Fitness Tips: ತೂಕ ಇಳಿಸೋಕೆ ಸ್ವಿಮ್ಮಿಂಗ್ – ಸ್ಲೈಕಿಂಗ್ ಯಾವುದು ಬೆಸ್ಟ್ ?

By Suvarna NewsFirst Published May 29, 2023, 1:03 PM IST
Highlights

ತೂಕ ಇಳಿಸಿಕೊಳ್ಳುವ ಮನಸ್ಸಿದ್ರೆ ಅದು ಕಠಿಣ ಕೆಲಸವೇನಲ್ಲ. ಕೆಲ ವ್ಯಾಯಾಮಗಳು ತೂಕ ಇಳಿಸಲು ನೆರವಾಗುತ್ವೆ. ತಾಳ್ಮೆ ಜೊತೆ ಡಯಟ್ ಹಾಗೂ ಶ್ರದ್ಧೆ ಮುಖ್ಯವಾಗುತ್ತದೆ. ಸ್ವಿಮ್ಮಿಂಗ್ ಅಥವಾ ಸ್ಲೈಕಿಂಗ್ ಒಂದೇ ದಿನಕ್ಕೆ ಕೊಬ್ಬು ಕಡಿಮೆ ಮಾಡೋದಿಲ್ಲವಾದ್ರೂ ಸಾಕಷ್ಟು ಲಾಭಹೊಂದಿದೆ. 
 

ತೂಕ ಇಳಿಸಿಕೊಳ್ಳಲು ಜಿಮ್, ಯೋಗ, ವ್ಯಾಯಾಮ ಮಾತ್ರವಲ್ಲ ಸ್ವಿಮ್ಮಿಂಗ್ ಹಾಗೂ ಸೈಕ್ಲಿಂಗ್ ಮಾರ್ಗವನ್ನು ಅನೇಕರು ಅನುಸರಿಸುತ್ತಾರೆ. ಬಾಲ್ಯದಲ್ಲಿಯೇ ಮಕ್ಕಳಿಗೆ ಸೈಕಲ್ ಕಲಿಸಲಾಗುತ್ತದೆ. ಹಾಗೆಯೇ ಸ್ವಿಮ್ಮಿಂಗ್ ಬಗ್ಗೆ ತರಬೇತಿ ಕೂಡ ನೀಡಲಾಗುತ್ತದೆ. ದಿನದಲ್ಲಿ ಕೆಲ ಗಂಟೆ ಸೈಕಲ್ ತುಳಿದ್ರೂ ನಮ್ಮ ಕ್ಯಾಲೋರಿ ಬರ್ನ್ ಆಗುತ್ತದೆ. ಅದೇ ರೀತಿ ಈಜು ಕೂಡ ತೂಕ ಕಡಿಮೆ ಮಾಡುವ ಕೆಲಸವನ್ನು ಮಾಡುತ್ತದೆ. ನಾವಿಂದು ಸ್ವಿಮ್ಮಿಂಗ್ ಹಾಗೂ ಸೈಕ್ಲಿಂಗ್ ನಲ್ಲಿ ಯಾವುದು ಬೆಸ್ಟ್ ಎನ್ನುವ ಬಗ್ಗೆ ಹೇಳ್ತೇವೆ.

ಪ್ರತಿ ವಾರ ಎರಡೂವರೆ ಗಂಟೆಗಳ ಕಾಲ ನೀವು ಸೈಕ್ಲಿಂಗ್ (Cycling) ಅಥವಾ ಸ್ವಿಮ್ಮಿಂಗ್ (Swimming) ಮಾಡಿದ್ರೆ ಅನೇಕ ರೋಗಗಳಿಂದ ದೂರವಿಡಬಹುದು. ಮಧುಮೇಹ (Diabetes), ಹೃದ್ರೋಗ ಮತ್ತು ದೀರ್ಘಕಾಲದ ಅನಾರೋಗ್ಯದಂತಹ ಸಮಸ್ಯೆ ನಿಮ್ಮನ್ನು ಕಾಡೋದಿಲ್ಲ. ಇದಲ್ಲದೆ ಕೀಲು ಮತ್ತು ಸ್ನಾಯು ನೋವಿಗೆ ಇದು ಅತ್ಯುತ್ತಮ ಚಿಕಿತ್ಸೆಯಾಗಿದೆ.  ಬ್ರಿಟಿಷ್ ಜರ್ನಲ್ ಆಫ್ ಸ್ಪೋರ್ಟ್ಸ್ ಮೆಡಿಸಿನ್ ಇದ್ರ ಬಗ್ಗೆ ನಡೆದ ಅಧ್ಯಯನದ ವರದಿ ಪ್ರಕಟಿಸಿದೆ. ಅಧ್ಯಯನದಲ್ಲಿ 80,000 ಯುವಕರ ಪರೀಕ್ಷೆ ನಡೆಸಲಾಗಿದೆ. ಅವರು ನಿಯಮಿತವಾಗಿ ಈಜುತ್ತಿದ್ದರು ಎನ್ನಲಾಗಿದೆ. ಅವರಿಗೆ ಹೃದ್ರೋಗದ ಅಪಾಯವನ್ನು ಶೇಕಡಾ 41 ರಷ್ಟು ಕಡಿಮೆ ಎಂಬುದು ಪತ್ತೆಯಾಗಿದೆ. ಸೈಕ್ಲಿಂಗ್ ಮಾಡುವ ಜನರಲ್ಲಿ ಆರಂಭಿಕ ಸಾವಿನ ಅಪಾಯ ಶೇಕಡಾ 10 ರಷ್ಟು ಕಡಿಮೆ ಎಂದು ಇನ್ನೊಂದು ಅಧ್ಯಯನದ ವರದಿಯಲ್ಲಿ ಹೇಳಲಾಗಿದೆ.

Health Tips: ಏಳೇ ದಿನದಲ್ಲಿ ತೂಕ ಇಳಿಸೋದು ಹೇಗೆ ಗೊತ್ತಾ?

ಸೈಕ್ಲಿಂಗ್ ಹಾಗೂ ಈಜಿನಿಂದಾಗುವ ಲಾಭ : 
ನೆಮ್ಮದಿ (Peace of mind) :
ಇತರ ಸಾರಿಗೆಯನ್ನು ಓಡಿಸುವ ಜನರಿಗಿಂತ ಸೈಕ್ಲಿಂಗ್ ಮಾಡುವವರಲ್ಲಿ ಒತ್ತಡ ಕಡಿಮೆಯಂತೆ. ಪ್ರತಿ ವಾರ ನಾಲ್ಕೈದು ದಿನ ಸೈಕಲ್ ತುಳಿಯುವವರು, ಕಡಿಮೆ ಸೈಕಲ್ ಓಡಿಸುವ ಅಥವಾ ಸೈಕಲ್ ಓಡಿಸದೆ ಇರುವ ಜನರಿಗಿಂತ ಕಡಿಮೆ ಒತ್ತಡವನ್ನು ಅನುಭವಿಸುತ್ತಾರೆ.  ದಿನಕ್ಕೆ ಕನಿಷ್ಠ 30 ನಿಮಿಷಗಳ ಕಾಲ ಸೈಕ್ಲಿಂಗ್ ಮಾಡುವುದು ಹೃದಯರಕ್ತನಾಳದ ಮತ್ತು ಸ್ನಾಯುವಿನ ಶಕ್ತಿಯನ್ನು ಹೆಚ್ಚಿಸುತ್ತದೆ. 

ಅದೇ ರೀತಿ ನಿಯಮಿತ ಸ್ವಿಮ್ಮಿಂಗ್ (Regular Cycling), ಹೃದಯ (Heart) ಮತ್ತು ಮನಸ್ಸಿಗೆ ಶಾಂತಿ ನೀಡುತ್ತದೆ. ಒತ್ತಡದಲ್ಲಿದ್ದಾಗ ಶಾಂತಿ ಬಯಸುವ ಜನರು ನೀರಿಗೆ ಇಳಿಯೋದಿದೆ. ಸಮುದ್ರದ ನೀರಿನಲ್ಲಿ ಮಿಂದೆದ್ದು, ರಿಲ್ಯಾಕ್ಸ್ ಆಗುವವರಿದ್ದಾರೆ. ಸ್ವಿಮ್ಮಿಂಗ್ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ. ಮೂಡ್ ಸ್ವಿಂಗ್ ಮೇಲೆ ನಿಯಂತ್ರಣ ಹೇರುತ್ತದೆ.

Lose Weight: ತೂಕ ಇಳಿಸ್ಬೇಕಾ? ಅನಾನಸ್ ಗ್ರೀನ್ ಟೀ ಟ್ರೈ ಮಾಡಿ

ತೂಕ ಇಳಿಕೆಗೆ ಉತ್ತಮ (Reduce weight) : ಸೈಕ್ಲಿಂಗ್ ಒಂದು ರೀತಿಯ ವ್ಯಾಯಾಮವಾಗಿದೆ. ಇದು ತೂಕ ಇಳಿಸುವ ಕೆಲಸವನ್ನು ಮಾಡುತ್ತದೆ.   70 ಕೆಜಿ ತೂಕದ ವ್ಯಕ್ತಿ 30 ನಿಮಿಷಗಳ ಕಾಲ ಸೈಕ್ಲಿಂಗ್ ಮಾಡಿದ್ರೆ  ಸುಮಾರು 252 ಕ್ಯಾಲೊರಿ ಬರ್ನ್ ಆಗುತ್ತದೆ ಎಂದು ತಜ್ಞರು ಹೇಳಿದ್ದಾರೆ. 
ಬೇಗನೆ ಕ್ಯಾಲೊರಿ ಬರ್ನ್ ಮಾಡಲಿ ಸ್ವಿಮ್ಮಿಂಗ್ ಬೆಸ್ಟ್. ಒಂದು ಗಂಟೆ ನೀವು ಸ್ವಿಮ್ ಮಾಡಿದ್ರೆ 500 ಕ್ಯಾಲೊರಿ ಕಡಿಮೆಯಾಗುತ್ತದೆ. ನಿಮ್ಮ ದೇಹ ತಂಪಾಗುವ ಜೊತೆಗೆ ಅನೇಕ ಖಾಯಿಲೆಗಳು ದೂರವಾಗುತ್ತವೆ. 

ಸ್ವಿಮ್ಮಿಂಗ್ (Swmming) ಮತ್ತು ಸೈಕ್ಲಿಂಗ್ (Cycling) ಎರಡೂ ಅದರದೇ ಆದ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿವೆ. ನೀವು ಯಾವುದೇ ವಯಸ್ಸಿನಲ್ಲಿ ಸ್ವಿಮ್ಮಿಂಗ್ ಕಲಿಯಬಹುದು. ವಯಸ್ಸಾದಂತೆ ಸೈಕ್ಲಿಂಗ್ ಕಲಿಯೋದು ಸ್ವಲ್ಪ ಕಷ್ಟ. ಆಯತಪ್ಪಿ ಬಿದ್ರೆ ಗಾಯದ ಅಪಾಯವಿರುತ್ತದೆ. ಬಾಲ್ಯದಲ್ಲಿಯೇ ನೀವು ಇವೆರಡನ್ನೂ ಕಲಿತಿದ್ದರೆ ನಿಮಗೆ ಯಾವುದೇ ಸಮಸ್ಯೆ ಕಾಡೋದಿಲ್ಲ. ಪ್ರತಿ ದಿನ ಸ್ವಿಮ್ಮಿಂಗ್ ಅಥವಾ ಸೈಕ್ಲಿಂಗ್ ಮಾಡಿ ನಿಮ್ಮ ದೇಹಕ್ಕೆ ವ್ಯಾಯಾಮ ನೀಡಬಹುದು. ಕೆಲ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಈಜು ಅಥವಾ ಸೈಕ್ಲಿಂಗ್ ಸಮಸ್ಯೆ ಹೆಚ್ಚಿಸಬಹುದು. ಹಾಗಾಗಿ ನಿಮಗೆ ಇದ್ರಲ್ಲಿ ಯಾವುದು ಸೂಕ್ತ ಎಂಬುದನ್ನು ಪತ್ತೆ ಮಾಡಿ ನಂತ್ರ ನಿಯಮಿತವಾಗಿ ಅಭ್ಯಾಸ ಮಾಡಿ.

click me!