Health Tips: ಮಧ್ಯಾಹ್ನ ಊಟ ಆದ ಕೂಡ್ಲೇ ನಿದ್ದೆ ಬರ್ತಿದ್ಯಾ ? ಹೀಗೆ ಮಾಡಿ ತೂಕಡಿಕೆನೂ ಇರಲ್ಲ !

By Suvarna News  |  First Published Feb 25, 2022, 6:40 PM IST

ಭರ್ಜರಿ ಊಟವೇನೋ ಆಯ್ತು. ಆದ್ರೆ ಆಮೇಲೇನೆ ನೋಡಿ ಕಷ್ಟ. ಅದೆಷ್ಟು ನಿದ್ದೆ (Sleep) ಬರುತ್ತೆ ಅಂದ್ರೆ ತಡೆಯೋಕೆ ಆಗಲ್ಲ. ಆಕಳಿಸಿ, ತೂಕಡಿಸಿ ಇನ್ನೇನು ಬಿದ್ದೇ ಬಿಡ್ತೀವಿ ಅನ್ನೋ ಭಯ. ಈ ರೀತಿ ನಿದ್ದೆ ಬಂದಾಗ ಕಚೇರಿ (Office)ಯಲ್ಲಿದ್ರೆ ಕತೆ ಹೇಳೋದೆ ಬೇಡ. ನಿಮ್ಗೂ ಊಟದ ನಂತರ ನಿದ್ದೆ ಬರೋದು ಕಾಮನ್ ಆಗಿದ್ಯಾ ? ಈ ರೀತಿ ಆಗದಿರೋಕೆ ಏನ್ ಮಾಡ್ಬೇಕು ಹೇಳ್ತೀವಿ.


ಊಟ ಮಾಡಿದ ಕೂಡಲೇ ನಿದ್ದೆ (Sleep) ಬರುವುದು ಹಲವರಲ್ಲಿ ಕಂಡು ಬರುವ ಸಾಮಾನ್ಯ. ಅದೆಷ್ಟು ಯತ್ನಿಸಿದರೂ ಇಂಥಾ ನಿದ್ದೆಯನ್ನು ತಡೆಯೋಕೆ ಆಗುವುದಿಲ್ಲ. ಊಟದ ನಂತರದ ನಿದ್ದೆ, ತೂಕಡಿಕೆ ಹಲವಾರು ಸಂದರ್ಭಗಳಲ್ಲಿ ಮುಜುಗರಕ್ಕೆ ಕಾರಣವಾಗುವುದಿದೆ. ಹಾಗಿದ್ರೆ ಊಟ ಮಾಡಿದ ಕೂಡಲೇ ನಿದ್ದೆ ಬರೋದಕ್ಕೆ ಕಾರಣವೇನು ? ಈ ನಿದ್ದೆಯನ್ನು ತಡೆಯಲು ನಾವೇನು ಮಾಡ್ಬೋದು ಎಂಬುದನ್ನು ತಿಳಿಯೋಣ.

ಊಟ ಆದ ಕೂಡಲೇ ಕುಳಿತುಕೊಳ್ಳಬೇಡಿ, ನಡೆಯಿರಿ 
ಊಟ ಮಾಡಿಯಾದ ತಕ್ಷಣ ಕೆಲಸ (Work) ಮಾಡಲು ಕುಳಿತುಕೊಳ್ಳಬೇಡಿ. ಇದರಿಂದ ದೇಹಕ್ಕೆ ಆಲಸ್ಯ ಮತ್ತಷ್ಟು ಹೆಚ್ಚಾಗುತ್ತದೆ. ಊಟ ಮಾಡಿದ ತಕ್ಷಣ ಸ್ಪಲ್ಪ ಹೊತ್ತು ನಡೆಯಿರಿ. ಮನೆಯ ಆವರಣದಲ್ಲಿ ವೇಗವಾಗಿ ನಡೆಯವುದು ಅಥವಾ ಮೆಟ್ಟಿಲುಗಳನ್ನು ಹತ್ತುವುದು ಮಾಡಿ. ಈ ಅಲ್ಪಾವಧಿಯ ವ್ಯಾಯಾಮ (Exercise)ವು ರಕ್ತದಲ್ಲಿನ ಆಮ್ಲಜನಕದ ಮಟ್ಟವನ್ನು ಹೆಚ್ಚಿಸಲು ಮತ್ತು ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಊಟವಾದ ಕೂಡಲೇ ನಿದ್ದೆ ಬರುವುದನ್ನು ತಪ್ಪಿಸುತ್ತದೆ.

Tap to resize

Latest Videos

undefined

Sleep Disorder: ನಿದ್ರೆ ಬರುತ್ತಿಲ್ಲವೇ? ನಿರ್ಲಕ್ಷಿಸಬೇಡಿ

ಚೂಯಿಂಗ್ ಗಮ್ ಜಗಿಯಿರಿ
ಸ್ಪಲ್ಪ ಆಶ್ಚರ್ಯವೆನಿಸಿದರೂ ಇದು ನಿಜ. ಊಟ ಆದ ಕೂಡಲೇ ಚೂಯಿಂಗ್ ಗಮ್ ಜಗಿಯುವುದು ನಿದ್ದೆಯನ್ನು ಹೋಗಲಾಡಿಸುತ್ತದೆ. ಫಿಸಿಯಾಲಜಿ ಮತ್ತು ಬಿಹೇವಿಯರ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಚೂಯಿಂಗ್ ಗಮ್ ಆಯಾಸವನ್ನು ಕಡಿಮೆ ಮಾಡುತ್ತದೆ. ದೇಹ (Body) ಹೆಚ್ಚು ಚಟುವಟಿಕೆಯಿಂದಿರುವಂತೆ ಮಾಡುತ್ತದೆ. ನೀವು ನಿರಂತರವಾಗಿ ಕ್ರಿಯೆಯ ಸ್ಥಿತಿಯಲ್ಲಿರುವುದರಿಂದ ತೂಕಡಿಕೆ ಉಂಟಾಗುವುದಿಲ್ಲ. ಹೀಗಾಗಿ ಊಟ ಮಾಡಿ ಕನಿಷ್ಠ ಐದು ನಿಮಿಷಗಳ ಕಾಲ ಮಿಂಟ್ ಗಮ್ ಅನ್ನು ಜಗಿಯಿರಿ.

ದಿನವಿಡೀ ಹೆಚ್ಚು ನೀರು ಕುಡಿಯಿರಿ
ನಿರ್ಜಲೀಕರಣವು ಆಯಾಸಕ್ಕೆ ಕಾರಣವಾಗುತ್ತದೆ. ಇದರಿಂದ ನಿದ್ದೆ ಬರುವಂತೆ ಭಾಸವಾಗುತ್ತದೆ. ಹೀಗಾಗಿ ದಿನವಿಡೀ ಸಾಕಷ್ಟು ನೀರು ಕುಡಿಯುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ಹೆಚ್ಚು ನೀರು (Water) ಕುಡಿಯುವ ಮೂಲಕ ದೇಹವನ್ನು ಹೈಡ್ರೇಟ್ ಆಗಿರಿಸಿ. ಇದು ಊಟ ಆದ ಕೂಡಲೇ ನಿದ್ದೆ ಬರುವುದನ್ನು ತಡೆಯುತ್ತದೆ.

ಜಂಕ್ ಫುಡ್ ತಿನ್ನಬೇಡಿ
ಯಾವಾಗಲೂ ಆರೋಗ್ಯ (Health)ಕರವಾಗಿ ತಿನ್ನಿ. ಜಂಕ್ ಬೇಡ ತಿನ್ನಬೇಡಿ. ಸಂಸ್ಕರಿಸಿದ ಆಹಾರಗಳಲ್ಲಿನ ಸಂಸ್ಕರಿಸಿದ ಧಾನ್ಯಗಳು ತ್ವರಿತವಾಗಿ ಜೀರ್ಣವಾಗುತ್ತವೆ, ಇದು ರಕ್ತದಲ್ಲಿನ ಸಕ್ಕರೆಯ ಹೆಚ್ಚಳಕ್ಕೆ ಕಾರಣವಾಗುತ್ತದೆ ಮತ್ತು ಕಡಿಮೆ ಶಕ್ತಿಯ ಮಟ್ಟಕ್ಕೆ ಕೊಡುಗೆ ನೀಡುತ್ತದೆ. ಹಸಿರು ಎಲೆಗಳ ತರಕಾರಿಗಳು, ಹೆಚ್ಚು ಪ್ರೋಟೀಸ್ ಇರುವ ಮಾಂಸ, ಮೀನು ಮತ್ತು ಮೊಟ್ಟೆಗಳು, ಕಾರ್ಬೋಹೈಡ್ರೇಟ್‌ಗಳನ್ನು ಒಳಗೊಂಡ ಇಡೀ ಧಾನ್ಯಗಳು ಮತ್ತು ದ್ವಿದಳ ಧಾನ್ಯಗಳು ಹೆಚ್ಚು ಸೇವಿಸಿ.

Health Tips : ಪ್ರಾಣಕ್ಕೆ ಕುತ್ತು ತರಬಹುದು ನಿದ್ರೆಯ ಈ ಸಮಸ್ಯೆ

ಅತಿಯಾಗಿ ತಿನ್ನಬೇಡಿ, ಮಿತ ಆಹಾರ ಸೇವಿಸಿ
ಅತಿಯಾಗಿ ತಿನ್ನುವುದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುವ ಮೂಲಕ ನಿಧಾನವಾಗಿ ಆಲಸ್ಯಕ್ಕೆ ಕಾರಣವಾಗಬಹುದು, ಇದು ಹೊಟ್ಟೆ ಉಬ್ಬಿದ ಭಾವನೆಯನ್ನು ನೀಡುತ್ತದೆ. ದೇಹಕ್ಕೆ ಅಹಿತಕರವೆನಿಸುತ್ತದೆ. ಊಟ ಆದ ಕೂಡಲೇ ನಿದ್ದೆ ಮತ್ತು ಆಲಸ್ಯವನ್ನು ತಪ್ಪಿಸಲು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಮತ್ತಷ್ಟು ನಿಯಂತ್ರಿಸಲು ಕಡಿಮೆ ಪ್ರಮಾಣದಲ್ಲಿ ಸೇವಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ.

ಸಕ್ಕರೆಯಂಶ ಹೆಚ್ಚಿರುವ ಆಹಾರ ತಿನ್ನಬೇಡಿ
ಊಟ ಆದ ಕೂಡಲೇ ನಿದ್ದೆ ಬರುವುದನ್ನು ತಪ್ಪಿಸಲು ಆಹಾರಗಳಲ್ಲಿ ಹೆಚ್ಚು ಸಕ್ಕರೆ ಮತ್ತು ಕೊಬ್ಬನ್ನು ಸೇವಿಸದಿರಲು ಪ್ರಯತ್ನಿಸಿ. ಸಕ್ಕರೆಗಳು ಆರಂಭಿಕ ಶಕ್ತಿಯ ಉತ್ತೇಜನವನ್ನು ನೀಡಬಹುದು ಆದರೆ ತ್ವರಿತವಾಗಿ ದಣಿದಂತೆ ಮಾಡುತ್ತದೆ. ಹೀಗಾಗಿ ಊಟದ ನಂತರ ಸ್ವೀಟ್ ತಿನ್ನುವ ಅಭ್ಯಾಸವನ್ನು ಬಿಟ್ಟು ಬಿಡಿ. ಊಟದ ನಂತರ ಸಿಹಿಯಾದ ಹಣ್ಣುಗಳನ್ನು ತಿನ್ನುವುದು ಸಹ ಕಡಿಮೆ ಮಾಡಿ.

ಎಲ್ಲಕ್ಕಿಂತ ಮುಖ್ಯವಾಗಿ ಊಟದ ಸಮಯದಲ್ಲಿ ನೀವು ಸೇವಿಸುವ ಆಹಾರಗಳ ಬಗ್ಗೆ ನಿಗಾ ಇಡುವುದು ಮುಖ್ಯ. ಒಂದು ನಿರ್ದಿಷ್ಟ ಆಹಾರವು ನಿದ್ರಾಹೀನತೆ ಮತ್ತು ಆಲಸ್ಯವನ್ನು ಉಂಟುಮಾಡುತ್ತಿದ್ದರೆ, ತಕ್ಷಣವೇ ಅವುಗಳ ಸೇವನೆಯನ್ನು ಗುರುತಿಸುವುದು ಮತ್ತು ಕಡಿಮೆ ಮಾಡುವುದು ಉತ್ತಮ. ಇದರ ಬದಲು ಒಣಹಣ್ಣುಗಳು, ಧಾನ್ಯಗಳನ್ನು ತಿನ್ನುವುದು ನಿದ್ದೆಯ ನಂತರ ಬರುವ ತೂಕಡಿಕೆಯನ್ನು ತಪ್ಪಿಸುತ್ತದೆ.

click me!