Women Health: ಮುಟ್ಟಿನ ವೇಳೆ ಐದಕ್ಕಿಂತ ಹೆಚ್ಚು ದಿನ ರಕ್ತಸ್ರಾವವಾಗುತ್ತಾ?

By Suvarna News  |  First Published Apr 29, 2023, 5:28 PM IST

ಮುಟ್ಟು, ಪ್ರತಿಯೊಬ್ಬ ಮಹಿಳೆ ಪ್ರತಿ ತಿಂಗಳು ಅನುಭವಿಸುವ ನೋವು, ಯಾತನೆ. ನಿಯಮಿತ ಮುಟ್ಟು ಮಹಿಳೆ ಆರೋಗ್ಯವನ್ನು ಹೇಳುತ್ತದೆ. ಅನಿಯಮಿತ ಮುಟ್ಟು ಮಹಿಳೆಯ ಅನಾರೋಗ್ಯವನ್ನು ಹೇಳುತ್ತದೆ. ಪ್ರತಿಯೊಬ್ಬ ಮಹಿಳೆಗೂ ಮುಟ್ಟಿನ ಬಗ್ಗೆ ಕೆಲ ಸಂಗತಿ ತಿಳಿದಿರಬೇಕಾಗುತ್ತದೆ. 
 


ಋತುಸ್ರಾವ ಎಲ್ಲ ಹೆಣ್ಣುಮಕ್ಕಳಲ್ಲಿ ನಡೆಯುವ ನೈಸರ್ಗಿಕ ಕ್ರಿಯೆ. ತಿಂಗಳಲ್ಲಿ ಮೂರುರಿಂದ ನಾಲ್ಕು ದಿನ ಇದರ ನೋವು, ಕಿರಿಕಿರಿಯನ್ನು ಅನುಭವಿಸದೇ ಬೇರೆ ವಿಧಿಯಿಲ್ಲ. ಕೆಲವರಿಗೆ ಮುಟ್ಟಿನ ಸಮಯದಲ್ಲಿ ಹೊಟ್ಟೆನೋವು, ವಿಪರೀತ ರಕ್ತಸ್ರಾವ, ಕಾಲು ಸೊಂಟಗಳಲ್ಲಿ ನೋವು ಉಂಟಾಗುತ್ತದೆ. ಅವರವರ ದೇಹ ಪ್ರಕೃತಿಗೆ ಹಾಗೂ ಆನುವಂಶಿಕವಾಗಿಯೂ ಈ ತರಹದ ನೋವುಗಳು ಕಾಣಿಸಿಕೊಳ್ಳುತ್ತವೆ.
ಮುಟ್ಟಿನ ಸಮಯದಲ್ಲಿನ ರಕ್ತಸ್ರಾವ ಕೂಡ ಪ್ರತಿ ಹೆಣ್ಣಿನಲ್ಲೂ ವಿಭಿನ್ನವಾಗಿರುತ್ತದೆ. ಕೆಲವರಿಗೆ ಕಡಿಮೆ ಬ್ಲೀಡಿಂಗ್ ಆದರೆ ಕೆಲವರಿಗೆ ವಾರಗಟ್ಟಲೆ ಆದರೂ ಬ್ಲೀಡಿಂಗ್ ನಿಲ್ಲುವುದಿಲ್ಲ. ಹೀಗೆ ಐದು ದಿನಗಳಿಗೂ ಹೆಚ್ಚು ದಿನ ರಕ್ತಸ್ರಾವ ಆಗುವುದು ಆರೋಗ್ಯವಂತ ಶರೀರದ ಲಕ್ಷಣವಲ್ಲ. ಇದು ಯಾವುದೋ ರೋಗದ ಲಕ್ಷಣವೂ ಆಗಿರಬಹುದು.

ಋತುಚಕ್ರದ ಸಮಯದಲ್ಲಿ ಮಹಿಳೆಯರ ಗರ್ಭಾಶಯ (Uterus) ದ ಲೋಳೆಯ ಪೊರೆಯು ಸಂಭವನೀಯ ಗರ್ಭಧಾರಣೆಗೆ ಸಿದ್ಧಗೊಂಡು ದಪ್ಪವಾಗುತ್ತದೆ. ಒಂದು ವೇಳೆ ಗರ್ಭಧಾರಣೆ (pregnancy) ಯಾಗದೇ ಇದ್ದಲ್ಲಿ ಇದು ಋತುಚಕ್ರದ ಸಮಯದಲ್ಲಿ ರಕ್ತದ ಜೊತೆ ಹೊರಹೋಗುತ್ತದೆ ಹೆಣ್ಣುಮಕ್ಕಳು ಋತುಮತಿಯಾದರೆಂದರೆ ಅವರ ಶರೀರವು ಗರ್ಭಧಾರಣೆಗೆ ಸಿದ್ಧವಾಗುತ್ತಿದೆ ಎಂಬ ಅರ್ಥವನ್ನು ಸೂಚಿಸುತ್ತದೆ. ಸಾಮಾನ್ಯವಾಗಿ ಮೂರರಿಂದ ಏಳು ದಿನ ರಕ್ತಸ್ರಾವ (Bleeding) ವಾಗುತ್ತದೆ. ಏಳುದಿನದ ನಂತರವೂ ರಕ್ತಸ್ರಾವವಾಗುತ್ತಿದ್ದರೆ ಅದನ್ನು ಕಡೆಗಣಿಸಬಾರದು.

Latest Videos

undefined

ಏಳು ದಿನಗಳ ನಂತರವೂ ಬ್ಲೀಡಿಂಗ್ ಆಗಲು ಕಾರಣವೇನು? :  ಋತುಚಕ್ರದ ಪ್ರಕ್ರಿಯೆಯು ಅನೇಕ ಅಂಶಗಳಿಗೆ ಸಂಬಂಧಿಸಿದೆ. ಕೆಲವೊಮ್ಮೆ ಇದು ಸಾಮಾನ್ಯಕ್ಕಿಂತಲೂ ಹೆಚ್ಚಿನ ಸಮಯ ಇರುತ್ತದೆ ಮತ್ತು ವಯಸ್ಸಿಗೆ ಅನುಗುಣವಾಗಿಯೂ ಇದರಲ್ಲಿ ಬದಲಾವಣೆಗಳು ಕಂಡುಬರುತ್ತವೆ. ಹದಿಹರೆಯದ ಹೆಣ್ಣುಮಕ್ಕಳಲ್ಲಿ ಹಾರ್ಮೋನ್ ಅಸಮತೋಲನದಿಂದ ಮುಟ್ಟಿನ ಅಸ್ವಸ್ಥತೆಗಳು ಹೆಚ್ಚು ಕಾಡುತ್ತವೆ. ಸಾಮಾನ್ಯವಾಗಿ ಪ್ರೌಢಾವಸ್ಥೆಯ ಆರಂಭದಲ್ಲಿ ಮುಟ್ಟು ದೀರ್ಘಾವಧಿಯದ್ದಾಗಿರುತ್ತದೆ. ವಯಸ್ಕರಲ್ಲಿ ಗರ್ಭಧಾರಣೆಗೆ ಸಂಬಂಧಿಸಿದ ಖಾಯಿಲೆಗಳಾದ ಪ್ರೈಬ್ರಾಯ್ಡ್ ಗಳು ಮತ್ತು ಅಡೆನೊಮೈಯೋಸಿಸಿ್ ಮತ್ತು ಸಾಂಕ್ರಾಮಿಕದಿಂದ ರಕ್ತಸ್ರಾವ ಉಂಟಾಗಬಹುದು. ಮುಟ್ಟಿನ ಅಡಚಣೆಗಳು ಅಪಸ್ಥಾನೀಯ ಕೊಳವೆಯ ಗರ್ಭಧಾರಣೆ ಅಥವಾ ಗರ್ಭಪಾತದಂತಹ ತೊಂದರೆ ಹೆಚ್ಚುತ್ತದೆ. ಅನೇಕ ತಜ್ಞರು ಹೇಳುವಂತೆ ಮಹಿಳೆಯರಿಗೆ ಏಳು ದಿನಗಳಿಗೂ ಹೆಚ್ಚಿನ ಕಾಲ ರಕ್ತಸ್ರಾವವಾದರೆ, ರಕ್ತ ಹೆಪ್ಪುಗಟ್ಟಿದರೆ ಅದನ್ನು ನಿರ್ಲಕ್ಷಿಸಬಾರದು ಜೊತೆಗೆ ರಕ್ತದ ಬಣ್ಣದ ಕಡೆಗೂ ಲಕ್ಷ್ಯವಿರಬೇಕು.

ಅಬ್ಬಬ್ಬಾ.ಎರಡು ಶಿಶ್ನದೊಂದಿಗೆ ಜನಿಸಿದ ಮಗು, ಗುದದ್ವಾರವೇ ಇಲ್ಲ, ಬೆಚ್ಚಿಬಿದ್ದ ವೈದ್ಯರು!

ಈ ಕಾರಣಗಳಿಂದ ಹೆಚ್ಚಿನ ರಕ್ತಸ್ರಾವವಾಗಬಹುದು :  ಯಾವುದೇ ಮಹಿಳೆಗೆ 20 ದಿನಗಳ ಕಾಲ ಬ್ಲೀಡಿಂಗ್ ಆದರೆ ಅದನ್ನು ಗಂಭೀರವಾಗೇ ತೆಗೆದುಕೊಳ್ಳಬೇಕು. ಹೀಗೆ ಹೆಚ್ಚಿನ ಕಾಲ ನಡೆಯುವ ಋತುಚಕ್ರದ ಹಿಂದೆ ಕೆಲವು ಕಾರಣಗಳಿರುತ್ತವೆ.

ಹಾರ್ಮೋನ್ ಅಸಮತೋಲನ : ಮಹಿಳೆಯರಲ್ಲಿ ಸಂತಾನೋತ್ಪತ್ತಿ ಪ್ರಕ್ರಿಯೆಗೆ ಕಾರಣವಾದ ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಹಾರ್ಮೋನುಗಳ ಅಸಮತೋಲನದಿಂದ ಇಪ್ಪತ್ತು ದಿನಗಳ ದೀರ್ಘಾವಧಿ ಮುಟ್ಟು ಸಂಭವಿಸಬಹುದು.

ಫೈಬ್ರಾಯ್ಡ್ :  ಇದು ಎಲ್ಲ ಮಹಿಳೆಯರ ಗರ್ಭಾಶಯದಲ್ಲೂ ಇರುವ ಸಣ್ಣ ಗಡ್ಡೆಯಾಗಿದೆ. ಇದು ಮುಟ್ಟಿನ ಸಮಯದಲ್ಲಿ ಹೆಚ್ಚಿನ ನೋವು, ಸೆಳೆತ, ಅಧಿಕ ರಕ್ತಸ್ರಾವ, ಲೈಂಗಿಕ ಕ್ರಿಯೆಯಲ್ಲಿ ನೋವು ಹಾಗೂ ಕಾಲು ಮತ್ತು ಸೊಂಟ ನೋವಿಗೆ ಕಾರಣವಾಗುತ್ತದೆ. ಇದರಿಂದ ಗರ್ಭಪಾತದ ಅಪಾಯ ಮತ್ತು ಮಹಿಳೆಯರ ಫಲವತ್ತತೆಯ ಸಮಸ್ಯೆಯನ್ನು ಉಂಟುಮಾಡುತ್ತದೆ.

ಪಾಲಿಪ್ಸ್ : ಪಾಲಿಪ್ಸ್ ಗರ್ಭಾಶಯದೊಳಗಿನ ಉಂಡೆಯಾಗಿದ್ದು ಎಂಡೊಮೆಟ್ರಿಯಮ್ ಜೀವಕೋಶಗಳ ಅಸಹಜ ಬೆಳವಣಿಗೆಯಿಂದಾಗಿ ರೂಪಗೊಳ್ಳುತ್ತದೆ. ಅತೀ ವಿರಳವಾಗಿ ಇದು ಕ್ಯಾನ್ಸರ್ ಆಗಿ ಬದಲಾಗುತ್ತದೆ.

ಕ್ಯಾನ್ಸರ್ : ಗರ್ಭಾಶಯ ಅಥವಾ ಗರ್ಭಕಂಠದೊಳಗೆ ಕ್ಯಾನ್ಸರ್ ಬೆಳವಣಿಗೆಯಾದಾಗ ಹೆಚ್ಚಿನ ರಕ್ತಸ್ರಾವವಾಗಬಹುದು.

Permanent Tattoo: ಶಾಶ್ವತ ಟ್ಯಾಟೂಗೆ ಗುಡ್ ಬೈ ಹೇಳೋದು ಹೀಗೆ

ಈ ಖಾಯಿಲೆಗಳಿದ್ದಾಗಲೂ ರಕ್ತಸ್ರಾವ ಹೆಚ್ಚಾಗುತ್ತದೆ:  ಎಚ್ ಐ ವಿ, ರುಬೆಲಾ, ಮಂಪ್ಸ್ ಮುಂತಾದ ಖಾಯಿಲೆಗಳು ನಿಮ್ಮ ರಕ್ತವನ್ನು ತೆಳುವಾಗಿಸುತ್ತವೆ. ಅದರಿಂದ ಹೆಚ್ಚು ರಕ್ತಸ್ರಾವವಾಗಬಹುದು.

ಗರ್ಭನಿರೋಧಕ : ಇಂಟ್ರಾ ಯುಟ್ರೈನ್ ಡಿವೈಸ್ ನಂತಹ ಗರ್ಭನಿರೋಧಕ ಸಾಧನವನ್ನು ಸರಿಯಾಗಿ ಅಳವಡಿಸದಿದ್ದರೂ ಬ್ಲೀಡಿಂಗ್ ಹೆಚ್ಚುತ್ತದೆ.

ಮಾತ್ರೆಗಳು : ಗರ್ಭನಿರೋಧಕ ಮಾತ್ರೆಗಳನ್ನು ಸರಿಯಾದ ರೀತಿಯಲ್ಲಿ ತೆಗೆದುಕೊಳ್ಳದೇ ಇದ್ದಾಗ ಹಾಗೂ ಎಸ್ಪಿರಿನ್ ನಂತಹ ಮಾತ್ರೆಗಳಿಂದ ಸಮಸ್ಯೆಗಳು ಎದುರಾಗುತ್ತವೆ. 

ಪೆಲ್ವಿಕ್ ಇನ್ಫೆಕ್ಷನ್ : ಮಹಿಳೆಯರಿಗೆ ಪೆಲ್ವಿಕ್ ಇನಫೆಕ್ಷನ್ ಕೂಡ ಲಾಂಗ್ ಪೀರಿಯಡ್ಸ್ ಗೆ ಕಾರಣವಾಗಿದೆ.

ಚಿಕಿತ್ಸೆ ಏನು? : ಹೆಚ್ಚಿನ ರಕ್ತಸ್ರಾವ ಮತ್ತು ನೋವಿರುವ ಸಂದರ್ಭದಲ್ಲಿ ಮಾತ್ರೆಗಳನ್ನು ನೀಡಿ ವಾಸಿಮಾಡಲಾಗುತ್ತದೆ. ಮಾತ್ರೆಗಳಿಂದಲೂ ವಾಸಿಯಾಗದೇ ಇದ್ದಾಗ ಬಯೋಪ್ಸಿ ಅಥವಾ ಬೇರೆ ಮಾರ್ಗಗಳನ್ನು ಅನುಸರಿಸಬೇಕಾಗುತ್ತದೆ. 
 

click me!