
ಲ್ಯಾನ್ಸೆಟ್ ಪತ್ರಿಕೆಯಲ್ಲಿ ಪ್ರಕಟವಾದ ದೇಶವ್ಯಾಪಿ ಅಧ್ಯಯನದ ಪ್ರಕಾರ, ಭಾರತದಲ್ಲಿ ಸುಮಾರು ಶೇಕಡಾ 40ರಷ್ಟು ವಯಸ್ಕರು ಅಂದ್ರೆ 10 ಜನರಲ್ಲಿ 4 ಜನರಿಗೆ MASLD ಎಂಬ ಲಿವರ್ ಸಮಸ್ಯೆ ಕಾಡ್ತಿದೆ. ಇದನ್ನು ಸಾಮಾನ್ಯವಾಗಿ ಆಲ್ಕೋಹಾಲ್ ಇಲ್ಲದ ಕೊಬ್ಬಿನ ಪಿತ್ತಜನಕಾಂಗ ಖಾಯಿಲೆ (Non-Alcoholic Fatty Liver Disease) ಎಂದೂ ಕರೆಯಲಾಗುತ್ತದೆ. ಅಂದರೆ ಮದ್ಯಪಾನ ಮಾಡದೇ ಇದ್ದರೂ ಲಿವರ್ನಲ್ಲಿ ಕೊಬ್ಬು ಕಾಣಿಸಿಕೊಳ್ಳುತ್ತದೆ.
ಈ ಅಧ್ಯಯನದಲ್ಲಿ ಭಾಗವಹಿಸಿದವರಲ್ಲಿ ಸುಮಾರು ಶೇಕಡಾ 4ರಷ್ಟು ಜನರಲ್ಲಿ ಈಗಾಗಲೇ ಲಿವರ್ ಫೈಬ್ರೋಸಿಸ್ ಕಂಡುಬಂದಿದೆ. ವಿಶೇಷವಾಗಿ ಮಧುಮೇಹ, ರಕ್ತದೊತ್ತಡ, ಅತಿ ಹೆಚ್ಚು ಕೊಲೆಸ್ಟ್ರಾಲ್ ಮತ್ತು ಅತಿಯಾದ ತೂಕ ಹೊಂದಿರುವ ಹಿರಿಯರಲ್ಲಿ ಈ ಅಪಾಯ ಹೆಚ್ಚು. ಫೈಬ್ರೋಸಿಸ್ ಮುಂದುವರಿದರೆ ಅದು ಲಿವರ್ ಸಂಪೂರ್ಣ ಹಾನಿಗೊಳಿಸುವ ಸಿರೋಸಿಸ್ ಗೆ ದಾರಿ ಮಾಡಿಕೊಡಬಹುದು.
ಈ ಸಂಶೋಧನೆ 27 ಭಾರತೀಯ ನಗರಗಳಲ್ಲಿ, 37 CSIR ಪ್ರಯೋಗಾಲಯಗಳ ಮೂಲಕ 7,764 ವಯಸ್ಕರ ಮೇಲೆ ನಡೆಸಲಾಯಿತು. ಅಧ್ಯಯನದಲ್ಲಿ ಕಂಡುಬಂದ ಪ್ರಮುಖ ಕಾರಣ ಅಂದ್ರೆ ಅತಿಯಾದ ತೂಕ, ಮೂರು ಅಥವಾ ಹೆಚ್ಚು ಹೃದಯ ಸಂಬಂಧಿ ಅಪಾಯಕಾರಿ ಅಂಶಗಳು. ಮೆಟ್ರೋ ನಗರಗಳಾದ ಬೆಂಗಳೂರು ಸೇರಿದಂತೆ ಹಲವೆಡೆ MASLD ಹರಡುವಿಕೆ ಶೇಕಡಾ 37 ರಿಂದ ಶೇಕಡಾ 42ರ ನಡುವೆ ಕಂಡುಬಂದಿದೆ.
ಜೀವವನ್ನೇ ಕಸಿದುಕೊಂಡ ತಲೆಯಲ್ಲಿನ ಹೇನು; ರಕ್ತ ವಾಂತಿ ಮಾಡಿ ದಾರುಣ
ವೈದ್ಯರ ಪ್ರಕಾರ, ಆಸ್ಪತ್ರೆಗಳಲ್ಲಿ ಶೇಕಡಾ 50 ರಿಂದ ಶೇಕಡಾ 60ರಷ್ಟು ಹೊರರೋಗಿಗಳಿಗೆ MASLD ಪತ್ತೆಯಾಗುತ್ತಿದೆ. ಬೆಂಗಳೂರಿನ 700 ಐಟಿ ವೃತ್ತಿಪರರ ಮೇಲೆ ನಡೆಸಿದ ಅಧ್ಯಯನದಲ್ಲಿ ಸುಮಾರು ಶೇಕಡಾ 71 ಜನರಿಗೆ ಫ್ಯಾಟಿ ಲಿವರ್ ಪತ್ತೆಯಾಗಿದೆ ಎಂದು ಡಾ. ನವೀನ್ ಗಂಜೂ ಹೇಳಿದ್ದಾರೆ.
ಇದಕ್ಕೆ ಮುಖ್ಯ ಕಾರಣ
ಅನಿಯಮಿತ ಆಹಾರಪದ್ಧತಿ, ನೈಟ್ ಶಿಫ್ಟ್ ಕೆಲಸ, ವ್ಯಾಯಾಮದ ಕೊರತೆ, ಕಳಪೆ ಜೀವನಶೈಲಿ. ಮಧುಮೇಹ ಮತ್ತು ಅಧಿಕ ತೂಕ ಹೊಂದಿರುವ ಜನರಲ್ಲಿ ಈ ಸ್ಥಿತಿ ಹೆಚ್ಚು ಸಾಮಾನ್ಯವಾಗಿದ್ದರೂ, ಕುಟುಂಬ ಮಧುಮೇಹದ ಇತಿಹಾಸ ಹೊಂದಿರುವ ತೆಳ್ಳಗಿನ ವ್ಯಕ್ತಿಗಳು ಸಹ ಅಪಾಯದಲ್ಲಿದ್ದಾರೆ.
ಯಾವಾಗ ಪತ್ತೆಯಾಗುತ್ತದೆ?
ವೈದ್ಯರ ಪ್ರಕಾರ ಬಹುತೇಕ ಪ್ರಕರಣಗಳು ರೂಟೀನ್ ಹೆಲ್ತ್ ಚೆಕ್ಅಪ್ ಪರೀಕ್ಷೆಯಲ್ಲಿ ಪತ್ತೆಯಾಗುತ್ತವೆ. ಅಲ್ಟ್ರಾಸೌಂಡ್ನಲ್ಲಿ ಲಿವರ್ನಲ್ಲಿ ಕೊಬ್ಬಿನ ಬದಲಾವಣೆ ಕಂಡುಬಂದರೆ, ಅಗತ್ಯವಿದ್ದರೆ ಫೈಬ್ರೋಸಿಸ್ ಪರೀಕ್ಷೆ ಮಾಡಲಾಗುತ್ತದೆ. 45 ವರ್ಷಗಳ ನಂತರ ಫೈಬ್ರೋಸಿಸ್ ಅಪಾಯ ಹೆಚ್ಚಾಗುತ್ತದೆ. ಮದ್ಯಪಾನ ಇದನ್ನು ಮತ್ತಷ್ಟು ಗಂಭೀರಗೊಳಿಸಬಹುದು.
India Cancer Cases: ಭಾರತದಲ್ಲಿ ವರ್ಷದಲ್ಲಿ 14.1 ಲಕ್ಷ ಕ್ಯಾನ್ಸರ್ ಪ್ರಕರಣ ಪತ್ತೆ!
ಯುವಕರಲ್ಲೂ ಹೆಚ್ಚಳ
21 ವರ್ಷದ ಸುಮಾರು 100 ಕೆಜಿ ತೂಕದ ಯುವಕನಲ್ಲಿ ಪೈಲಟ್ ಫಿಟ್ನೆಸ್ ಪರೀಕ್ಷೆಯ ವೇಳೆ ಫ್ಯಾಟಿ ಲಿವರ್ ಪತ್ತೆಯಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಹೆಚ್ಚು ಕಾಲ ಒಂದೇ ಕಡೆ ಕುಳಿತುಕೊಳ್ಳುವುದು, ಫಾಸ್ಟ್ ಫುಡ್ ಸೇವನೆ, ಸಕ್ಕರೆ ಪಾನೀಯಗಳ ಸೇವನೆ ಪರಿಸ್ಥಿತಿಯನ್ನು ಇನ್ನಷ್ಟು ಅಪಾಯಕ್ಕೆ ತಳ್ತಿದೆ. ಫ್ಯಾಟಿ ಲಿವರ್ ಪ್ರಾರಂಭದ ಹಂತದಲ್ಲಿ ಯಾವುದೇ ಲಕ್ಷಣ ಕಾಣಿಸೋದಿಲ್ಲ. ಸುಮಾರು ಶೇಕಡಾ 90 ರಿಂದ 95 ರಷ್ಟು ರೋಗಿಗಳಿಗೆ ಲಕ್ಷಣ ಕಾಣುವುದೇ ಇಲ್ಲ. ಆದರೆ ಸುಮಾರು ಶೇಕಡಾ 10 ರಷ್ಟು ಜನರಲ್ಲಿ ಮೌನವಾಗಿ ಫೈಬ್ರೋಸಿಸ್ ಮತ್ತು ಸಿರೋಸಿಸ್ಗೆ ಮುಂದುವರೆಯುತ್ತದೆ.
MASLD ತಡೆಯೋದು ಹೇಗೆ?
ಮದ್ಯಪಾನ ಮಾಡದ ಜನರಿಗೆ ಇದು ಕಾಡುತ್ತದೆ. ಅತಿಯಾದ ತೂಕ, ಮಧುಮೇಹ, ರಕ್ತದೊತ್ತಡ ಅಥವಾ ಅಸಮಾನ ಕೊಲೆಸ್ಟ್ರಾಲ್ ಕಾರಣದಿಂದ ಲಿವರ್ನಲ್ಲಿ ಕೊಬ್ಬು ಜಮೆಯಾಗುವ ಸ್ಥಿತಿಯನ್ನು ಎಂಎಎಸ್ಎಲ್ಡಿ ಎಂದು ಕರೆಯುತ್ತಾರೆ. ಸಕ್ಕರೆಯ ಅತಿಯಾದ ಸೇವನೆ ತಪ್ಪಿಸಿ, ಆಹಾರದಲ್ಲಿ ಪ್ರೋಟೀನ್ ಮತ್ತು ಫೈಬರ್ ಹೆಚ್ಚಾಗಿ ತೆಗೆದುಕೊಳ್ಳಿ, ನಿಯಮಿತ ವ್ಯಾಯಾಮ ಮಾಡಿ, ಹೆಚ್ಚು ಸಮಯ ಕುಳಿತುಕೊಳ್ಬೇಡಿ, ಆರೋಗ್ಯಕರ ತೂಕ ಕಾಪಾಡಿ, ಮಧುಮೇಹ, ರಕ್ತದೊತ್ತಡ, ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿ ಇಡಿ, ಫ್ಯಾಟಿ ಲಿವರ್ ಇದ್ದರೆ ಮದ್ಯಪಾನವನ್ನು ಸಂಪೂರ್ಣ ತಪ್ಪಿಸಿ, ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ. ಇದರಿಂದ ಎಂಎಎಸ್ಎಲ್ಡಿಯಿಂದ ಬಚಾವ್ ಆಗ್ಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.