ಜಗತ್ತನಲ್ಲಿ ಲಕ್ಷಾಂತರ ಖಾಯಿಲೆ ಇದೆ. ಕೆಲವೊಂದು ಅಪರೂಪದ ಖಾಯಿಲೆ ಪ್ರಾಣ ತೆಗೆಯೋವರೆಗೂ ಬಿಡೋದಿಲ್ಲ. ಈ ಬಾಲಕ ಕೂಡ ಅಂಥದ್ದೇ ರೋಗಕ್ಕೆ ತುತ್ತಾಗಿದ್ದ. ಆದ್ರೆ ಆತನ ಅದೃಷ್ಟ ಚೆನ್ನಾಗಿತ್ತು, ಬದುಕಿ ಬಂದಿದ್ದಾನೆ.
ಮೆದುಳು ಚೆನ್ನಾಗಿ ಕೆಲಸ ಮಾಡಿದಾಗ ಮಾತ್ರ ನಾವು ಯಾವುದೇ ಕೆಲಸವನ್ನು ಸರಿಯಾಗಿ ಮಾಡಲು ಸಾಧ್ಯ. ಮೆದುಳಿನ ಆರೋಗ್ಯದಲ್ಲಿ ಸ್ವಲ್ಪವೇ ವ್ಯತ್ಯಾಸ ಕಂಡುಬಂದರೂ ಯಾವ ಕ್ರಿಯೆಯನ್ನೂ ಸರಿಯಾಗಿ ಮಾಡಲು ಸಾಧ್ಯವಿಲ್ಲ. ಕೆಲವೊಮ್ಮೆ ಮೆದುಳಿಗೆ ಸಂಬಂಧಪಟ್ಟ ಸಮಸ್ಯೆಗಳು ಎದುರಾಗುತ್ತವೆ. ಮೆದುಳಿನ ಕ್ಯಾನ್ಸರ್ ಅಥವಾ ಬ್ರೈನ್ ಟ್ಯೂಮರ್ ಮುಂತಾದವು ಮೆದುಳಿನ ಸಮಸ್ಯೆಗಳಲ್ಲಿ ಒಂದು.
ಮೆದುಳಿ (Brain) ನಲ್ಲಿ ಕಂಡುಬರುವ ಇಂತಹ ಸಮಸ್ಯೆಗಳು ಉಂಟಾದಾಗ ಮನುಷ್ಯ ಬದುಕುವುದೇ ಅಪರೂಪ. ಮುಂದುವರೆದ ಚಿಕಿತ್ಸೆ (Therapy) ಗಳು ಅದೆಷ್ಟೇ ಇದ್ದರೂ ಕೂಡ ಇಂತಹ ಖಾಯಿಲೆಗಳನ್ನು ಹಿಮ್ಮೆಟ್ಟುವುದು ಸುಲಭದ ಮಾತಲ್ಲ. ಆದರೂ ಕೆಲವೊಮ್ಮೆ ಆಶ್ಚರ್ಯ ಅನ್ನುವಂತೆ ಕೆಲವೇ ಕೆಲವು ಮಂದಿ ಸಾವಿನ ದವಡೆಯಿಂದ ಪಾರಾಗುತ್ತಾರೆ. ಬೆಲ್ಜಿಯಂ ನ ಲ್ಯೂಕಾಸ್ ಎನ್ನುವ ಹುಡುಗ ಕೂಡ ಬ್ರೈನ್ ಸ್ಟೆಮ್ ಗ್ಲಿಯೋಮಾ (Stem Glioma) ಎಂಬ ಖಾಯಿಲೆಯಿಂದ ಗುಣಮುಖನಾಗಿದ್ದಾನೆ.
ಮನೆ ಆಹಾರ ತಿಂದ್ರೂ ಗ್ಯಾಸ್ ಆಗ್ತಿದೆಯಾ? ಬ್ರೇಕ್ ಫಾಸ್ಟ್‌ನಲ್ಲಿದೆ ಗುಟ್ಟು
ಬ್ರೈನ್ ಸ್ಟೆಮ್ ಗ್ಲಿಯೋಮಾದಿಂದ ಬದುಕುಳಿಯುವುದು ತೀರ ಅಪರೂಪ : ಬೆಲ್ಜಿಯಂನ ಲ್ಯೂಕಾಸ್ ಎನ್ನುವ ಹುಡುಗನಿಗೆ ಆತ 6 ನೇ ವರ್ಷದಲ್ಲಿದ್ದಾಗಲೇ ಬ್ರೈನ್ ಸ್ಟೆಮ್ ಎನ್ನುವ ಅಪರೂಪದ ಮೆದುಳಿನ ಖಾಯಿಲೆ ಇರುವುದು ಪತ್ತೆಯಾಯಿತು. ಈಗ ಆತನಿಗೆ 13 ವರ್ಷ. ಈತ ಬ್ರೈನ್ ಸ್ಟೆಮ್ ನಿಂದ ಬದುಕುಳಿದ ವಿಶ್ವದ ಮೊದಲ ಹುಡುಗನಾಗಿದ್ದಾನೆ. ಕ್ಯಾನ್ಸರ್ ನ ಅತ್ಯಂತ ಕ್ರೂರ ರೂಪವಾದ ಬ್ರೈನ್ ಸ್ಟೆಮ್ ನಿಂದ ಬಳಲುತ್ತಿದ್ದ ಇವನು ವೈದ್ಯರ ಸತತ ಶ್ರಮದಿಂದ ಬದುಕಿ ಬಂದಿದ್ದಾನೆ.
ಲ್ಯೂಕಾಸ್ 6 ವರ್ಷದವನಿದ್ದಾಗಲೇ ಅವನಿಗೆ ಮೆದುಳಿನ ಸಮಸ್ಯೆ ಕಾಣಿಸಿಕೊಂಡಿತ್ತು. ಲ್ಯೂಕಾಸ್ ನನ್ನು ಪರೀಕ್ಷಿಸಿದ ವೈದ್ಯರಿಗೆ ಚಿಂತೆ ಕಾಡಿತ್ತು. ಬಾಲಕನ ಬಗ್ಗೆ ತಂದೆ ತಾಯಿಗಳಿಗೆ ಏನು ಹೇಳುವುದು ಎಂಬ ಆತಂಕವಿತ್ತು. ಯಾಕೆಂದ್ರೆ ಲ್ಯೂಕಾಸ್ ಆರೋಗ್ಯ ಸ್ಥಿತಿ ಬಹಳ ಗಂಭೀರವಾಗಿತ್ತು. ಆತ ಇನ್ನು ಹೆಚ್ಚು ದಿನ ಬದುಕಿರುವುದಿಲ್ಲ ಎನ್ನುವ ವಿಷಯ ವೈದ್ಯರಿಗೆ ನೋವುಂಟು ಮಾಡಿರುವಾಗ ಪಾಲಕರು ಹೇಗೆ ಇದನ್ನು ಸ್ವೀಕರಿಸುತ್ತಾರೆ ಎಂಬ ಚಿಂತೆ ಕಾಡಿತ್ತು. ಆದರೆ ಲ್ಯೂಕಾಸ್ ಈಗ ಎಲ್ಲ ಕಷ್ಟಗಳನ್ನೂ ಮೀರಿ ಬದುಕುಳಿದಿದ್ದಾನೆ ಎಂದು ಫ್ರೆಂಚ್ ವೈದ್ಯ ಜಾಕ್ವೆಸ್ ಗ್ರಿಲ್ ಹೇಳಿದ್ದಾರೆ.
ಮೂಳೆಗಳು ಗಟ್ಟಿಯಾಗಿ ಇರ್ಬೇಕು ಅಂದ್ರೆ ಇಂಥಾ ಆಹಾರ ಮಿಸ್ ಮಾಡ್ದೆ ತಿನ್ನಿ
ಬ್ರೈನ್ ಸ್ಟೆಮ್ ಗ್ಲಿಯೋಮಾ ಎಂಬುದು ಮೆದುಳಿನ ಕಾಂಡದಲ್ಲಿ ಬೆಳೆಯುವ ಗಡ್ಡೆಯಾಗಿದೆ. ಇದು ದೇಹದ ಅನೇಕ ಭಾಗಗಳನ್ನು ಸಂಪರ್ಕಿಸುತ್ತದೆ ಮತ್ತು ಅನೇಕ ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತದೆ. ಇದು ವ್ಯಕ್ತಿಯ ಉಸಿರಾಟ, ಜೀರ್ಣಕ್ರಿಯೆ, ಹೃದಯ ಬಡಿತ ಮತ್ತು ಇತರ ಸ್ನಾಯುಗಳ ಮೇಲೆ ಪರಿಣಾಮ ಬೀರುತ್ತದೆ. ಕೊಲಂಬಿಯಾ ವಿಶ್ವವಿದ್ಯಾಲಯದ ತಜ್ಞರು ಮೆದುಳಿನ ಕಾಂಡದ ಗ್ಲಿಯೋಮಾವನ್ನು ಆಸ್ಟ್ರೋಸೈಟೊಮಾಸ್ ಎಂದಿದ್ದಾರೆ. ಆಸ್ಟರೋಸೈಟ್ ಗಳು ನಕ್ಷತ್ರಾಕಾರದ ಗ್ಲಿಯಲ್ ಕೋಶಗಳಾಗಿವೆ. ಇವು ಮೆದುಳಿನ ಕೋಶಗಳನ್ನು ಮತ್ತು ಬೆನ್ನುಮೂಳೆಯ ಆರೋಗ್ಯವನ್ನು ಕಾಪಾಡುವ ಜೀವಕೋಶಗಳಾಗಿವೆ.
ಮೆದುಳಿನ ಕಾಂಡದಲ್ಲಿ ಡಿಫ್ಯೂಸ್ ಆಂತರಿಕ ಪಾಂಟೈನ್ ಗ್ಲಿಯೋಮಾ ಹಾಗೂ ಫೋಕಲ್ ಗ್ಲಿಯೋಮಾ ಎಂಬ ಎರಡು ಪ್ರಕಾರಗಳಿವೆ. ಆಂತರಿಕ ಪಾಂಟೈನ್ ಗ್ಲಿಯೋಮಾ ಬಹಳ ಬೇಗ ಬೆಳೆಯುತ್ತದೆ ಮತ್ತು ಮೆದುಳಿನ ಕಾಂಡದ ಇತರ ಪ್ರದೇಶಗಳನ್ನು ಆಕ್ರಮಿಸುತ್ತದೆ. ಫೋಕಲ್ ಗ್ಲಿಯೋಮಾ ನಿಧಾನವಾಗಿ ಬೆಳೆಯುತ್ತದೆ ಮತ್ತು ಮೆದುಳಿನ ಕಾಂಡದ ಪ್ರದೇಶದಲ್ಲಿ ಉಳಿಯುತ್ತದೆ. ಮುಖದಲ್ಲಿ ಯಾವುದೇ ರೀತಿಯ ಭಾವನೆ ಇಲ್ಲದೇ ಇರುವುದು, ಡೈಸರ್ಥ್ರಿಯಾ, ಡಿಸ್ಪೇಜಿಯಾ, ಹದಗೆಡುತ್ತಿರುವ ಕೈಬರಹ, ಡಿಪ್ಲೋಪಿಯಾ ದೌರ್ಬಲ್ಯ, ಗಮನದ ಕೊರತೆ ಮುಂತಾದವು ಮೆದುಳಿನ ಕಾಂಡದ ಗ್ಲಿಯೋಮಾದ ಪ್ರಮುಖ ಲಕ್ಷಣಗಳಾಗಿವೆ.
ಮೆದಳಿನ ಕಾಂಡದ ಗ್ಲಿಯೋಮಾಕ್ಕೆ ನಿಶ್ಚಿತವಾದ ಕಾರಣಗಳಿಲ್ಲ. ಇದು ಅನುವಂಶಿಕವಾಗಿಯೂ ಬರುವಂತದಲ್ಲ. ಆದರೂ ನ್ಯೂರೋಫೈಬ್ರೊಮಾಟೋಸಿಸ್ ಪ್ರಕಾರದ ಕೆಲವು ಆನುವಂಶಿಕ ಪರಿಸ್ಥಿತಿಗಳಲ್ಲಿ ಮೆದುಳಿನ ಕಾಂಡದ ಗ್ಲಿಯೋಮಾ ಅಪಾಯ ಕೂಡ ಹೆಚ್ಚಿರುತ್ತದೆ.