ಗ್ಯಾಸ್ಟ್ರಿಕ್‌ನಿಂದ ಉಂಟಾಗುವ ಎದೆಯುರಿಯನ್ನು ಇಂದಿನ ಲೈಫ್‌ಸ್ಟೈಲ್‌ನಲ್ಲಿ ಎಲ್ಲರೂ ಎದುರಿಸುತ್ತೇವೆ. ಇದರಿಂದ ಪಾರಾಗಲು ಸುಲಭ ದಾರಿಗಳು ಹೀಗಿವೆ...
ಆಸಿಡ್ ರಿಫ್ಲಕ್ಸ್ (Acid reflux) ಎಂದೂ ಕರೆಯಲ್ಪಡುವ ಎದೆಯುರಿ, ಇಂದು ಎಲ್ಲರಲ್ಲೂ ಸಾಮಾನ್ಯ. ಹಸಿವಾದಾಗ ಊಟ ಮಾಡದಿರುವುದು, ತಡರಾತ್ರಿ ಉಣ್ಣುವುದು, ಜೀರ್ಣವಾಗದ ಆಹಾರ, ಇತ್ಯಾದಿಗಳಿಂದ ಇದು ಉಂಟಾಗುತ್ತೆ. ಜಠರದಲ್ಲಿ ಬಿಡುಗಡೆಯಾಗುವ ಆಸಿಡ್, ಆಹಾರ ಸಿಗದೆ ಖಾಲಿ ಕುಳಿತಾಗ ಇದು ಸಂಭವಿಸುತ್ತದೆ. ಇದು ನಿಮ್ಮ ಎದೆಯಲ್ಲಿ ಉರಿ ಉಂಟುಮಾಡುತ್ತದೆ. ಒಮ್ಮೆ ಎದೆಯುರಿ ಪ್ರಾರಂಭವಾದರೆ ಕಷ್ಟವೋ ಕಷ್ಟ. ಈ ಅಸ್ವಸ್ಥತೆಯನ್ನು ತಡೆಗಟ್ಟಲು ಉತ್ತಮ ಉಪಾಯವೆಂದರೆ ಕೆಫೀನ್, ಚಾಕೊಲೇಟ್ ಅಥವಾ ಕಾರ್ಬೊನೇಟೆಡ್ ಪಾನೀಯಗಳಂತಹ ಪ್ರಚೋದಕ ಆಹಾರಗಳನ್ನು ತಪ್ಪಿಸುವುದು. ಆದರೂ ನೀವು ಎದೆಯುರಿ ಅನುಭವಿಸಿದರೆ ಅದನ್ನು ಮನೆಯಲ್ಲಿಯೇ ನಿವಾರಿಸಿಕೊಳ್ಳಲು ಸಹಜವಾದ ಕೆಲವು ದಾರಿಗಳಿವೆ.
1. ಭಂಗಿ ಬದಲಾಯಿಸಿ (Position)
ಎದೆಯುರಿ ಉಂಟಾದಾಗ, ನೀವು ಮಲಗಿದ್ದರೆ, ಎದ್ದುನಿಂತು ಸುತ್ತಲೂ ನಡೆಯುವುದು ಅಸ್ವಸ್ಥತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಒರ್ಲ್ಯಾಂಡೊ ಹೆಲ್ತ್ ಡೈಜೆಸ್ಟಿವ್ ಹೆಲ್ತ್ ಇನ್‌ಸ್ಟಿಟ್ಯೂಟ್‌ನ ಗ್ಯಾಸ್ಟ್ರೋಎಂಟರಾಲಜಿಸ್ಟ್ ಆಶಿಲ್ ಗೋಸಾಲಿಯಾ ಹೇಳುತ್ತಾರೆ. "ಇದೊಂದು ಗುರುತ್ವಾಕರ್ಷಣೆಯ ಪರಿಣಾಮ. ಅಂದರೆ ಈ ನಡೆದಾಟವು ಆಸಿಡ್ ಅನ್ನು ಅದು ಇರಬೇಕಾದ ಸ್ಥಳದಲ್ಲಿ ಹಿಂದಕ್ಕೆ ತಳ್ಳುತ್ತದೆ."
Health Tips: ವಾಯುಮಾಲಿನ್ಯದಿಂದ ಧೂಮಪಾನದಷ್ಟೇ ಅಪಾಯ ! ಆರೋಗ್ಯವಾಗಿರಲು ಹೀಗೆ ಮಾಡಿ
2. ನಿಮ್ಮ ತಲೆಯನ್ನು ಮೇಲಕ್ಕೆತ್ತಿ
ಆರರಿಂದ ಎಂಟು ಇಂಚುಗಳಷ್ಟು ನಿಮ್ಮ ತಲೆಯನ್ನು ಮೇಲಕ್ಕೆತ್ತಲು ಕೆಲವು ದಿಂಬುಗಳನ್ನು ಬಳಸಿ. ನಿಮ್ಮ ತಲೆಯನ್ನು ಮೇಲಕ್ಕೆತ್ತುವುದರಿಂದ ಹೊಟ್ಟೆಯ ಆಮ್ಲವು ನಿಮ್ಮ ಅನ್ನನಾಳಕ್ಕೆ ಬರದಂತೆ ತಡೆಯಲು ಸಹಾಯ ಮಾಡುತ್ತದೆ ಮತ್ತು ಎದೆಯುರಿಯೊಂದಿಗೆ ಸಂಬಂಧಿಸಿದ ಕೆಮ್ಮು, ಮತ್ತು ಗಂಟಲು ತೆರವುಗೊಳಿಸುವಿಕೆಯನ್ನು ಕಡಿಮೆ ಮಾಡುತ್ತದೆ.
3. ಹಾಲು ಕುಡಿಯಿರಿ (Milk)
ಹಾಲು ಸ್ವಾಭಾವಿಕವಾಗಿ ಕ್ಷಾರೀಯವಾಗಿದೆ. ಅಂದರೆ ಅದು ನಿಮ್ಮ ಗಂಟಲವರೆಗೆ ಬರುವ ಹೆಚ್ಚುವರಿ ಹೊಟ್ಟೆಯ ಆಮ್ಲದ ಆಮ್ಲೀಯತೆಯನ್ನು ಪ್ರತಿರೋಧಿಸಲು ಅದು ಸಹಾಯ ಮಾಡುತ್ತದೆ. ನೀವು ಎದೆಯುರಿ ಅನುಭವಿಸಿದಾಗ, ತೊಂದರೆ ಕೊಡುವ ಆಮ್ಲವನ್ನು ತಟಸ್ಥಗೊಳಿಸುವ ಮೂಲಕ ಉರಿಯ ಪರಿಣಾಮವನ್ನು ಕಡಿಮೆ ಮಾಡಲು ಹಾಲು ಸಹಾಯ ಮಾಡುತ್ತದೆ. ಎದೆಯುರಿ ನಿವಾರಿಸಲು ನೀವು ಹಾಲು ಕುಡಿಯಲು ಪ್ರಯತ್ನಿಸಬಯಸಿದರೆ, ಕಡಿಮೆ-ಕೊಬ್ಬಿನ ಅಥವಾ ಕೆನೆರಹಿತ ಹಾಲನ್ನು ಕುಡಿಯಿರಿ. ಸಂಪೂರ್ಣ ಹಾಲಿನಲ್ಲಿರುವ ಕೊಬ್ಬಿನಂಶವು ಎದೆಯುರಿಯನ್ನು ಉಲ್ಬಣಗೊಳಿಸುತ್ತದೆ.
4. ನಿಮ್ಮ ಬಟ್ಟೆ ಸಡಿಲಗೊಳಿಸಿ
ಬಿಗಿಯಾಗಿರುವ ನಿಮ್ಮ ಪ್ಯಾಂಟ್ ಅನ್ನು ಸಡಿಲಗೊಳಿಸುವುದರಿಂದ ಹೊಟ್ಟೆಯ ಒತ್ತಡವನ್ನು ಕಡಿಮೆ ಮಾಡಿ ಉರಿ ಕಡಿಮೆಗೊಳಿಸಬಹುದು. ಭಾರಿ ಊಟದ ನಂತರ ನೀವು ಕೆಲವೊಮ್ಮೆ ನಿಮ್ಮ ಬೆಲ್ಟ್ ಅನ್ನು ಸಡಿಲಗೊಳಿಸಬೇಕಾದೀತು. ಇದು ನಿಮ್ಮ ಹೊಟ್ಟೆಯ ಜಾಗವನ್ನು ವಿಸ್ತರಿಸುತ್ತದೆ. ನೀವು ಎದೆಯುರಿ ಹೊಂದಿರುವಾಗ, ನಿಮ್ಮ ಪ್ಯಾಂಟ್ ಅಥವಾ ಬೆಲ್ಟ್ ತುಂಬಾ ಬಿಗಿಯಾಗಿರುವುದಿಲ್ಲ ಎಂದು ಖಚಿತಪಡಿಸಿಕೊಳ್ಳಿ.
5. ಸಕ್ಕರೆ ರಹಿತ ಗಮ್ ಅಗಿಯಿರಿ (Chewing Gum)
ಚೂಯಿಂಗ್ ಗಮ್ ಲಾಲಾರಸದ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದು ಹೆಚ್ಚಾಗಿ ಉಗುಳು ನುಂಗಲು ಕಾರಣವಾಗುತ್ತದೆ. ಆಗಾಗ್ಗೆ ಉಗುಳು ನುಂಗುವಿಕೆಯು ಆಮ್ಲವನ್ನು ನಿಮ್ಮ ಹೊಟ್ಟೆಯ ಕಡೆಗೆ ತಳ್ಳಲು ಮತ್ತು ಎದೆಯುರಿ ರೋಗಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. 2005ರ ಒಂದು ಸಣ್ಣ ಅಧ್ಯಯನವು ಎದೆಯುರಿ ರೋಗಲಕ್ಷಣಗಳ ಮೇಲೆ ಗಮ್ ಚೂಯಿಂಗ್‌ನ ಪರಿಣಾಮಗಳನ್ನು ಪರೀಕ್ಷಿಸಿದೆ. ಊಟವನ್ನು ಸೇವಿಸಿದ 30 ನಿಮಿಷಗಳ ನಂತರ ಸಕ್ಕರೆ ರಹಿತ ಗಮ್ ಅನ್ನು ಅಗಿಯುವವರು ಅನ್ನನಾಳದಲ್ಲಿ ಕಡಿಮೆ ಆಮ್ಲದ ಮಟ್ಟವನ್ನು ತೋರಿಸಿದರು.
undefined
6. ಬಾಳೆಹಣ್ಣು ತಿನ್ನಿ (Banana)
ಬಾಳೆಹಣ್ಣುಗಳು ಕಡಿಮೆ ಆಮ್ಲೀಯ ಆಹಾರವಾಗಿದೆ. ಅಂದರೆ ಹೊಟ್ಟೆಯ ಆಮ್ಲದ ಪರಿಣಾಮವನ್ನು ಇವು ಕಡಿಮೆ ಮಾಡುತ್ತದೆ. ಕೆಲವರು ಊಟದ ಬಳಿಕ ಬಾಳೆಹಣ್ಣು ತಿನ್ನುವುದನ್ನು ನೋಡಿದ್ದೀರಾ?
7. ಅಡಿಗೆ ಸೋಡಾ ಮತ್ತು ನೀರಿನ ಪಾನೀಯ (Baking soda)
ಸ್ವಲ್ಪ ಪ್ರಮಾಣದ ಅಡಿಗೆ ಸೋಡಾವನ್ನು ನೀರಿನಲ್ಲಿ ಬೆರೆಸಿ ಕುಡಿಯಿರಿ. ಇದು ಹೊಟ್ಟೆಯ ಆಮ್ಲವನ್ನು ತಟಸ್ಥಗೊಳಿಸುತ್ತದೆ ಮತ್ತು ಎದೆಯುರಿಗೆ ಪರಿಹಾರವನ್ನು ನೀಡುತ್ತದೆ. ಕೇವಲ ½ ಟೀ ಚಮಚ ಅಡಿಗೆ ಸೋಡಾವನ್ನು ನಾಲ್ಕು ಔನ್ಸ್ ನೀರಿನೊಂದಿಗೆ ಬೆರೆಸಿ ಕುಡಿದರೆ ಸಾಕು. ಅಡಿಗೆ ಸೋಡಾದ ಹೆಚ್ಚಿನ ಪ್ರಮಾಣ ಹಾನಿಕರ. ನೀವು ಸೋಡಿಯಂ-ನಿರ್ಬಂಧಿತ ಆಹಾರಕ್ರಮದಲ್ಲಿದ್ದರೆ, ಅಡಿಗೆ ಸೋಡಾದಲ್ಲಿ ಬಹಳಷ್ಟು ಸೋಡಿಯಂ ಇರುವುದರಿಂದ ನೀವು ಅದನ್ನು ಸೇವಿಸಬಾರದು.
8. ಬೆಳ್ಳುಳ್ಳಿ ಸೇವಿಸಿ (Garlic)
ಬೆಳ್ಳುಳ್ಳಿಯು ನಿಮ್ಮ ದೇಹಕ್ಕೆ ಹೆಚ್ಚಿನ ಆಮ್ಲಜನಕ (Oxygen) ಪೂರೈಕೆಯಾಗುವಂತೆ ಮಾಡುತ್ತದೆ. ಇದು ಶ್ವಾಸಕೋಸ ಹಾಗೂ ಜಠರಕ್ಕೆ ರಿಲೀಫ್ ನೀಡುತ್ತದೆ. ನಾಲ್ಕಾರು ಎಸಳು ಬೆಳ್ಳುಳ್ಳಿ, ಬೇಕಿದ್ದರೆ ಸ್ವಲ್ಪ ಹುರಿದುಕೊಂಡು, ನುಂಗಿ. ವೈದ್ಯರು ಗ್ಯಾಸ್ಟ್ರಿಕ್ ಸಮಸ್ಯೆಗೆ ನೀಡುವ ಪಾನ್ ಗುಳಿಗೆಯಲ್ಲೂ ಬೆಳ್ಳುಳ್ಳಿಯ ಅಂಶಗಳೇ ಹೆಚ್ಚಿರುವುದು.
Indoor Plants: ಮನೆಯೊಳಗೆ ಹಸಿರು ವಾತಾವರಣ ನಿರ್ಮಿಸೋದು ಸುಲಭ