Health Tips : ಮಿತಿ ಮೀರಿ ನೀರು ಕುಡಿದ್ರೆ ನಿಂತೋಗುತ್ತೆ ಹಾರ್ಟ್

By Suvarna News  |  First Published Aug 13, 2022, 3:20 PM IST

ನೀರು ಆರೋಗ್ಯಕ್ಕೆ ಒಳ್ಳೆಯದು. ಕಡಿಮೆ ನೀರು ಸೇವನೆ ಮಾಡಿದ್ರೆ ದೇಹ ನಿರ್ಜಲೀಕರಣಗೊಂಡು ಒಂದಿಷ್ಟು ಸಮಸ್ಯೆ ಕಾಡುತ್ತದೆ. ಫಿಟ್ ಆಗಿರ್ಬೇಕು ಅಂತಾ ಜನರು ಸಿಕ್ಕಾಪಟ್ಟೆ ನೀರು ಸೇವನೆ ಮಾಡಿದ್ರೂ ಒಳ್ಳೆಯದಲ್ಲ. ಇದು ಕೂಡ ಆಸ್ಪತ್ರೆ ಸೇರುವಂತೆ ಮಾಡುತ್ತೆ.
 


ನೀರಿಲ್ಲದೆ ಬದುಕೋದು ಸಾಧ್ಯವೇ ಇಲ್ಲ. ನೀರನ್ನು ಅದೇ ಕಾರಣಕ್ಕೆ ಜೀವ ಜಲ ಎನ್ನುತ್ತಾರೆ. ನೀರು ಪ್ರತಿಯೊಬ್ಬ ಮನುಷ್ಯನಿಗೆ ಅತ್ಯಂತ ಅವಶ್ಯಕ. ಇಡೀ ದೇಹ ಆರೋಗ್ಯವಾಗಿರಲು ನೀರು ಬೇಕು. ಪ್ರತಿ ದಿನ ಮೂರು ಲೀಟರ್ ನೀರು ಸೇವನೆ ಮಾಡುವಂತೆ ವೈದ್ಯರು ಹೇಳ್ತಾರೆ. ಮತ್ತೆ ಕೆಲವರು ಬಾಯಾರಿಕೆ ಆದಾಗ ನೀರು ಕುಡಿಯುವಂತೆ ಸಲಹೆ ನೀಡ್ತಾರೆ. ನೀರು ಆರೋಗ್ಯಕ್ಕೆ ಒಳ್ಳೆಯದು, ಚರ್ಮದ ಹೊಳಪಿಗೆ ಇದು ಬಹಳ ಪ್ರಯೋಜನಕಾರಿ ಎಂಬ ಕಾರಣಕ್ಕೆ ಅನೇಕರು ಪ್ರತಿ ದಿನ ಮಿತಿಮೀರಿ ನೀರು  ಕುಡಿದ್ರೆ ಅದು ಒಳ್ಳೆಯದಲ್ಲ. ಅತಿ ಹೆಚ್ಚು  ನೀರು ಕುಡಿಯುವುದು ನಿಮಗೆ ಮಾರಕವಾಗಬಹುದು. ಅಗತ್ಯಕ್ಕಿಂತ ಹೆಚ್ಚು ನೀರು ಕುಡಿದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.  ಹೆಚ್ಚು ನೀರು ಕುಡಿಯುವುದರಿಂದ ಯಾವೆಲ್ಲ ಸಮಸ್ಯೆ ಕಾಡುತ್ತದೆ ಎಂಬುದನ್ನು ನಾವಿಂದು ಹೇಳ್ತೇವೆ. 

ಅತಿಯಾದ ನೀರು (Water) ಸೇವನೆ ಅಪಾಯ : 

Tap to resize

Latest Videos

ಮೂತ್ರಪಿಂಡ (Kidney) ಕ್ಕೆ ಹಾನಿ : ಅತಿಯಾಗಿ ನೀರು ಕುಡಿಯುವುದ್ರಿಂದ ಮೂತ್ರಪಿಂಡ ಹಾನಿಗೊಳಗಾಗುತ್ತವೆ. ಹೆಚ್ಚು ನೀರು ಕುಡಿಯುವಾಗ, ಅರ್ಜಿನೈನ್ ವಾಸೊಪ್ರೆಸಿನ್ನ ಪ್ಲಾಸ್ಮಾ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಮೂತ್ರಪಿಂಡದ ಕ್ರಿಯೆಯ ಮೇಲೆ ನೇರ ಪರಿಣಾಮ ಬೀರುತ್ತದೆ.

ಕಡಿಮೆಯಾಗುತ್ತೆ ಎಲೆಕ್ಟ್ರೋಲೈಟ್ ಅಂಶ :  ಹೆಚ್ಚು ನೀರು ಕುಡಿಯುವುದರಿಂದ ದೇಹದಲ್ಲಿ ಉಪ್ಪು (Salt) ಮತ್ತು ಎಲೆಕ್ಟ್ರೋಲೈಟ್‌ಗಳ ಪ್ರಮಾಣ ಕಡಿಮೆಯಾಗುತ್ತದೆ. ಹೊಟ್ಟೆ ಉಬ್ಬಿಕೊಳ್ಳಬಹುದು ಮತ್ತು ವಾಂತಿ (vomiting), ತಲೆನೋವು ಮುಂತಾದ ಸಮಸ್ಯೆ ಕಾಡಬಹುದು. ಕೆಲವೊಮ್ಮೆ ವ್ಯಕ್ತಿ ಪ್ರಜ್ಞೆ ತಪ್ಪುವ ಸ್ಥಿತಿ ತಲಪಬಹುದು.

ಇದನ್ನೂ ಓದಿ: ಸಿಕ್ಕಾಪಟ್ಟೆ ಎಮೋಷನಲ್ ಆಗ್ಬೇಡಿ, ಹೃದಯದ ಆರೋಗ್ಯಕ್ಕೆ ಡೇಂಜರ್ !

ಜೀವಕೋಶಗಳಲ್ಲಿ ಉರಿಯೂತ  : ನೀವು ಹೆಚ್ಚು ನೀರು ಕುಡಿದರೆ, ಜೀವಕೋಶಗಳು ಊದಿಕೊಳ್ಳಬಹುದು. ಇದು ಆರೋಗ್ಯಕ್ಕೆ ತುಂಬಾ ಅಪಾಯಕಾರಿ. ಈ ಸ್ಥಿತಿಯು ತುಂಬಾ ಗಂಭೀರವಾದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಉದಾಹರಣೆಗೆ ಸ್ನಾಯು ಅಂಗಾಂಶ ಮತ್ತು ಮೆದುಳು ಇದ್ರಿಂದ ಹಾನಿಗೊಳಗಾಗುವ ಸಾಧ್ಯತೆಯಿದೆ. 

ಮೆದುಳಿನ ಮೇಲೆ ಪರಿಣಾಮ : ನೀವು ಹೆಚ್ಚಿನ ಮಟ್ಟದಲ್ಲಿ ನೀರು ಕುಡಿದ್ರೆ ದೇಹ ಹೆಚ್ಚು ಹೈಡ್ರೀಕರಿಸಲ್ಪಡುತ್ತದೆ. ಇದ್ರಿಂದ ಸೋಡಿಯಂ ಮಟ್ಟ ಕಡಿಮೆಯಾಗುತ್ತದೆ. ಸೋಡಿಯಂ ಮಟ್ಟ ಕಡಿಮೆಯಾಗ್ತಿದ್ದಂತೆ ಮೆದುಳಿನ ಕೋಶಗಳ ಊತಕ್ಕೆ ಕಾರಣವಾಗಬಹುದು. ಇದ್ರಿಂದ ಮಾತನಾಡಲು ತೊಂದರೆಯಾಗುತ್ತದೆ. ಸರಿಯಾಗಿ ನಡೆಯಲು ಸಾಧ್ಯವಾಗುವುದಿಲ್ಲ.

ಅಧಿಕ ನೀರು ಸೇವನೆಯಿಂದ ಯಕೃತ್ತಿಗೆ ಹಾನಿ : ನೀವು ಹೆಚ್ಚು ಕಬ್ಬಿಣದಿಂದ ಸಮೃದ್ಧವಾಗಿರುವ ನೀರನ್ನು ಸೇವಿಸಿದಾಗ, ಅದು ಅಧಿಕ ಜಲಸಂಚಯನ ಸ್ಥಿತಿಗೆ ಸಹ ಕಾರಣವಾಗಿದೆ. ಇದರಿಂದ ಲಿವರ್ ಸಂಬಂಧಿತ ಸಮಸ್ಯೆ ಎದುರಾಗಬಹುದು.

ಹೃದಯ (Heart) ಸಮಸ್ಯೆ ಅಪಾಯ : ನೀವು ಹೆಚ್ಚು ನೀರು ಕುಡಿದಾಗ, ಅದು ದೇಹದಲ್ಲಿ ರಕ್ತದ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದು ನೇರವಾಗಿ ಹೃದಯದ ರಕ್ತನಾಳಗಳ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ಈ ಅನಗತ್ಯ ಒತ್ತಡದಿಂದಾಗಿ, ಹೃದಯ ವೈಫಲ್ಯದ ಅಪಾಯ ಕಾಡುತ್ತದೆ. ಹಾಗಾಗಿ ಪ್ರತಿಯೊಬ್ಬ ವ್ಯಕ್ತಿಯೂ ಮಿತಿಯಲ್ಲಿ ನೀರಿನ ಸೇವನೆ ಮಾಡಬೇಕು. 

ಇದನ್ನೂ ಓದಿ: ಪ್ರತಿದಿನ ಚಿಕನ್ ತಿಂತೀರಾ? ಹಾಗಿದೆ ಈ ಸುದ್ದಿ ನಿಮಗೆ ಇಷ್ಟ ಆಗಲ್ಲ ಬಿಡಿ

ಒಂದು ದಿನದಲ್ಲಿ ನೀವು ಎಷ್ಟು ನೀರು ಕುಡಿಯಬೇಕು? : ದೇಹವನ್ನು ಆರೋಗ್ಯವಾಗಿಡಲು ಪ್ರತಿ ದಿನ ನೀರು ಸೇವನೆ ಮಾಡುವುದು ಬಹಳ ಮುಖ್ಯ. ಆದ್ರೆ ದಿನಕ್ಕೆ  4-5 ಲೀಟರ್ ನೀರು ಸೇವನೆ ಮಾಡಬಾರದು. ಪ್ರತಿ ದಿನ ಒಬ್ಬ ಆರೋಗ್ಯ ವ್ಯಕ್ತಿ 3 ಲೀಟರ್ ನೀರನ್ನು ಮಾತ್ರ ಕುಡಿಯಬೇಕು.  ನೀರು ಕುಡಿಯುವ ವಿಧಾನ ಕೂಡ ತಿಳಿದಿರಬೇಕು. ಬಹುತೇಕರು ಲೀಟರ್ ನೀರನ್ನು ಒಟ್ಟಿಗೆ ಕುಡಿಯುತ್ತಾರೆ. ಇದು ಕೂಡ ಒಳ್ಳೆಯದಲ್ಲ. ಸ್ವಲ್ಪ ಸ್ವಲ್ಪ ನೀರನ್ನು ಆಗಾಗ ಕುಡಿಯುತ್ತಿರಬೇಕು. ಸದಾ ಕುಳಿತು ನೀರು ಕುಡಿಯಬೇಕು. ಹೀಗೆ ಮಾಡುವುದರಿಂದ ನಿಮ್ಮ ಸ್ನಾಯುಗಳ ಮೇಲೆ ಒತ್ತಡ ಬೀಳುವುದಿಲ್ಲ.

click me!