ಹಾವು ಕಚ್ಚಿದ ತಕ್ಷಣ ಕೈಕಾಲ್ ಆಡಲ್ಲ. ಅನೇಕ ಬಾರಿ ವಿಷಕಾರಿಯಲ್ಲದ ಹಾವು ಕಚ್ಚಿದ್ರೂ ಟೆನ್ಷನ್ ಗೆ ವ್ಯಕ್ತಿ ಪ್ರಾಣ ಹೋಗಿರುತ್ತೆ. ಆ ಕ್ಷಣ ಏನ್ ಮಾಡ್ಬೇಕು ಅನ್ನೋದು ಗೊತ್ತಿದ್ರೆ ಬದುಕೋ ಛಾನ್ಸ್ ಹೆಚ್ಚಿರುತ್ತೆ.
ನಾಗರ ಪಂಚಮಿ (Nagar panchami) ದಿನವೇ ಹಾವು (snake) ಕಚ್ಚಿ ಮಹಿಳೆ ಒಬ್ರು ಸಾವನ್ನಪ್ಪಿದ ಸುದ್ದಿ ಎಲ್ಲರನ್ನೂ ಆಘಾತಗೊಳಿಸಿದೆ. ಕೆಲ ದಿನಗಳ ಹಿಂದೆ ಮನೆಗೆ ಬಂದಿದ್ದ ನಾಗರ ಹಾವು ಹಿಡಿಯೋಕೆ ಹೋಗಿ ಹಾವು ಕಚ್ಚಿಸಿಕೊಂಡು ಹಾವು ತಜ್ಞರೊಬ್ಬರು ಸಾವನ್ನಪ್ಪಿದ್ರು. ಅದ್ರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮಳೆಗಾಲದಲ್ಲಿ ಮನೆ ಮೂಲೆ ಸೇರುವ ಈ ಹಾವುಗಳು ಬಹಳ ಡೇಂಜರ್. ತೋಟ, ಗದ್ದೆ, ಹಳ್ಳಿ ಮನೆಯಲ್ಲಿ ಮಾತ್ರವಲ್ಲ ಹೆಲ್ಮೆಟ್, ಬೂಟ್, ಸ್ಕೂಟಿ ಡಿಕ್ಕಿನಲ್ಲಿ ಸೇರ್ಕೊಂಡು ಪ್ರಾಣ ತೆಗೆದ ಪ್ರಕರಣ ಸಿಕ್ಕಾಪಟ್ಟೆ ಇದೆ.
ಹಾವು ಕಚ್ಚಿದ ತಕ್ಷಣ ಎಂಥ ಧೈರ್ಯವಂತ ವ್ಯಕ್ತಿ ಕೂಡ ಟೆನ್ಷನ್ ಗೆ ಒಳಗಾಗ್ತಾನೆ. ಅದಕ್ಕೆ ಕಾರಣ, ವಿಷಪೂರಿತ ಹಾವಿ (Venomous snake) ನಿಂದ ಕಚ್ಚಿಸಿಕೊಂಡ ವ್ಯಕ್ತಿಗಳು ಬದುಕೋದು ಕಷ್ಟ. ಹಾವು ಎಲ್ಲೆ ಕಚ್ಚಲಿ ತನ್ನ ಎರಡು ಹಲ್ಲಿನ ಗುರುತನ್ನು ಬಿಡುತ್ತೆ. ವಿಷ ರಕ್ತ ಸೇರುತ್ತೆ. ಹಾವು ಕೈಗೆ ಕಚ್ಚಲಿ ಇಲ್ಲ ಕಾಲಿಗೆ ಕಚ್ಚಲಿ, ವಿಷ ಮೊದಲು ಹೃದಯ ಸೇರುತ್ತೆ. ಆ ನಂತ್ರ ಇಡೀ ದೇಹಕ್ಕೆ ಹೋಗುತ್ತೆ. ಹಾವು ಕಚ್ಚಿದ ತಕ್ಷಣ ಇಡೀ ದೇಹಕ್ಕೆ ವಿಷ ಸೇರೋದಿಲ್ಲ. ಇದಕ್ಕೆ ಮೂರು ಗಂಟೆ ಸಮಯ ಬೇಕು. ಅಂದ್ರೆ ಒಬ್ಬ ವ್ಯಕ್ತಿ ಹಾವು ಕಚ್ಚಿ ಮೂರು ಗಂಟೆ ನಂತ್ರ ಸಾಯ್ತಾನೆ. ನಿಮಗೆ ಆತನನ್ನು ಬದುಕಿಸಲು ಮೂರು ಗಂಟೆ ಟೈಂ ಇರುತ್ತೆ.
ಜಡೆ ತಾಗಿಸಿದ್ರೆ ಕೂದಲು ಉದ್ದ ಆಗುತ್ತೆ ಅಂತ ನಂಬುವ ಈ ಹಾವಿನ ವಿಶೇಷತೆ ಏನು?
ಹಾವು ಕಚ್ಚಿದ ತಕ್ಷಣ ಆಸ್ಪತ್ರೆಗೆ ಕರೆದೊಯ್ಯೋದು ಪ್ರಾಥಮಿಕ ಕೆಲಸ. ಅದ್ರ ಜೊತೆ ಕೆಲ ಮನೆ ಮದ್ದನ್ನು ನೀವು ಮಾಡ್ಬಹುದು. ಹಾಗಂತ ಮನೆ ಮದ್ದು ಫೈನಲ್ ಟ್ರೀಟ್ಮೆಂಟ್ ಅಲ್ಲ ಅನ್ನೋದನ್ನು ನೆನಪಿಡಿ. ಹಾವಿನಿಂದ ಕಚ್ಚಿಸಿಕೊಂಡ ವ್ಯಕ್ತಿ ಆಸ್ಪತ್ರೆ ಸೇರುವ ಮುನ್ನ ನಿಮ್ಮ ಕೈಲಾದ ಪ್ರಯತ್ನ ಮಾಡಿ. ಸಾಮಾನ್ಯವಾಗಿ ಭಾರತದಲ್ಲಿ ಹಳ್ಳಿಗರು ಈ ಮದ್ದು ಮಾಡುತ್ತಾರೆ. ಆದರೆ, ಇದರ ವೈಜ್ಞಾನಿಕ ಹಿನ್ನೆಲೆ ಗೊತ್ತಿರೋದು ಕಡಿಮೆ.
ಹಾವು ಕಡಿತಕ್ಕೆ ಪ್ರಥಮ ಚಿಕಿತ್ಸೆ :
ತೊಗರಿ ಕಾಳು : ಹಾವು ಕಡಿತಕ್ಕೆ ಒಳಗಾದ ವ್ಯಕ್ತಿಗೆ ತೊಗರಿ ಕಾಳನ್ನು ನೀಡ್ಬೇಕು. ತೊಗರಿ ಕಾಳನ್ನು ಮಿಕ್ಸಿ ಮಾಡಿ ಕುಡಿಸಿದ್ರೆ ಮತ್ತೂ ಒಳ್ಳೆಯದು. ಇದ್ರಿಂದ ಹಾವು ಕಡಿತದ ಪರಿಣಾಮ ಕಡಿಮೆ ಆಗುತ್ತೆ.
ತುಪ್ಪ (Ghee) : ಹಾವು ಕಡಿತದ ತಕ್ಷಣ ನೀವು ಮಾಡ್ಬೇಕಾದ ಇನ್ನೊಂದು ಕೆಲಸ ಅಂದ್ರೆ ತಪ್ಪು ತಿನ್ನಿಸೋದು. 100 ಗ್ರಾಂ ತುಪ್ಪ ತಿನ್ನಿಸಿ ವಾಂತಿ ಬರುವಂತೆ ಮಾಡ್ಬೇಕು. ಉಪ್ಪದ ನಂತ್ರ ನೀವು ಉಗುರುಬೆಚ್ಚಗಿನ ನೀರನ್ನು ಕುಡಿಸಿ. ಹೀಗೆ ಮಾಡ್ತಿದ್ದಂತೆ ವ್ಯಕ್ತಿ ವಾಂತಿ ಮಾಡ್ಕೊಳ್ತಾನೆ. 15 -16 ಬಾರಿ ವಾಂತಿ ಬಂದ್ರೆ ವ್ಯಕ್ತಿ ಬದುಕೋ ಸಾಧ್ಯತೆ ಹೆಚ್ಚಿರುತ್ತೆ.
ನಾಗರ ಪಂಚಮಿ ಹಬ್ಬದಂದೇ ಹಾವು ಕಚ್ಚಿ ಬಾಣಂತಿ ಸಾವು: 4 ತಿಂಗಳ ಹಸುಗೂಸು ಅನಾಥ!
ಬೆಳ್ಳುಳ್ಳಿ (Garlic) : ಬೆಳ್ಳುಳ್ಳಿ ಪೇಸ್ಟ್ ಮಾಡಿ ಅದನ್ನು ಜೇನುತುಪ್ಪದ ಜೊತೆ ಬೆರೆಸಿ, ಹಾವು ಕಚ್ಚಿದ ಜಾಗಕ್ಕೆ ಹಚ್ಚಿ. ಇದನ್ನು ಹಾವು ಕಚ್ಚಿಸಿಕೊಂಡ ವ್ಯಕ್ತಿಗೆ ಸ್ವಲ್ಪ ನೆಕ್ಕಿಸ್ಬೇಕು.
ತಂಬಾಕು (Tobacco) : ಹಾವು ಕಚ್ಚಿದ ಜಾಗಕ್ಕೆ ನೀವು ತಂಬಾಕನ್ನು ಹಚ್ಚಬಹುದು. ತಂಬಾಕಿನ ಎಸಳನ್ನು ನೀರಿನಲ್ಲಿ ನೆನೆಸಿ ಅದನ್ನು ಹಾವು ಕಚ್ಚಿದ ಜಾಗಕ್ಕೆ ಇಡಿ. ಇದು ವಿಷದ ಪರಿಣಾಮವನ್ನು ಕಡಿಮೆ ಮಾಡುತ್ತೆ.
ತುಳಸಿ ಎಲೆ : ತುಳಸಿ ಎಲೆ ಕೂಡ ಹಾವು ಕಚ್ಚಿಸಿಕೊಂಡವನ ಪ್ರಾಣ ಉಳಿಸುತ್ತೆ. ತುಳಸಿ ಎಲೆಯನ್ನು ತಿನ್ನೋದ್ರಿಂದ ವಿಷ ಕಡಿಮೆ ಆಗುತ್ತೆ.
ಅತ್ಯಂತ ವಿಷಕಾರಿ ಈ ಹಾವು : ವಿಶ್ವದಲ್ಲಿ ಒಟ್ಟೂ 550 ಜಾತಿ ಹಾವಿದೆ. ಅದ್ರಲ್ಲಿ 10 ಜಾತಿ ಹಾವು ಮಾತ್ರ ವಿಷಕಾರಿ. ಇವುಗಳಲ್ಲಿ ಅತ್ಯಂತ ವಿಷಕಾರಿ ಹಾವಿನ ಹೆಸರು ರಸ್ಸೆಲ್ ವೈಪರ್. ಅದರ ನಂತರ ಕರಿತ್, ಅದರ ನಂತರ ನಾಗರಹಾವು ಬರುತ್ತೆ. ಈ ಹಾವು ತುಂಬಾ ಅಪಾಯಕಾರಿ ಮತ್ತು ವಿಷಕಾರಿ.
ಕಚೇರಿಯಲ್ಲಿ ಅಡಗಿದ್ದ ಹಾವನ್ನು ಬರಿಗೈಯಲ್ಲಿ ಹಿಡಿದ ಗಟ್ಟಿಗಿತ್ತಿ ಹೆಣ್ಣು, ಇಲ್ಲಿದೆ ವಿಡಿಯೋ!