
ಮಾತ್ರೆ ಗಂಟಲಿನಿಂದ ಒಳಗೆ ಹೋಗಿರೋದೇ ಇಲ್ಲ ಆಗ್ಲೇ ಖಾಯಿಲೆ ಗುಣವಾಗಬೇಕು ಎನ್ನುವ ಜನರಿದ್ದಾರೆ. ಜ್ವರ, ನೆಗಡಿ, ತಲೆನೋವಿನಂತಹ ಖಾಯಿಲೆ ಬಂದಾಗ ತಕ್ಷಣ ಮಾತ್ರೆ ನುಂಗುವ ಜನರು ಅರ್ಥಗಂಟೆಯೊಳಗೆ ಸಮಸ್ಯೆಗೆ ಪರಿಹಾರ ಸಿಗ್ಬೇಕು ಎನ್ನುತ್ತಾರೆ. ಆತುರದಲ್ಲಿ ಹೆಚ್ಚು ಡೋಸ್ ತೆಗೆದುಕೊಳ್ಳುವವರನ್ನು ನೀವು ನೋಡಿರಬಹುದು. ಮಾತ್ರೆ ಬಿಟ್ಟು ನೇರವಾಗಿ ಇಂಜೆಕ್ಷನ್ ಗೆ ಹೋಗುವವರಿದ್ದಾರೆ. ಎಲ್ಲ ಮಾತ್ರೆ, ಔಷಧಿಗಳು ಬೇಗ ಪರಿಣಾಮ ಬೀರುವುದಿಲ್ಲ. ಇದೇ ಕಾರಣಕ್ಕೆ ಕೆಲವರು ಹೈ ಡೋಸ್ ಹಾಗೂ ಅಲೋಪತಿ ಔಷಧಿಯನ್ನು ಮಾತ್ರ ಸೇವಿಸ್ತಾರೆ.
ಭಾರತ (India) ದಲ್ಲಿ ಅಲೋಪತಿ (Allopathy), ಹೋಮಿಯೋಪತಿ ಹಾಗೂ ಆಯುರ್ವೇದ ಮೂರು ಚಿಕಿತ್ಸಾ ವಿಧಾನಕ್ಕೂ ಮಹತ್ವವಿದೆ. ಜನರು ತಮ್ಮ ನಂಬಿಕೆಯಂತೆ ಔಷಧಿಯನ್ನು ತೆಗೆದುಕೊಳ್ತಾರೆ. ಹೋಮಿಯೋಪತಿ (Homeopathic) ಯಲ್ಲಿ ಕೂಡ ಎಲ್ಲ ರೋಗಕ್ಕೆ ಚಿಕಿತ್ಸೆ ನೀಡಲಾಗುತ್ತದೆ. ಕೆಲವರಿಗೆ ಹೋಮಿಯೋಪತಿ ಔಷಧಿ (Medicine ) ತೆಗೆದುಕೊಳ್ಳಲು ಆಸಕ್ತಿಯಿರುತ್ತದೆ. ಆದ್ರೆ ಅದು ಬಹಳ ತಡವಾಗಿ ಕೆಲಸ ಪ್ರಾರಂಭಿಸುತ್ತವೆ ಎನ್ನುವ ಕಾರಣಕ್ಕೆ ಅನೇಕರು ಇದ್ರಿಂದ ದೂರ ಉಳಿಯುತ್ತಾರೆ. ಹೋಮಿಯೋಪತಿ ಔಷಧಿ ನಿಜವಾಗ್ಲೂ ತಡವಾಗಿ ಪರಿಣಾಮ ಬೀರುತ್ತದೆಯೇ ಎಂಬುದನ್ನು ನಾವಿಂದು ಹೇಳ್ತೇವೆ.
WEIGHT LOSS TIPS: ತೂಕ ಇಳಿಸಿಕೊಳ್ಳಲು ಬೆವರು ಇಳಿಸಬೇಕಿಲ್ಲ, ಹೀಗೂ ಮಾಡಿದ್ರೂ ಸಾಕು!
ಹೋಮಿಯೋಪತಿ ಎಂಬ ಪದವು ಹೋಮಿಯೋಸ್ ಮತ್ತು ಪಾಥೋಸ್ ಎಂಬ ಎರಡು ಗ್ರೀಕ್ ಪದಗಳಿಂದ ಬಂದಿದೆ. ಹೋಮಿಯೋಪತಿ ಔಷಧಿಗಳ ಸಹಾಯದಿಂದ ಬೈಪೋಲಾರ್ ಡಿಸಾರ್ಡರ್, ಆಟಿಸಂ ಮತ್ತು ಖಿನ್ನತೆಯಂತಹ ಪ್ರಮುಖ ಕಾಯಿಲೆಗಳು ಸೇರಿದಂತೆ ದೈಹಿಕ ಮಾತ್ರವಲ್ಲದೆ ಅನೇಕ ಮಾನಸಿಕ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಇದು 1790 ರ ದಶಕದಲ್ಲಿ ಸ್ಯಾಮ್ಯುಯೆಲ್ ಹ್ಯಾನೆಮನ್ ಎಂಬ ಜರ್ಮನ್ ವೈದ್ಯ ಅಭಿವೃದ್ಧಿಪಡಿಸಿದ ವಿಚಾರಗಳ ಸರಣಿಯನ್ನು ಆಧರಿಸಿದೆ. ಹೋಮಿಯೋಪತಿ ಔಷಧ ಸೇವನೆಯಿಂದ ದೇಹಕ್ಕೆ ಯಾವುದೇ ವಿಷ ಸೇರುವುದಿಲ್ಲ. ಬೇರೆ ಯಾವುದೇ ಅಂಗದ ಮೇಲೂ ಇದು ಅಡ್ಡಪರಿಣಾಮ ಬೀರುವುದಿಲ್ಲ.
ಹೋಮಿಯೋಪತಿ ಔಷಧ ಹೇಗೆ ಪರಿಣಾಮ ಬೀರುತ್ತದೆ ? : ಹೋಮಿಯೋಪತಿ ಔಷಧಿ ತೆಗೆದುಕೊಳ್ಳುವ ಮುನ್ನ, ಅದ್ರ ಪರಿಣಾಮ ತಡವಾಗಿ ಆಗುತ್ತದೆ ಎಂಬುದನ್ನು ಚಿಂತಿಸುವ ಬದಲು ನಿಮ್ಮ ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಆಲೋಚನೆ ಮಾಡ್ಬೇಕು. ನಿಮಗೆ ಯಾವ ಖಾಯಿಲೆಯಿದೆ ಎಂಬುದು ಗೊತ್ತಾದ್ರೆ ಅದಕ್ಕೆ ತಕ್ಕಂತೆ ಔಷಧಿಯನ್ನು ನೀಡಲಾಗುತ್ತದೆ. ಆಗ ಹೋಮಿಯೋಪತಿ ಔಷಧಿ ಪರಿಣಾಮವನ್ನು ನೀವು ಶೀಘ್ರ ಕಾಣಬಹುದು. ಖಾಯಿಲೆ ಪತ್ತೆ ಸರಿಯಾಗಿ ಆಗಿಲ್ಲವೆಂದ್ರೆ ಎಲ್ಲ ಔಷಧಿ ವಿಧಾನದಲ್ಲೂ ಪರಿಣಾಮ ನಿಧಾನವಾಗಿ ಆಗುತ್ತದೆ.
ಬಾಯಿಗೂ ಸಿಹಿ, ಆರೋಗ್ಯಕ್ಕೂ ಸೈ ಆದ ಹೋಮಿಯೋಪಥ ಔಷಧಿ ಸೇವಿಸೋ ಮುನ್ನ
ಸಣ್ಣ ಸಮಸ್ಯೆಗಳಿಗೆ ಬೇಗ ಸಿಗುತ್ತೆ ಪರಿಹಾರ : ಸಣ್ಣ ದೈಹಿಕ ಸಮಸ್ಯೆಗಳ ಸಂದರ್ಭದಲ್ಲಿ ಹೋಮಿಯೋಪತಿ ಔಷಧಿಗಳು ವೇಗವಾಗಿ ಪರಿಣಾಮ ತೋರಿಸಲು ಪ್ರಾರಂಭಿಸುತ್ತವೆ. ಜ್ವರ, ನೆಗಡಿಯಂತಹ ಖಾಯಿಲೆಗೂ ನೀವು ಇದ್ರಲ್ಲಿ ಔಷಧಿ ತೆಗೆದುಕೊಳ್ಳಬಹುದು. ಆದ್ರೆ ಕೆಲವು ಗಂಭೀರ ಮತ್ತು ಅಪಾಯಕಾರಿ ಕಾಯಿಲೆಗಳಲ್ಲಿ ಈ ಔಷಧಿಗಳು ಬಹಳ ನಿಧಾನವಾಗಿ ಕಾರ್ಯನಿರ್ವಹಿಸುತ್ತವೆ. ಏಕೆಂದರೆ ಗಂಭೀರ ಕಾಯಿಲೆಗಳು ಬೆಳವಣಿಗೆಯಾಗಲು ಬಹಳ ಸಮಯ ತೆಗೆದುಕೊಂಡಿರುತ್ತವೆ. ದೇಹದ ಎಲ್ಲ ಭಾಗಕ್ಕೆ ಅವು ನಿಧಾನವಾಗಿ ವಿಸ್ತರಿಸಿರುತ್ತವೆ. ರೋಗ ಗಂಭೀರವಾಗಿದ್ದು, ರೋಗಿ ಸಾಯುವ ಹಂತಕ್ಕೆ ತಲುಪುತ್ತಾನೆ. ಈ ಸಂದರ್ಭದಲ್ಲಿ ಮಾತ್ರೆಗಳು ಪರಿಣಾಮ ಬೀರಲು ದೀರ್ಘ ಸಮಯ ಅಗತ್ಯ. ನಮ್ಮ ದೇಹ ಖಾಯಿಲೆ ವಿರುದ್ಧ ಸದಾ ಹೋರಾಟ ನಡೆಸುತ್ತದೆ. ಆದ್ರೆ ಖಾಯಿಲೆ ಬಲವಾಗಿದ್ರೆ ಹೋರಾಟ ಕಷ್ಟವಾಗುತ್ತದೆ.
ಹೋಮಿಯೋಪತಿಯಲ್ಲಿ ಗಂಭೀರ ಖಾಯಿಲೆ ಬೇಗ ಗುಣವಾಗದೆ ಹೋದ್ರೂ ಮೂಲದಿಂದ ರೋಗವನ್ನು ತೆಗೆಯುವ ಕೆಲಸ ಮಾಡುತ್ತದೆ. ಅಂದ್ರೆ ಈ ಚಿಕಿತ್ಸಾ ವಿಧಾನ ನಿಧಾನವಾದ್ರೂ ನಿಮ್ಮ ದೇಹದ ಮೇಲೆ ಅದ್ರ ಪರಿಣಾಮ ಬಲವಾಗಿರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.