Post Covid 19 Skincare : ಕೊರೋನಾ ಹಾಳು ಮಾಡಿದ ತ್ವಚೆಯನ್ನು ಹೀಗೆ ಸರಿ ಮಾಡಿಕೊಳ್ಳಿ

Suvarna News   | Asianet News
Published : Feb 15, 2022, 05:56 PM ISTUpdated : Feb 15, 2022, 05:58 PM IST
Post Covid 19 Skincare : ಕೊರೋನಾ ಹಾಳು ಮಾಡಿದ ತ್ವಚೆಯನ್ನು ಹೀಗೆ ಸರಿ ಮಾಡಿಕೊಳ್ಳಿ

ಸಾರಾಂಶ

ಒಮ್ಮೆ ಒಬ್ಬ ವ್ಯಕ್ತಿಗೆ ಕೋವಿಡ್ ಬಂದು ಹೋದರೆ ಸಮಸ್ಯೆ ಅಲ್ಲಿಗೆ ಮುಗಿಯದೆ ಅದರ ಪರಿಣಾಮ ತ್ವಚೆಯ ಮೇಲೆ ಕಾಣಿಸಿಕೊಳ್ಳಬಹುದು. ಕೋವಿಡ್ ನಂತರ ತ್ವಚೆಯನ್ನು ಸರಿಯಾಗಿ ಆರೈಕೆ ಮಾಡದೆ ಹೋದರೆ ಪರಿಸ್ಥಿತಿ ಗಂಭೀರವಾದೀತು ಎಚ್ಚರ..

ಕೋವಿಡ್ 19 (Covid) ಅಥವಾ ಒಮಿಕ್ರೋನ್ ರೋಗ ಲಕ್ಷಣಗಳು ನಿಮ್ಮಲ್ಲಿ ಕಾಣಿಸಿಕೊಂಡ ಬಳಿಕ ಸಮಸ್ಯೆಯನ್ನು ನಿವಾರಿಸಿಕೊಂಡು. ಇನ್ನೇನು ತೊಂದರೆ ಇಲ್ಲ ನಾವು ಆರೋಗ್ಯವಾಗಿದ್ದೇವೆ ಎಂದು ಬೀಗುತ್ತಿರುವವರಿಗೆ ಇಲ್ಲೊಂದು ಕಿವಿಮಾತು.‌. ಸಾಮಾನ್ಯವಾಗಿ ಕೋವಿಡ್ ಬಂದ ಸಂದರ್ಭದಲ್ಲಿ ಉಸಿರಾಟದ ಸಮಸ್ಯೆ, ಗಂಟಲು ನೋವಿನ ಸಮಸ್ಯೆ ಹಾಗೂ ಕೆಮ್ಮು ಇಂತಹ ರೋಗಲಕ್ಷಣಗಳನ್ನು ಎದುರಿಸಿರುತ್ತೀರಿ. ಆದರೆ, ಇದರ ಪರಿಣಾಮವಾಗಿ ಮುಂದೆ ನಿಮ್ಮ ಚರ್ಮದಲ್ಲಿ ರಾಷಸ್, ಅಲರ್ಜಿಗಳು, ಕೆಂಪು ಗುಳ್ಳೆಗಳು ಕೊರೋನಾದಿಂದ ಚೇತರಿಸಿಕೊಂಡ ಬಳಿಕ ಕಾಣಿಸಿಕೊಳ್ಳುತ್ತವೆ. 

ಕೋವಿಡ್‌ ನಂತರದ ಸಮಸ್ಯೆಗಳು

ತಜ್ಞರು ಹೇಳುವ ಪ್ರಕಾರ ಇಂತಹ ಸಮಸ್ಯೆಗಳನ್ನು ಹೆಚ್ಚು ದಿನಗಳ ಕಾಲ ನಿರ್ಲಕ್ಷಿಸಬಾರದು (Ignore). ಉಸಿರಾಟದ ಸಮಸ್ಯೆ ಹೃದಯಕ್ಕೆ ಸಂಬಂಧಪಟ್ಟಂತಹ ಸಮಸ್ಯೆಗಳು ಒಂದು ಕಡೆಯಾದರೆ ಚರ್ಮಕ್ಕೆ ಸಂಬಂಧಿಸಿದಂತಹ ತೊಂದರೆಗಳು ಮತ್ತೊಂದೆಡೆ. ಇಂತಹ ಚರ್ಮಕ್ಕೆ ಸಂಬಂಧಪಟ್ಟಂತಹ ತೊಂದರೆಗಳು ಹೆಚ್ಚಾಗಿ ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತದೆ ಹಾಗೂ ವಯೋವೃದ್ಧರೂ (Aged) ಕೂಡ ಸಮಸ್ಯೆ ಎದುರಿಸಬೇಕಾಗುವುದು. ಈ ಕುರಿತಾಗಿ ವೈದ್ಯರು (Doctor) ಏನು ಹೇಳುತ್ತಾರೆಂದರೆ ನಿಮಗೆ ಮೊದಲು ಇಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಕೋರೋನಾ ಬಂದು ಹೋದ ಬಳಿಕ ಇದು ಇನ್ನೂ ಹೆಚ್ಚಾಗಬಹುದು. ಹಾಗಾಗಿ, ಚರ್ಮದಲ್ಲಿ ರಾಷಸ್ ಆಗುವುದು, ಅಲರ್ಜಿ ಆಗುವುದು, ಕೆಂಪು ಗುಳ್ಳೆಗಳು ಕಾಣಿಸಿಕೊಳ್ಳುವುದು. ಇಂತಹ ಯಾವುದೇ ತ್ವಚೆಯ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ, ಆದಷ್ಟು ಶೀಘ್ರವಾಗಿ ನಿಮ್ಮ ವೈದ್ಯರಲ್ಲಿಗೆ ತೆರಳಿ, ಇದಕ್ಕೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ.

Organ Donation: ಮೆದುಳು ನಿಷ್ಕ್ರಿಯಗೊಂಡಾಗ ಯಾವ ಅಂಗ ದಾನ ಮಾಡಬಹುದು?

ಮೋನೋಕ್ಲೋನಲ್ ವಿರೋಧಿ ಚಿಕಿತ್ಸೆಯನ್ನು ತೆಗೆದುಕೊಳ್ಳುವುದರಿಂದ ಹಾರ್ಪಿಸ್ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಸಾಂಕ್ರಾಮಿಕ ರೋಗವು ಪ್ರಾರಂಭವಾದ ದಿನದಿಂದಲೂ ಜನರು ಹಾರ್ಪಿಸ್, ಕೀಲುನೋವು, ದದ್ದು, ಅಲರ್ಜಿ, ಸರ್ಪಸುತ್ತು ಇಂತಹ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಲೇ ಇದ್ದಾರೆ. ಆದರೆ, ಮಹಿಳೆಯರಿಗೆ (Women) ಹೋಲಿಕೆ ಮಾಡಿದರೆ ಪುರುಷರಲ್ಲಿ ಇಂತಹ ರೋಗಲಕ್ಷಣಗಳು ಕಾಣಿಸಿಕೊಳ್ಳುವುದು ಕಡಿಮೆ. ಆದರೆ, ವಯೋವೃದ್ಧರಲ್ಲಿ ಹೆಚ್ಚಾಗಿ ಕಾಣಿಸುತ್ತಿದೆ. 

ಕೊರೋನಾ ನಂತರದ ಆರೋಗ್ಯ ಕಾಳಜಿ (Health Care)

ಒಮ್ಮೆ ಕೊರೋನಾ ಬಂದು ಹೋದ ಬಳಿಕ ಮತ್ತೆ ಅದರ ಸಮಸ್ಯೆ ಕಾಣಿಸಿಕೊಳ್ಳುವುದು ಇಲ್ಲ ಎಂದು ನಿಟ್ಟುಸಿರು ಬಿಡುವ ಮೊದಲು ನಿಮ್ಮ ದೇಹಕ್ಕೆ ಸರಿಯಾದ ರೀತಿಯಲ್ಲಿ ಕಾಳಜಿ ಮಾಡಿಕೊಂಡಿದ್ದೀರಾ ಎಂಬುದನ್ನು ಗಮನಿಸಿ. ನೀವು ಈಗಾಗಲೇ ದೀರ್ಘ ಕೊರೋನಾ ಲಕ್ಷಣಗಳ ಬಗ್ಗೆ ಓದಿರುತ್ತೀರಿ. ಕಣ್ಣಿಗೆ ಕಾಣಿಸದೆ ಇರುವ ಸೂಕ್ಷ್ಮ ವೈರಾಣು (Virus) ನೀವು ಜೀವನವಿಡೀ ತೊಂದರೆಯನ್ನು ಅನುಭವಿಸುವ ರೀತಿ ಮಾಡಿಬಿಡಬಹುದು. ಹಾಗಾಗಿ ಕೊರೊನಾದಿಂದ ಚೇತರಿಸಿಕೊಂಡ ಬಳಿಕವೂ ಆರೋಗ್ಯವನ್ನು ಕಾಳಜಿಯಿಂದ ನೋಡಿಕೊಳ್ಳಿ.

ಮಳೆ ಬಿಟ್ಮೇಲೂ ಬೀಳೋ ಹನಿಯಂತೆ Long Covid, ಎಚ್ಚರ ತಪ್ಪದಿರಿ ಎನ್ನುತ್ತಿದೆ ವಿಶ್ವ ಆರೋಗ್ಯ ಸಂಸ್ಥೆ

ಸಾಂಕ್ರಮಿಕ ರೋಗದಿಂದ ಸುಧಾರಿಸಿಕೊಳ್ಳಲು ಕೆಲವು ದಿನಗಳು, ಕೆಲವು ತಿಂಗಳುಗಳು, ಹಾಗೂ ಕೆಲವು ವರ್ಷಗಳೇ ಬೇಕಾಗಬಹುದು. ಜನರು ಒಮ್ಮೆ ಕೊರೊನಾದಿಂದ ಸುಧಾರಿಸಿಕೊಂಡ ಮೇಲೆ, ಸಾಮಾನ್ಯವಾಗಿ ಇದರ ಬಗ್ಗೆ ನಿರ್ಲಕ್ಷ್ಯ ತೋರುತ್ತಾರೆ. ಇನ್ನೇನು ಮುಖ ಕವಚ (Mask) ಧರಿಸುವ ಅಗತ್ಯವಿಲ್ಲ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕಾಗಿಲ್ಲ, ಹಾಗೂ ಲಸಿಕೆಯನ್ನು ಪಡೆಯಲು ಕೂಡ ನಿರಾಕರಿಸಬಹುದು. ಆದರೆ ಹೀಗೆ ಮಾಡಬೇಡಿ. ಈ ಸಾಂಕ್ರಾಮಿಕ ರೋಗವು ಯಾವ ರೀತಿಯಲ್ಲೆಲ್ಲಾ ಹಬ್ಬಬಹುದು ಎಂಬ ಬಗ್ಗೆ ತಜ್ಞರು ಇನ್ನೂ ಕೂಡ ಸಂಶೋಧನೆ ಮುಂದುವರೆಸಿದ್ದಾರೆ. ಹಾಗಾಗಿ ನೀವು ಯಾವುದೇ ರೀತಿಯಲ್ಲೂ ನಿಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷಿಸಬೇಡಿ.

ನಿಮ್ಮ ದೈನಂದಿನ ಜೀವನದಲ್ಲಿ ದೈಹಿಕ ಚಟುವಟಿಕೆಗಳನ್ನು (Physical activity) ಅಳವಡಿಸಿಕೊಳ್ಳಿ, ಪೌಷ್ಟಿಕ ಆಹಾರವನ್ನು ಹೆಚ್ಚು ಸೇವನೆ ಮಾಡಿ, ಮಾನಸಿಕ ನೆಮ್ಮದಿಯ ಬಗ್ಗೆ ಗಮನವಿರಿಸಿ, ನಿಮ್ಮ ದಿನವನ್ನು ಖುಷಿಖುಷಿಯಾಗಿ ಲವಲವಿಕೆಯಿಂದ ತುಂಬಿರುವಂತೆ ನೋಡಿಕೊಳ್ಳಿ. ಹಾಗೂ ಮನೆಯಿಂದ ಹೊರಹೋಗುವಾಗ ಕಡ್ಡಾಯವಾಗಿ ಮಾಸ್ಕ್‌ ಧರಿಸಿ,  ಹೆಚ್ಚು ಜನಸಂಖ್ಯೆ ಇರುವ ಪ್ರದೇಶಗಳಿಗೆ ಹೋಗುವಾಗ ಜಾಗೃತರಾಗಿರಿ. ಇದು ಬರೀ ನಿಮ್ಮ ಆರೋಗ್ಯ ಮಾತ್ರವಲ್ಲ, ನಿಮ್ಮವರ ಆರೋಗ್ಯ ಕೂಡ ಹೌದು ಎಂಬುದನ್ನು ನೆನಪಿನಲ್ಲಿಡಿ..

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾತ್ರಿ ವೇಳೆ ಅಪ್ಪಿತಪ್ಪಿಯೂ ತಿನ್ನಬಾರದ ಹಣ್ಣುಗಳು ಇವು: ತಜ್ಞರು ಹೇಳೋದೇನು?
ಸೀನು ಯಾಕೆ ಬರುತ್ತೆ ಗೊತ್ತಾ? ಇಲ್ಲಿದೆ ಅದರ ಹಿಂದಿರುವ ಕುರಿತ ಅಚ್ಚರಿಯ ಸಂಗತಿಗಳು!