ಬಾಯಿರುಚಿ ಅಂತಾ ಅದು ಇದು ತಿಂದು ಹೊಟ್ಟೆ ಫುಲ್ ಮಾಡಿ ನಿದ್ರೆಗೆ ಹೋಗ್ತೇವೆ. ಆರಂಭದಲ್ಲಿ ನಿದ್ರೆ ಬಂದಂತೆ ಅನ್ನಿಸಿದ್ರೂ ಮಧ್ಯರಾತ್ರಿ ಹೊಟ್ಟೆಯಲ್ಲಿ ಹೊಡೆದಾಟ ಶುರುವಾಗಿರುತ್ತದೆ. ಹೊಟ್ಟೆ ಉರಿ, ಗ್ಯಾಸ್ಟ್ರಿಕ್, ತೇಗು ನಿದ್ರೆಯನ್ನು ಹಾಳು ಮಾಡುತ್ತದೆ. ಹಾಗೆ ಆಗಬಾರದು ಅಂದ್ರೆ ನೀವು ಹೀಗೆ ಮಾಡಬಾರದು.
ನಿಮ್ಮ ಅನಾರೋಗ್ಯಕ್ಕೆ ಮುಖ್ಯ ಕಾರಣ ನಿಮ್ಮ ಆಹಾರ. ನೀವು ಸರಿಯಾದ ಆಹಾರ ಸೇವನೆ ಮಾಡಿಲ್ಲವೆಂದ್ರೆ ನಿಮ್ಮ ಆರೋಗ್ಯ ಹದಗೆಡುತ್ತದೆ. ಹಾಗೆಯೇ ನೀವು ತರಕಾರಿ, ಹಣ್ಣಿನ ಸೇವನೆ ಮಾಡ್ತಿದ್ದರೂ ನೀವು ಖಾಯಿಲೆಗೆ ಒಳಗಾಗ್ತಿದ್ದೀರಿ ಎಂದಾದ್ರೆ ನೀವು ಆಹಾರ ಸೇವನೆ ಮಾಡುವ ಟೈಂ ಸರಿಯಿಲ್ಲ ಎಂದರ್ಥ. ತರಕಾರಿ, ಹಣ್ಣುಗಳನ್ನು ತಿನ್ನಬೇಕು ಎಂಬುದು ನಮಗೆ ಗೊತ್ತು. ಆದ್ರೆ ಯಾವಾಗ ತಿನ್ನಬೇಕು ಎಂಬುದು ಗೊತ್ತಿಲ್ಲ. ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಕಾರಣಕ್ಕೆ ರಾತ್ರಿ ಮಲಗುವಾಗ್ಲೂ ನಾವು ಕೆಲ ಆಹಾರ ತಿನ್ನುತ್ತೇವೆ. ಆದ್ರೆ ರಾತ್ರಿ ನಿದ್ರೆ ಸರಿಯಾಗಿ ಆಗ್ಬೇಕು, ನಮ್ಮ ಹೊಟ್ಟೆಯಲ್ಲಿ ಗ್ಯಾಸ್ ಉತ್ಪತ್ತಿಯಾಗಬಾರದು ಅಂದ್ರೆ ನಮಗೆ ಯಾವ ಆಹಾರ ರಾತ್ರಿ ಬೆಸ್ಟ್ ಎಂಬುದು ತಿಳಿದಿರಬೇಕು. ಹಾಗೆಯೇ ಯಾವ ಆಹಾರವನ್ನು ರಾತ್ರಿ ಮಲಗುವ ಮುನ್ನ ಸೇವನೆ ಮಾಡಬಾರದು ಎಂಬುದು ಕೂಡ ಗೊತ್ತಿರಬೇಕು.
ಈಗಿನ ದಿನಗಳಲ್ಲಿ ಹೊಟ್ಟೆ (Stomach) ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಿದೆ. ಅರ್ಧಕ್ಕಿಂತ ಹೆಚ್ಚು ಮಂದಿಗೆ ಗ್ಯಾಸ್ಟ್ರಿಕ್ (Gastric), ಹೊಟ್ಟೆ ಉಬ್ಬರ, ಅಜೀರ್ಣ ಸಮಸ್ಯೆ ಕಾಡುತ್ತಿದೆ. ಅದರಲಿ ನೀವೂ ಸೇರಿದ್ದರೆ ರಾತ್ರಿ ಈ ಆಹಾರ (Food) ತಿನ್ನೋದನ್ನು ಬಿಟ್ಬಿಡಿ. ಅದು ಯಾವುದು ಅಂತಾ ನಾವು ಹೇಳ್ತೇವೆ.
undefined
ಚಪಾತಿ ಹಿಟ್ಟನ್ನು ಫ್ರಿಜ್‌ನಲ್ಲಿಟ್ಟು ಮತ್ತೆ ಬಳಸ್ಬೋದಾ?
ಹೆವಿ ಫುಡ್ (Heavy Food): ರಾತ್ರಿ ಊಟ ಯಾವಾಗ್ಲೂ ಲೈಟ್ ಆಗಿರಬೇಕು. ಒಳ್ಳೆಯ ನಿದ್ರೆ ಬರುತ್ತದೆ ಎನ್ನುವ ಕಾರಣಕ್ಕೆ ಕೆಲವರು ಹೆವಿ ಫುಡ್ ಸೇವನೆ ಮಾಡ್ತಾರೆ. ಆದ್ರೆ ಈ ಆಹಾರ ಜೀರ್ಣಿಸಿಕೊಳ್ಳೋದು ಕಷ್ಟ. ರಾತ್ರಿ ಕೊಬ್ಬು ಮತ್ತು ಎಣ್ಣೆಯುಕ್ತ ಆಹಾರವನ್ನು ತಿನ್ನುವುದ್ರಿಂದ ಅಜೀರ್ಣ ಸಮಸ್ಯೆ ನಿಮ್ಮನ್ನ ಕಾಡುತ್ತದೆ. ನಿಮ್ಮ ನಿದ್ರೆಗೆ ಭಂಗ ತರುತ್ತದೆ. ರಾತ್ರಿ ಚೀಸ್ ಬರ್ಗರ್, ಫ್ರೈಡ್ ಐಟಮ್ಸ್ ಮತ್ತು ಮಾಂಸವನ್ನು ನೀವು ಅಪ್ಪಿತಪ್ಪಿಯೂ ತಿನ್ನಬಾರದು.
ಕೆಫೀನ್ : ಟೀ, ಕಾಫಿ ಮತ್ತು ಸೋಡಾದಂತಹ ವಸ್ತುಗಳಲ್ಲಿ ಕೆಫೀನ್ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ. ಇವುಗಳಲ್ಲದೆ ನೀವು ಸೇವನೆ ಮಾಡುವ ಕೆಲವು ಐಸ್ ಕ್ರೀಮ್ ಮತ್ತು ಸಿಹಿತಿಂಡಿಗಳಲ್ಲಿಯೂ ಕೆಫೀನ್ ಕಂಡುಬರುತ್ತದೆ. ಇವುಗಳ ಸೇವನೆಯಿಂದ ಹೊಟ್ಟೆಯಲ್ಲಿ ಆಮ್ಲ ಉತ್ಪತ್ತಿಯಾಗುತ್ತದೆ. ನಿದ್ರೆ ಸರಿಯಾಗಿ ಆಗುವುದಿಲ್ಲ.
Kokum Health benefits: ಬೇಸಿಗೆಯಲ್ಲಿ ದೇಹ ತಂಪುಗೊಳಿಸುವ ಮ್ಯಾಜಿಕ್ ಫ್ರುಟ್ ಪುನರ್ಪುಳಿ
ಸಿಹಿ ಆಹಾರ ಬೇಡ (Sweet Food): ರಾತ್ರಿ ಸಿಹಿ ಆಹಾರವನ್ನು ಕೂಡ ತಿನ್ನಬಾರದು. ಮಲಗುವ ಮೊದಲು ನೀವು ಸಕ್ಕರೆಯುಕ್ತ ಆಹಾರವನ್ನು ಸೇವನೆ ಮಾಡಿದ್ರೆ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗುತ್ತದೆ. ಇದ್ರಿಂದ ಗ್ಯಾಸ್, ಅಸಿಡಿಟಿ ನಿಮ್ಮನ್ನು ಕಾಡುತ್ತದೆ. ಸಿಹಿ ಪದಾರ್ಥ ನಿಮ್ಮ ನಿದ್ರೆಯನ್ನು ಹಾಳು ಮಾಡುತ್ತದೆ.
ಈ ಆಹಾರದಿಂದ ದೂರವಿರಿ : ರಾತ್ರಿ ನೀವು ಟೈರಮೈನ್ ಯುಕ್ತ ಆಹಾರವನ್ನು ಸೇವನೆ ಮಾಡದಿರುವುದು ಒಳ್ಳೆಯದು. ಟೊಮೆಟೊ, ಸೋಯಾ ಸಾಸ್, ಬಿಳಿಬದನೆ, ಕೆಂಪು ವೈನ್ ನಲ್ಲಿ ಇದು ಕಂಡು ಬರುತ್ತದೆ. ಇದು ನಿಮ್ಮ ನಿದ್ರೆಯನ್ನು ಹಾಳು ಮಾಡುತ್ತದೆ. ಹುಳಿ ತೇಗು ಬರುವ ಸಾಧ್ಯತೆಯಿರುತ್ತದೆ.
ಮಸಾಲೆ ಆಹಾರ (Spicy Food) : ಮಸಾಲೆ ಆಹಾರವನ್ನು ರಾತ್ರಿ ಸೇವನೆ ಮಾಡುವುದು ಒಳ್ಳೆಯದಲ್ಲ. ಇದು ನಿಮ್ಮ ಹೊಟ್ಟೆಯಲ್ಲಿ ಆಮ್ಲ ಉತ್ಪತ್ತಿಗೆ ಕಾರಣವಾಗುತ್ತದೆ. ನಿದ್ರೆಯ ಮೇಲೂ ಪರಿಣಾಮ ಬೀರುತ್ತದೆ. ನೀವು ಮಸಾಲೆ ಆಹಾರವನ್ನು ಬೆಳಿಗ್ಗೆ ಸೇವನೆ ಮಾಡೋದು ಒಳಿತು.
ನೀರಿನಾಂಶವಿರುವ ಆಹಾರ (Water Rich Food) : ನಮ್ಮ ದೇಹಕ್ಕೆ ನೀರು ಅಗತ್ಯ. ಹಾಗಂತ ರಾತ್ರಿ ಮಲಗುವ ಮೊದಲು ನೀರು ಅಥವಾ ನೀರಿನಾಂಶ ಹೆಚ್ಚಿರುವ ಆಹಾರಗಳನ್ನು ತಿನ್ನುವುದು ಸೂಕ್ತವಲ್ಲ. ಇದ್ರಿಂದ ಪದೇ ಪದೇ ಮೂತ್ರ ವಿಸರ್ಜನೆಗೆ ಏಳಬೇಕಾಗುತ್ತದೆ. ಇದು ನಿಮ್ಮ ನಿದ್ರೆ ಹಾಳು ಮಾಡುತ್ತದೆ.
ಆಮ್ಲವಿರುವ ಆಹಾರ ತಿನ್ನಬೇಡಿ (Acidic Food) : ಕೆಲ ತರಕಾರಿ, ಹಣ್ಣುಗಳಲ್ಲಿ ಆಮ್ಲ ಹೆಚ್ಚಿರುತ್ತದೆ. ಅಂಥ ಆಹಾರವನ್ನು ನೀವು ರಾತ್ರಿ ಸೇವನೆ ಮಾಡಬಾರದು. ಸಿಟ್ರಸ್ ಜ್ಯೂಸ್, ಹಸಿ ಈರುಳ್ಳಿ, ಬಿಳಿ ವೈನ್ ಮತ್ತು ಟೊಮೆಟೊ ಸಾಸ್ ತಿನ್ನಬೇಡಿ. ಇದು ನಿಮ್ಮ ಹೊಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಮ್ಲವನ್ನು ಉತ್ಪತ್ತಿ ಮಾಡಿ ಹಿಂಸೆ ನೀಡುತ್ತದೆ. ನಿದ್ರಾಭಂಗಕ್ಕೆ ಕಾರಣವಾಗುತ್ತದೆ.