cancer Myths: ಕ್ಯಾನ್ಸರ್ ಚಿಕಿತ್ಸೆ ಬಗ್ಗೆ ಈ ವಿಚಾರಗಳು ನಿಮಗೆ ಗೊತ್ತಿರಲಿ

By Suvarna News  |  First Published Feb 15, 2022, 5:47 PM IST

ಕ್ಯಾನ್ಸರ್ ಬಗ್ಗೆ ವೈದ್ಯವಿಜ್ಞಾನ ನಿಜಕ್ಕೂ ತಿಳಿಯಬೇಕಾದ ವಿಷಯ ಇನ್ನೂ ಬಹಳವಿದೆ. ಕ್ಯಾನ್ಸರ್ ಬಗ್ಗೆ ಇರೋ ಮಿಥ್‌ಗಳನ್ನು ಇಲ್ಲಿ ನಿವಾರಿಸಿಕೊಳ್ಳಿ.


ಆಧುನಿಕ ವೈದ್ಯವಿಜ್ಞಾನದಲ್ಲಿ (Modern Medicine) ಪ್ರಗತಿಯಾಗಿದೆ, ಇದರಿಂದ ಕ್ಯಾನ್ಸರ್ (Cancer) ಚಿಕಿತ್ಸೆ ಹೆಚ್ಚೆಚ್ಚು ಪರಿಣಾಮಕಾರಿ ಆಗುತ್ತಿದೆ, ಚಿಕಿತ್ಸೆ ಅಡ್ಡ ಪರಿಣಾಮಗಳು ಕಡಿಮೆ ಆಗುತ್ತಿದೆ. ಆದರೂ ಕ್ಯಾನ್ಸರ್ ಚಿಕಿತ್ಸೆಯ ಬಗ್ಗೆ ಕೆಲವು ತಪ್ಪು ಕಲ್ಪನೆಗಳು ಮುಂದುವರಿದಿವೆ. ಕ್ಯಾನ್ಸರ್ ಚಿಕಿತ್ಸೆಯ ಬಗ್ಗೆ ಸಾಮಾನ್ಯ ಮಿಥ್‌ಗಳು (Myth) ಮತ್ತು ನಿಮಗೆ ಸಹಾಯ ಮಾಡುವ ವಿವರಣೆಗಳು ಇಲ್ಲಿವೆ.

ಮಿಥ್ಯ: ಸಕಾರಾತ್ಮಕ ಮನೋಭಾವವು (Positive attitude) ಕ್ಯಾನ್ಸರ್ ಅನ್ನು ಸೋಲಿಸಲು ನೆರವಾಗುತ್ತದೆ. 
ಸತ್ಯ: ಸಕಾರಾತ್ಮಕ ಮನೋಭಾವವು ರೋಗಿಗೆ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಪ್ರಯೋಜನವನ್ನು ನೀಡುತ್ತದೆ ಅಥವಾ ಗುಣಪಡಿಸುವ ಅವಕಾಶವನ್ನು ಸುಧಾರಿಸುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಆದರೆ ಅದು ಕ್ಯಾನ್ಸರ್ ಚಿಕಿತ್ಸೆಯ ಸಮಯದಲ್ಲಿ ಮತ್ತು ಅದರ ನಂತರ ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆ. ರೋಗಿ ಸಕ್ರಿಯವಾಗಿರಲು, ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂಬಂಧಗಳನ್ನು ಕಾಪಾಡಿಕೊಳ್ಳಲು ಮತ್ತು ಸಾಮಾಜಿಕ ಚಟುವಟಿಕೆಗಳನ್ನು ಮುಂದುವರಿಸಲು ನೆರವಾಗುತ್ತದೆ. ಕ್ಯಾನ್ಸರ್ ಅನ್ನು ಎದುರಿಸಲು ಶಕ್ತಿಯನ್ನು ಪಡೆಯಲು ಸಹಾಯ ಮಾಡುತ್ತದೆ.

Tap to resize

Latest Videos

ಮಿಥ್ಯ: ನಾವು ಚಂದ್ರನ (Moon) ಮೇಲೆ ಮನುಷ್ಯನನ್ನು ಕಳಿಸಲು ಸಾಧ್ಯವಿದ್ದರೆ, ಕ್ಯಾನ್ಸರ್ ಅನ್ನು ಗುಣಪಡಿಸಲೂ ಸಾಧ್ಯವಿರಬೇಕು. 
ಸತ್ಯ: ಬಾಹ್ಯಾಕಾಶ ಹಾರಾಟಕ್ಕೆ ಅಗತ್ಯವಾದ ಎಂಜಿನಿಯರಿಂಗ್‌ ಮತ್ತು ಭೌತಶಾಸ್ತ್ರಕ್ಕಿಂತ ಕ್ಯಾನ್ಸರ್‌ಗೆ ಪರಿಹಾರವನ್ನು ಕಂಡುಹಿಡಿಯುವುದು ಹೆಚ್ಚು ಸಂಕೀರ್ಣವಾಗಿದೆ. ಕ್ಯಾನ್ಸರ್ ವಾಸ್ತವವಾಗಿ ರೋಗಗಳ ದೊಡ್ಡ ಗುಂಪು. ಪ್ರತಿಯೊಬ್ಬ ವ್ಯಕ್ತಿಯ ಕ್ಯಾನ್ಸರ್ ಹಲವಾರು ಕಾರಣಗಳನ್ನು ಹೊಂದಿರಬಹುದು. ಚಿಕಿತ್ಸೆಯಲ್ಲಿ ಇಷ್ಟೆಲ್ಲ ಪ್ರಗತಿ ಆಗಿದ್ದರೂ, ಒಂದು ಜೀವಕೋಶವು ಕ್ಯಾನ್ಸರ್ ಸೆಲ್ (Cancer cell) ಆಗಿ ಬೆಳೆಯಲು ಕಾರಣವೇನು, ಕ್ಯಾನ್ಸರ್ ಹೊಂದಿರುವ ಕೆಲವು ಜನರು ಇತರರಿಗಿಂತ ಏಕೆ ಬೇಗನೆ ಶಮನ ಹೊಂದುತ್ತಾರೆ ಎಂಬುದರ ಕುರಿತು ವೈದ್ಯರಿಗೆ ಇನ್ನೂ ಏನೂ ತಿಳಿಯದು. 

Kidney Health: ಬರಲಿದೆ ಬೇಸಿಗೆ, ಕಿಡ್ನಿ ಕಾಪಾಡಿಕೊಳ್ಳಿ ಹೀಗೆ...

ಮಿಥ್ಯ: ಔಷಧ ಕಂಪನಿಗಳು (Medical mafia) ಕ್ಯಾನ್ಸರ್‌ಗೆ ಮದ್ದು ಕಂಡು ಹಿಡಿಯಲು ಬಿಡುತ್ತಿಲ್ಲ. 
ಸತ್ಯ: ಕ್ಯಾನ್ಸರ್ ಸಂಶೋಧನೆಗೆ ಕೋಟಿಗಟ್ಟಲೆ ಡಾಲರ್ ಹೂಡಲಾಗಿದೆ. ಎಲ್ಲ ವೈದ್ಯಕೀಯ ಸಂಸ್ಥೆಗಳು ಇದರ ಬಗ್ಗೆ ಅಧ್ಯಯನ ಮಾಡುತ್ತಿವೆ. ದುರದೃಷ್ಟವಶಾತ್, ಹೊಸ ಕ್ಯಾನ್ಸರ್ ಚಿಕಿತ್ಸೆಗಳ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ನಿರ್ಧರಿಸಲು ವೈಜ್ಞಾನಿಕ ಅಧ್ಯಯನಗಳು ತುಂಬಾ ಸಮಯ ತೆಗೆದುಕೊಳ್ಳುತ್ತವೆ. ವೈದ್ಯರೂ ಸಾಮಾನ್ಯವಾಗಿ ಕ್ಯಾನ್ಸರ್ ರೋಗಿಗಳ ಮೇಲೆ ಹೊಸ ಸಂಶೋಧನೆಗೆ ಹೆದರುತ್ತಾರೆ. ಈಗಾಗಲೇ ಭಾಗಶಃ ಪರಿಣಾಮಕಾರಿ ಎನಿಸಿದ ಚಿಕಿತ್ಸೆಗಳನ್ನೇ ಮುಂದುವರಿಸುತ್ತಾರೆ. ಏಕೆಂದರೆ ಯಾರೂ ಪ್ರಯೋಗಕ್ಕೆ ತಮ್ಮನ್ನು ಒಡ್ಡಿಕೊಳ್ಳಲು ಬಯಸುವುದಿಲ್ಲ. ವೈದ್ಯರು ಕೂಡ ಪ್ರಯೋಗಕ್ಕಾಗಿ ರೋಗಿಯನ್ನು ಬಲಿಕೊಡಲು ಇಚ್ಛಿಸುವುದಿಲ್ಲ. 

ಮಿಥ್ಯ: ನಿಯಮಿತ ತಪಾಸಣೆ (Regular check up) ಮತ್ತು ಇಂದಿನ ವೈದ್ಯಕೀಯ ತಂತ್ರಜ್ಞಾನವು ಎಲ್ಲಾ ಕ್ಯಾನ್ಸರ್‌ಗಳನ್ನು ಮೊದಲೇ ಪತ್ತೆ ಮಾಡುತ್ತದೆ.
ಸತ್ಯ: ನಿಯಮಿತ ವೈದ್ಯಕೀಯ ಆರೈಕೆಯು ಕ್ಯಾನ್ಸರ್ ಅನ್ನು ಮೊದಲೇ ಪತ್ತೆಹಚ್ಚುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆಯಾದರೂ, ಖಾತರಿ ಏನಿಲ್ಲ. ಕ್ಯಾನ್ಸರ್ ಒಂದು ಸಂಕೀರ್ಣ ಕಾಯಿಲೆ. ಅದನ್ನು ಯಾವಾಗಲೂ ಗುರುತಿಸಲು ಯಾವುದೇ ಖಚಿತವಾದ ಮಾರ್ಗವಿಲ್ಲ. ರೂಢಿಯಲ್ಲಿರುವ ತಪಾಸಣೆಯು ಪ್ರಾಸ್ಟೇಟ್, ಗರ್ಭಕಂಠ, ಸ್ತನ, ಶ್ವಾಸಕೋಶ, ಕರುಳು ಮತ್ತು ಗುದನಾಳದ ಕ್ಯಾನ್ಸರ್‌ಗಳನ್ನು ಪತ್ತೆಹಚ್ಚಿ ಸಾವುಗಳ ಇಳಿಕೆಗೆ ಕಾರಣವಾಗುತ್ತದೆ. 

ಮಿಥ್ಯ: ಕ್ಯಾನ್ಸರ್ ಚಿಕಿತ್ಸೆಗೆ ಒಳಗಾದಾಗ ಉದ್ಯೋಗ ಮಾಡಲು ಅಥವಾ ನಿಮ್ಮ ಸಾಮಾನ್ಯ ಚಟುವಟಿಕೆಗಳನ್ನು ಮಾಡಲು ಸಾಧ್ಯವಿಲ್ಲ
ಸತ್ಯ: ಕ್ಯಾನ್ಸರ್ ಹೊಂದಿರುವ ಹೆಚ್ಚಿನ ಜನರು ತಮ್ಮ ಮನೆಯಲ್ಲಿ, ಸಮುದಾಯಗಳಲ್ಲಿ, ಹೊರರೋಗಿ ಆಧಾರದ ಮೇಲೆ ಚಿಕಿತ್ಸೆ ಪಡೆಯುತ್ತಾರೆ. ಕೆಲಸಕ್ಕೂ ಹೋಗುತ್ತಾರೆ. ಸೈಡ್ ಎಫೆಕ್ಟ್ ನಿಯಂತ್ರಿಸಲು ಉಪಚಿಕಿತ್ಸೆಗಳು ಲಭ್ಯವಿವೆ. ವ್ಯಾಯಾಮ ಸಾಧ್ಯವಿದೆ. 

ಮಿಥ್ಯ: ಕ್ಯಾನ್ಸರ್ ಯಾವಾಗಲೂ ನೋವಿನಿಂದ ಕೂಡಿರುತ್ತದೆ.
ಸತ್ಯ: ಕೆಲವು ಕ್ಯಾನ್ಸರ್‌ಗಳು ಎಂದಿಗೂ ನೋವನ್ನು ಉಂಟುಮಾಡುವುದಿಲ್ಲ. ಇಂದಿನ ಕ್ಯಾನ್ಸರ್ ಚಿಕಿತ್ಸೆಯು ಅಂತಹ ನೋವನ್ನು ನಿಯಂತ್ರಿಸುವ ಅಗತ್ಯತೆಯ ಬಗ್ಗೆ ಹೆಚ್ಚು ಜಾಗೃತವಾಗಿದೆ ಮತ್ತು ವೈದ್ಯರು ಅದನ್ನು ನಿರ್ವಹಿಸಲು ಉತ್ತಮ ಮಾರ್ಗಗಳನ್ನು ಕಲಿತಿದ್ದಾರೆ. 

ಮಿಥ್ಯ: ಸೂಜಿ ಬಯಾಪ್ಸಿ ಕ್ಯಾನ್ಸರ್ ಕೋಶಗಳು ದೇಹದ ಇತರ ಭಾಗಗಳಿಗೆ ಪ್ರಯಾಣಿಸಲು ಕಾರಣವಾಗುತ್ತದೆ.
ಸತ್ಯ: ಸೂಜಿ ಬಯಾಪ್ಸಿಯು ಹಲವು ವಿಧದ ಕ್ಯಾನ್ಸರ್‌ಗಳನ್ನು ಪತ್ತೆಹಚ್ಚಲು ಬಳಸುವ ವಿಧಾನ. ಇದು ಕ್ಯಾನ್ಸರ್ ಕೋಶಗಳ ಹರಡುವಿಕೆಗೆ ಕಾರಣವಾಗುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಯಾವುದರಲ್ಲಿ ಇದು ಅಪಾಯ ಎಂಬುದನ್ನು ವೈದ್ಯರು ತಿಳಿದಿರುತ್ತಾರೆ. ಉದಾಹರಣೆಗೆ, ಸೂಜಿ ಬಯಾಪ್ಸಿ ಸಾಮಾನ್ಯವಾಗಿ ವೃಷಣ ಕ್ಯಾನ್ಸರ್ ರೋಗನಿರ್ಣಯದಲ್ಲಿ ಬಳಸಲಾಗುವುದಿಲ್ಲ.

ಮಿಥ್ಯ: ಶಸ್ತ್ರಚಿಕಿತ್ಸೆಯು ಕ್ಯಾನ್ಸರ್ ಹರಡಲು ಕಾರಣವಾಗುತ್ತದೆ
ಸತ್ಯ: ಶಸ್ತ್ರಚಿಕಿತ್ಸೆಯು ಕ್ಯಾನ್ಸರ್ ಹರಡಲು ಕಾರಣವಾಗಬಹುದು ಎಂದು ಸೂಚಿಸುವ ಯಾವುದೇ ಪುರಾವೆಗಳಿಲ್ಲ. ಕ್ಯಾನ್ಸರ್ ಗಡ್ಡೆಯನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕುವುದು ಸಾಮಾನ್ಯವಾಗಿ ಮೊದಲ ಮತ್ತು ಪ್ರಮುಖ ಚಿಕಿತ್ಸೆಯಾಗಿದೆ. ಕೆಲವರಿಗೆ ಶ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುವುದು ಕಷ್ಟವಾಗಬಹುದು. 

Organ Donation: ಮೆದುಳು ನಿಷ್ಕ್ರಿಯಗೊಂಡಾಗ ಯಾವ ಅಂಗ ದಾನ ಮಾಡಬಹುದು?

ಮಿಥ್ಯ: ಒಂದೇ ರೀತಿಯ ಕ್ಯಾನ್ಸರ್ ಹೊಂದಿರುವ ಪ್ರತಿಯೊಬ್ಬರೂ ಒಂದೇ ರೀತಿಯ ಚಿಕಿತ್ಸೆಯನ್ನು ಪಡೆಯುತ್ತಾರೆ.
ಸತ್ಯ: ವೈದ್ಯರು ರೋಗಿಗೆ ನಿರ್ದಿಷ್ಟವಾಗಿ ಯಾವ ಚಿಕಿತ್ಸೆ ಕೊಡಬೇಕು ಎಂಬುದನ್ನು ತೀರ್ಮಾನಿಸುತ್ತಾರೆ. ಕ್ಯಾನ್ಸರ್ ಎಲ್ಲಿದೆ, ಎಷ್ಟು ಹರಡಿದೆ, ಅದು ದೇಹದ ಕಾರ್ಯಚಟುವಟಿಕೆಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ, ರೋಗಿಯ ಸಾಮಾನ್ಯ ದೇಹಾರೋಗ್ಯ ಏನು ಎಂಬ ಅಂಶಗಳ ಮೇಲೆ ಚಿಕಿತ್ಸೆ ನಿರ್ಧಾರ ಆಗುತ್ತದೆ. ಒಬ್ಬನ ದೇಹವು ಕೆಲವು ಕಿಮೊಥೆರಪಿ ಚಿಕಿತ್ಸೆಗಳು ಮತ್ತು ಔಷಧಿಗಳಿಗೆ ಬೇರೆಯವರ ದೇಹಕ್ಕಿಂತ ವಿಭಿನ್ನವಾಗಿ ಪ್ರತಿಕ್ರಿಯೆ ನೀಡಬಹುದು.

ಮಿಥ್ಯ: ಕ್ಯಾನ್ಸರ್ ಇರುವ ಪ್ರತಿಯೊಬ್ಬರೂ ಚಿಕಿತ್ಸೆ ಪಡೆಯಬೇಕು.
ಸತ್ಯ: ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯಲು ಬಯಸುತ್ತೀರಾ ಇಲ್ಲವಾ ಎಂಬುದು ರೋಗಿಗೆ ಬಿಟ್ಟದ್ದು. ವೈದ್ಯರೊಂದಿಗೆ ಸಮಾಲೋಚಿಸಿದ ನಂತರ ರೋಗಿ ಇದನ್ನು ನಿರ್ಧರಿಸಬಹುದು.

ಕ್ಯಾನ್ಸರ್ ಹೊಂದಿರುವ ಈ ಕೆಳಗಿನ ವ್ಯಕ್ತಿಗಳು ಚಿಕಿತ್ಸೆಯನ್ನು ತ್ಯಜಿಸುವ ಆಯ್ಕೆ ಮಾಡಬಹುದು:
ನಿಧಾನವಾಗಿ ಬೆಳೆಯುತ್ತಿರುವ ಕ್ಯಾನ್ಸರ್- ಕ್ಯಾನ್ಸರ್ ಹೊಂದಿರುವ ಕೆಲವು ಜನರು ಯಾವುದೇ ಚಿಹ್ನೆಗಳು ಅಥವಾ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ. ಲ್ಯಾಬ್ ಪರೀಕ್ಷೆಗಳು ಕ್ಯಾನ್ಸರ್ ನಿಧಾನವಾಗಿ ಬೆಳೆಯುತ್ತಿದೆ ಎಂದು ಬಹಿರಂಗಪಡಿಸಬಹುದು. ಈ ಜನರು ಕಾದು ನೋಡುವ ವಿಧಾನ ಬಳಸಬಹುದು. ಅದು ಇದ್ದಕ್ಕಿದ್ದಂತೆ ಹೆಚ್ಚು ವೇಗವಾಗಿ ಬೆಳೆಯಲು ಪ್ರಾರಂಭಿಸಿದರೆ, ಚಿಕಿತ್ಸೆ ಮಾಡಬಹುದು. 



ಇತರ ಕಾಯಿಲೆಗಳು- ರೋಗಿ ಮಧುಮೇಹ (Diabetes), ಹೃದಯದ ಸಮಸ್ಯೆ (Heart problem) ಮೊದಲಾದ ಇತರ ಪ್ರಮುಖ ಕಾಯಿಲೆಗಳನ್ನು ಹೊಂದಿದ್ದರೆ, ಕ್ಯಾನ್ಸರ್‌ ನಿದಾನವಾಗಿ ಬೆಳೆಯುತ್ತಿದ್ದರೆ, ಚಿಕಿತ್ಸೆ ಪಡೆಯದೇ ಇರಬಹುದು. 

ಕೊನೆಯ ಹಂತದ (Last stage) ಕ್ಯಾನ್ಸರ್- ಚಿಕಿತ್ಸೆಯ ಅಡ್ಡ ಪರಿಣಾಮಗಳೇ ಕ್ಯಾನ್ಸರ್‌ ಉಂಟುಮಾಡುವ ನೋವಿಗಿಂತ ಅಧಿಕ ನೋವನ್ನು ಉಮಟುಮಾಡಿದರೆ, ಚಿಕಿತ್ಸೆ ತೆಗೆದುಕೊಳ್ಳದಿರಲು ಆಯ್ಕೆ ಮಾಡಬಹುದು. ಆದರೆ ವೈದ್ಯರು ನೋವು ನಿವಾರಣೆಯ ಆರಾಮ ಕ್ರಮಗಳನ್ನು ನೀಡಬಹುದು.

click me!