ಕಣ್ಣುಗಳಿಗೆ ಈಗ ಕೆಲಸ ಹೆಚ್ಚು. ಸ್ಕ್ರೀನ್ ವೀಕ್ಷಣೆಯಂತೂ ಅತಿ ಹೆಚ್ಚು. ಹೀಗಾಗಿ, ಕಣ್ಣುಗಳ ಆರೋಗ್ಯದ ಕಡೆಗೆ ಗಮನ ನೀಡಬೇಕಾದುದು ಅನಿವಾರ್ಯ. ಅವುಗಳ ರಕ್ಷಣೆಗೆ ಕೆಲವು ಆಹಾರ ಪದಾರ್ಥಗಳು ಸೂಕ್ತ.
ನೋಡುತ್ತ ನೋಡುತ್ತ ಎಲ್ಲರ ಬದುಕಲ್ಲೂ ಒಂದಿಷ್ಟು ಬದಲಾವಣೆಗಳು (Change) ಆಗಿಬಿಟ್ಟಿವೆ. ಕಳೆದ ಎರಡು ವರ್ಷಗಳಿಂದ ಬಾಹ್ಯ ಬದುಕಿಗೆ ಸಾಕಷ್ಟು ಕತ್ತರಿ ಹಾಕಿಯಾಗಿದೆ. ಅಗತ್ಯವಿರುವಾಗ ಮಾತ್ರ ಓಡಾಟ, ಉಳಿದಂತೆ ಮನೆ ಎನ್ನುವ ನಿಯಮವನ್ನು ಅಳವಡಿಸಿಕೊಂಡಿದ್ದೇವೆ. ಹೀಗಾಗಿ, ಸ್ಕ್ರೀನ್ (Screen) ಸಮಯವೂ ಅಧಿಕವಾಗಿದೆ. ಮಕ್ಕಳ (Children) ಬದುಕಂತೂ ಅತಿ ಎನಿಸುವಷ್ಟು ಬದಲಾಗಿದೆ. ಮನೆಯಲ್ಲೇ ಕುಳಿತುಕೊಂಡು ಕ್ಲಾಸ್, ಟೆಸ್ಟ್ ಗಳನ್ನು ಅಟೆಂಡ್ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಹೀಗಾಗಿ, ಅವರಂತೂ ದಿನವಿಡೀ ಸ್ಕ್ರೀನ್ ಮುಂದೆಯೇ ಸಮಯ ಕಳೆಯುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಕಣ್ಣುಗಳ (Eyes) ಆರೋಗ್ಯದ (Health) ಕಡೆಗೆ ಗಮನ ವಹಿಸಲೇ ಬೇಕಾಗುತ್ತದೆ. ಸ್ಕ್ರೀನ್ ಎದುರು ಇರುವಾಗ ವಹಿಸಬೇಕಾದ ಎಚ್ಚರಿಕೆಯಿಂದ ಹಿಡಿದು, ಸೇವಿಸುವ ಆಹಾರದ ಬಗೆಗೂ ಗಮನ ನೀಡಬೇಕಾಗುತ್ತದೆ. ಕಣ್ಣುಗಳ ಆರೋಗ್ಯ ಕಾಪಾಡಿಕೊಳ್ಳಲು ಕೆಲವು ಆಹಾರಗಳನ್ನು ಸೇವಿಸುವುದು ಸೂಕ್ತ. ನಿಯಮಿತವಾಗಿ ಅವುಗಳನ್ನು ಸೇವನೆ ಮಾಡುತ್ತಿದ್ದರೆ ಕಣ್ಣುಗಳಿಗೆ ಹಿತ. ಕಣ್ಣುಗಳ ಆರೋಗ್ಯದ ಕುರಿತು ಆಯುರ್ವೇದ (Ayurveda) ತಜ್ಞರಾದ ಡಾ. ಐಶ್ವರ್ಯಾ ಸಂತೋಶ್, ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅವರ ಪ್ರಕಾರ, ಕೆಲವು ಆಹಾರ ಪದಾರ್ಥಗಳ ಸೇವನೆಯಿಂದ ಕಣ್ಣುಗಳು ಸುರಕ್ಷಿತವಾಗಿರಬಲ್ಲವು.
• ತ್ರಿಫಲಾ ಚೂರ್ಣವನ್ನು (Triphala Churna) ತುಪ್ಪ ಅಥವಾ ಜೇನುತುಪ್ಪದೊಂದಿಗೆ ರಾತ್ರಿ ಸಮಯದಲ್ಲಿ ಸೇವಿಸಬೇಕು. ಇದರಿಂದ ಕಣ್ಣುಗಳು ಆರೋಗ್ಯಪೂರ್ಣವಾಗಿರುತ್ತವೆ. ಇದನ್ನು ಮೂರು ಕಾಯಿಗಳ ಪುಡಿಯನ್ನು ಬೆರೆಸಿ ತಯಾರಿಸಲಾಗುತ್ತದೆ. ನೆಲ್ಲಿಕಾಯಿ, ತಾರೇಕಾಯಿ ಹಾಗೂ ಅಳಲೆಕಾಯಿಯನ್ನು ಹೊಂದಿರುವ ಅತ್ಯುತ್ತಮ ಪದಾರ್ಥ ತ್ರಿಫಲಾ. ಇದರಿಂದ ಕಣ್ಣುಗಳಿಗೆ ಮಾತ್ರವಲ್ಲ, ಒಟ್ಟಾರೆ ಆರೋಗ್ಯವೂ ಸುಧಾರಿಸುತ್ತದೆ.
• ನೆಲ್ಲಿಕಾಯಿ (Amla) ಸೇವನೆ ಮಾಡಬೇಕು. ಇದರಲ್ಲಿ ವಿಟಮಿನ್ ಸಿ ಅಧಿಕವಾಗಿರುತ್ತದೆ. ಕಿತ್ತಳೆ (Orange) ಹಣ್ಣಿಗಿಂತ 20 ಪಟ್ಟು ವಿಟಮಿನ್ ಸಿ ಅನ್ನು ಹೊಂದಿರುವ ನೆಲ್ಲಿಕಾಯಿಯಿಂದ ಕಣ್ಣಿನ ರೆಟಿನಾ ಕೋಶಗಳು ಹಾಗೂ ದೇಹದ ಅತಿಚಿಕ್ಕ ರಕ್ತನಾಳಗಳಾದ ಕ್ಯಾಪಿಲ್ಲರಿಸ್ ಆರೋಗ್ಯ ಕಾಪಾಡಲು ಸಾಧ್ಯವಾಗುತ್ತದೆ. ನೆಲ್ಲಿಕಾಯಿ ಕಣ್ಣುಗಳಿಗೆ ಅತ್ಯುತ್ತಮ ಪದಾರ್ಥ. ಮಧುಮೇಹಕ್ಕೆ ತುತ್ತಾಗಿ ಕಣ್ಣುಗಳ ಸಮಸ್ಯೆಗೆ ಒಳಗಾದವರಿಗೂ ಇದು ಅತ್ಯುತ್ತಮ.
ಕಣ್ಣುಗಳು ಅರಳಿದ ಕಮಲಗಳಂತಾಗಲು ಹೀಗ್ ಮಾಡಿ
• ಕಲ್ಲುಪ್ಪನ್ನು (Rock Salt) ಬಳಸಬೇಕು. ಕಣ್ಣುಗಳ ಆರೋಗ್ಯಕ್ಕೆ ಪೂರಕವಾಗಿರು ಏಕೈಕ ಉಪ್ಪೆಂದರೆ ಕಲ್ಲುಪ್ಪು. ಅಡುಗೆಗೆ ಕಲ್ಲುಪ್ಪನೇ ಹೆಚ್ಚಾಗಿ ಬಳಸುವುದು ಉತ್ತಮ.
• ಒಣದ್ರಾಕ್ಷಿ (Raisin)ಯಲ್ಲಿರುವ ಪಾಲಿಫೆನಾಲಿಕ್ ಫೈಟೊನ್ಯೂಟ್ರಿಯಂಟ್ ಅಂಶವು ಕಣ್ಣುಗಳ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ. ದೃಷ್ಟಿಗೆ ಹಾನಿಯುಂಟು ಮಾಡುವ ಫ್ರೀ ರ್ಯಾಡಿಕಲ್ ಗಳ ವಿರುದ್ಧ ಇದು ಪರಿಣಾಮಕಾರಿ. ಕಣ್ಣುಗಳ ಮಾಂಸಖಂಡಗಳಿಗೆ ಹಾನಿಯಾಗದಂತೆ, ಅವು ಕುಗ್ಗದಂತೆ ನೋಡಿಕೊಳ್ಳುತ್ತದೆ.
• ಉತ್ತಮ ಜೇನುತುಪ್ಪ(Honey)ವನ್ನು ಬಳಕೆ ಮಾಡುವುದರಿಂದ ಕಣ್ಣುಗಳು ಆರೋಗ್ಯಪೂರ್ಣವಾಗಿರುತ್ತವೆ. ಕಲಬೆರಕೆ ಜೇನುತುಪ್ಪವನ್ನು ಬಳಕೆ ಮಾಡುವುದರಿಂದ ಹಾನಿ ಹೆಚ್ಚು.
• ಕಣ್ಣುಗಳು ಚೆನ್ನಾಗಿರಲು ತುಪ್ಪ(Ghee)ವನ್ನು ಬಳಕೆ ಮಾಡಬೇಕು. ನಿಮ್ಮ ನಿಮ್ಮ ಜೀರ್ಣದ ಸಾಮರ್ಥ್ಯಕ್ಕೆ ತಕ್ಕಂತೆ ತುಪ್ಪ ಬಳಸುವುದು ಉತ್ತಮ. ತುಪ್ಪವನ್ನು ಬಳಸಿ ಹಲವು ವಿಧದ ಔಷಧಗಳನ್ನು ತಯಾರಿಸುತ್ತದೆ. ಕಣ್ಣುಗಳ ಆರೋಗ್ಯಕ್ಕೂ ತುಪ್ಪ ಬಳಸಿ ಮಾಡುವ ಔಷಧಗಳು ಆಯುರ್ವೇದದಲ್ಲಿವೆ.
• ಇನ್ನು, ಪಾಲಕ್ ಸೊಪ್ಪು (Palak) ಕೂಡ ಕಣ್ಣುಗಳಿಗೆ ಉತ್ತಮ. ಪಾಲಕ್ ಸೇರಿದಂತೆ ಹಸಿರು ಸೊಪ್ಪುಗಳಲ್ಲಿರುವ ಲ್ಯೂಟೈನ್ ಅಂಶ ಕಣ್ಣುಗಳು ಬೇಗ ಮುಪ್ಪಾಗದಂತೆ ನೋಡಿಕೊಳ್ಳುತ್ತವೆ.
ಕಂಪ್ಯೂಟರ್ ನೋಡಿ ಬಳಲಿದ ಕಣ್ಣುಗಳಿಗೆ ಇಲ್ಲಿದೆ ಪರಿಹಾರ
• ಕ್ಯಾರೆಟ್ (Carrot)ನಿಂದ ಕಣ್ಣುಗಳ ರಕ್ಷಣೆ ಸಾಧ್ಯ. ಮೊಲಗಳಂತೆ ತೀಕ್ಷ್ಣ ದೃಷ್ಟಿ ಬೇಕಾದರೆ ದಿನವೂ ಕ್ಯಾರೆಟ್ ತಿನ್ನಬೇಕು. ಇದರಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ.
• ಬೀಟ್ ರೂಟ್, ಬಾದಾಮಿ, ಹುರುಳಿ, ಅವರೆ, ವಿಟಮಿನ್ ಸಿ (Vitamin C) ಹೊಂದಿರುವ ಎಲ್ಲ ಹಣ್ಣುಗಳು ಕಣ್ಣುಗಳ ಆರೋಗ್ಯಕ್ಕೆ ಪೂರಕವಾಗಿವೆ.