ಗಂಟಲು ನೋವು ಸಾಮಾನ್ಯ ಖಾಯಿಲೆಯಾದ್ರೂ, ವಿಪರೀತ ಕಿರಿಕಿರಿಯುಂಟು ಮಾಡುತ್ತದೆ. ಆಹಾರ ಸೇವನೆಯಿರಲಿ,ನೀರು ಕುಡಿಯುವುದು ಕಷ್ಟವಾಗುತ್ತದೆ. ಸರಿಯಾಗಿ ಮಾತನಾಡಲೂ ಸಾಧ್ಯವಾಗುವುದಿಲ್ಲ. ಗಂಟಲಿನಲ್ಲಿ ಉರಿಯಾಗ್ತಿದ್ದರೆ ಕೆಲ ಆಹಾರದಿಂದ ದೂರವಿರಬೇಕು.
ಋತು (Season )ಬದಲಾದಂತೆ ನಮ್ಮ ಆರೋಗ್ಯ(Health)ದಲ್ಲಿ ಅನೇಕ ಏರುಪೇರುಗಳನ್ನು ಕಾಣಬಹುದು. ಬೇರೆ ಬೇರೆ ಋತುವಿನಲ್ಲಿ ಬೇರೆ ಬೇರೆ ಕಾಯಿಲೆ(Disease)ಗಳು ನಮ್ಮನ್ನು ಕಾಡುತ್ತವೆ. ಚಳಿಗಾಲದಲ್ಲಿ ನೆಗಡಿ ಮತ್ತು ಗಂಟಲಿನ ಸಮಸ್ಯೆ ಸರ್ವೆ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಕೊರೊನಾ ಮಧ್ಯೆಯೇ ಈ ಬಾರಿ ಅತಿ ಹೆಚ್ಚು ಚಳಿ ಬಿದ್ದಿದೆ. ಹಾಗಾಗಿ ದೇಶದ ಅನೇಕ ಭಾಗಗಳಲ್ಲಿ ಜನರು ಜ್ವರ,ನೆಗಡಿ,ಕೆಮ್ಮು,ಗಂಟಲು ನೋವಿನ ಸಮಸ್ಯೆ ಎದುರಿಸುತ್ತಿದ್ದಾರೆ. ಗಂಟಲ ನೋವು ಕಣ್ಣಿಗೆ ಕಾಣದೆ ಯಾತನೆ ನೀಡುವ ಖಾಯಿಲಿ. ಸದ್ಯ ಗಂಟಲು ನೋವಿನ ಸಮಸ್ಯೆ ಉಲ್ಬಣಿಸಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿಯೇ ಬಹುತೇಕರು ಈ ಸಮಸ್ಯೆ ಎದುರಿಸುತ್ತಿದ್ದಾರೆ. ಗಂಟಲಿನ ಸೋಂಕು ಇದ್ದಲ್ಲಿ ವೈದ್ಯರ ಸಲಹೆ ಮೇರೆಗೆ ಔಷಧಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಗಂಟಲು ನೋವು ಅನೇಕ ಕಾರಣಗಳಿಗೆ ಕಾಣಿಸಿಕೊಳ್ಳುತ್ತದೆ. ಮನೆಯಲ್ಲಿಯೇ ಕೆಲ ಮದ್ದುಗಳನ್ನು ಸೇವಿಸಿಯೂ ಗಂಟಲು ನೋವಿನಿಂದ ಮುಕ್ತಿ ಪಡೆಯಬಹುದು. ಗಂಟಲು ನೋವು ಕಾಡಿದಾಗ ಆಹಾರ ಸೇವನೆ ಮಾಡುವುದು ಕಷ್ಟ. ಆರಂಭದಲ್ಲಿ ಸಣ್ಣದಾಗಿ ಕಾಣಿಸಿಕೊಳ್ಳುವ ಗಂಟಲು ನೋವನ್ನು ಜನರು ನಿರ್ಲಕ್ಷ್ಯಿಸುತ್ತಾರೆ. ಒಂದೆರಡು ದಿನಗಳಲ್ಲಿ ಅದು ವಿಪರೀತವಾಗುತ್ತದೆ. ಗಂಟಲು ನೋವಿಗೆ ಜ್ವರ ಬರುತ್ತದೆ. ಸಣ್ಣದಾಗಿ ಗಂಟಲಿನಲ್ಲಿ ನೋವು ಕಾಣಿಸಿಕೊಳ್ತಿದ್ದಂತೆ ಎಚ್ಚರವಹಿಸುವುದು ಮುಖ್ಯ. ಕೆಲವೊಂದು ಆಹಾರದಿಂದ ದೂರವಿದ್ದರೆ ಗಂಟಲು ನೋವನ್ನು ಓಡಿಸಬಹುದು. ಇಂದು ಗಂಟಲು ನೋವು ಕಾಡಿದಾಗ ಯಾವ ಆಹಾರ ಸೇವನೆ ಮಾಡಬಾರದು ಎಂಬುದನ್ನು ಹೇಳ್ತೆವೆ.
ಕರಿದ ಆಹಾರ :ಎಣ್ಣೆಯಲ್ಲಿ ಕರಿದ ಆಹಾರ ಯಾವಾಗಲೂ ಒಳ್ಳೆಯದಲ್ಲಿ. ಅದರಲ್ಲೂ ಗಂಟಲು ನೋವಿರುವವರು ಅಪ್ಪಿತಪ್ಪಿಯೂ ಇದರ ಸೇವನೆ ಮಾಡಬಾರದು. ಎಣ್ಣೆ,ಗಂಟಲು ನೋವನ್ನು ಉಲ್ಬಣಗೊಳಿಸುತ್ತದೆ. ಗಂಟಲು ನೋವಿರುವವರು ಕರಿದ ಆಹಾರದಿಂದ ದೂರವಿರಿ.
undefined
LIFE LESSONS: ಎಲ್ರೂ ಮಾಡೋ ಮಿಸ್ಟೇಕ್..ನೀವು ಕೂಡಾ ಮಾಡಿರ್ಬೋದು ನೋಡಿ
ತಣ್ಣನೆಯ ಆಹಾರ-ಪಾನೀಯ : ಗಂಟಲು ಉರಿಯುತ್ತಿದ್ದಾಗ ತಣ್ಣನೆ ಆಹಾರ ಸೇವನೆ ಮಾಡಿದ್ರೆ ಕೆಲವರಿಗೆ ಹಿತವೆನ್ನಿಸುತ್ತದೆ. ಆದ್ರೆ ತಣ್ಣನೆಯ ಆಹಾರ ಸೇವಿಸುವ ತಪ್ಪು ಮಾಡಬೇಡಿ. ಫ್ರಿಜ್‌ನಲ್ಲಿರುವ ಹಣ್ಣು,ಆಹಾರ ಅಥವಾ ಪಾನೀಯಗಳ ಸೇವನೆ ನಿಲ್ಲಿಸಿ. ಆಯುರ್ವೇದದ ಪ್ರಕಾರ, ಈ ಪಾನೀಯಗಳು ಕಫವನ್ನು ಹೆಚ್ಚಿಸುತ್ತವೆ. ಇದು ಗಂಟಲಿಗೆ ಮತ್ತಷ್ಟು ಹಾನಿ ಮಾಡುತ್ತದೆ.ಮೊಸರು : ಮೊಸರು ಆರೋಗ್ಯಕ್ಕೆ ಒಳ್ಳೆಯದು. ಆದ್ರೆ ಗಂಟಲು ನೋವಿರುವಾಗ ಮೊಸರಿನಿಂದ ದೂರವಿರಿ. ಮೊಸರು ಕಫದ ಲೋಳೆಯನ್ನು ದಪ್ಪ ಮಾಡುತ್ತದೆ. ಇದ್ರಿಂದ ನೋವು ಹೆಚ್ಚಾಗುತ್ತದೆ.
ಚೀಸ್ : ಚೀಸ್‌ನಲ್ಲಿ ಕ್ಯಾಲ್ಸಿಯಂ, ವಿಟಮಿನ್‌ಗಳು ಮತ್ತು ಖನಿಜಗಳು ಸಮೃದ್ಧವಾಗಿದ್ದರೂ, ಗಂಟಲು ನೋವಿನ ಸಮಯದಲ್ಲಿ ಇದನ್ನು ಸೇವಿಸುವುದು ಒಳ್ಳೆಯದಲ್ಲ. ಇದು ಲೋಳೆಪೊರೆಯನ್ನು ಹದಗೆಡಿಸುತ್ತದೆ. ಗಂಟಲಿನ ಉರಿಯೂತವನ್ನು ಹೆಚ್ಚಿಸುತ್ತದೆ.
ಸಿಟ್ರಸ್ ಹಣ್ಣುಗಳು : ಗಂಟಲು ನೋವಿನಿಂದ ಬಳಲುವವರು ಕಿತ್ತಳೆ, ನಿಂಬೆಹಣ್ಣನ್ನು ಸೇವನೆ ಮಾಡಬೇಡಿ. ಈ ಹಣ್ಣುಗಳಲ್ಲಿರುವ ಹುಳಿ ಮತ್ತು ಟ್ಯಾಂಜಿನೆಸ್ ನಿಮ್ಮ ಗಂಟಲಿಗೆ ಅಪಾಯಕಾರಿ.
ಪ್ಯಾಕ್ ಮಾಡಿದ ಪಾನೀಯ : ಪ್ಯಾಕ್ ಮಾಡಲಾದ ಜ್ಯೂಸ್‌ಗಳಲ್ಲಿ ಕೃತಕ ಬಣ್ಣಗಳು ಮತ್ತು ಸಕ್ಕರೆ ಇರುತ್ತದೆ. ಇದು ಉರಿಯೂತವನ್ನು ಉಂಟುಮಾಡುವ ಸಾಧ್ಯತೆಯಿದೆ.
ಹುಣಸೆಹಣ್ಣು : ಹುಣಸೆಹಣ್ಣು, ಸಾಮಾನ್ಯವಾಗಿ ಗಂಟಲಿನಲ್ಲಿ ಅಲರ್ಜಿಯನ್ನುಂಟು ಮಾಡುತ್ತದೆ.ಗಂಟಲು ನೋವಿರುವಾಗ ಇದರ ಸೇವನೆ ಮಾಡಬೇಡಿ.
ಮಾವಿನ ಕಾಯಿ ಒಣ ಪುಡಿ : ಇದು ರುಚಿಯಲ್ಲಿ ಹುಳಿ ಮತ್ತು ಕಟುವಾಗಿರುತ್ತದೆ. ಗಂಟಲಿನ ನೋವನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆಯಿದೆ.
Immunity ಕಡಿಮೆ ಆಗಿರೋದನ್ನು ಹೀಗೆ ತಿಳ್ಕೊಳಿ
ಹಾಲು : ಹಾಲು ಕೂಡ ಕಫವನ್ನು ಹೆಚ್ಚಿಸುತ್ತದೆ. ಇದ್ರಿಂದ ಗಂಟಲಿನ ಕಿರಿಕಿರಿ ಜಾಸ್ತಿಯಾಗಬಹುದು. ಹಾಗಾಗಿ ಹಾಲಿನ ಸೇವನೆಯನ್ನೂ ಮಾಡಬೇಡಿ.
ಹಣ್ಣುಗಳು : ಕೆಲವೊಂದು ಹಣ್ಣು ಶೀತವನ್ನು ಹೆಚ್ಚಿಸುತ್ತದೆ. ಜ್ವರ ಬಂದಾಗ ಹಣ್ಣುಗಳ ಸೇವನೆ ಮಾಡದಂತೆ ವೈದ್ಯರು ಸಲಹೆ ನೀಡುತ್ತಾರೆ. ದೇಹಕ್ಕೆ ತಂಪು ನೀಡುವ ಹಣ್ಣುಗಳನ್ನು ಗಂಟಲು ನೋವಿನ ಸಂದರ್ಭದಲ್ಲಿ ಸೇವಿಸಬೇಡಿ.