ಕೋವಿಡ್‌ ಹೊಸ ರೂಪಾಂತರಿ ಹೆಚ್ಚಳ; ಕೇಂದ್ರದಿಂದ ಉನ್ನತ ಮಟ್ಟದ ಸಭೆ

By Suvarna News  |  First Published Aug 22, 2023, 9:14 AM IST

ಕಳೆದ 7 ದಿನಗಳಲ್ಲಿ ಜಾಗತಿಕವಾಗಿ 2.96 ಲಕ್ಷ ಹೊಸ ಕೋವಿಡ್‌ ಕೇಸು ಪತ್ತೆ ಬೆನ್ನಲ್ಲೇ  ಕೇಂದ್ರದಿಂದ ಉನ್ನತ ಮಟ್ಟದ ಸಭೆ ನಡೆಸಲಾಗಿದೆ. ಕೋವಿಡ್‌ ಪಾಸಿಟಿವ್‌ ಬಂದ ಮಾದರಿಗಳ ಸಂಪೂರ್ಣ ಜೀನೋಮ್‌ ಪರೀಕ್ಷೆಗೆ ಮತ್ತು ಜಾಗತಿಕ ರೂಪಾಂತರ ತಳಿಗಳ ಮೇಲೆ ನಿಗಾಕ್ಕೆ ರಾಜ್ಯಗಳಿಗೆ ಸೂಚಿಸಲಾಗಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.


ನವದೆಹಲಿ: ಜಗತ್ತಿನ ವಿವಿಧೆಡೆ ಕೊರೋನಾದ ಹೊಸ ರೂಪಾಂತರಿಗಳು ಪತ್ತೆಯಾಗುತ್ತಿರುವ ಬೆನ್ನಲ್ಲೇ ಎಚ್ಚೆತ್ತಿರುವ ಸರ್ಕಾರ ಉನ್ನತ ಅಧಿಕಾರಿಗಳ ಮಟ್ಟದ ಸಭೆ ನಡೆಸಿದೆ. ಈ ವೇಳೆ ಕೋವಿಡ್‌ ಪಾಸಿಟಿವ್‌ ಬಂದ ಮಾದರಿಗಳ ಸಂಪೂರ್ಣ ಜೀನೋಮ್‌ ಪರೀಕ್ಷೆಗೆ ಮತ್ತು ಜಾಗತಿಕ ರೂಪಾಂತರ ತಳಿಗಳ ಮೇಲೆ ನಿಗಾಕ್ಕೆ ರಾಜ್ಯಗಳಿಗೆ ಸೂಚಿಸಲಾಗಿದೆ. ಕಳೆದ 7 ದಿನಗಳಲ್ಲಿ ಜಾಗತಿಕವಾಗಿ 2.96 ಲಕ್ಷ ಹೊಸ ಕೋವಿಡ್‌ ಕೇಸು ಪತ್ತೆ ಬೆನ್ನಲ್ಲೇ ಈ ಸಭೆ ನಡೆಸಲಾಗಿದೆ. ಈ ಬಗ್ಗೆ ಮಾತನಾಡಿದ ಪ್ರಧಾನಿಗಳ ಪ್ರಧಾನ ಕಾರ್ಯದರ್ಶಿ ಡಾ.ಪಿ.ಕೆ ಮಿಶ್ರಾ, 'ದೇಶದಲ್ಲಿ ಕೋವಿಡ್‌ ಪರಿಸ್ಥಿತಿ ಸ್ಥಿರವಾಗಿದೆ. ಆದರೂ ತೀವ್ರತರವಾದ ರೋಗ ಲಕ್ಷಣಗಳ ಬಗ್ಗೆ ರಾಜ್ಯಗಳು ನಿಗಾ ವಹಿಸಬೇಕಿದೆ' ಎಂದರು.

ಸೋಂಕಿತರಿಗೆ ಕನಿಷ್ಠ 1 ಡೋಸ್‌ ಲಸಿಕೆಯಿಂದ ಶೇ.60ರಷ್ಟು ರಕ್ಷಣೆ: ಅಧ್ಯಯನ
'ಲಸಿಕೆ ಪಡೆದರೂ ಕೋವಿಡ್‌ ಸೋಂಕಿಗೆ ಒಳಗಾದವರು ಗುಣಮುಖರಾದ ನಂತರ ಸಾವನ್ನಪ್ಪುವ ಸಾಧ್ಯತೆ ಅಧಿಕವಾಗಿರುತ್ತದೆ' ಎಂಬ ಊಹಾಪೋಹಗಳನ್ನು ತಳ್ಳಿ ಹಾಕಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಐಸಿಎಂಆರ್‌, ಕನಿಷ್ಠ 1 ಡೋಸ್‌ ಲಸಿಕೆ ಕೂಡ ಸಾವಿನಿಂದ ಶೇ.60ರಷ್ಟುರಕ್ಷಣೆ ನೀಡುತ್ತದೆ ಎಂದು ಸ್ಪಷ್ಟಪಡಿಸಿದೆ.

Latest Videos

undefined

ಕೋವಿಡ್‌ ನಂತರ ಯುವಜನತೆಯಲ್ಲಿ ಹಾರ್ಟ್‌ಅಟ್ಯಾಕ್‌ ಹೆಚ್ಚಳ; ICMRನಿಂದ ಅಧ್ಯಯನ

ಕೋವಿಡ್‌ನಿಂದ ಗುಣಮುಖರಾಗಿ 1 ವರ್ಷ ಆಗುವವರೆಗೆ ಸೋಂಕಿತರ ಅಧ್ಯಯನವನ್ನು ಐಸಿಎಂಆರ್‌ ನಡೆಸಿದೆ. ಇದರಲ್ಲಿ, ಕೊರೋನಾ ವೈರಸ್‌ ಸೋಂಕು ತಾಗುವ ಮುನ್ನ ಕನಿಷ್ಠ ಪಕ್ಷ 1 ಡೋಸ್‌ ಲಸಿಕೆಯನ್ನಾದರೂ ಪಡೆದವರು, ಗುಣಮುಖರಾದ ನಂತರ ಲಸಿಕೆಯಿಂದ ಸಾಕಷ್ಟುರಕ್ಷಣೆ ಪಡೆದಿದ್ದಾರೆ. ಅವರು ಮರಣದ ವಿರುದ್ಧ ಶೇ.60ರಷ್ಟುರಕ್ಷಣೆ ಪಡೆದಿದ್ದಾರೆ.

ಹೀಗಾಗಿ ಕೋವಿಡ್‌ನಿಂದ ಗುಣವಾದರೂ ಅವರು ವಿವಿಧ ಕಾರಣಗಳಿಗೆ ಸಾವನ್ನಪ್ಪುವ ಸಾಧ್ಯತೆ ಹೆಚ್ಚಿರುತ್ತದೆ ಎಂಬುದು ಕೇವಲ ಊಹಾಪೋಹ ಎಂದು ಸಾಬೀತಾಗಿದೆ ಎಂದು ಹೇಳಿದೆ. ದೇಶದ 31 ಆಸ್ಪತ್ರೆಗಳ 14,419 ಸೋಂಕಿತರನ್ನು ಅಧ್ಯಯನಕ್ಕೆ ಒಳಪಡಿಸಿ ಈ ತೀರ್ಮಾನಕ್ಕೆ ಬರಲಾಗಿದೆ.

ಕೋವಿಡ್ ವೇಳೆ ರೋಗಿಯಿಂದ ಹೆಚ್ಚುವರಿ ಹಣ: ಮರುಪಾವತಿಸಿದ ಇ.ಟಿ.ಸಿ.ಎಂ ಆಸ್ಪತ್ರೆ

click me!