Health ಹಾಳು ಮಾಡುತ್ತೆ ಬೆಡ್ ರೂಮ್ ನ ಬಣ್ಣ ಬಣ್ಣದ ಲೈಟ್

By Suvarna News  |  First Published Mar 29, 2022, 2:58 PM IST

ಕೋಣೆ ಸಂಪೂರ್ಣ ಕತ್ತಲಿದ್ರೆ ನಿದ್ರೆ ಬರುತ್ತೆ ಎನ್ನುವವರಿದ್ದಾರೆ. ಇನ್ನು ಕೆಲವರು ಬೆಳಕಿಲ್ಲದೆ ನಿದ್ರೆ ಬರೋದಿಲ್ಲ ಎನ್ನುತ್ತಾರೆ. ರಾತ್ರಿ ರೂಮಿನಲ್ಲಿ ಲೈಟ್ ಹಾಕಿ ಮಲಗುವವರಲ್ಲಿ ನೀವೂ ಒಬ್ಬರಾಗಿದ್ದರೆ ಇದು ಕೆಟ್ಟ ಹವ್ಯಾಸ. ನಿಮ್ಮ ಆರೋಗ್ಯವನ್ನು ಇದು ಹಾಳು ಮಾಡುತ್ತದೆ. 
 


ಬೆಡ್ ರೂಮಿ (Bedroom) ಗೆ ನಾವು ವಿಶೇಷ ಮೆರಗು ನೀಡ್ತೇವೆ. ಬೆಡ್ ರೂಮಿನ ಸೌಂದರ್ಯ (Beauty) ಕ್ಕೆ ಹೆಚ್ಚಿನ ಮಹತ್ವ ನೀಡ್ತೇವೆ. ಜನರು ಬಣ್ಣ (Color) ಬಣ್ಣದ ಲೈಟ್ (Light) ಗಳನ್ನು ಕೋಣೆ (Room) ಗೆ ಹಾಕ್ತಾರೆ. ಫ್ಯಾಷನ್ (Fashion) ಎಂಬ ಕಾರಣಕ್ಕೆ ಮಾತ್ರ ಲೈಟ್ ಹಾಕುವುದಿಲ್ಲ. ಅನೇಕರ ಬೆಡ್ ರೂಮಿನಲ್ಲಿ ರಾತ್ರಿ ದೀಪ ಉರಿಯುತ್ತಿರುತ್ತದೆ. ಬಣ್ಣ ಬಣ್ಣದ ಲೈಟ್ ನಲ್ಲಿ ಮಲಗುವುದು ಅನೇಕರಿಗೆ ಅಭ್ಯಾಸ. ಲೈಟ್ ಇಲ್ಲದೆ ಹೋದ್ರೆ ನಿದ್ರೆ ಬರುವುದಿಲ್ಲ ಎನ್ನುವವರಿದ್ದಾರೆ. ಮತ್ತೆ ಕೆಲವರು ರಾತ್ರಿ ಲೈಟ್ ನಲ್ಲಿ ಬೆಡ್ ರೂಮ್ ಸುಂದರವಾಗಿ ಕಾಣುತ್ತದೆ ಎಂಬ ಕಾರಣಕ್ಕೆ ಲೈಟ್ ಹಾಕಿ ಮಲಗ್ತಾರೆ. ಇದೇ ಕಾರಣಕ್ಕೆ ಮಾರುಕಟ್ಟೆಯಲ್ಲಿ ಬಣ್ಣ ಬಣ್ಣದ ಲೈಟ್ ಗಳಿಗೆ ಸಾಕಷ್ಟು ಬೇಡಿಕೆ ಹೆಚ್ಚಿದೆ. ಕೋಣೆಯಲ್ಲಿ ದೀಪ ಹಚ್ಚಿ ಮಲಗುವವರು ನೀವೂ ಒಬ್ಬರಾಗಿದ್ದರೆ ಎಚ್ಚೆತ್ತುಕೊಳ್ಳಿ. ಇಂದಿನಿಂದಲೇ ಲೈಟ್ ಆರಿಸಿ ಕತ್ತಲೆಯಲ್ಲಿ ಮಲಗುವ ಅಭ್ಯಾಸ ಮಾಡಿಕೊಳ್ಳಿ. ಇದ್ರಿಂದ ನಿಮ್ಮ ಆರೋಗ್ಯ ಬಹಳಷ್ಟು ಹಾನಿಗೊಳಗಾಗಬಹುದು. 

ರಾತ್ರಿ ಲೈಟ್ ಹಾಕಿ ಮಲಗಿದ್ರೆ ಏನೆಲ್ಲ ಸಮಸ್ಯೆಯಾಗುತ್ತೆ ಗೊತ್ತಾ? 
ಕೆಲ ದಿನಗಳ ಹಿಂದೆ ಇದ್ರ ಬಗ್ಗೆ ಅಧ್ಯಯನವೊಂದು ನಡೆದಿದೆ. ಅಧ್ಯಯನದ ಪ್ರಕಾರ, ರಾತ್ರಿಯಲ್ಲಿ ಕೃತಕ ಬೆಳಕಿನಲ್ಲಿ ಮಲಗುವುದು ದೇಹದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಚಿಕಾಗೋದ ನಾರ್ತ್‌ವೆಸ್ಟರ್ನ್ ವಿಶ್ವವಿದ್ಯಾಲಯದ ಸಂಶೋಧಕರು ಈ ಅಧ್ಯಯನವನ್ನು ಮಾಡಿದ್ದಾರೆ. ಮಲಗುವ ಸಮಯದಲ್ಲಿ ವಿವಿಧ ರೀತಿಯ ದೀಪಗಳ ಅಪಾಯಗಳ ಬಗ್ಗೆ ಅವರು ಸಂಶೋಧನೆ ಮಾಡಿದ್ದಾರೆ. ಒಂದು ರಾತ್ರಿ ಕೃತಕ ಬೆಳಕಿನಲ್ಲಿ ಮಲಗುವುದರಿಂದ ಗ್ಲೂಕೋಸ್ ಮಟ್ಟ ಹೆಚ್ಚಾಗುತ್ತದೆ ಎಂದು ಸಂಶೋಧನೆಯು ಕಂಡುಹಿಡಿದಿದೆ. ಚಯಾಪಚಯವು ಹದಗೆಡಲು ಪ್ರಾರಂಭಿಸುತ್ತದೆ ಮತ್ತು ಹೃದ್ರೋಗ, ಮಧುಮೇಹ, ಮೆಟಾಬಾಲಿಕ್ ಸಿಂಡ್ರೋಮ್ ಅಪಾಯವು ಹೆಚ್ಚಾಗಬಹುದು ಎಂದು ಅಧ್ಯಯನದಲ್ಲಿ ಹೇಳಲಾಗಿದೆ. 

Tap to resize

Latest Videos

ಪುಟ್ಟ ಮಕ್ಕಳ ಆರೋಗ್ಯಕ್ಕೆ ಎಷ್ಟು ಗಂಟೆ ನಿದ್ದೆಯ ಅಗತ್ಯವಿದೆ ?

ಅಧ್ಯಯನ ನಡೆದಿದ್ದು ಹೇಗೆ? : ಈ ಅಧ್ಯಯನದಲ್ಲಿ 20 ಜನರು ಪಾಲ್ಗೊಂಡಿದ್ದರು. ಒಂದು ಕೋಣೆಯಲ್ಲಿ ಕೃತಕ ಬೆಳಕನ್ನು ಹಾಕಲಾಗಿತ್ತು ಮತ್ತು ಒಂದು ಕೋಣೆಯಲ್ಲಿ ಮಂದಬೆಳಕಿತ್ತು. ಎರಡೂ ಕೊಠಡಿಗಳಲ್ಲಿ, 10-10 ಜನರನ್ನು 1-1 ದಿನ ಮಲಗಿಸಿ ನಂತರ ಅವರನ್ನು ಮೌಲ್ಯಮಾಪನ ಮಾಡಲಾಯಿತು. ಲೈಟ್ ಹಾಕಿರುವ ರೂಮಿನಲ್ಲಿ ಮಲಗಿದವರಲ್ಲಿ ಇನ್ಸುಲಿನ್ ಪ್ರತಿರೋಧವು ಶೇಕಡಾ 15 ರಷ್ಟು ಕಡಿಮೆಯಾಗಿದೆ ಎಂಬುದು ಅಧ್ಯಯನದಿಂದ ಪತ್ತೆಯಾಯ್ತು. ಆದರೆ ಮಂದಬೆಳಕಿನ ಕೋಣೆಯಲ್ಲಿ ಮಲಗುವವರಲ್ಲಿ ಇನ್ಸುಲಿನ್ ಪ್ರತಿರೋಧವು ಶೇಕಡಾ 4 ರಷ್ಟು ಕಡಿಮೆಯಾಗಿತ್ತು. ಕೃತಕ ಬೆಳಕಿಗೆ ದೇಹವನ್ನು ಒಡ್ಡಿಕೊಳ್ಳುವುದು ಇನ್ಸುಲಿನ್ ಪ್ರತಿರೋಧವನ್ನು ಹೆಚ್ಚಿಸುತ್ತದೆ ಮತ್ತು ನರಮಂಡಲವನ್ನು ಹೆಚ್ಚು ಸಕ್ರಿಯಗೊಳಿಸುತ್ತದೆ. ವಿಜ್ಞಾನಿಗಳ ಪ್ರಕಾರ, ನಿದ್ರೆ ನಮ್ಮ ಚಯಾಪಚಯ ಸಮಸ್ಯೆ ಮೇಲೆ ಪರಿಣಾಮ ಬೀರುತ್ತದೆಯಂತೆ. ಪ್ರಕಾಶಮಾನವಾದ ಬೆಳಕು ಮತ್ತು  ಕಡಿಮೆ ಬೆಳಕಿನಲ್ಲಿ ಮಲಗಿದ್ದವರ ಮಧ್ಯೆ ರಕ್ತದ ಸಕ್ಕರೆಯ ಮಟ್ಟದಲ್ಲಿ ಯಾವುದೇ ಗಮನಾರ್ಹ ವ್ಯತ್ಯಾಸ ಕಂಡುಬಂದಿಲ್ಲ. ಆದರೆ ಕೋಣೆಯ ಕೃತಕ  ಬೆಳಕಿನಲ್ಲಿ ಮಲಗಿದ್ದ ಜನರ ಇನ್ಸುಲಿನ್ ಮಟ್ಟದಲ್ಲಿ ಹೆಚ್ಚಳ ಕಂಡು ಬಂದಿತ್ತು ಎಂದು ಅಧ್ಯಯನದಲ್ಲಿ ಹೇಳಲಾಗಿದೆ. 

ಗುಣಮಟ್ಟದ ನಿದ್ರೆ ಮೇಲೆ ಪರಿಣಾಮ : ನಿದ್ರೆ ಗುಣಮಟ್ಟದ ಮೇಲೂ ಬೆಳಕು ಪರಿಣಾಮ ಬೀರುತ್ತದೆ ಎಂಬುದನ್ನು ಸಂಶೋಧಕರು ಹೇಳಿದ್ದಾರೆ. ಕೃತಕ ಬೆಳಕಿನಲ್ಲಿ ಮಲಗುವ ಜನರ ನಿದ್ರೆ ಕಡಿಮೆ ಬೆಳಕಿನಲ್ಲಿ ಮಲಗುವ ಜನರಿಗಿಂತ ಕಡಿಮೆಯಿರುತ್ತದೆ. ಕೃತಕ ಬೆಳಕಿನಲ್ಲಿ ಮಲಗುವ ಜನರು ಉತ್ತಮ ನಿದ್ರೆ ಪಡೆಯುವುದಿಲ್ಲವೆಂದು ಅಧ್ಯಯನದಲ್ಲಿ ಹೇಳಲಾಗಿದೆ.

ವಿಟಮಿನ್ ಮಾತ್ರೆಗಳನ್ನು ತಿನ್ತಿದ್ದೀರಾ ? ಹಾಗಿದ್ರೆ ಈ ವಿಚಾರಗಳನ್ನು ತಿಳ್ಕೊಳ್ಳಿ

ಅಧ್ಯಯನದ ಫಲಿತಾಂಶವೇನು? : ರಾತ್ರಿ ಕೃತಕ ಬೆಳಕು,ಜನರ ನರಮಂಡಲವನ್ನು ಸಕ್ರಿಯಗೊಳಿಸುತ್ತದೆ ಮತ್ತು ಕಾರ್ಡಿಯೋಮೆಟಾಬಾಲಿಕ್ ಕಾರ್ಯವನ್ನು ಬದಲಾಯಿಸುತ್ತದೆ. ನಗರಗಳಲ್ಲಿ ವಾಸಿಸುವ ಜನರ ಮೇಲೆ ಇದ್ರ ಪರಿಣಾಮ ಹೆಚ್ಚಿರುತ್ತದೆ. ಯಾಕೆಂದ್ರೆ ಕೋಣೆ ಹೊರಗಿನ ಬೆಳಕು ಕೂಡ ಅವರ ನಿದ್ರೆ ಹಾಳು ಮಾಡುತ್ತದೆ. 

click me!