ದೇಶದಲ್ಲಿ Omicron ಉಪ ರೂಪಾಂತರ BF.7 ಪತ್ತೆ, ಇದು ಕೋವಿಡ್‌ನಷ್ಟೇ ಡೇಂಜರಾ ?

By Suvarna NewsFirst Published Oct 20, 2022, 10:52 AM IST
Highlights

Omicronನ ಉಪ ರೂಪಾಂತರ BF.7ರ ಮೊದಲ ಪ್ರಕರಣ ಭಾರತದಲ್ಲಿ ಕಂಡುಬಂದಿದೆ. ಇದು ಕೊರೋನಾದಂತೆಯೇ ತೀವ್ರಗತಿಯಲ್ಲಿ ಹರಡುವ ಭೀತಿ ಎದುರಾಗಿದೆ. ಅಪಾಯವನ್ನು ಕಡಿಮೆ ಮಾಡಲು ನೀವು ಮಾಡಬೇಕಾಗಿರದೇನು ಅನ್ನೋ ಮಾಹಿತಿ ಇಲ್ಲಿದೆ

ಸತತ ಎರಡು ವರ್ಷಗಳಿಂದ ಕೊರೋನಾ ಜಗತ್ತನ್ನು ತಲ್ಲಣಗೊಳಿಸಿದೆ. ಎರಡು ವರ್ಷದಲ್ಲಿ ಕೋವಿಡ್‌ನಿಂದಾನೇ ಕೋಟ್ಯಾಂತರ ಮಂದಿ ಮೃತಪಟ್ಟರು. ಇನ್ನದೆಷ್ಟೋ ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದರು. ಇಷ್ಟಾದರೂ ಕೊರೋನಾ ಕಾಟ ಮುಗಿದಿಲ್ಲ. ವೈರಸ್‌ನ ಹೊಸ ಹೊಸ ರೂಪಾಂತರಗಳು ಪತ್ತೆಯಾಗುತ್ತಲೇ ಇವೆ. ಸದ್ಯ ಭಾರತದಲ್ಲಿ ಪತ್ತೆಯಾಗಿರುವ Omicron BF.7 ಜನರನ್ನು ಕಂಗೆಡಿಸಿದೆ. ಇದು ಚೀನಾದಿಂದ ಹರಡಿದೆ ಎಂದು ಹೇಳಲಾಗುತ್ತಿದೆ. ಈ ಉಪ ರೂಪಾಂತರವು ಇತರ ಓಮಿಕ್ರಾನ್ ರೂಪಾಂತರಗಳಿಗಿಂತ ಹೆಚ್ಚು ಸಾಂಕ್ರಾಮಿಕವಾಗಿದೆ. ಪ್ರಸ್ತುತ, ಭಾರತದಲ್ಲಿ ಕೋವಿಡ್ ಪ್ರಕರಣಗಳು ತುಂಬಾ ಕಡಿಮೆಯಾಗಿದೆ, ಆದರೆ ಈ ನಿರ್ದಿಷ್ಟ ರೂಪಾಂತರವು ಹರಡಿದರೆ ಅದು ಹೆಚ್ಚಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

ಹಬ್ಬದ ಸಂದರ್ಭ ಆರೋಗ್ಯಕ್ಕಾಗುವ ಅಪಾಯಗಳೇನು? 
ದೀಪಾವಳಿ ಸೀಸನ್ ಬಂದಿದೆ. ಆದ್ದರಿಂದ, ಜನಸಂದಣಿ ಇರುವ ಸ್ಥಳಗಳಲ್ಲಿ ಹೊರಗೆ ಹೋಗುವುದನ್ನು ಮತ್ತು ಜನಸಂದಣಿಯನ್ನು ಸಂಪೂರ್ಣವಾಗಿ ನಿರ್ಬಂಧಿಸುವುದು ಅಸಾಧ್ಯವಾಗಿದೆ. ಹೀಗಿದ್ದೂ ಕೆಲವು ಮುನ್ನೆಚ್ಚರಿಕೆಗಳನ್ನು (Precautions) ತೆಗೆದುಕೊಳ್ಳುವ ಅಗತ್ಯವಿದೆ. ಈ ನಿರ್ದಿಷ್ಟ ರೂಪಾಂತರದಿಂದ (Variant) ಉಂಟಾಗುವ ಅನಾರೋಗ್ಯವು ಇತರ ಓಮಿಕ್ರಾನ್ ರೂಪಾಂತರಗಳಿಗಿಂತ ಹೆಚ್ಚು ತೀವ್ರವಾಗಿರುವುದಿಲ್ಲ. ಆದಾ\ರೂ, ಇನ್ನೂ ಹೆಚ್ಚಿನ ಜನರು ಅನಾರೋಗ್ಯಕ್ಕೆ ಒಳಗಾಗಬಹುದು ಎಂಬ ಅಂಶವು ಆಸ್ಪತ್ರೆಯ ದಾಖಲಾತಿಗಳ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಬಹುದು.

ಭಾರತದಲ್ಲಿ ಮೊದಲ ಒಮಿಕ್ರಾನ್ BQ.1 ಪ್ರಕರಣ ಪತ್ತೆ, ಮಹಾರಾಷ್ಟ್ರದಿಂದ ಮತ್ತೆ ಎಚ್ಚರಿಕೆ ಸಂದೇಶ!

ಅನಾರೋಗ್ಯವಿದ್ದಲ್ಲಿ ಪ್ರತ್ಯೇಕವಾಗಿರಿ: ಜ್ವರ, ವಿಪರೀತ ಕೆಮ್ಮು, ಶೀತ ಕಂಡು ಬಂದಲ್ಲಿ ಗುಂಪಿನಿಂದ (Group) ಪ್ರತ್ಯೇಕವಾಗಿರಿ. ಇದರಿಂದ ಹೆಚ್ಚಿನ ಪ್ರಮಾಣದ ಸೋಂಕು ಹರಡುವಿಕೆಯನ್ನು ಕಡಿಮೆ ಮಾಡಬಹುದು ಮತ್ತು ಅದನ್ನು ಚೆನ್ನಾಗಿ ಮೊಟಕುಗೊಳಿಸಬಹುದು ಎಂದು ಮುಂಬೈನ ನಾನಾವತಿ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಆಂತರಿಕ ಸಲಹೆಗಾರರಾದ ಡಾ.ಹೇಮಲತಾ ಅರೋರಾ ಸಲಹೆ ನೀಡುತ್ತಾರೆ. 

ಕಡ್ಡಾಯವಾಗಿ ಮಾಸ್ಕ್ ಧರಿಸಿ: ಕೊರೋನಾ ತೀವ್ರಗತಿಯಲ್ಲಿ ಹರಡುತ್ತಿದ್ದ ಸಮಯದಲ್ಲಿ ಮಾಸ್ಕ್‌ ಧರಿಸುವುದು ಕಡ್ಡಾಯ (Compulsory)ವಾಗಿತ್ತು. ಆದರೆ ಕೊರೋನಾ ಪ್ರಕರಣಗಳು ಕಡಿಮೆಯಾಗುತ್ತಿದ್ದಂತೆ ಮಾಸ್ಕ್ ಧರಿಸಲು ಜನರು ಹೆಚ್ಚು ಆಸಕ್ತಿ ತೋರುತ್ತಿಲ್ಲ. ಆದರೆ ಮಾಸ್ಕ್ ಧರಿಸುವುದು ಸೋಂಕು ಹರಡುವಿಕೆಯನ್ನು ನಿಲ್ಲಿಸಲು ಅತ್ಯುತ್ತಮ ಮಾರ್ಗ. ವಿಶೇಷವಾಗಿ ಹೆಚ್ಚು ಜನಸಂದಣಿ (Crowd) ಇರುವ ಪ್ರದೇಶಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಆಗಾಗ ಸ್ಯಾನಿಟೈಸರ್ ಬಳಸಿ ಕೈ ತೊಳೆಯುವುದು ಮಾಡುವುದರಿಂದ ಸೋಂಕಿನಿಂದ ದೂರವಿರಬಹುದು.

ಕೈ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ: 2019ರಲ್ಲಿ COVID ನ ಆರಂಭಿಕ ಪ್ರಾರಂಭದ ಸಮಯದಲ್ಲಿ, ಇದು ಸಂಪೂರ್ಣವಾಗಿ ಹೊಸ ವೈರಸ್ ಮತ್ತು ಅದರ ಹರಡುವಿಕೆಯನ್ನು ತಡೆಯಲು ನಾವೆಲ್ಲರೂ ಹೋರಾಡಬೇಕಾಯಿತು. ಈಗ ಮತ್ತೆ ಹೊಸ ಓಮಿಕ್ರಾನ್ ತಳಿ ಹರಡುತ್ತಿರುವುದರಿಂದ ಆರಂಭಿಕ ಹಂತಗಳಲ್ಲಿಯೇ ಹರಡುವಿಕೆಯನ್ನು ತಡೆಯುವುದು ನಮ್ಮ ಜವಾಬ್ದಾರಿ (Responsibility)ಯಾಗಿದೆ. ಸೋಪಿನಿಂದ ಕೈಗಳನ್ನು ತೊಳೆಯುವುದು (Hand washing) ಅದರ ಪ್ರಸರಣದ ವಿರುದ್ಧ ರಕ್ಷಣೆಯ (Protection) ನಮ್ಮ ಮೊದಲ ಮಾರ್ಗವಾಗಿದೆ.

Covid Vaccine ಖರೀದಿ ಬಂದ್: ಸರ್ಕಾರದ ಬಳಿಯಿದೆ 6 ತಿಂಗಳಿಗೆ ಸಾಕಾಗುವಷ್ಟು ಲಸಿಕೆ ಸಂಗ್ರಹ

ಅಜಾಗರೂಕತೆಯಿಂದ ಶಾಪಿಂಗ್ ಮಾಡುವುದನ್ನು ತಪ್ಪಿಸಿ: ಹಬ್ಬಗಳು (Festival), ಪೂಜೆ ಮೊದಲಾದ ಸಮಾರಂಭಗಳಿಗಾಗಿ ವಸ್ತುಗಳನ್ನು ಖರೀದಿಸುವುದು ಅನಿವಾರ್ಯವಾಗಿದೆ. ಆದರೆ ಹೀಗೆ ಮನೆಯಿಂದ ಹೊರಗಡೆ ಬಂದು ಎಲ್ಲಾ ವಸ್ತುವನ್ನು ಮುಟ್ಟುವುದರಿಂದ ಸೋಂಕು ಹರಡುವುದು ಸುಲಭ. ಹೀಗಾಗಿ ಹೆಚ್ಚು ಅನಿವಾರ್ಯವಾದರೆ ಮಾತ್ರ ಮನೆಯಿಂದ ಹೊರಗಡೆ ಬನ್ನಿ. ಅನಗತ್ಯವಾಗಿ ಹೊರಬರುವುದನ್ನು ತಪ್ಪಿಸಿ. ಸಾಧ್ಯವಾದರೆ, ಐಟಂಗಳ ಸಂಪೂರ್ಣ ಪಟ್ಟಿಯನ್ನು ಬರೆಯಿರಿ ಮತ್ತು ಆಗಾಗ್ಗೆ ಹೊರಗೆ ಹೋಗುವುದನ್ನು ತಪ್ಪಿಸಲು ಎಲ್ಲವನ್ನೂ ಒಂದೇ ಬಾರಿಗೆ ಖರೀದಿಸಿ. ಮೇಲ್ಮೈಗಳನ್ನು ಸ್ಪರ್ಶಿಸಿದ ನಂತರ ಮತ್ತು ಕಾರ್ಟ್‌ನಲ್ಲಿ ಉತ್ಪನ್ನಗಳನ್ನು ಹಾಕಿದ ನಂತರ ನಿಮ್ಮ ಕೈಗಳನ್ನು ಸ್ವಚ್ಛಗೊಳಿಸಲು ಮರೆಯಬೇಡಿ.

click me!