ಹಾವು ನೋಡಿದರೆ ಮಾರುದ್ದ ದೂರ ಹೋಗುವುದು ಸಾಮಾನ್ಯ. ಇನ್ನು ಹಾವನ್ನು ರಕ್ಷಿಸಿ ಅರಣ್ಯ ಬಿಡುವವರೂ ಕೂಡ ಸುರಕ್ಷತಾ ಕ್ರಮಗಳನ್ನು ಪಾಲಿಸಿ ದೂರದಿಂದ ಹಾವನ್ನು ಹಿಡಿಯುತ್ತಾರೆ. ಆದರೆ ಇಲ್ಲೊಬ್ಬ ಹೆಣ್ಣುಮಗಳು, ಪ್ಲಗ್ ಹಾಕಿದ್ದ ಲ್ಯಾಪ್‌ಟಾಪ್‌ ಚಾರ್ಜರ್ ಎಳೆಯುವಂತೆ ಹಾವನ್ನು ಬರಿಗೈಯಲ್ಲಿ ಹಿಡಿದು ರಕ್ಷಿಸಿದ ವಿಡಿಯೋ ಹಲವು ಅಚ್ಚರಿಗೆ ಕಾರಣವಾಗಿದೆ.

ಬಿಲಾಸಪುರ(ಜು.29) ಕಚೇರಿಯ ಕಂಪ್ಯೂಟರ್ ಕೆಳಗೆ ಹಾವೊಂದು ಸುರಳಿ ಸುತ್ತಿ ಕುಳಿತಿದೆ. ಕೆಲಸಕ್ಕೆ ಬಂದ ನೌಕರರು ಹಾವಿನ ಬಾಲ ನೋಡಿ ಬೆಚ್ಚಿ ಬಿದ್ದಿದ್ದಾರೆ. ನೌಕರರ ಭಯ, ಆತಂಕಕ್ಕೆ ಇತ್ತ ಹಾವು ಕೂಡ ಭಯಭೀತಗೊಂಡಿದೆ. ಹೀಗಾಗಿ ಕಂಪ್ಯೂಟರ್ ಕೆಳಗೆ ಅವಿತುಕುಳಿತುಕೊಳ್ಳುವ ಪ್ರಯತ್ನ ಮಾಡಿದೆ. ಮಾಹಿತಿ ತಿಳಿದು ಕಚೇರಿಗೆ ಆಗಮಿಸಿದ ಉರಗ ತಜ್ಞೆ ಅಜಿತಾ ಪಾಂಡೆ, ಯಾವುದೇ ಆತಂಕ, ಭಯ ಇಲ್ಲದೆ ಬರಿಗೈಯಲ್ಲಿ ಹಾವನ್ನು ಹಿಡಿದಿದ್ದಾರೆ. ಈ ಮಹಿಳೆಯ ಧೈರ್ಯ, ಆತ್ಮವಿಶ್ವಾಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇದು ಚತ್ತೀಸಘಡದ ಬಿಲಾಸಪುರದಲ್ಲಿ ನಡೆದ ಘಟನೆ. ಮಳೆಗಾಲದಲ್ಲಿ ಹಾವು ಕಾಣಿಸಿಕೊಳ್ಳುವುದು ಸಾಮಾನ್ಯ. ಹೀಗೆ ಕಚೇರಿ ಒಳಗೆ ಹಾವು ಪ್ರತ್ಯಕ್ಷವಾಗಿದೆ. ಬೆಳಗ್ಗೆ ಕಚೇರಿಗೆ ಬಂದ ಉದ್ಯೋಗಿಗಳು ಭಯಗೊಂಡಿದ್ದಾರೆ. ಹಾವು ಅವಿತುಕೊಳ್ಳುವ ಪ್ರಯತ್ನ ಮಾಡಿದೆ.ಉದ್ಯೋಗಿಗಳ ಚೀರಾಟ, ಆತಂಕ ಹೆಚ್ಚಾಗುತ್ತಿದ್ದಂತೆ ಹಾವು ಕೂಡ ಭಯಭೀತಗೊಂಡು ಪದೇ ಪದೇ ಒಂದೊಂದು ಕಡೆ ತೆರಳಿದೆ. ಇತ್ತ ಕೆಲ ನೌಕರರು ಹಾವನ್ನು ದೊಡ್ಡ ಕೋಲಿನಿಂದ ಹೊರಗೆ ಕಳಿಸುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ ಹಾವು ಒಮ್ಮೆಲೆ ಹಾರಿದೆ. ಹೀಗಾಗಿ ಮತ್ತೆ ಪ್ರಯತ್ನ ಮುಂದುವರಿಸಿಲ್ಲ.

ಶ್ರೀಶೈಲಂನಲ್ಲಿ ಶಿವಲಿಂಗಕ್ಕೆ ನಾಗರ ಹಾವೇ ಕಾವಲು,ಮೊಬೈಲ್‌ನಲ್ಲಿ ಸೆರೆಯಾದ ಸಾಕ್ಷಾತ್ ಶಿವನ ದರ್ಶನ!

ಬೇರೆ ದಾರಿ ಕಾಣದ ನೌಕರರು, ಉರಗ ತಜ್ಞೆ ಅಜಿತಾ ಪಾಂಡೆಗೆ ಕರೆ ಮಾಡಿದ್ದಾರೆ. ಕೆಲವೇ ಹೊತ್ತಲ್ಲಿ ಸ್ಥಳಕ್ಕೆ ಆಗಮಿಸಿದ ಅಜಿತಾ ಪಾಂಡೆ ಕಚೇರಿ ಒಳಗೆ ಪ್ರವೇಶಿಸಿದ್ದಾರೆ. ಈ ವೇಳೆ ಹಾವು ಕಂಪ್ಯೂಟರ್ ಕೆಳಗಿನ ಟೇಬಲ್ ಬದಿಯಲ್ಲಿ ಅಡಗಿ ಕುಳಿತಿದೆ. ಹಾವು ಏಕಾಏಕಿ ಹಾರಿ ದಾಳಿ ಮಾಡುವ ಸಾಧ್ಯತೆ ಇದೆ. ಹೀಗಾಗಿ ಅತೀವ ಎಚ್ಚರಿಕೆ ವಹಿಸೇಬೇಕಾಗಿ ನೌಕರರು ಅಜಿತಾ ಪಾಂಡೆಗೆ ಸೂಚಿಸಿದ್ದಾರೆ.

ನೌಕರರಿಂದ ಮಾಹಿತಿ ಪಡೆದು ಕಚೇರಿ ಒಳ ನುಗ್ಗಿದ ಅಜಿತಾ ಪಾಂಡೆಗೆ ಹಾವು ಅಡಗಿ ಕುಳಿತಿರುವ ಸ್ಥಳ ತೋರಿಸಿದ್ದಾರೆ. ಕಂಪ್ಯೂಟರ್, ಪಕ್ಕದಲ್ಲಿ ಫೈಲ್ಸ್, ಇದರ ಹಿಂಭಾಗದಲ್ಲಿ ಹಾವು ಅವಿತುಕೊಂಡಿದೆ. ಅಜಿತಾ ಪಾಂಡೆ ಹತ್ತಿರಕ್ಕೆ ಆಗಮಿಸಿ ದಿಟ್ಟಿಸಿ ನೋಡಿದ್ದಾರೆ. ಈ ವೇಳೆ ನಕೌರರು ಸುರಕ್ಷಿತವಾಗಿರಿ ಎಂದು ಎಚ್ಚರಿಸಿದ್ದಾರೆ.

Scroll to load tweet…

ಹಾವು ನೋಡಿದ ಕೂಡಲೇ , ಅರೇ ಈ ಹಾವಾ ಎಂದು ಬೈರಿ ಗೈಯಲ್ಲಿ ಹಾವಿನ ಬಾಲ ಹಿಡಿದು ಹೊರಗೆ ಎಳೆದಿದ್ದಾರೆ. ಬಳಿಕ ಹಾವನ್ನು ಮತ್ತೊಂದು ಕೈಯಲ್ಲಿ ಹಿಡಿದು ಹೊರತೆಗಿದ್ದಾರೆ. ಅಜಿತಾ ಪಾಂಡೆ ಹಾವಿನ ತಲೆ ಹಿಡಿದಿರಲಿಲ್ಲ. ಹೀಗಾಗಿ ನೌಕರರ ಆತಂಕ ಮತ್ತಷ್ಟು ಹೆಚ್ಚಾಗಿದೆ. ಹಾವು ಕಚ್ಚುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ. ಈ ಹಾವು ಕಚ್ಚುವುದಿಲ್ಲ. ಅದನ್ನು ಭಯಪಡಿಸಬೇಡಿ, ಶಾಂತವಾಗಿರಿ ಎಂದಿದ್ದಾರೆ.

ಭೂಮಿ ಆಗೆಯುವಾಗ ಪವಾಡ, ತ್ರಿಶೂಲ, ಉಂಗುರ ಸೇರಿ ಚಿನ್ನದ ನಿಧಿಗೆ ಕಾವಲಿತ್ತು ನಾಗರ ಹಾವು!

ಬರಿ ಗೈಯಲ್ಲಿ ಹಾವನ್ನು ಹಿಡಿದು ಹೊರತಂದ ಅಜಿತಾ ಪಾಂಡೆ ಧೈರ್ಯ, ಸಾಹಸಕ್ಕೆ ಎಲ್ಲರೂ ಚಪ್ಪಾಳೆ ಮೂಲಕ ಅಭಿನಂದಿಸಿದ್ದಾರೆ. ಈ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ. ಇದು ಎಲ್ಲರಿಗೂ ಸಾಧ್ಯವಿಲ್ಲ. ಇದಕ್ಕೆ ವಿಶೇಷ ತರಬೇತಿ, ದೈರ್ಯ, ಆತ್ಮವಿಶ್ವಾಸದ ಅಗತ್ಯವಿದೆ. ಜೊತೆಗೆ ಹಾವನ್ನು ಭಯಭೀತಗೊಳಿಸದೇ ಹಿಡಿಯುವ ಕಲೆ ಈ ಮಹಿಳೆಗೆ ತಿಳಿದಿದೆ. ಈ ಸಾಹಸವನ್ನು ಇತರರು ಪ್ರಯತ್ನಿಸಬೇಡಿ ಎಂದು ಹಲವರು ಹೇಳಿದ್ದಾರೆ.