ಹಸಿವು ಕಡಿಮೆ, ರಾತ್ರಿ ಮಲಗಿದಾಗ ಬೆವರುತ್ತೀರಾ? ಇದು ಈ ಆರೋಗ್ಯ ಸಮಸ್ಯೆಯ ಸೂಚನೆ

Published : May 02, 2025, 05:28 PM ISTUpdated : May 02, 2025, 05:33 PM IST
ಹಸಿವು ಕಡಿಮೆ, ರಾತ್ರಿ ಮಲಗಿದಾಗ ಬೆವರುತ್ತೀರಾ? ಇದು ಈ ಆರೋಗ್ಯ ಸಮಸ್ಯೆಯ ಸೂಚನೆ

ಸಾರಾಂಶ

ರಾತ್ರಿ ಮಲಗಿದಾಗ ಬೆವರುತ್ತೀರಾ? ಹಸಿವು ಕಡಿಮೆಯಾಗಿದೆಯಾ? ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗುವುದು, ಕಿಬ್ಬೊಟ್ಟೆಯಲ್ಲಿ  ನೋವು  ಕಂಡು ಬರುವುದು ಸೇರಿದಂ ಕೆಲ ಲಕ್ಷಣಗಳು ರಾತ್ರಿ ವೇಳೆ ಕಾಣಿಸಿಕೊಂಡರೆ ಈ ಆರೋಗ್ಯ ಸಮಸ್ಯೆ ಇದೆ ಎಂಬ ಸೂಚನೆ.

ಯಾವುದೇ ಕಾಯಿಲೆಯಾಗಿದ್ದರೂ ಪ್ರಾರಂಭದಲ್ಲಿಯೇ ಗುರುತಿಸಿದರೆ ಚೇತರಿಸಿಕೊಳ್ಳಲು ಸುಲಭವಾಗುವುದು. ಲಿವರ್‌ಗೆ ಸಮಸ್ಯೆಯಾದಾಗ ಕೂಡ ಅದರ ಲಕ್ಷಣ  ರಾತ್ರಿ ಹೊತ್ತಿನಲ್ಲಿ ಕಂಡು ಬರುವುದು, ಅದರೆ ಸಾಕಷ್ಟು ಜನ ಪ್ರಾರಂಭದಲ್ಲಿ ಆ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡುವುದರಿಂದ ಲಿವರ್ ಸಮಸ್ಯೆ ಗಂಭೀರವಾಗುವುದು. ಆದ್ದರಿಂದ ರಾತ್ರಿ ಹೊತ್ತಿನಲ್ಲಿ ಈ ಬಗೆಯ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷ್ಯ ಮಾಡಲು ಹೋಗಲೇಬೇಡಿ:

ಆಗಾಗ ಮೂತ್ರ ವಿಸರ್ಜನೆ:
ಲಿವರ್‌ಗೆ ಹಾನಿಯುಂಟಾದಾಗ ಆಗಾಗ ಮೂತ್ರವಿಸರ್ಜನೆಗೆ ಹೋಗಬೇಕೆನಿಸುವುದು. ಇದನ್ನು ವೈದ್ಯಕೀಯ ಭಾಷೆಯಲ್ಲಿ nocturia ಎಂದು ಕರೆಯಲಾಗುವುದು.  ಆಗಾಗ ಮೂತ್ರ ವಿಸರ್ಜನೆಗೆ ಹೋಗಬೇಕೆನಿಸುವುದರಿಂದ ನಿದ್ದೆಗೆ ಭಂಗ ಉಂಟಾಗುವುದು. ಮಧುಮೇಹಿಗಳಲ್ಲಿ ಈ ಬಗೆಯ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷ್ಯ ಮಾಡಲೇಬೇಡಿ. ಮಧುಮೇಹದಿಂದ ಲಿವರ್ ಆರೋಗ್ಯ ಹಾಳಾಗುವುದು.

Healthy Food: ಬೇಸಿಗೆಯಲ್ಲಿ ಹಲಸಿನ ಹಣ್ಣು ತಿಂದ್ರೆ ಒಳ್ಳೆಯದೇ?

ತುರಿಕೆ
ಲಿವರ್ ಹಾಳಾದಾಗ ತುರಿಕೆ ಉಂಟಾಗುವುದು, ಲಿವರ್‌ ಸಂಪೂರ್ಣವಾಗಿ ಹಾನಿಗೊಳಗಾದಾಗ ತ್ವಚೆಯಲ್ಲಿ ತುರಿಕೆ ಉಂಟಾಗುವುದು,  ತುರಿಕೆಯಿಂದಾಗಿ ರಾತ್ರಿ ಹೊತ್ತಿನಲ್ಲಿ ನಿದ್ದೆ ಬರುವುದು ಕಷ್ಟವಾಗುವುದು.

ರಾತ್ರಿ ಹೊತ್ತಿನಲ್ಲಿ  ಮೈ ತುಂಬಾನೇ ಬೆವರುವುದು
ರಾತ್ರಿ ಹೊತ್ತಿನಲ್ಲಿ ಮೈ ತುಂಬಾನೇ ಬೆವರುವುದು ಕೂಡ ಲಿವರ್‌ಗೆ ಹಾನಿಯಾಗಿದೆ ಎಂಬುವುದನ್ನು ಸೂಚಿಸುವ ಲಕ್ಷಣವಾಗಿದೆ. ಮೈ ವಿಪರೀತ ಬೆವರಲಾರಂಭಿಸುವುದು, ಹಾಟ್‌ ಫ್ಲ್ಯಾಷ್‌ ಅನುಭವ ಉಂಟಾಗುವುದು.

ತುಂಬಾನೇ ಅಸ್ವಸ್ಥತೆ  ಉಂಟಾಗುವುದು
ಲಿವರ್‌ ತನ್ನ ಕಾರ್ಯ ನಿರ್ವಹಿಸಲು ವಿಫಲವಾದಾಗ  ದೇಹದಿಂದ ಕಶ್ಮಲ ಹೊರಹಾಕಲು ವಿಫಲವಾಗುವುದು, ರಕ್ತದಲ್ಲಿ ಕಶ್ಮಲ ಸೇರಿಕೊಂಡು ಮತ್ತಷ್ಟು ಅರೋಗ್ಯ ಸಮಸ್ಯೆ  ಉಂಟು ಮಾಡುತ್ತೆ,  ಇದರಿಂದ ಅಸ್ವಸ್ಥತೆ ಕಾಡುವುದು. 

ಲಿವರ್ ಸಮಸ್ಯೆಯಾದಾಗ  ಈ ಬಗೆಯ ಲಕ್ಷಣಗಳೂ ಕಂಡು ಬರುವುದು
ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗುವುದು
ಕಿಬ್ಬೊಟ್ಟೆಯಲ್ಲಿ  ನೋವು  ಕಂಡು ಬರುವುದು
ಕಾಲುಗಳಲ್ಲಿ ಊತ ಕಂಡು ಬರುವುದು
ಸುಸ್ತು, ತಲೆಸುತ್ತು
ಕಣ್ಣುಗಳಲ್ಲಿ ರಕ್ತಸ್ರಾವ
ಮೂತ್ರದ ಬಣ್ಣ ತುಂಬಾ ಹಳದಿಯಾಗಿರುತ್ತೆ
 ಹೊಟ್ಟೆ ಹಸಿವು ಇಲ್ಲದಿರುವುದು
ಮಲ ಕಂದು ಬಣ್ಣದಲ್ಲಿರುವುದು
ಕಾಲುಗಳಲ್ಲಿ ಊತ

 ಲಿವರ್‌ ಸಮಸ್ಯೆಗೆ ಕಾರಣ:
ಅನೇಕ ಕಾರಣಗಳಿಂದ ಲಿವರ್ ಸಮಸ್ಯೆ ಉಂಟಾಗಬಹುದು, ವಂಶಪಾರಂಪರ್ಯವಾಗಿ ಬರಬಹುದು ಅಥವಾ  ಒಬೆಸಿಟಿ,  ಮದ್ಯಪಾನ, ಕೆಲವೊಂದು ವೈರಸ್‌ಗಳಿಂದಲೂ ಲಿವರ್‌ನ ಆರೋಗ್ಯಕ್ಕೆ ಹಾನಿಯುಂಟಾಗಬಹುದು.

ಲಿವರ್‌ಗೆ ಹಾನಿಯುಂಟಾದಾಗ ಅದು  ರಕ್ತವನ್ನು ಶುದ್ಧೀಕರಿಸುವುದಿಲ್ಲ, ಹೀಗಾಗಿ ಬಹು ಅಂಗಾಂಗ ವೈಫಲ್ಯ ಉಂಟಾಗುವುದು. ಲಿವರ್ ಸಮಸ್ಯೆಯನ್ನು  ಬೇಗನೆ ಗುರುತಿಸಿದರೆ ಅದಕ್ಕೆ ಚಿಕಿತ್ಸೆ ಪಡೆದರೆ ಬೇಗನೆ ಗುಣಮುಖರಾಗಬಹುದು. ಹಾಗಾಗಿ ಲಿವರ್ ಸಮಸ್ಯೆ ಉಂಟಾದಾಗ ಕಂಡು ಬರುವ ಪ್ರಾರಂಭಿಕ ಲಕ್ಷಣ ನಿರ್ಲಕ್ಷ್ಯ ಮಾಡಬೇಡಿ.

ನೆನೆಸಿದ ಒಣದ್ರಾಕ್ಷಿ ತಿನ್ನೋದರಿಂದ ಆಗುವ ಪ್ರಯೋಜನಗಳು!

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Foods that Block Arteries: ನೀವು ಪ್ರತಿದಿನ ಸೇವಿಸೋ ಈ ಆಹಾರಗಳೇ ಹೃದಯಾಘಾತಕ್ಕೆ ಕಾರಣವಾಗಬಹುದು ಎಚ್ಚರ
ಕೆಲ್ಸ ಮಾಡೋವಾಗ ಮಾತ್ರವಲ್ಲ ರಜೆಯಲ್ಲೂ ಕಾಡುತ್ತೆ ಖಿನ್ನತೆ, ಹಾಲಿಡೇ ಡಿಪ್ರೆಷನ್ ಅಂದ್ರೇನು?