ಲೈಂಗಿಕತೆಯಲ್ಲಿ ಆಸಕ್ತಿಯ ಕೊರತೆ ಅಥವಾ ಕಡಿಮೆ ಸೆಕ್ಸ್ ಡ್ರೈವ್ ಹೊಂದಿರುವ ಅನೇಕ ಮಹಿಳೆಯರು ತಮ್ಮ ಜೀವನದಲ್ಲಿ ಸಮಸ್ಯೆ ಎದುರಿಸುತ್ತಾರೆ. ಈ ನಿಟ್ಟಿನಲ್ಲಿ ಪುರುಷರಿಗೆ ವಯಾಗ್ರ ಸಹಾಯ ಮಾಡುತ್ತದೆ. ಹಾಗಿದ್ದರೆ ವಯಾಗ್ರ ಸೇವಿಸಿ ಸ್ತ್ರೀಯರೂ ಲೈಂಗಿಕ ಉದ್ರೇಕ ಹೊಂದಬಹುದಾ? ಅಥವಾ ಅವರಿಗೂ ಬೇರೆ 'ವಯಾಗ್ರ' ಇದೆಯಾ? ಬನ್ನಿ ಇಲ್ಲಿ ತಿಳಿದುಕೊಳ್ಳೋಣ.
ಹೆಚ್ಚಿನ ಮಹಿಳೆಯರು, ತಮ್ಮ ಜೀವನದ ಒಂದು ಹಂತದಲ್ಲಿ, ಕಡಿಮೆ ಲೈಂಗಿಕ ಬಯಕೆಯನ್ನು ಹೊಂದಿರುತ್ತಾರೆ. ಒತ್ತಡ, ಜೀವನಶೈಲಿ, ಗರ್ಭಧಾರಣೆ ಮತ್ತು ಹೆರಿಗೆಯಂತಹ ಅನೇಕ ಕಾರಣಗಳಿಂದ ಇದು ಉಂಟಾಗಬಹುದು. ಲೈಂಗಿಕ ಬಯಕೆಯು ವಯಸ್ಸಾಗುತ್ತ ಹೋದಂತೆ ಕುಸಿಯುತ್ತ ಹೋಗುತ್ತದೆ ಎಂದು ಹಿಂದಿನ ಅನೇಕ ಅಧ್ಯಯನಗಳು ತೋರಿಸಿದೆ. ಕಳಪೆ ಆರೋಗ್ಯ, ವಯಸ್ಸಿಗೆ ಸಂಬಂಧಿಸಿದ ಕಾರಣಗಳು ಅಥವಾ ರೋಗಗಳು, ಔಷಧಿಗಳು ಮತ್ತು ಇತರ ಅಂಶಗಳು ಕಡಿಮೆ ಲೈಂಗಿಕ ಬಯಕೆಯ ಕಾರಣಗಳಾಗಿರಬಹುದು. ಇಂಥ ಕಾರಣಗಳಿಂದ ಪುರುಷರು ನಿಮಿರುವಿಕೆಯ ಸಮಸ್ಯೆ ಅನುಭವಿಸುತ್ತಾರೆ. ಅಂಥ ಸಮಯದಲ್ಲಿ ಅನೇಕ ಪುರುಷರು ವಯಾಗ್ರ (Viagra) ಸೇವಿಸುತ್ತಾರೆ. ಇದು ಹೆಚ್ಚು ಜನಪ್ರಿಯ ಆಗಿರುವ ಮಾತ್ರೆ. ನಿಮಿರುವಿಕೆ ಸರಿಯಾಗಿಲ್ಲದೆ ಅಪಮಾನ ಅನುಭವಿಸುವ ಪುರುಷರಿಗೆ ಇದು ಲೈಂಗಿಕ ಉದ್ರೇಕಕ್ಕೆ ಸಹಾಯ ಮಾಡುತ್ತದೆ. ಹಾಗಾದರೆ ವಯಾಗ್ರದ ಸ್ತ್ರೀ ಆವೃತ್ತಿ ಇದೆಯೇ? ಇದೆ!
ಕಡಿಮೆ ಸೆಕ್ಸ್ ಡ್ರೈವ್ ಎಂದರೇನು?
undefined
ಸ್ತ್ರೀಯರಲ್ಲಿ ಉಂಟಾಗುವ ಲೈಂಗಿಕ ಅನಾಸಕ್ತಿ, ಉದ್ರೇಕದ ಕೊರತೆಗಳು ವೈದ್ಯಕೀಯ ಅಸ್ವಸ್ಥತೆಗಳಲ್ಲಿ ಒಂದು. ಈ ಸಮಸ್ಯೆಯಿಂದ ಅನೇಕ ಮಹಿಳೆಯರು ಲೈಂಗಿಕ ಆಸಕ್ತಿಯನ್ನು (Sexual desire) ಕಳೆದುಕೊಳ್ಳುತ್ತಾರೆ. ಈ ಅಸ್ವಸ್ಥತೆಯ ಲಕ್ಷಣಗಳು ಇವು- ಆಲೋಚನೆಗಳು ಮತ್ತು ಕಲ್ಪನೆಗಳಿಗೆ ಇಂದ್ರಿಯಗಳು ಸಹಕರಿಸದಿರುವುದು, ಪುರುಷನ ಲೈಂಗಿಕ ಚಟುವಟಿಕೆಗೆ ಸ್ಪಂದನ ತೋರದಿರುವುದು, ಲೈಂಗಿಕ ಚಟುವಟಿಕೆಯ ಸಮಯದಲ್ಲಿ ಲೈಂಗಿಕ ಉತ್ಸಾಹ ಅಥವಾ ಆನಂದದ ಕೊರತೆ. ಕನಿಷ್ಠ ಆರು ತಿಂಗಳ ಕಾಲ ಇದನ್ನು ಅನುಭವಿಸಿದ್ದರೆ ಸಮಸ್ಯೆ ಇದೆ ಎಂದರ್ಥ. ಈ ರೋಗಲಕ್ಷಣಗಳು ಮಹಿಳೆಯರಲ್ಲಿ ಸಾಕಷ್ಟು ತೊಂದರೆಗಳನ್ನು ಉಂಟುಮಾಡುತ್ತವೆ.
ವಯಾಗ್ರ ಮಹಿಳೆಯರಿಗೆ ಸಹಾಯ ಮಾಡುತ್ತದೆಯೇ?
ವಯಾಗ್ರ ಎಂಬುದು ಪುರುಷರ ಲೈಂಗಿಕ ಕಾರ್ಯಕ್ಷಮತೆ ಹೆಚ್ಚಿಸುವ ಔಷಧ. ಆದರೂ ಇದು ಮಹಿಳೆಯರಲ್ಲಿ ಕಾರ್ಯನಿರ್ವಹಿಸುತ್ತದಾ ಎಂಬುದು ಉತ್ತರವಿಲ್ಲದ ಪ್ರಶ್ನೆಯಾಗಿ ಉಳಿದಿದೆ. ಪುರುಷರಲ್ಲಿ ವಯಾಗ್ರ ಶಿಶ್ನದ (Penis) ರಕ್ತನಾಳಗಳನ್ನು ಹಿಗ್ಗಿಸುವ ಮತ್ತು ಶಿಶ್ನಕ್ಕೆ ರಕ್ತದ ಹರಿವನ್ನು ಹೆಚ್ಚಿಸುವ ಮೂಲಕ ನಿಮಿರುವಿಕೆಯನ್ನು ಉಂಟಾಗಿಸುತ್ತದೆ ಮತ್ತು ಒಂದಷ್ಟು ಕಾಲ ನಿರ್ವಹಿಸುತ್ತದೆ. ಆದರೆ ಇದರ ಉದ್ದೇಶ ಪುರುಷರ ಶಿಶ್ನದ ಕಾರ್ಯಕ್ಷಮತೆ ಸುಧಾರಿಸುವ ಉದ್ದೇಶವನ್ನು ಹೊಂದಿದೆ. ತಜ್ಞರ ಪ್ರಕಾರ ಮಹಿಳೆಯರಲ್ಲಿ ಇದು ಪ್ರಚೋದನೆಯನ್ನು ಉಂಟುಮಾಡುವುದಿಲ್ಲ.
ಆದ್ದರಿಂದ, ಲೈಂಗಿಕ ಸಮಸ್ಯೆ ಹೊಂದಿರುವ ಮಹಿಳೆಯರಿಗೆ ವಯಾಗ್ರ ಎಷ್ಟು ಪ್ರಯೋಜನಕಾರಿ ಎಂದು ಹೇಳಲು ಹೆಚ್ಚಿನ ಸಂಶೋಧನೆಗಳಾಗಿಲ್ಲ. ಇದು ಜನನಾಂಗದ ಪ್ರದೇಶಕ್ಕೆ ರಕ್ತದ ಹರಿವನ್ನು ಸುಧಾರಿಸುತ್ತದೆ. ಸೂಕ್ಷ್ಮತೆ, ಪ್ರಚೋದನೆ ಮತ್ತು ಪರಾಕಾಷ್ಠೆಯನ್ನು ತಲುಪುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದು ಯೋನಿ (Vagina) ಪ್ರದೇಶದಲ್ಲಿಯೂ ಹೀಗೇ ಕೆಲಸ ಮಾಡುತ್ತದೆಯೇ ಎಂಬುದು ಇನ್ನೂ ತಿಳಿದಿಲ್ಲ. ಇದು ಮಹಿಳೆಯರಲ್ಲಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ಸಂಶೋಧನೆ ಅಗತ್ಯವಿದೆ.
ಮಹಿಳೆಯರ ವಯಾಗ್ರ
ಫ್ಲಿಬನ್ಸೆರಿನ್ (FLIBANSERIN) ಔಷಧವನ್ನು ಸಾಮಾನ್ಯವಾಗಿ 'ಸ್ತ್ರೀ ವಯಾಗ್ರ' (female viagra) ಅಥವಾ 'ಗುಲಾಬಿ ಮಾತ್ರೆ' (pink pill) ಎಂದು ಕರೆಯಲಾಗುತ್ತದೆ. ಇದನ್ನು ಮಹಿಳೆಯರಲ್ಲಿ ಕಡಿಮೆ ಕಾಮಾಸಕ್ತಿ ಚಿಕಿತ್ಸೆಗಾಗಿ ತೆಗೆದುಕೊಳ್ಳಲಾಗುತ್ತದೆ. ಈ ಔಷಧವನ್ನು 2015 ರಲ್ಲಿ ಆಹಾರ ಮತ್ತು ಔಷಧ ಆಡಳಿತ (ಎಫ್ಡಿಎ) ಅನುಮೋದಿಸಿದೆ. ವಯಾಗ್ರವನ್ನು ಋತುಬಂಧಕ್ಕೊಳಗಾದ ಮಹಿಳೆಯರಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ನಿರ್ದಿಷ್ಟವಾಗಿ ಸ್ತ್ರೀಯರ ಲೈಂಗಿಕ ಆಸಕ್ತಿ ನಷ್ಟ/ಉದ್ರೇಕ ಕೊರತೆಗೆ (ಎಫ್ಎಸ್ಐಎಡಿ) ಕೊಡಲಾಗುತ್ತದೆ. ಒತ್ತಡ ಅಥವಾ ವಯಸ್ಸಿಗೆ ಸಂಬಂಧಿಸಿದ ಅಂಶಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಈ ಔಷಧಿ ಕೊಡುವುದಿಲ್ಲ.
ನ್ಯಾಯ, ಧೈರ್ಯದಲ್ಲಿ ಮಾತ್ರವಲ್ಲ, ಸೆಕ್ಸ್ ವಿಷಯದಲ್ಲೂ ಮಹಿಳೆಯರೇ ಮುಂದು ಅಂತಾನೆ ಚಾಣಕ್ಯ!
ಸ್ತ್ರೀಯರಲ್ಲಿ ಇದು ಸಾಧಾರಣ ಸುಧಾರಣೆ ನೀಡುತ್ತದೆ. ಅದೇ ಸಮಯದಲ್ಲಿ ಇದು ಕೆಲವು ಅಡ್ಡ ಪರಿಣಾಮಗಳನ್ನೂ ಉಂಟುಮಾಡುತ್ತದೆ. ಅವುಗಳೆಂದರೆ: ತಲೆತಿರುಗುವಿಕೆ, ನಿದ್ರೆ, ವಾಕರಿಕೆ, ದೈಹಿಕ ಬಳಲಿಕೆ.
ಸರಿಯಾದ ವಯಾಗ್ರ ಡೋಸೇಜ್ ಯಾವುದು?
ಮಹಿಳೆಯರಲ್ಲಿ ವಯಾಗ್ರದ ಪರಿಣಾಮಕಾರಿತ್ವವನ್ನು ನಿರ್ಧರಿಸಲು ಹಲವಾರು ಅಧ್ಯಯನಗಳನ್ನು ನಡೆಸಲಾಗಿದೆ. ಫಲಿತಾಂಶಗಳು ಮಿಶ್ರವಾಗಿವೆ. ಆದ್ದರಿಂದ ಮಹಿಳೆಯರಿಗೆ ಯಾವುದೇ ಸ್ಥಿರ ಡೋಸೇಜ್ ಅನ್ನು ಶಿಫಾರಸು ಮಾಡುವುದಿಲ್ಲ. ಲೈಂಗಿಕ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರು ವೈದ್ಯರನ್ನು ಸಂಪರ್ಕಿಸುವುದು ಮುಖ್ಯ. ನಿಮ್ಮ ವೈಯಕ್ತಿಕ ಸ್ಥಿತಿಗತಿ ಮತ್ತು ಆರೋಗ್ಯ ಇತಿಹಾಸದ ಆಧಾರದ ಮೇಲೆ ಉತ್ತಮ ಚಿಕಿತ್ಸೆ ಮತ್ತು ಡೋಸೇಜ್ ಅನ್ನು ನಿರ್ಧರಿಸಲು ಅವರು ಸಹಾಯ ಮಾಡಬಹುದು.
ಇತರ ಅಂಶಗಳು
ಕಡಿಮೆ ಸೆಕ್ಸ್ ಡ್ರೈವ್ ಅಥವಾ ಲೈಂಗಿಕ ಉದ್ರೇಕದ ಕೊರತೆ ಅನೇಕ ಮಹಿಳೆಯರಲ್ಲಿ ಉದ್ಭವಿಸುತ್ತವೆ. ಇದರ ಹಿಂದೆ ಕೆಲವು ಸಮಸ್ಯೆಗಳಿರಬಹುದು. ಹಲವಾರು ಅಂಶಗಳು ಈ ಸ್ಥಿತಿಗೆ ಕಾರಣವಾಗಿರಬಹುದು. ವಿಶೇಷವಾಗಿ ನೀವು ಮಧುಮೇಹ, ಅಧಿಕ ರಕ್ತದೊತ್ತಡ ಅಥವಾ ಹೃದ್ರೋಗದಂತಹ ದೀರ್ಘಕಾಲದ ಕಾಯಿಲೆಗಳನ್ನು ಹೊಂದಿದ್ದರೆ, ಮೊದಲು ವೈದ್ಯರನ್ನು ಭೇಟಿ ಮಾಡುವುದು ಉತ್ತಮ. ಅವರು ಸಂಪೂರ್ಣ ಡಯಾಗ್ನೋಸಿಸ್ ಮಾಡುತ್ತಾರೆ. ವೈದ್ಯರನ್ನು ಸಂಪರ್ಕಿಸದೇ ವಯಾಗ್ರ ತೆಗೆದುಕೊಳ್ಳುವುದು ಅಪಾಯಕಾರಿ. ವೈದ್ಯರೊಂದಿಗೆ ಚರ್ಚಿಸುವಾಗ ಪ್ರಾಮಾಣಿಕವಾಗಿರಿ. ವೈದ್ಯರು ಪರೀಕ್ಷೆಯನ್ನು ನಡೆಸಬಹುದು ಮತ್ತು ನಿಮ್ಮ ವೈದ್ಯಕೀಯ ಹಿಸ್ಟರಿ ಬಗ್ಗೆ ಕೇಳಬಹುದು. ಇತರ ಆರೋಗ್ಯ-ಸಂಬಂಧಿತ ಅಂಶಗಳಿಗಾಗಿ ಹಾರ್ಮೋನ್ ಮಟ್ಟವನ್ನು ಪರೀಕ್ಷಿಸಲು ರಕ್ತ ಪರೀಕ್ಷೆ ಮಾಡಬಹುದು.
ಮಹಿಳೆಯ ಯಾವ ಅಂಗ ರಾತ್ರಿ ದೊಡ್ಡದಾಗುತ್ತೆ?