ಹಾರ್ಟ್ ಅಟ್ಯಾಕ್ ಆದಾಗ ನೋವಿನ ಅನುಭವ ಹೇಗಿರುತ್ತೆ? ಬದುಕುಳಿದವರು ಹೇಳಿದ್ದಿಷ್ಟು

By Vinutha Perla  |  First Published Jan 26, 2023, 10:34 AM IST

ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗ್ತಿದೆ. ವೃದ್ಧರು ಮಕ್ಕಳು ಅನ್ನೋ ವಯಸ್ಸಿನ ಬೇಧವಿಲ್ಲದೆ ಎಲ್ಲರೂ ಹಾರ್ಟ್‌ಅಟ್ಯಾಕ್‌ಗೆ ಬಲಿಯಾಗುತ್ತಿದ್ದಾರೆ. ಹಾರ್ಟ್‌ ಅಟ್ಯಾಕ್ ಆದಾಗ ಆ ನೋವು ಹೇಗಿರುತ್ತದೆ ? ಹೃದಯಾಘಾತವಾಗಿ ಬದುಕಿ ಬಂದವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.


ಹೃದಯಾಘಾತವು (Heartattack) ಹೃದಯ ಸ್ನಾಯುವಿನ ರಕ್ತದ ಹರಿವು ಅನಿರೀಕ್ಷಿತವಾಗಿ ಕಡಿತಗೊಂಡಾಗ ಮತ್ತು ಹೃದಯ ಸ್ನಾಯುಗಳಿಗೆ ಹಾನಿಯನ್ನುಂಟುಮಾಡಿದಾಗ ಸಂಭವಿಸುವ ಗಂಭೀರ ಸ್ಥಿತಿಯಾಗಿದೆ. ಹಿಂದೆಯೆಲ್ಲಾ ವಯಸ್ಸಾದವರಿಗೆ ಹೃದಯಾಘಾತವಾಗುವ ಅಪಾಯ (Danger) ಹೆಚ್ಚಿತ್ತು. ಆದರೆ ಈಗ ಹಾಗಲ್ಲ, 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಹೃದಯಾಘಾತವು ಅತ್ಯಂತ ಅಸಾಮಾನ್ಯವಾಗಿದೆ. ಕೆಲವೊಬ್ಬರು ಒಂದು ಬಾರಿ ಹಾರ್ಟ್‌ ಅಟ್ಯಾಕ್‌ ಆದಾಗಲೇ ಸಾವನ್ನಪ್ಪುತ್ತಾರೆ. ಕೆಲವೊಬ್ಬರು ತಕ್ಷಣವೇ ಚಿಕಿತ್ಸೆ (Treatment) ದೊರೆಯುವ ಕಾರಣ ಬದುಕುಳಿಯುತ್ತಾರೆ. ಹಾರ್ಟ್‌ ಅಟ್ಯಾಕ್ ಆದಾಗ ಆ ಅನುಭವ ಹೇಗಿರುತ್ತೆ ?

ಹಠಾತ್ ಎದೆಯಲ್ಲಿ ಬಿಗಿತ: ಎದೆ ಬಿಗಿತ ಹೃದಯಾಘಾತದ ಮುಖ್ಯ ಲಕ್ಷಣಗಳಲ್ಲಿ ಒಂದಾಗಿದೆ. ರೇ ಬ್ರಿಯಾನ್ ಎಂಬವರು ಹಾರ್ಟ್‌ ಅಟ್ಯಾಕ್‌ಗೂ ಮೊದಲು ಎದೆಬಿಗಿತದ ಸಮಸ್ಯೆಯನ್ನು ಅನುಭವಿಸಿದ್ದಾಗಿ ಹೇಳಿಕೊಂಡಿದ್ದಾರೆ. 'ನಾನು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಎದೆಯಲ್ಲಿ ಹಠಾತ್ ಬಿಗಿತ ಕಂಡುಬಂದಿತು. ತುಂಬಾ ದುರ್ಬಲವಾದ ಅನುಭವವಾಯಿತು. ವಿಪರೀತವಾಗಿ ಬೆವರಲಾರಂಭಿಸಿತು, ಮಾತನಾಡಲು ಪ್ರಯತ್ನಿಸಿದೆ ಆದರೆ ಸಾಧ್ಯವಾಗಲಿಲ್ಲ' ಎಂದು ರೇ ಬ್ರಿಯಾನ್ ಹೇಳುತ್ತಾರೆ. ಇದು ಪ್ರಮುಖ ಹೃದಯಾಘಾತವಾಗಿರಲಿಲ್ಲ. ಆದರೆ ನಾನು ಒಂದು ವಾರ ಆಸ್ಪತ್ರೆಯಲ್ಲಿದ್ದೆ' ಎಂದು ಹೇಳಿದ್ದಾರೆ.

Tap to resize

Latest Videos

ಚಳಿಗಾಲದಲ್ಲಿ ಹಾರ್ಟ್‌ ಅಟ್ಯಾಕ್‌ ಛಾನ್ಸ್ ಹೆಚ್ಚಿರುತ್ತಾ ? ತಪ್ಪಿಸೋಕೆ ಏನ್ ಮಾಡ್ಬೇಕು

ಎದೆಯಲ್ಲಿ ನೋವು: ಎಕ್ವೈನ್ ಕ್ರೀಕ್, ಹೃದಯಾಘಾತದಿಂದ ತನ್ನ ಗಂಡ ಒದ್ದಾಡಿದ ಅನುಭವವನ್ನು ಹಂಚಿಕೊಳ್ಳುತ್ತಾರೆ. 'ಭಾರವಾದ ಕೆಲಸದ ಸಲಕರಣೆಗಳನ್ನು ಸರಿಸಿದ ನಂತರ ನನ್ನ ಪತಿ ನನ್ನನ್ನು ಕರೆದರು. ವಿಪರೀತ ಎದೆನೋವಾಗುತ್ತಿದೆ (Chest pain) ಎಂದು ಹೇಳಿಕೊಂಡರು. ಆದರೆ ಆಸ್ಪತ್ರೆಗೆ ಹೋಗುವುದು ಬೇಡ ಎಂದರು. ನಾನು ನರ್ಸ್ ಆಗಿದ್ದೇನೆ. ಹೀಗಾಗಿ ನಾನು ತಡ ಮಾಡದೆ ಆಸ್ಪತ್ರೆಗೆ ಕರೆದೊಯ್ದೆ. ಇದರಿಂದ ಜೀವ ಉಳಿಸಲು ಸಾಧ್ಯವಾಯಿತು' ಎಂದು ಎಕ್ವೈನ್ ಮಾಹಿತಿ ನೀಡುತ್ತಾರೆ.

ಮೈಕ್ ಬ್ರಿಗ್ಯಾಮ್‌ಗೆ, ಹೃದಯಾಘಾತದ ಮೊದಲ ಚಿಹ್ನೆಯಾಗಿ ಎದೆನೋವು ಕಾಣಿಸಿಕೊಂಡಿರುವ ಬಗ್ಗೆ ಹೇಳಿಕೊಂಡಿದ್ದಾರೆ. ನನ್ನ ಎದೆಯಲ್ಲಿ ಹಿಸುಕಿದ ನೋವಿನಿಂದ ಎಚ್ಚರವಾಯಿತು. ಹಾಸಿಗೆಯಲ್ಲಿ ನೆಟ್ಟಗೆ ಮಲಗಿದೆ. ಆಗ ನನ್ನ ದವಡೆಯ ಎಡಭಾಗ ಮತ್ತು ನನ್ನ ಕುತ್ತಿಗೆ ನೋಯಲಾರಂಭಿಸಿತು. ನೋವು ತೀವ್ರವಾಗಿತ್ತು ಮತ್ತು ಸ್ವಲ್ಪ ಉರಿಯುತ್ತಿರುವಂತೆ ಭಾಸವಾಯಿತು. ನಾನು ನನ್ನ ನಾಲಿಗೆಯ ಕೆಳಗೆ ನನ್ನ ಸಬ್ಲಿಂಗುವಲ್ ನೈಟ್ರೋವನ್ನು ಹಾಕಲು ಹಾಸಿಗೆಯಿಂದ ಎದ್ದೆ. ನಂತರ ಆಸ್ಪತ್ರೆಗೆ ದಾಖಲಿಸಲಾಯಿತು' ಎಂಉ ಬರೆದುಕೊಂಡಿದ್ದಾರೆ.

ಮೂರ್ಛೆ ಹೋಗುವ ಅನುಭವವಾಗುತ್ತದೆ: ಗಂಡನಿಗೆ ಹಾರ್ಟ್ ಅಟ್ಯಾಕ್ ಆದ ಅನುಭವವವನ್ನು ಮಹಿಳೆಯೊಬ್ಬರು ಹಂಚಿಕೊಂಡಿದ್ದಾರೆ. 'ಗಂಡ ಗಾಲ್ಫ್‌ ಆಡಲು ಹೋಗಿದ್ದನು. ಯಾವತ್ತಿನಂತೆ ಕರೆ ಮಾಡಿದ ಅವರು ಮಾತಿನ ಮಧ್ಯೆ ಮೂರ್ಛೆ ಹೋಗುವ ಅನುಭವ ಆಗುತ್ತಿರುವುದಾಗಿ ಹೇಳಿಕೊಂಡರು. ಬಳಿಕ ಗಾಲ್ಫ್ ಕಾರ್ಟ್ ಓಡಿಸುತ್ತಿದ್ದವರು ಕೆಳಗೆ ಬಿದ್ದರು ಎಂದು ತಿಳಿದುಬಂತು' ಎಂದು 50 ನೇ ವಯಸ್ಸಿನಲ್ಲಿ ಹೃದಯ ಸ್ತಂಭನಕ್ಕೆ ಬಲಿಯಾದ ತನ್ನ ಗಂಡನ ಬಗ್ಗೆ ಮಹಿಳೆ ಬರೆಯುತ್ತಾರೆ.

ಹೃದಯಾಘಾತವಾದಾಗ ಜೀವ ಉಳಿಸಲು ತಕ್ಷಣಕ್ಕೆ ಏನು ಮಾಡಬೇಕು ?

ಬೆನ್ನು ನೋವಿನ ಅನುಭವ: ಹೃದಯಾಘಾತದ ಸಮಯದಲ್ಲಿಯೂ ಜೆನ್ನಿಫರ್ ಮೂರ್ ಅವರ ರಕ್ತದೊತ್ತಡ ಸಾಮಾನ್ಯವಾಗಿತ್ತು ಎಂದು ಅವರು ಹೇಳಿದ್ದಾರೆ. 'ಭುಜದ ಬ್ಲೇಡ್‌ಗಳ ನಡುವೆ ಬೆನ್ನು ನೋವು ಕಾಣಿಸಿಕೊಂಡಿತು. ನಿಜವಾದ ಹೃದಯಾಘಾತದ ಹಿಂದಿನ ರಾತ್ರಿ ನಾನು ಸಂಕೋಚನ ಎಂದು ಕರೆಯುತ್ತಿದ್ದೆ. ಒಂದು ಭುಜದಿಂದ ಇನ್ನೊಂದು ಭುಜಕ್ಕೆ ನೋವು ಕಾಣಿಸಿಕೊಂಡಿತು. ಬೆಳಗ್ಗೆದ್ದು ಬಾತ್‌ರೂಮ್‌ಗೆ ಹೋಗಬೇಕೆಂದು ಅಂದುಕೊಂಡೆ. ಆದರೆ ತಲೆಸುತ್ತಿ ಬಂತು ಮುಂದೆ ಹೆಜ್ಜೆಯಿಡಲು ಸಾಧ್ಯವಾಗಲಿಲ್ಲ. ನಾನು ಸುಮಾರು ಒಂದು ವರ್ಷದ ಹಿಂದೆ ಅನಿಯಮಿತ ಹೃದಯ ಬಡಿತವನ್ನು ಹೊಂದಿದ್ದೆ' ಎಂದು ಜೆನ್ನಿಫರ್ ತನ್ನ ಬಗ್ಗೆ ಬರೆಯುತ್ತಾರೆ.

ಹೃದಯರಕ್ತನಾಳದ ಕಾಯಿಲೆಗಳು ಪ್ರತಿ ವರ್ಷ ಸುಮಾರು 18 ಮಿಲಿಯನ್ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತವೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಹೃದಯರಕ್ತನಾಳದ ಕಾಯಿಲೆಗಳು ವಿಶ್ವದಾದ್ಯಂತ ಸಾವಿಗೆ ಪ್ರಮುಖ ಕಾರಣವಾಗಿದೆ. ಹೃದ್ರೋಗಗಳು ಪ್ರತಿ ವರ್ಷ 17.9 ಮಿಲಿಯನ್ ಜೀವಗಳನ್ನು ಬಲಿ ಪಡೆಯುತ್ತವೆ. ಹೃದಯದ ತೊಂದರೆಗಳಿಂದ ಉಂಟಾಗುವ ಸಾವುಗಳಲ್ಲಿ ಮೂರನೇ ಒಂದು ಭಾಗವು ಅಕಾಲಿಕವಾಗಿ ಸಂಭವಿಸುತ್ತದೆ. ಹೃದ್ರೋಗಗಳ ಸಾಮಾನ್ಯ ಅಪಾಯಕಾರಿ ಅಂಶಗಳು ಅನಾರೋಗ್ಯಕರ ಆಹಾರ, ಕಡಿಮೆ ದೈಹಿಕ ಚಟುವಟಿಕೆಯಿಂದ ಉಂಟಾಗುತ್ತದೆ.

click me!