ಸಿಕ್ಕಾಪಟ್ಟೆ ಎಮೋಷನಲ್ ಆಗ್ಬೇಡಿ, ಹೃದಯದ ಆರೋಗ್ಯಕ್ಕೆ ಡೇಂಜರ್ !

By Suvarna News  |  First Published Aug 12, 2022, 2:14 PM IST

ಆಗಾಗ ಸಿಕ್ಕಾಪಟ್ಟೆ ಎಮೋಶನಲ್ ಆಗೋದು ನಿಮ್ಮ ಅಭ್ಯಾಸನಾ. ಎಲ್ರೂ ಎಮೋಶನಲ್ ಪೂಲ್ ಅಂತ ಗೇಲಿ ಮಾಡ್ತಾರಾ. ಹಾಗಿದ್ರೆ ನೀವು ತಲೆಕೆಡಿಸಿಕೊಳ್ಳಬೇಕಾದ ವಿಷ್ಯವಿದು. ಯಾಕೆಂದ್ರೆ ಭಾವನೆಗಳನ್ನು ನಿಯಂತ್ರಿಸಲು ಆಗದಿರೋದು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತೆ.


ಪ್ರತಿಯೊಬ್ಬ ವ್ಯಕ್ತಿಯಲ್ಲೂ ಹಲವು ಭಾವನೆಗಳಿರುತ್ತವೆ. ಖುಷಿ, ದುಃಖ, ಬೇಸರ, ನಗು, ಅಳು, ಸಿಟ್ಟು ಹೀಗೆ ಹಲವು ಭಾವನೆಗಳನ್ನು ನಾವು ಮನುಷ್ಯರಲ್ಲಿ ನೋಡಬಹುದು. ವಿಪರೀತ ಭಾವನೆಗಳಿಂದ ಮನುಷ್ಯರು ಕೆಲವೊಮ್ಮೆ ಇಮೋಷನಲ್ ಆಗುವುದೂ ಇದೆ. ಆದ್ರೆ ಭಾವನೆಗಳು ಮನುಷ್ಯನ ಆರೋಗ್ಯದ ಮೇಲೆ ಪ್ರಭಾವ ಬೀರಬಹುದು ಎಂದು ನೀವು  ಯಾವತ್ತಾದರೂ ಯೋಚಿಸಿದ್ದೀರಾ ? ಹೃದಯ ಮತ್ತು ಮೆದುಳು ಪರಸ್ಪರ ಪ್ರತ್ಯೇಕವಾಗಿಲ್ಲ ಎಂದು ನಾವು ತಿಳಿದಿರುವುದಿಲ್ಲ. ದೇಹದ ವಿವಿಧ ಭಾಗಗಳಲ್ಲಿ ನೆಲೆಗೊಂಡಿದ್ದರೂ, ಅಂಗಗಳು ನಿಕಟವಾಗಿ ಸಂಪರ್ಕ ಹೊಂದಿದ್ದು, ಭಾವನೆಗಳು ಮೆದುಳಿನ ಮೇಲೆ ಪರಿಣಾಮ ಬೀರಿದಾಗ, ಹೃದಯದ ಮೇಲೂ ಪರಿಣಾಮ ಬೀರುತ್ತದೆ. ನೀವು ಆತಂಕ, ಒತ್ತಡ ಮತ್ತು ಖಿನ್ನತೆಯಂತಹ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರೆ, ನೀವು ಹೃದಯದ ಸ್ಥಿತಿಯಿಂದ ಸಾಯುವ ಸಾಧ್ಯತೆ ಹೆಚ್ಚು ಎಂದು ಇತ್ತೀಚಿನ ಅಧ್ಯಯನಗಳು ಗಮನಿಸಿವೆ.

ಭಾವನೆಗಳು ಹೃದಯದ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತವೆ?
ಭಾವನೆಗಳು ಮೆದುಳು ಮತ್ತು ಹೃದಯದ ಮೇಲೆ ಎರಡು ವಿಭಿನ್ನ ರೀತಿಯಲ್ಲಿ ಪರಿಣಾಮ ಬೀರುತ್ತವೆ. ನೀವು ಒತ್ತಡಕ್ಕೊಳಗಾಗಿದ್ದರೆ, ಇದು ಆಯಾಸ, ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ. ನೀವು ಜಂಕ್ ಫುಡ್ ಅನ್ನು ಅತಿಯಾಗಿ ತಿನ್ನುತ್ತಿದ್ದರೆ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ ಮತ್ತು ಅಂತಿಮವಾಗಿ ಹೃದಯಾಘಾತ (Heart attack)ದಂತಹ ಹೃದಯ ಕಾಯಿಲೆ (Disease)ಗಳಿಗೆ ಕಾರಣವಾಗುತ್ತದೆ. ನೀವು ಈಗಾಗಲೇ ಹೃದ್ರೋಗದಿಂದ ಬಳಲುತ್ತಿದ್ದರೆ, ಪಂಪಿಂಗ್ ಮತ್ತು ರಕ್ತ ಪರಿಚಲನೆ ಈಗಾಗಲೇ ನಿಧಾನವಾಗಿದೆ ಎಂದರ್ಥ. ಇದು ಕೋಪ, ಹತಾಶತೆ, ಒತ್ತಡ ಮತ್ತು ಖಿನ್ನತೆಯಂತಹ ಬಲವಾದ ಭಾವನೆಗಳನ್ನು ಉಲ್ಬಣಗೊಳಿಸಬಹುದು.

Tap to resize

Latest Videos

ಹೃದಯ ವೈಫಲ್ಯಕ್ಕೆ ನಿದ್ರೆಯೂ ಒಂದು ಕಾರಣವಂತೆ!

ಒತ್ತಡ ಮನಸ್ಸಿನ ಮೇಲೆ ಪ್ರಭಾವ ಬೀರದಂತೆ ನಿಯಂತ್ರಿಸುವುದು ಹೇಗೆ ?
ಹೃದಯದ ಆರೋಗ್ಯದ ದೃಷ್ಟಿಯಿಂದ ಒತ್ತಡ (Pressure)ವನ್ನು ನಿಯಂತ್ರಿಸುವುದು ತುಂಬಾ ಮುಖ್ಯ. ಇದನ್ನು ಮಾಡಲು ಹಲವಾರು ಮಾರ್ಗಗಳಿವೆ, ಅವುಗಳಲ್ಲಿ ಕೆಲವನ್ನು ಕೆಳಗೆ ಪಟ್ಟಿಮಾಡಲಾಗಿದೆ:

ವೃತ್ತಿಪರರ ಸಹಾಯ ಪಡೆಯಿರಿ: ಒತ್ತಡ, ಆತಂಕ ಅಥವಾ ನಿರಂತರ ಚಿಂತೆಯನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಇವುಗಳು ಸಮಯದೊಂದಿಗೆ ಇನ್ನಷ್ಟು ಹೆಚ್ಚಾಗುತ್ತವೆ. ಹೀಗಾಗಿ ಇವುಗಳನ್ನು ಆರಂಭದಲ್ಲೇ ಬಗೆಹರಿಸಿಕೊಳ್ಳಿ. ಆದ್ದರಿಂದ, ವೃತ್ತಿಪರ ಚಿಕಿತ್ಸಕರಿಂದ ಸಹಾಯ ಪಡೆಯಿರಿ ಮತ್ತು ಅದರ ಬಗ್ಗೆ ಅವರೊಂದಿಗೆ ಮಾತನಾಡಿ.

ಹೃದಯ ಮತ್ತು ಮಿದುಳಿನ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಿರಿ: ಇದನ್ನು ಹೃದಯದ ಮನೋವಿಜ್ಞಾನ ಎಂದೂ ಕರೆಯುತ್ತಾರೆ, ಹಲವಾರು ಶೈಕ್ಷಣಿಕ ಕಾರ್ಯಕ್ರಮಗಳು, ಸಮಾಲೋಚನೆ ಅವಧಿಗಳು, ಚಿಕಿತ್ಸೆಗಳು ಮತ್ತು ತಂತ್ರಗಳು ಹೃದಯ ಮತ್ತು ಮೆದುಳಿನ ನಡುವೆ ವಿವೇಕಯುತ ಸಮತೋಲನವನ್ನು ಸಾಧಿಸಲು ನಿಮಗೆ ಸಹಾಯ ಮಾಡುತ್ತವೆ.

Health Tips : ಹೃದಯಕ್ಕೆ ಸಂಬಂಧಿಸಿದ ಖಾಯಿಲೆಗೆ ಕಾರಣವಾಗುತ್ತೆ ಬಾಲ್ಯದ ಅಭ್ಯಾಸ

ವ್ಯಾಯಾಮ ಮತ್ತು ತಾಲೀಮು: ಭಾವನಾತ್ಮಕವಾಗಿ ಫಿಟ್ ಆಗಲು, ದೈಹಿಕವಾಗಿಯೂ ಸದೃಢವಾಗಿರುವುದು ಮುಖ್ಯ. ವ್ಯಾಯಾಮವು ಮಾನಸಿಕ ಒತ್ತಡ ಮತ್ತು ಖಿನ್ನತೆಗೆ ಕಾರಣವಾಗುವ ಚಿಂತೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಬಹಳಷ್ಟು ಅಧ್ಯಯನಗಳು ನಿರ್ಧರಿಸಿವೆ. ವಿವಿಧ ರೀತಿಯ ಕಾರ್ಡಿಯೋ ವ್ಯಾಯಾಮಗಳು ಜಾಗಿಂಗ್, ಈಜು, ಸೈಕ್ಲಿಂಗ್ ಅಥವಾ ಓಟ ಇತ್ಯಾದಿಗಳು ಆತಂಕ ಮತ್ತು ಖಿನ್ನತೆಯನ್ನು ಕಡಿಮೆ ಮಾಡುತ್ತದೆ ಮತ್ತು ಸ್ವಾಭಿಮಾನ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

ಉತ್ತಮ ಆಹಾರವನ್ನು ಸೇವಿಸಿ: ಹೃದಯ ಮತ್ತು ಮಾನಸಿಕ ಆರೋಗ್ಯ (Mental Health) ಎರಡನ್ನೂ ಹೆಚ್ಚಿಸಲು ತಾಜಾ ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳನ್ನು ಒಳಗೊಂಡಿರುವ ಆರೋಗ್ಯಕರ, ಕಾಲೋಚಿತ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. ಇದು ನಿಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಇದರಿಂದ ಹೃದಯ ಸಂಬಂಧಿ ಆರೋಗ್ಯ ಸಮಸ್ಯೆಯೂ ಕಡಿಮೆಯಾಗುತ್ತದೆ.

click me!