Health Tips: ಬಾಳೆ ಹಣ್ಣು ಮಾತ್ರವಲ್ಲ ಬಾಳೆ ಎಲೆ ನೀರೂ ಆರೋಗ್ಯಕ್ಕೆ ಬೇಕು

Published : Apr 01, 2023, 01:12 PM IST
Health Tips: ಬಾಳೆ ಹಣ್ಣು ಮಾತ್ರವಲ್ಲ ಬಾಳೆ ಎಲೆ ನೀರೂ ಆರೋಗ್ಯಕ್ಕೆ ಬೇಕು

ಸಾರಾಂಶ

ಬಾಳೆ ಹಣ್ಣು ನಮಗೆ, ಬಾಳೆ ಎಲೆ ಪ್ರಾಣಿಗಳಿಗೆ ಅಂತಾ ನಾವಂದುಕೊಂಡಿದ್ದೇವೆ. ಆದ್ರೆ ಬಾಳೆ ಎಲೆಯಲ್ಲೂ ಸಾಕಷ್ಟು ಪೌಷ್ಠಿಕಾಂಶವಿದೆ. ಬಾಳೆ ಎಲೆಯ ಸೇವನೆ ಮಾಡಿದ್ರೆ ನೀವು ಅನೇಕ ರೋಗದಿಂದ ದೂರವಿರಬಹುದು.   

ಬಾಳೆಹಣ್ಣು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಹಣ್ಣಗಳಲ್ಲಿ ಒಂದು. ಪ್ರತಿ ದಿನ ಒಂದು ಬಾಳೆ ಹಣ್ಣು ತಿನ್ನೋದ್ರಿಂದ ಅನೇಕ ಪ್ರಯೋಜನಗಳನ್ನು ನಾವು ಪಡೆಯಬಹುದಾಗಿದೆ. ವರ್ಷವಿಡಿ ಸಿಗುವ ಹಣ್ಣುಗಳಲ್ಲಿ ಬಾಳೆ ಹಣ್ಣು ಸೇರಿದೆ. ಬರೀ ಬಾಳೆ ಹಣ್ಣು ಮಾತ್ರವಲ್ಲ ಅದ್ರ ಖಾಯಿ, ದಿಂಡು ಹಾಗೂ ಎಲೆ ಕೂಡ ಸಾಕಷ್ಟು ಆರೋಗ್ಯ ಗುಣವನ್ನು ಹೊಂದಿದೆ.  

ಬಾಳೆ (Banana) ಎಲೆ (Leave)ಯು ದೇಹಕ್ಕೆ ಅಗತ್ಯವಾದ ಪೌಷ್ಟಿಕಾಂಶ ಮತ್ತು ಔಷಧೀಯ ಗುಣಗಳನ್ನು ಒಳಗೊಂಡಿದೆ.  ಬಾಳೆ ಎಲೆಯಲ್ಲಿ ಶೇಕಡಾ 60ರಷ್ಟು ನೀರಿನಾಂಶವಿರುತ್ತದೆ. ಫೈಟೊನ್ಯೂಟ್ರಿಯೆಂಟ್ಸ್, ಸೆಲೆನಿಯಮ್, ಮೆಗ್ನೀಸಿಯಮ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಫೈಬರ್ ಇದ್ರಲ್ಲಿದೆ. ಉತ್ಕರ್ಷಣ ನಿರೋಧಕ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಫಂಗಲ್ ಗುಣಲಕ್ಷಣಗಳನ್ನು ಬಾಳೆ ಎಲೆ ಹೊಂದಿದೆ. ಇಷ್ಟೆಲ್ಲ ಪೋಷಕಾಂಶ (Nutrient) ಗಳನ್ನು ಹೊಂದಿರುವ ಬಾಳೆ ಎಲೆ ಸೇವನೆ ಮಾಡೋದ್ರಿಂದ ನಮ್ಮ ದೇಹ ಅನೇಕ ರೋಗದಿಂದ ದೂರವಿರುತ್ತದೆ ಎನ್ನುತ್ತಾರೆ ತಜ್ಞರು. ನಾವಿಂದು ಬಾಳೆ ಎಲೆ ಸೇವನೆ ಮಾಡೋದು ಹೇಗೆ ಮತ್ತೆ ಬಾಳೆ ಎಲೆಯಿಂದ ಆಗುವ ಆರೋಗ್ಯ ಪ್ರಯೋಜನಗಳು ಏನು ಎಂಬುದನ್ನು ಹೇಳ್ತೇವೆ. 

HEALTH TIPS: ತೆಂಗಿನಕಾಯಿ ನೀರಲ್ಲಷ್ಟೇ ಅಲ್ಲ ಗಂಜಿಯಲ್ಲಿದೆ ಆರೋಗ್ಯದ ಗುಟ್ಟು

ಬಾಳೆ ಎಲೆ ಸೇವನೆ ಮಾಡೋದು ಹೇಗೆ? : ಬಾಳೆ ಎಲೆಗಳನ್ನು ನೀವು ಹಾಗೆ ತಿನ್ನುವ ಬದಲು ಅದನ್ನು ಕಷಾಯದ ರೀತಿಯಲ್ಲಿ ನೀವು ಸೇವನೆ ಮಾಡಬಹುದು. ಬಾಳೆ ಎಲೆಯನ್ನು ಸಣ್ಣದಾಗಿ ಕತ್ತರಿಸಿ, ನೀರಿಗೆ ಹಾಕಿ, ಈ ನೀರನ್ನು ಕುದಿಸಿ. ನೀರು ಚೆನ್ನಾಗಿ ಕುದ್ದ ನಂತ್ರ ಫಿಲ್ಟರ್ ಮಾಡಿ. ನಂತ್ರ ಆ ನೀರನ್ನು ಸೇವಿಸಿ.  ಮತ್ತು ಅದರ ನೀರನ್ನು ಸೇವಿಸಬಹುದು. ಇದನ್ನು ಸೇವಿಸಲು ಇದು ತುಂಬಾ ಸುಲಭವಾದ ಮಾರ್ಗವಾಗಿದೆ. ಇದನ್ನು ಮಾಡೋದು ಕಷ್ಟ ಎನ್ನುವವರು ಬಾಳೆ ಎಲೆಯನ್ನು ಹಾಗೆಯೇ ಜಗಿದು ಅದರ ರಸವನ್ನು ನುಂಗಬಹುದು. ಕೆಲವರು ಬಾಲೆ ಎಲೆಯ ಟೀ ತಯಾರಿಸಿ ಕುಡಿಯುತ್ತಾರೆ.

ಬಾಳೆ ಎಲೆಯನ್ನು ಕುದಿಸಿ ಕುಡಿಯೋದ್ರಿಂದ ಆಗುವ ಲಾಭ :   

ರೋಗನಿರೋಧಕ ಶಕ್ತಿ (Immunity Power) ಹೆಚ್ಚಿಸುತ್ತೆ ಬಾಳೆ ಎಲೆ ನೀರು : ಬಾಳೆ ಎಲೆ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಇದು ಸ್ವತಂತ್ರ ರಾಡಿಕಲ್ ಗಳ ವಿರುದ್ಧ ಹೋರಾಡಲು ನೆರವಾಗುತ್ತದೆ. ಇದು ವೈರಲ್ ಸೋಂಕುಗಳಿಗೆ ಗುರಿಯಾಗದಂತೆ ನಿಮ್ಮ ದೇಹವನ್ನು ರಕ್ಷಿಸುವ ಕೆಲಸವನ್ನು ಮಾಡುತ್ತದೆ. ನೀವು ನಿಯಮಿತವಾಗಿ ಬಾಳೆ ಎಲೆ ನೀರನ್ನು ಸೇವನೆ ಮಾಡೋದ್ರಿಂದ ನಿಮ್ಮ ದೇಹಕ್ಕೆ ಯಾವುದೇ ರೋಗ ಬಂದ್ರೂ ಬೇಗ ಗುಣಮುಖರಾಗುತ್ತೀರಿ.  

ಬಂಜೆತನ ಕಾಡೋದು ಮಹಿಳೆಯರನ್ನಷ್ಟೇ ಅಲ್ಲ, ಪುರುಷರ ಕೆಟ್ಟ ಚಟದಿಂದ್ಲೂ ಮಕ್ಕಳಾಗಲ್ಲ! 

ಚರ್ಮದ ಆರೋಗ್ಯಕ್ಕೆ (Skin Health) ಬಾಳೆ ಎಲೆ ನೀರು ಬೆಸ್ಟ್ : ದೇಹಕ್ಕೆ ನೀರು ಬಹಳ ಮುಖ್ಯ. ಬಾಳೆ ಎಲೆ ನೀರು, ಚರ್ಮವನ್ನು ಆರ್ಧ್ರಕಗೊಳಿಸಲು ಸಹಾಯ ಮಾಡುತ್ತದೆ. ಚರ್ಮ ಮೇಲೆ ಕಾಣಿಸಿಕೊಳ್ಳುವ ದುದ್ದು, ಅಲರ್ಜಿ ಸಮಸ್ಯೆಯನ್ನು ಹೋಗಲಾಡಿಸುತ್ತದೆ.

ಹೊಟ್ಟೆ ಆರೋಗ್ಯಕ್ಕೆ (Stomach Health) ಒಳ್ಳೆಯದು : ನಮ್ಮ ಜೀರ್ಣಕ್ರಿಯೆ ಸರಿಯಾಗಿ ಆದ್ರೆ ಅರ್ಧದಷ್ಟು ರೋಗ ನಮ್ಮಿಂದ ದೂರವುಳಿಯುತ್ತದೆ. ನಮ್ಮ ಆಹಾರ ಸರಿಯಾಗಿ ಜೀರ್ಣವಾಗಲು ಬಾಳೆ ಎಲೆ ಸಹಾಯ ಮಾಡುತ್ತದೆ. ನಿಮ್ಮಲ್ಲಿ ಯಾವುದೇ ಜೀರ್ಣಕಾರಿ ಸಮಸ್ಯೆ ಕಾಡಿದ್ರೆ ನೀವು ಇದರ ಸೇವನೆ ಮಾಡಬಹುದು.  

ಕರುಳಿನ ಹುಣ್ಣು ನಾಶ (Ulcer) : ಕರುಳಿನಲ್ಲಿ ಉರಿಯೂತ ಅಥವಾ ಗಾಯವಾಗಿದ್ದರೆ ಅದನ್ನು ಗುಣಪಡಿಸುವ ಕೆಲಸವನ್ನು ಬಾಳೆ ಎಲೆಯ ನೀರು ಮಾಡುತ್ತದೆ. ಇದು ಕುರಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾ ಸಂಖ್ಯೆಯನ್ನು ಹೆಚ್ಚಿಸುವ ಕೆಲಸವನ್ನು ಮಾಡುತ್ತದೆ. 

ದೇಹದಿಂದ ವಿಷ ಹೊರಹಾಕುವ ಕೆಲಸ ಮಾಡುತ್ತೆ ಬಾಳೆ ಎಲೆ : ನೀವು ಬಾಳೆ ಎಲೆಯನ್ನು ಕುದಿಸಿ ಕುಡಿಯುವುದ್ರಿಂದ ನಿಮ್ಮ ದೇಹ ಶುದ್ಧವಾಗುತ್ತದೆ. ದೇಹದಲ್ಲಿರುವ ವಿಷದ ಅಂಶ ಹೊರಗೆ ಹೋಗುತ್ತದೆ. ಬಾಳೆ ಎಲೆಯಲ್ಲಿರುವ ಆಂಟಿಆಕ್ಸಿಡೆಂಟ್‌ಗಳು, ಆ್ಯಂಟಿ ಫಂಗಲ್ ಮತ್ತು ಆ್ಯಂಟಿ ಬ್ಯಾಕ್ಟೀರಿಯಲ್ ಗುಣ ಹಾನಿಕಾರಕ ಬ್ಯಾಕ್ಟೀರಿಯಾವನ್ನು ನಾಶ ಪಡಿಸಿ, ನಮ್ಮ ಆರೋಗ್ಯವನ್ನು ಕಾಪಾಡುತ್ತದೆ. 
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾತ್ರಿ ಮಲಗುವ ಮುನ್ನ ನೀರು ಕುಡಿಯುತ್ತೀರಾ?, ಈ ವಿಷಯಗಳನ್ನು ನೀವು ತಿಳಿದಿರಲೇಬೇಕು
ಕೊಲೊನ್ ಕ್ಯಾನ್ಸರ್.. 30 ವರ್ಷದ ನಂತ್ರ ಈ ಲಕ್ಷಣ ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ