ಮೂತ್ರಕೋಶ ನಮ್ಮ ದೇಹದ ಮುಖ್ಯ ಅಂಗಗಳಲ್ಲಿ ಒಂದು. ಮಹಿಳೆಯರು ಮೂತ್ರಕೋಶಕ್ಕೆ ಸಂಬಂಧಿಸಿದ ಕೆಲ ಸಮಸ್ಯೆಯನ್ನು ಎದುರಿಸುತ್ತಾರೆ. ಆದ್ರೆ ವೈದ್ಯರ ಬಳಿ ಹೋಗಲು ನಾಚಿಕೊಳ್ತಾರೆ. ಕೆಲ ಮಹಿಳೆಯರ ಅರಿವಿಗೆ ಬರದೆ ಮೂತ್ರ ಸೋರಿಕೆಯಾಗ್ತಿರುತ್ತದೆ. ಇದು ನಿರ್ಲಕ್ಷ್ಯ ಮಾಡುವ ಸಮಸ್ಯೆಯಲ್ಲ.
ಗರ್ಭಧಾರಣೆ ನಂತ್ರ ಮಹಿಳೆಯರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಒಂದು ಹೆರಿಗೆಯಾದ್ಮೇಲೆ ಮಹಿಳೆಯ ದೇಹದಲ್ಲಿ ಸಾಕಷ್ಟು ಬದಲಾವಣೆಯನ್ನು ನಾವು ಕಾಣಬಹುದು. ಸ್ತನದ ಆಕಾರದಿಂದ ಹಿಡಿದು ಮೂತ್ರ ವಿಸರ್ಜನೆಯವರೆಗೆ ಎಲ್ಲವೂ ಬದಲಾಗಿರುತ್ತದೆ. ಅನೇಕ ಮಹಿಳೆಯರಿಗೆ ಸಣ್ಣ ಸೀನು ಬಂದ್ರೂ, ಕೆಮ್ಮು ಬಂದ್ರೂ ಮೂತ್ರ ವಿಸರ್ಜನೆಯಾಗುತ್ತದೆ. ಇದು ಅನೇಕ ಬಾರಿ ಮುಜುಗರಕ್ಕೆ ಕಾರಣವಾಗುತ್ತದೆ. ವಯಸ್ಸಾದಂತೆ ಈ ಮೂತ್ರ ಸೋರುವಿಕೆ ಸಮಸ್ಯೆ ಹೆಚ್ಚಾಗುತ್ತದೆ. ಅದಕ್ಕೆ ವೈದ್ಯಕೀಯ ಭಾಷೆಯಲ್ಲಿ ಮೂತ್ರದ ಅಸಂಯಮ ಎಂದು ಕರೆಯಲಾಗುತ್ತದೆ. ನಾವಿಂದು ಈ ಮೂತ್ರದ ಅಸಂಯಮದ ಬಗ್ಗೆ ನಿಮಗೊಂದಿಷ್ಟು ಮಾಹಿತಿಯನ್ನು ನೀಡ್ತೆವೆ.
ಮೂತ್ರ (Urine) ದ ಅಸಂಯಮ ಎಂದ್ರೇನು? : ಮೂತ್ರದ ಅಸಂಯಮವನ್ನು ಗಾಳಿಗುಳ್ಳೆಯ ನಿಯಂತ್ರಣದ ನಷ್ಟ ಎಂದೂ ಕರೆಯಲಾಗುತ್ತದೆ. ಬರೀ ಕೆಮ್ಮಿ (Cough) ದಾಗ, ಸೀನಿದಾಗ ಮಾತ್ರವಲ್ಲ ಕೆಲವೊಮ್ಮೆ ಹೆಚ್ಚು ಬಲ ಪ್ರಯೋಗ ಮಾಡಿದಾಗ ಕೂಡ ಮೂತ್ರ ಸೋರಿಕೆ (leakage) ಯಾಗುತ್ತದೆ. ಇದನ್ನು ನಿಯಂತ್ರಿಸಲು ಸಾಧ್ಯವಾಗೋದಿಲ್ಲ. ಮೂತ್ರಕೋಶ ನಿಯಂತ್ರಣ ಕಳೆದುಕೊಂಡಾಗ ಮೂತ್ರ ಸೋರಿಕೆ ಸಮಸ್ಯೆ ಉಂಟಾಗುತ್ತದೆ. ಕೆಲವೊಮ್ಮೆ ಶೌಚಾಲಯ (Toilet) ಕ್ಕೆ ಹೋಗುವ ಮೊದಲೇ ಮೂತ್ರ ಸೋರಿಕೆಯಾಗುತ್ತದೆ. ಇದು ಒತ್ತಡದ ಕಾರಣದಿಂದಾಗಿಯೂ ಸಂಭವಿಸುತ್ತದೆ. ಮೂತ್ರಕೋಶದ ಮೇಲೆ ಒತ್ತಡ ಹೆಚ್ಚಾಗುತ್ತದೆ. ಇದರಿಂದಾಗಿ ಮೂತ್ರ ಸೋರಿಕೆಯಾಗುತ್ತದೆ. ಮೊದಲೇ ಹೇಳಿದಂತೆ ಇದು ತುಂಬಾ ಮುಜುಗರವನ್ನುಂಟು ಮಾಡುವ ಕಾಯಿಲೆಯಾಗಿದೆ. ವ್ಯಕ್ತಿ ಅನಾನುಕೂಲತೆ ಎದುರಿಸುತ್ತಾನೆ. ಏಕೆಂದರೆ, ಅದು ಯಾವುದೇ ಸಮಯದಲ್ಲಿ ಮತ್ತು ಎಲ್ಲಿಯಾದರೂ ಸಂಭವಿಸಬಹುದು. ನಗುವಾಗ, ಮೆಟ್ಟಿಲುಗಳನ್ನು ಏರಿದಾಗ ಕೂಡ ಮೂತ್ರ ಸೋರಿಕೆಯಾಗುವ ಅಪಾಯವಿರುತ್ತದೆ. ಮಹಿಳೆಯರು ಮಾತ್ರವಲ್ಲ ಪುರುಷರಲ್ಲೂ ಈ ಸಮಸ್ಯೆ ಕಾಡುತ್ತದೆ.
ಮೂತ್ರದ ಅಸಂಯಮದ ಕಾರಣಗಳು?: ಮೂತ್ರದ ಸೋಂಕು, ಯೋನಿ ಸೋಂಕು ಅಥವಾ ಕಿರಿಕಿರಿ ಮತ್ತು ಮಲಬದ್ಧತೆ ಸೇರಿದಂತೆ ವಿವಿಧ ಕಾರಣಗಳಿಗಾಗಿ ಮೂತ್ರದ ಅಸಂಯಮದ ಸಮಸ್ಯೆ ಕಾಡುತ್ತದೆ. ಕೆಲವು ಔಷಧಿಗಳು ಸ್ವಲ್ಪ ಸಮಯದವರೆಗೆ ಅದನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದಾಗ್ಯೂ, ಮೂತ್ರದ ಅಸಂಯಮವು ದೀರ್ಘಕಾಲದವರೆಗೆ ಮುಂದುವರಿದರೆ, ಇದು ದುರ್ಬಲ ಮೂತ್ರಕೋಶದಿಂದ ಸಂಭವಿಸಿದೆ ಎಂದರ್ಥ.
ಹೆಚ್ಚಿದ ತೂಕವೂ ಕಾರಣ ? : ಮೂತ್ರದ ಅಸಂಯಮಕ್ಕೆ ಹೆಚ್ಚಿನ ತೂಕವೂ ಕಾರಣ ಎಂದು ಅಧ್ಯಯನಗಳು ಹೇಳಿವೆ. ಹೊಟ್ಟೆಯಲ್ಲಿರುವ ಹೆಚ್ಚುವರಿ ತೂಕವು ಮೂತ್ರಕೋಶದ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ಈ ಒತ್ತಡವು ಪೆಲ್ವಿಕ್ ಫ್ಲೋರ್ ದುರ್ಬಲಗೊಳಿಸಬಹುದು. ಆದ್ದರಿಂದ ನೀವು ಹೊಟ್ಟೆಯಲ್ಲಿನ ತೂಕವನ್ನು ಕಡಿಮೆ ಮಾಡುವುದು ಬಹಳ ಮುಖ್ಯವಾಗುತ್ತದೆ. ತೂಕ ಕಡಿಮೆಯಾದಂತೆ ಮೂತ್ರಕೋಶದ ಮೇಲೆ ಬೀಳುವ ಒತ್ತಡ ಕಡಿಮೆಯಾಗುತ್ತದೆ. ಇದ್ರಿಂದ ಸಮಸ್ಯೆ ಕಡಿಮೆಯಾಗುತ್ತದೆ. ಸಾಮಾನ್ಯವಾಗಿ ಮೂತ್ರ ಸೋರಿಕೆಯಾಗ್ತಿದ್ದರೆ ಜನರು ಇದನ್ನು ಹೇಳಿಕೊಳ್ಳಲು ನಾಚಿಕೊಳ್ತಾರೆ. ವೈದ್ಯರ ಬಳಿ ಚಿಕಿತ್ಸೆ ಕೂಡ ಮಾಡಿಸೋದಿಲ್ಲ. ಆದ್ರೆ ಸಮಸ್ಯೆ ಹೆಚ್ಚಾಗ್ತಿದೆ ಎನ್ನಿಸಿದ್ರೆ ವೈದ್ಯರ ಬಳಿ ಹೋಗುವುದು ಸೂಕ್ತ.
ಪೇಪರ್ ಕಪ್‌ನಲ್ಲಿ ಟೀ ಕುಡೀತೀರಾ ? ಕ್ಯಾನ್ಸರ್ ಕಾಡ್ಬೋದು ಹುಷಾರ್ !
ವ್ಯಾಯಾಮದಿಂದ ಪರಿಹಾರ : ವ್ಯಾಯಾಮಗಳು ಗರ್ಭಾಶಯ, ಮೂತ್ರಕೋಶ ಮತ್ತು ದೊಡ್ಡ ಕರುಳಿನ ಕೆಳಭಾಗದಲ್ಲಿರುವ ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಈ ಸಮಸ್ಯೆ ಇರುವವರು ನಿಯಮಿತ ವ್ಯಾಯಾಮ ಮಾಡುವ ಮೂಲಕ ಸಾಕಷ್ಟು ಪರಿಹಾರ ಪಡೆಯಬಹುದು. ಇದಕ್ಕೆ ನೀವು ಕೆಗೆಲ್ ವ್ಯಾಯಾಮ ಮಾಡಬೇಕಾಗುತ್ತದೆ. ಮೂತ್ರಕೋಶದಲ್ಲಿ ಮೂತ್ರವನ್ನು ಹಿಡಿದಿಟ್ಟುಕೊಳ್ಳಲು ಈ ವ್ಯಾಯಾಮ ಸಹಾಯ ಮಾಡುತ್ತದೆ. ಕೆಮ್ಮಿದಾಗ, ಸೀನಿದಾಗ ಮೂತ್ರ ಸೋರಿಕೆಯಾಗದಂತೆ ತಡೆಯುತ್ತದೆ.
ಒಂದೇ ಪ್ಲೇಟಲ್ಲಿ ಮೂರ್ನಾಲ್ಕು ಖಾದ್ಯ ನೋಡಿ ಕೋಪ ಬರ್ತಿದ್ಯಾ? ಇದು ಮಾನಸಿಕ ಖಾಯಿಲೆ?
ಲೇಸರ್ ಚಿಕಿತ್ಸೆ : ಒತ್ತಡದ ಮೂತ್ರದ ಅಸಂಯಮಕ್ಕೆ ಲೇಸರ್ ಚಿಕಿತ್ಸೆಯು ಉತ್ತಮ ಮತ್ತು ಪರಿಣಾಮಕಾರಿ ಚಿಕಿತ್ಸೆ ಎಂದು ಹಲವಾರು ಅಧ್ಯಯನಗಳು ಸೂಚಿಸುತ್ತವೆ. ಕೆಲವು ಮೂತ್ರ ಅಸಂಯಮವು ಒತ್ತಡದ ಮೂತ್ರ ಅಸಂಯಮದಿಂದ ಉಂಟಾಗುತ್ತದೆ. ಲೇಸರ್ ಚಿಕಿತ್ಸೆಯಿಂದ ಇದನ್ನು ಗುಣಪಡಿಸುವುದು ಸುಲಭ.