Health Alert: ನೀವು ಮೊಮೊಸ್ ಪ್ರಿಯರೇ? ವಿಪರೀತ ಸೇವನೆಯಿಂದ ಅಪಾಯಗಳೊಂದೆರಡಲ್ಲ!

By Suvarna News  |  First Published Feb 24, 2022, 6:04 PM IST

ಮೊಮೊಸ್ ಒಳಗೆ ವಿವಿಧ ರೀತಿಯ ಮಸಾಲೆಗಳ ಹೂರಣವಿರುತ್ತದೆ. ಚೀನಿ ಮೂಲದ ಈ ತಿನಿಸು ನೇಪಾಳ, ಭಾರತಗಳಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದೆ. ಇತ್ತೀಚೆಗಂತೂ ಸ್ಟ್ರೀಟ್ ಫುಡ್ ಗಳ ರಾಜ ಎನಿಸಿಕೊಂಡಿದೆ. ಆದರೆ, ಇದರಿಂದಾಗುವ ಅಪಾಯಗಳ ಬಗ್ಗೆ ಅರಿತುಕೊಳ್ಳಿ.
 


ಮೊಮೊಸ್ (Momos) ನೋಡಲು ಖುಷಿಯಾಗುತ್ತದೆ. ತಿನ್ನಲೂ ಭಾರೀ ರುಚಿ ಎನಿಸುತ್ತದೆ. ಜತೆಗೆ, ಬೇಯಿಸಿದ (Stuff) ತಿಂಡಿಯಲ್ಲವೇ, ತಿನ್ನಲು ತೊಂದರೆಯಿಲ್ಲ ಎಂದು ಭಾವಿಸುವವರೇ ಹೆಚ್ಚು. ಹೀಗಾಗಿ, ಮೊಮೊಸ್ ಖ್ಯಾತಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇದನ್ನು ದಿನವೂ ತಿನ್ನುವವರಿದ್ದಾರೆ. ನೀವೂ ಹೀಗೆ ಮೊಮೊಸ್ ಪ್ರಿಯರಾಗಿದ್ದರೆ ಈಗಲೇ ಎಚ್ಚೆತ್ತುಕೊಳ್ಳಿ. ಏಕೆಂದರೆ, ಮೊಮೊಸ್ ಸೇವನೆ ಆರೋಗ್ಯಕ್ಕೆ ಉತ್ತಮವಲ್ಲ. 

ಮೊಮೊಸ್ ಅನ್ನು ಮಾಡುವುದು ಸುಲಭ. ಸ್ಟೀಮರ್ ಇಟ್ಟುಕೊಂಡು ಸುಲಭವಾಗಿ ತಯಾರಿಸಬಹುದು. ನಾನ್ ವೆಜ್ (Non-veg) ಮೊಮೊಸ್ ಕೂಡ ಸಿಗುತ್ತವೆ. ಹಲವು ಮಸಾಲೆ ಚಟ್ನಿಗಳು, ಸಾಸ್ ಅನ್ನು ನಂಜಿಕೊಂಡು ತಿನ್ನಲಾಗುತ್ತದೆ.  ಇವೆಲ್ಲ ಆರೋಗ್ಯಕ್ಕೆ ಅಪಾಯಕಾರಿಯಾಗಬಲ್ಲವು. ಅಧ್ಯಯನದ ಪ್ರಕಾರ, ಮೊಮೊಸ್ ನಿಂದ ಆರೋಗ್ಯಕ್ಕೆ ಏನೆಲ್ಲ ಹಾನಿಯಾಗಬಹುದು, ಎಂದು ತಿಳಿದುಕೊಳ್ಳಿ.

ಪ್ಯಾಂಕ್ರಿಯಾಸ್ (Pancreas)ಗೆ ಹಾನಿ
ಮೊದಲನೆಯದಾಗಿ, ಮೊಮೊಸ್ ನಲ್ಲಿರುವ ಮೈದಾ (Maida) ಪ್ಯಾಂಕ್ರಿಯಾಸ್ ಮೇಲೆ ಪರಿಣಾಮ ಬೀರುತ್ತದೆ. ಮೈದಾ ಹಿಟ್ಟಿನಿಂದ ಆರೋಗ್ಯದ ಮೇಲಾಗುವ ಹಾನಿಯ ಬಗ್ಗೆ ಎಲ್ಲರಿಗೂ ತಿಳಿದಿದೆ. ಮೊಮೊಸ್ ಮೇಲ್ಮೈ ಅನ್ನು ಮೈದಾ ಹಿಟ್ಟಿನಿಂದ ತಯಾರಿಸುತ್ತದೆ. ಗೋಧಿಯಲ್ಲಿರುವ ಉತ್ತಮ ಅಂಶಗಳೆಲ್ಲವನ್ನೂ ತೆಗೆದಾದ ಬಳಿಕ ಉಳಿಯುವುದು ಮೈದಾ. ಅದರಲ್ಲಿ ಸ್ಟಾರ್ಚ್ (Stacrh) ಬಿಟ್ಟು ಬೇರೇನೂ ಇರುವುದಿಲ್ಲ. ಬ್ಲೀಚ್ (Bleach) ನಂತಹ ರಾಸಾಯನಿಕದೊಂದಿಗೆ ಇದನ್ನು ಹೋಲಿಕೆ ಮಾಡಬಹುದು. ಆರೋಗ್ಯ ತಜ್ಞರ ಪ್ರಕಾರ, ಮೈದಾದಿಂದ ಇನ್ಸುಲಿನ್ (Insulin) ಉತ್ಪಾದನೆ ಮಾಡುವ ಪ್ಯಾಂಕ್ರಿಯಾಸ್ ಮೇಲೆ ತೀವ್ರ ಪ್ರಭಾವವಾಗುತ್ತದೆ. ಅದರ ಕ್ಷಮತೆ ಕುಗ್ಗುತ್ತದೆ. ಇನ್ಸುಲಿನ್ ಉತ್ಪಾದನೆ ಕಡಿಮೆಯಾಗುತ್ತದೆ. 

Tap to resize

Latest Videos

ಕಳಪೆ ಗುಣಮಟ್ಟದ ಸಾಮಗ್ರಿಗಳ ಬಳಕೆ
ಮೊಮೊಸ್ ನಲ್ಲಿ ತರಕಾರಿ, ಚಿಕನ್ ಗಳನ್ನು ಬಳಸಲಾಗುತ್ತದೆ ಎನ್ನುವುದು ನಿಜವಾದರೂ ದೀರ್ಘ ಕಾಲ ಅವುಗಳನ್ನು ಇಡುವುದರಿಂದ ಅವು ಹಾಳಾಗಬಹುದು. ಅಂಗಡಿಗಳಲ್ಲಿ ದೊರಕುವ ಚಿಕನ್ ನಲ್ಲಿ ಇ-ಕೊಲೈ (E-Coli) ಬ್ಯಾಕ್ಟೀರಿಯಾ ಪ್ರಮಾಣ ಅಧಿಕವಾಗಿರುವುದ ಕಂಡುಬಂದಿದೆ. ಇಂತಹ ಮೊಮೊಸ್ ಸೇವನೆ ಅಪಾಯಕಾರಿಯಾಗಬಲ್ಲದು.

Health Tips: ಟೈಪ್-2 ಡಯಾಬಿಟಿಸ್‌ಗೆ ಬೆಸ್ಟ್ ಫುಡ್

ಮಸಾಲೆ ಚಟ್ನಿಯೂ ಅಪಾಯಕಾರಿ
ಕೆಂಪು ಮೆಣಸಿನಕಾಯಿ (Red Chilli) ಆರೋಗ್ಯಕ್ಕೆ ಉತ್ತಮ. ಆದರೆ, ಆ ಕೆಂಪು ಮೆಣಸಿನಪುಡಿ ಮಾಡಲು ರಾಸಾಯನಿಕಗಳನ್ನು ಬಳಸಲಾಗುತ್ತದೆ. ಕೆಂಪು ಮೆಣಸಿನಕಾಯಿಗೆ ಹೆಚ್ಚಿನ ಕೆಂಪು ಬರಲೂ ರಾಸಾಯನಿಕ ಬಳಕೆಯಾಗುತ್ತದೆ. ಮೊಮೊಸ್ ಮಾರಾಟ ಮಾಡುವವರು ಖಂಡಿತವಾಗಿ ಕೆಂಪು ಮೆಣಸಿನಕಾಯಿಯ ಗುಣಮಟ್ಟವನ್ನು ಪರಿಶೀಲನೆ ಮಾಡುವುದಿಲ್ಲ. ಕಡಿಮೆ ದರ್ಜೆಯ ಮೆಣಸಿನಪುಡಿಯನ್ನೇ ಅವರು ಬಳಕೆ ಮಾಡುವುದು ಸಾಮಾನ್ಯ. ಇದು ಆರೋಗ್ಯಕ್ಕೆ ತೀವ್ರ ಹಾನಿಕರ.

ಬೊಜ್ಜು
ಮೊಮೊಸ್ ಗಳನ್ನು ಪರೀಕ್ಷೆಗೆ ಒಡ್ಡಿದಾಗ ಬಹಳಷ್ಟು ಬಾರಿ ಮೊನೊ ಸೋಡಿಯಮ್ ಗ್ಲುಟಮೇಟ್ (Mono Sodium Glutamate) ಕಂಡುಬಂದಿದೆ. ಕೆಲವು ಖಾದ್ಯಗಳಲ್ಲಿ ಇದು ನೈಸರ್ಗಿಕವಾಗಿ ಇರುತ್ತದೆ. ಆದರೆ, ಸಂಸ್ಕರಿತ (Processed) ಆಹಾರದಲ್ಲಿ ಇದು ಬೇರೆಯದೇ ರೀತಿಯಲ್ಲಿ ದೊರೆಯುತ್ತದೆ. ಸೋಡಿಯಂ ಗ್ಲುಟಮೇಟ್ ಎನ್ನುವುದು ಬಿಳಿಯ ಕಲ್ಲಿನ ಪುಡಿಯಂತೆ ಇರುತ್ತದೆ. ಇದು ದೇಹದ ಬೊಜ್ಜನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ, ನರಗಳ ಸಮಸ್ಯೆ, ಬೆವರು ಬರುವುದು, ಎದೆ ನೋವು, ಹೃದಯ ಬಡಿತ ಹೆಚ್ಚುವ ಸಮಸ್ಯೆಗಳು ಕಂಡುಬರುತ್ತವೆ.

Relationship Tips: ಬಾಯ್‌ಫ್ರೆಂಡ್‌ನ್ನು ಮನೆಯವರಿಗೆ ಪರಿಚಯಿಸುವುದು ಹೇಗೆ ?

ನಿಮಗೆ ಗೊತ್ತೇ? ಈ ಅಂಶ ಚಿಪ್ಸ್, ಪ್ಯಾಕಡ್ ಸೂಪ್ (Soup), ಕ್ಯಾನ್ ಗಳಲ್ಲಿರುವ ಆಹಾರಗಳಲ್ಲಿ ಹೆಚ್ಚಿನ ಮಟ್ಟದಲ್ಲಿರುತ್ತದೆ. 
ಮೊಮೊಸ್ ಗಳಲ್ಲಿ ಕಾಲಿಫ್ಲವರ್ (Cauliflower) ಅಥವಾ ಹೂಕೋಸನ್ನು ಬಳಕೆ ಮಾಡಲಾಗುತ್ತದೆ. ಹೂಕೋಸನ್ನು ಸರಿಯಾಗಿ ತೊಳೆದು ಬೇಯಿಸದಿದ್ದರೆ ಹೊಟ್ಟೆಯಲ್ಲಿ ಟೇಪ್ ವರ್ಮ್ (Tape Worm) ಅಥವಾ ಲಾಡಿಹುಳು ಆಗುವ ಸಾಧ್ಯತೆ ಹೆಚ್ಚು. ಇದು ಎಂತಹ ಅಪಾಯಕಾರಿ ಹುಳುವೆಂದರೆ, ಮಿದುಳನ್ನೂ ತಲುಪಿ ಹಾನಿ ಮಾಡಬಲ್ಲದು. ಹೂಕೋಸನ್ನು ಸರಿಯಾಗಿ ಬೇಯಿಸದಿದ್ದರೆ ಇದರ ಅಪಾಯ ಹೆಚ್ಚು. ಇನ್ನು, ತರಕಾರಿಗಳನ್ನು ಸರಿಯಾಗಿ ತೊಳೆಯದಿದ್ದರೆ ಆಗುವ ಅಪಾಯದ ಬಗ್ಗೆ ನಿಮಗೆ ಗೊತ್ತೇ ಇದೆ. 

click me!