Food

ಚಪಾತಿ ಹಿಟ್ಟು

ಇವತ್ತಿನ ದಿನಗಳಲ್ಲಿ ಅನೇಕ ಜನರು ಅಡುಗೆ ಕೆಲಸ ಸುಲಭವಾಗಲು ಮೊದಲೇ ಸಿದ್ಧತೆ ಮಾಡಿಟ್ಟುಕೊಳ್ಳುತ್ತಾರೆ. ಉದಾಹರಣೆಗೆ, ಚಪಾತಿಗೆ ಹಿಟ್ಟನ್ನು ಕಲಸಿ ಫ್ರಿಜ್ ನಲ್ಲಿಡುವುದು ಮಾಡುತ್ತಾರೆ.

ಫ್ರಿಡ್ಜ್‌ನಲ್ಲಿಡುವುದು ಒಳ್ಳೆಯದಲ್ಲ

ನಂತರ ಅವಸರದಲ್ಲಿದ್ದಾಗ ಬೇಗನೇ ಚಪಾತಿ ತಯಾರಿಸಿ ತಿನ್ನಲು ಸಾಧ್ಯವಾಗುತ್ತದೆ. ಆದರೆ ಹೀಗೆ ಮಾಡುವುದು ಆರೋಗ್ಯಕ್ಕೆ ತುಂಬಾ ಹಾನಿಕರವಾಗಿದೆ. 

ತಾಜಾ ಹಿಟ್ಟನ್ನು ಬಳಸಿ

ಪೌಷ್ಟಿಕತಜ್ಞರು ದೀರ್ಘಕಾಲದವರೆಗೆ ಹಿಟ್ಟನ್ನು ಫ್ರಿಜ್‌ನಲ್ಲಿ ಸಂಗ್ರಹಿಸಿಡುವುದು ಒಳ್ಳೆಯದಲ್ಲ ಎಂದು ಹೇಳುತ್ತಾರೆ. ಬದಲಾಗಿ ಚಪಾತಿಗಳನ್ನು ತಾಜಾ ಹಿಟ್ಟಿನಿಂದ ಮಾಡುವಂತೆ ಸಲಹೆ ನೀಡುತ್ತಾರೆ.

ಆರೋಗ್ಯಕ್ಕೆ ಹಾನಿಕರ

ಹಿಟ್ಟಿನಲ್ಲಿ ಅನೇಕ ರಾಸಾಯನಿಕ ಅಂಶಗಳಿವೆ. ಹೀಗಿರುವಾಗ ಹಿಟ್ಟನ್ನು ರೆಫ್ರಿಜರೇಟರ್ ನಲ್ಲಿ ಬಹಳ ಹೊತ್ತು ಇಟ್ಟುಕೊಂಡು ತಯಾರು ಮಾಡಿದರೆ ಅದು ಆರೋಗ್ಯಕ್ಕೆ ಹಾನಿಕರ.

ಬ್ಯಾಕ್ಟಿರೀಯಾ ಬೆಳೆಯುತ್ತದೆ

ಕಲಸಿದ ಹಿಟ್ಟನ್ನು ಫ್ರಿಡ್ಜ್‌ನಲ್ಲಿ ಅಥವಾ ತೆರೆದ ಸ್ಥಳದಲ್ಲಿ ದೀರ್ಘಕಾಲ ಇಡಬಾರದು. ಹೀಗೆ ಮಾಡಿದರೆ, ಬ್ಯಾಕ್ಟೀರಿಯಾಗಳು ಅದರ ಮೇಲೆ ತಮ್ಮ ಪರಿಣಾಮವನ್ನು ತೋರಿಸಲು ಪ್ರಾರಂಭಿಸುತ್ತವೆ. 

ಹೊಟ್ಟೆಯ ಸಮಸ್ಯೆ

ಫ್ರಿಡ್ಜ್ ನಲ್ಲಿಟ್ಟ ಹಿಟ್ಟನ್ನು ಹೆಚ್ಚು ಹೊತ್ತು ಇಟ್ಟು ಬಳಸುವವರಿಗೆ ಹೊಟ್ಟೆಯ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ.ಇದು ಕರುಳಿನ ಆರೋಗ್ಯಕ್ಕೂ ಹಾನಿ ಮಾಡುತ್ತದೆ. 

ಸೋಂಕಿನ ಅಪಾಯ

ಇದಲ್ಲದೆ, ಹಳಸಿದ ಹಿಟ್ಟಿನಲ್ಲಿ ಶಿಲೀಂಧ್ರವು ಬೆಳೆಯುತ್ತದೆ, ಇದು ಶಿಲೀಂಧ್ರಗಳ ಸೋಂಕನ್ನು ಉಂಟುಮಾಡುತ್ತದೆ. ಹೊಟ್ಟೆಯಲ್ಲಿ ಅಪಾಯಕಾರಿ ಸೋಂಕಿನ ಅಪಾಯವೂ ಇದೆ.