ಕೊರೋನಾ ವೈರಸ್ ಕಾಟ ಇನ್ನೂ ಕಡಿಮೆಯಾಗಿಲ್ಲ. ಚಳಿಗಾಲದ ಆರಂಭದಲ್ಲಿರುವಾಗಲೇ ಹಿಮಾಚಲ ಪ್ರದೇಶದ ಒಂದು ಗ್ರಾಮದ ಜನರೆಲ್ಲ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ
ಮನಾಲಿ(ನ.20): ಹಿಮಾಚಲ ಪ್ರದೇಶದ ಲಹೌಲ್‌ನ ತೋರಂಗ್ ಹಳ್ಳಿಯಲ್ಲಿ 52 ವರ್ಷದ ಭೂಷಣ್ ಠಾಕೂರ್ ಅವರನ್ನು ಹೊರತುಪಡಿಸಿ ಎಲ್ಲರಿಗೂ ಕೊರೋನಾ ಪಾಸಿಟಿವ್ ದೃಢ ಪಟ್ಟಿದೆ. ಲಹೌಲ್‌ನ ಸ್ಪಿಟಿ ಕಣಿವೆ ಕೊರೋನಾ ಸೋಂಕಿನಿಂದ ಅತಿಯಾಗಿ ಬಾಧಿಸಲ್ಪಟ್ಟ ಹಳ್ಳಿಯಾಗಿದೆ.
ಇದೇ ಕಾರಣದಿಂದಾಗಿ ಇಲ್ಲಿನ ಸ್ಥಳೀಯ ಆಡಳಿತ ಅಧಿಕಾರಿಗಳು ಪ್ರವಾಸಿಗರು ಅತ್ತ ಬರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಚಳಿಗಾಲವಾಗಿರುವುದರಿಂದ ಕಣಿವೆ ಹಳ್ಳಿಗಳಿಗೆ, ರೋಹ್ಟಂಗ್ ಟನಲ್‌ಗೆ ಪ್ರವಾಸಿಗರ ದಂಡೇ ಹರಿದು ಬರುತ್ತದೆ.
undefined
ಕೋವ್ಯಾಕ್ಸಿನ್ 3ನೇ ಹಂತದ ಪ್ರಯೋಗದ ನಡುವೆ ಭಾರತ್ ಬಯೋಕೆಟ್‌ನಿಂದ ಮತ್ತೊಂದು ಸಿಹಿ ಸುದ್ದಿ!
ಟೆಲಿಂಗ್ ನುಲ್ಲಾದಲ್ಲಿ ಪ್ರವಾಸಿಗರನ್ನು ನಿಷೇಧಿಸಲಾಗಿದೆ. ಪ್ರವಾಸಿಗರು ಲಹೌಲ್ ಗ್ರಾಮ ಪ್ರವೇಶಿಸುವುದನ್ನು ತಡೆಯಲಾಗಿದೆ. ಇದೀಗ ಈ ಕಣಿವೆ ಗ್ರಾಮವನ್ನೇ ಕಂಟೈನ್‌ಮೆಂಟ್ ಝೋನ್ ಎಂದು ಗುರುತಿಸಲಾಗಿದೆ.
ಮನಾಲಿ ಲೆಹ್ ಹೈವೇ ಮತ್ತು ತೋರಂಗ್‌ನಲ್ಲಿ 42 ಜನರಷ್ಟೇ ವಾಸವಿದ್ದಾರೆ. ಇದೀಗ ಚಳಿಗಾಲದವಾದ್ದರಿಂದ ಎಲ್ಲರೂ ಕುಲ್ಲು ಪ್ರದೇಶಕ್ಕೆ ಶಿಫ್ಟ್ ಆಗಿದ್ದಾರೆ. ಗ್ರಾಮದ ಜನರು ಸ್ವಯಂ ಪ್ರೇರಿತರಾಗಿ ಕೊರೋನಾ ಟೆಸ್ಟ್‌ಗೆ ಒಳಗಾಗಲು ನಿರ್ಧರಿಸಿದ್ದರು. ಇದೀಗ 42 ಜನರಲ್ಲಿ 41 ಜನರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.
ಭಾರತಕ್ಕೆ ಬಂತು Sputnik V ಕೊರೋನಾ ಲಸಿಕೆ, ಯಾರಿಗೆ ಮೊದಲು ಸಿಗಲಿದೆ?
ಧಾರ್ಮಿಕ ಸಮಾರಂಭದ ಸಮಸ್ಯೆಯಿಂದ ಜನರೆಲ್ಲ ಒಟ್ಟಿಗೆ ಸೇರುತ್ತಿದ್ದರು ಎನ್ನಲಾಗಿದೆ. ಇದರಿಂದಾಗಿಯೇ ಇಲ್ಲಿ ಕೊರೋನಾ ಸಾಮೂಹಿಕ ಹಂತಕ್ಕೆ ತಲುಪಿದೆ ಎನ್ನಲಾಗಿದೆ. ಈ ಗ್ರಾಮದ ಸುತ್ತಲಿನ ಜನರಿಗೂ ಕೊರೋನಾ ದೃಢಪಟ್ಟಿದೆ.