನಪುಗಳು ಅಲ್ಲಿಯೇ ಇರುತ್ತವೆ. ಆದರೆ, ಅವುಗಳನ್ನು ಪುನಃಶ್ಚೇತನಗೊಳಿಸುವ ಸಾಧನಗಳು ಇರುವುದಿಲ್ಲ. ನೆನಪುಗಳು ಸುರಕ್ಷಿತವಾಗಿದ್ದರೂ ಅವುಗಳನ್ನು ತೆಗೆಯುವ ಕೋಡ್ (Code) ಮಾತ್ರ ನಮ್ಮಲ್ಲಿರುವುದಿಲ್ಲ! ಆದರೆ, ಕೆಲವೊಮ್ಮೆ ಮರೆವು ಸಮಸ್ಯೆಯಾಗುವುದಿದೆ. ಅಲ್ಜೈಮರ್ಸ್ ಅಥವಾ ವಯಸ್ಸಾದಂತೆ ಉಂಟಾಗುವ ಮರೆವಿನ ಕಾಯಿಲೆಯಲ್ಲಿ ಕೋಶಗಳು ವಿಭಿನ್ನವಾಗಿ ವರ್ತಿಸುತ್ತವೆ. 

click me!