ಇದನ್ನು ತಿಂದ್ರೆ ರೋಗ ನಿರೋಧಕ ಶಕ್ತಿ ಜಾಸ್ತಿಯಾಗುತ್ತದೆ!

By Kannadaprabha NewsFirst Published Apr 16, 2020, 10:04 AM IST
Highlights
ಇಮ್ಯೂನಿಟಿ ಚೆನ್ನಾಗಿರೋರಿಗೆ ಕೊರೋನಾ ಬಂದರೂ ಬೇಗ ಚೇತರಿಸಿಕೊಳ್ತಾರೆ ಅನ್ನೋ ಮಾತಿದೆ. ಹಾಗಾಗಿ ಈ ಟೈಮ್‌ನಲ್ಲಿ ಈ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಸೇವಿಸೋದು ಜಾಣತನ.

- ಈ ಟೈಮ್‌ ನಲ್ಲಿ ಕಾರ್ಬೊಹೈಡ್ರೇಟ್‌ ನ ಅಂಶ ಹೆಚ್ಚಿರುವ ಅನ್ನ, ಅಕ್ಕಿಯ ಪದಾರ್ಥಗಳ ಸೇವನೆ ಕಡಿಮೆ ಮಾಡಿ. ಲೋ ಕಾರ್ಬ್‌ ಡಯೆಟ್‌ ಉತ್ತಮ. ಸಿಂಪಲ್‌ ಆಗಿ ಹೇಳ್ಬೇಕಂದರೆ ಅನ್ನ ತಿನ್ನೋ ಬದಲಿಗೆ ರಾಗಿ ಮುದ್ದೆ, ಸೊಪ್ಪು ಸಾರು ತಿನ್ನಿ.

ರೋಗ ಬರೋ ಮುನ್ನ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಮನೆ ಮದ್ದಿದು

- ಮಶ್ರೂಮ್‌, ಟೊಮ್ಯಾಟೋ, ಕ್ಯಾಪ್ಸಿಕಂ ಬಳಕೆ ಹೆಚ್ಚಿಸಿ. ಸೊಪ್ಪು, ಹಸಿರು ತರಕಾರಿ ಇರಲಿ.

- ಬೇಳೆ ಕಾಳುಗಳು ಹೆಚ್ಚೆಚ್ಚು ದೇಹ ಸೇರಲಿ.

- ನೆಲ್ಲಿಕಾಯಿಯಿಂದ ಮಾಡಿದ ಗೊಜ್ಜು, ತಂಬುಳಿ, ಸ್ಮೂಧಿ ಸೇವಿಸಿ.

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಹೀಗೆ ಮಾಡಿ ಅಂದಿದೆ ಆಯುಷ್‌ ಇಲಾಖೆ .

- ಶುಂಠಿ, ಅರಿಶಿನ, ಬೆಳ್ಳುಳ್ಳಿ ನಿಮ್ಮ ಪ್ಲೇಟ್‌ನಿಂದ ಮಿಸ್‌ ಆಗದ ಹಾಗೆ ನೋಡಿಕೊಳ್ಳಿ.

- ಮೊಸರು ದೇಹಕ್ಕೊಳೆಯದು. ಆದರೆ ರಾತ್ರಿ ಹೊತ್ತು ಮೊಸರು ತಿನ್ನಬೇಡಿ. ಬದಲಿಗೆ ಇಂಗು, ಕೊತ್ತಂಬರಿ ಸೊಪ್ಪು, ಶುಂಠಿ ಹಾಕಿದ ನೀರು ಮಜ್ಜಿಗೆ ಕುಡೀರಿ.

- ನೀರು ಎಷ್ಟುಕುಡೀತೀರೋ ಅಷ್ಟುಒಳ್ಳೆಯದು.

- ಸಿಕ್ಕದರೆ ಸಿಟ್ರೆಸ್‌ ಅಂಶ ಹೆಚ್ಚಿರುವ ಕಿತ್ತಳೆ ಹಣ್ಣು ತಿನ್ನಿ. ಜೊತೆಗೆ ಈ ಸೀಸನ್‌ನಲ್ಲಿ ಮಾರ್ಕೆಟ್‌ಗೆ ಬರುವ ಯಾವ ಹಣ್ಣು ಸಿಕ್ಕರೂ ಬೇಡ ಅನ್ನಬೇಡಿ.

ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ, ಕೊರೋನಾ ನಡೆಯಲಿ ಇಲ್ಲಿವೆ ಆಯುಷ್ ಟಿಪ್ಸ್

- ಬೆಳ್ಳಂಬೆಳಗು ಒಂದು ಬೌಲ್‌ನಲ್ಲಿ ಎಲ್ಲ ಬಗೆಯ ಮೊಳಕೆ ಕಾಳು, ಒಣ ಹಣ್ಣು ಸೇವಿಸಿ. ಆರೋಗ್ಯ ಚೆನ್ನಾಗಿರುತ್ತೆ.

click me!