ಆಹಾರ ಯಾವುದಾದ್ರೆ ಏನಾಯ್ತು? ಹೊಟ್ಟೆ ತುಂಬ್ತಲ್ಲ ಎನ್ನುವವರಿದ್ದಾರೆ. ಹೊಟ್ಟೆ ತುಂಬುವುದು ಮಾತ್ರ ಮುಖ್ಯವಲ್ಲ. ದೇಹದ ಒಳಹೋದ ಆಹಾರ ನಮ್ಮ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದು ನಮಗೆ ತಿಳಿದಿರಬೇಕು. ಯಾವ ಸಮಯದಲ್ಲಿ ಯಾವ ಆಹಾರ ಸೇವನೆ ಮಾಡ್ಬೇಕೋ ಅದನ್ನೇ ಮಾಡ್ಬೇಕು.
ಬೆಳಗಿನ (Morning) ಉಪಹಾರ (Breakfast)ವನ್ನು ರಾಜ (King) ನಂತೆ, ಮಧ್ಯಾಹ್ನ (Afternoon)ದ ಊಟವನ್ನು ಸಾಮಾನ್ಯನಂತೆ ಹಾಗೂ ರಾತ್ರಿ ಊಟವನ್ನು ಬಡವನಂತೆ ಮಾಡು ಎಂಬ ಮಾತಿದೆ. ಇದನ್ನು ಪಾಲಿಸಿದ್ರೆ ಪದೇ ಪದೇ ಆಸ್ಪತ್ರೆಗೆ ಹೋಗುವ ಸ್ಥಿತಿ ನಿರ್ಮಾಣವಾಗುವುದಿಲ್ಲ. ಈ ವಿಷ್ಯ ಬಹುತೇಕರಿಗೆ ತಿಳಿದಿದೆ. ಆದ್ರೆ ಕಚೇರಿಗೆ ಹೋಗುವವರು ಅಥವಾ ಅಂಗಡಿಗೆ ಹೋಗುವವರಿಗೆ ಮಧ್ಯಾಹ್ನದ ಊಟವನ್ನು ಸರಿಯಾಗಿ ಮಾಡಲು ಸಾಧ್ಯವಾಗುವುದಿಲ್ಲ. ಕೆಲವರು ಬಾಕ್ಸ್ ತೆಗೆದುಕೊಂಡು ಹೋಗ್ತಾರೆ.ಅಂಥವರು ಮನೆಯಲ್ಲಿ ಮಾಡಿದ ಆಹಾರವನ್ನೇ ಸೇವನೆ ಮಾಡುವುದ್ರಿಂದ ಸಮಸ್ಯೆ ಎದುರಿಸುವುದಿಲ್ಲ. ಮತ್ತೆ ಕೆಲವರು ಮನೆಯ ಊಟವನ್ನು ಒಯ್ಯುವುದಿಲ್ಲ. ಹೊಟೇಲ್, ರೆಸ್ಟೋರೆಂಟ್, ಫಾಸ್ಟ್ ಫುಡ್ ಸೇವನೆ ಮಾಡ್ತಾರೆ. ಮಧ್ಯಾಹ್ನದ ಊಟವನ್ನು ಮೂರು ಗಂಟೆ ಮೇಲೆ ಮಾಡುವ ಜನರಿದ್ದಾರೆ. ತಡವಾಗಿ ಊಟ ಮಾಡುವ ಜೊತೆಗೆ ಫಾಸ್ಟ್ ಫುಡ್ ಸೇವನೆ ಮಾಡ್ತಾರೆ. ಫಿಜ್ಜಾ, ಬರ್ಗರ್, ಪಾಸ್ತಾ, ಸ್ಯಾಂಡ್ವಿಚ್ ಸೇರಿದಂತೆ ಫಾಸ್ಟ್ ಫುಡ್ ತಿನ್ನುತ್ತಾರೆ. ತಜ್ಞರ ಪ್ರಕಾರ ಎಂದಿಗೂ ಇಂಥ ಆಹಾರವನ್ನು ಮಧ್ಯಾಹ್ನ ಸೇವನೆ ಮಾಡಬಾರದು. ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಈ ಆಹಾರಗಳು ದಿನಪೂರ್ತಿ ನಮಗೆ ಶಕ್ತಿ ನೀಡುವುದಿಲ್ಲ. ದೇಹದಲ್ಲಿ ಆಲಸ್ಯವನ್ನುಂಟು ಮಾಡುತ್ತದೆ. ಇದಲ್ಲದೆ ಕೆಲವು ಆಹಾರಗಳು ಹಸಿವನ್ನು ನೀಗಿಸುವುದಿಲ್ಲ. ಹಾಗಾಗಿ ಪದೇ ಪದೇ ಹಸಿವಾಗುತ್ತದೆ. ಇದೆಲ್ಲವೂ ಕೆಲಸದ ಮೇಲೆ ಪ್ರಭಾವ ಬೀರುತ್ತದೆ.ಸುಸ್ತು ಹಾಗೂ ಆಲಸ್ಯವಾದಾಗ ದೇಹಕ್ಕೆ ವಿಶ್ರಾಂತಿ ಸಿಗದೆ ಹೋದ್ರೆ ತಲೆನೋವು ಶುರುವಾಗುತ್ತದೆ. ಹಾಗಾಗಿ ಕೆಲವೊಂದು ಮಧ್ಯಾಹ್ನದ ಸಮಯದಲ್ಲಿ ಕೆಲವೊಂದು ಆಹಾರವನ್ನು ಸೇವನೆ ಮಾಡಬಾರದು. ಮಧ್ಯಾಹ್ನದ ಸಮಯದಲ್ಲಿ ಯಾವ ಆಹಾರ ಸೇವನೆ ಮಾಡಬಾರದು ಎಂಬುದನ್ನು ನಾವಿಂದು ಹೇಳ್ತೇವೆ.
ವೆಜಿಟೇಬಲ್ ಸೂಪ್ : ವೆಜಿಟೇಬಲ್ ಸೂಪ್ ನಲ್ಲಿ ಕ್ಯಾಲೋರಿ ಕಡಿಮೆಯಿರುತ್ತದೆ. ಹಾಗೆಯೇ ಪೋಷಕಾಂಶ ಹೆಚ್ಚಿರುತ್ತದೆ.ಆದ್ರೆ ಇದ್ರಲ್ಲಿ ಪ್ರೋಟೀನ್ ಇರುವುದಿಲ್ಲ. ಹಾಗಾಗಿ ಸೂಪ್ ನಿಮ್ಮ ಹಸಿವನ್ನು ತುಂಬಾ ಸಮಯ ನೀಗಿಸುವುದಿಲ್ಲ. ಪ್ರೋಟೀನ್ ಹಸಿವನ್ನು ಕಡಿಮೆ ಮಾಡುತ್ತದೆ. ಪದೇ ಪದೇ ಆಹಾರ ಸೇವನೆ ಮಾಡುವ ಅಗತ್ಯವಿರುವುದಿಲ್ಲ. ಹಾಗಾಗಿ ಪ್ರೋಟೀನ್ ಆಹಾರವನ್ನು ಹೆಚ್ಚು ಸೇವಿಸುವಂತೆ ಸಲಹೆ ನೀಡಲಾಗುತ್ತದೆ.
ಮಧ್ಯಾಹ್ನದ ಆಹಾರದಲ್ಲಿ ನೀವು ಸೂಪ್ ಸೇವಿಸಲು ಇಷ್ಟಪಟ್ಟಿದ್ದರೆ ಚಿಕನ್ ಸೂಫ್ ಸೇವನೆ ಮಾಡಿ. ಇದ್ರಲ್ಲಿ ಪ್ರೋಟೀನ್ ಅಂಶ ಹೆಚ್ಚಿರುತ್ತದೆ. ಓಟ್ಸ್, ಅಕ್ಕಿ, ಸೇಬು ಅಥವಾ ರೊಟ್ಟಿಯಂತಹ ಕಾರ್ಬೋಹೈಡ್ರೇಟ್‌ಗಳನ್ನು ಸಹ ಸೇವಿಸಬೇಕು.
ಫಾಸ್ಟ್ ಫುಡ್ : ಫಾಸ್ಟ್ ಫುಡ್ ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬಿರುತ್ತದೆ.ಇದು ಹೊಟ್ಟೆಯನ್ನು ತುಂಬಿಸುತ್ತದೆ. ಆದ್ರೆ ಆಲಸ್ಯ,ನಿದ್ರೆ ಕಾಡುತ್ತದೆ.ಇದ್ರಿಂದ ನಿಮ್ಮ ಕೆಲಸಕ್ಕೆ ಅಡ್ಡಿಯಾಗುತ್ತದೆ. ಹಾಗಾಗಿ ಮಧ್ಯಾಹ್ನದ ಊಟಕ್ಕೆ ಫಾಸ್ಟ್ ಫುಡ್ ಸೇವನೆ ಮಾಡ್ಬೇಡಿ.
ಹೊಸ ತಾಯಂದಿರ Back Pain ಸಮಸ್ಯೆಗೆ ಇಲ್ಲಿದೆ ಪರಿಹಾರ
ಪಾಸ್ತಾ : ಇದರಲ್ಲಿ ಸಂಸ್ಕರಿಸಿದ ಕಾರ್ಬ್ಸ್ ಇರುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದನ್ನು ಹೆಚ್ಚು ಸೇವನೆ ಮಾಡಿದ್ರೆ ನಿದ್ರೆ ಬರುತ್ತದೆ. ಹಾಗಾಗಿ ಮಧ್ಯಾಹ್ನ ವಿಶ್ರಾಂತಿ ಪಡೆಯಲು ಸಾಧ್ಯವಿಲ್ಲ ಎನ್ನುವವರು ಪಾಸ್ತಾ ಸೇವನೆ ಮಾಡಲೇಬೇಡಿ.
ಗ್ರೀನ್ ಜ್ಯೂಸ್ : ಮಧ್ಯಾಹ್ನದ ಸಮಯದಲ್ಲಿ ಹೊಟ್ಟೆ ತುಂಬಿಸಲು ಗ್ರೀನ್ ಜ್ಯೂಸ್ ಸೇವನೆ ಮಾಡ್ಬೇಕೆಂದು ಸಲಹೆ ನೀಡಲಾಗುತ್ತದೆ. ಗ್ರೀನ್ ಜ್ಯೂಸ್ ಆರೋಗ್ಯಕ್ಕೆ ಒಳ್ಳೆಯದು ನಿಜ ಆದ್ರೆ ಮಧ್ಯಾಹ್ನದ ಊಟಕ್ಕೆ ಇದನ್ನೊಂದೇ ಸೇವನೆ ಮಾಡುವುದು ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ಫೈಬರ್,ಪ್ರೋಟೀನ್,ಕಾರ್ಬ್ಸ್ ಮತ್ತು ಕೊಬ್ಬಿರುವ ಆಹಾರವನ್ನು ಸೇವನೆ ಮಾಡಬೇಕು. ಆದ್ರೆ ಗ್ರೀನ್ ಜ್ಯೂಸ್ ನಲ್ಲಿ ಎಲ್ಲವೂ ಇರುವುದಿಲ್ಲ. ಹಾಗಾಗಿ ಮಧ್ಯಾಹ್ನ ಗ್ರೀನ್ ಜ್ಯೂಸ್ ಸೇವನೆ ಜೊತೆಗೆ ಉಳಿದ ಆಹಾರವನ್ನೂ ಸೇವನೆ ಮಾಡಬೇಕಾಗುತ್ತದೆ.
Food Tips: ಊಟ ಬಿಟ್ರೆ ಸಣ್ಣಗಾಗ್ತೀವಿ ಅನ್ನೋದು ಸುಳ್ಳು. ಹಾಗೆ ಮಾಡ್ಬೇಡಿ
ಎಣ್ಣೆಯುಕ್ತ ಆಹಾರ : ಎಣ್ಣೆಯಲ್ಲಿ ಖರೀದಿ ಆಹಾರವನ್ನು ಮಧ್ಯಾಹ್ನ ಸೇವನೆ ಮಾಡಿದ್ರೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದ್ರಲ್ಲಿ ಕೊಬ್ಬಿನ ಅಂಶ ಹೆಚ್ಚಿರುತ್ತದೆ.
ಸ್ಟೋರ್ ಮಾಡಿದ ಸ್ಯಾಂಡ್ವಿಚ್ : ಅನೇಕರು ಸ್ಟೋರ್ ಮಾಡಿರುವ,ಮೊದಲೇ ತಯಾರಿಸಿದ ಸ್ಯಾಂಡ್ವಿಚ್ ಸೇವನೆ ಮಾಡ್ತಾರೆ. ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.