ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಎಲೆ ತಿಂದು ಆರೋಗ್ಯ ಕಾಪಾಡ್ಕೊಳ್ಳಿ

By Suvarna News  |  First Published Apr 7, 2022, 8:48 PM IST

ನಮ್ಮ ಆರೋಗ್ಯ (Health) ನಮ್ಮ ಕೈನಲ್ಲಿದೆ. ಹಾಗೆ ನಮ್ಮ ಆರೋಗ್ಯದ ಗುಟ್ಟು ಕೆಲ ಗಿಡಗಳ ಎಲೆ (Plant Leaf)ಗಳಲ್ಲಿದೆ. ಇತ್ತೀಚಿಗೆ ಜನರನ್ನು ಕಾಡ್ತಿರುವ ಗಂಭೀರ ಖಾಯಿಲೆ ಬರ್ಲೇಬಾರದು ಅಂದ್ರೆ ಎಲೆ ತಿನ್ನೋದನ್ನು ರೂಢಿ ಮಾಡಿಕೊಳ್ಳಬೇಕು.
 


ಏಪ್ರಿಲ್ 7ರಂದು ಪ್ರತಿ ವರ್ಷ ವಿಶ್ವ ಆರೋಗ್ಯ ದಿನ (World Health Day)ವನ್ನು ಆಚರಿಸಲಾಗುತ್ತದೆ. ಈ ವರ್ಷ ಅಂದರೆ 2022ರ ವಿಶ್ವ ಆರೋಗ್ಯ ದಿನದ ಥೀಮ್ '  ನಮ್ಮ ಗ್ರಹ, ನಮ್ಮ ಆರೋಗ್ಯ' (Our Planet, Our Health). ಜನರಲ್ಲಿ ಆರೋಗ್ಯ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ವಿವಿಧ ಸಂಕೀರ್ಣ ಆರೋಗ್ಯ ಸಮಸ್ಯೆಗಳತ್ತ ಜನರ ಗಮನ ಸೆಳೆಯುವುದು ಈ ದಿನಾಚರಣೆಯ ಉದ್ದೇಶವಾಗಿದೆ. 

ಕೊರೊನಾ ವೈರಸ್, ಕ್ಯಾನ್ಸರ್, ಮಧುಮೇಹ, ಹೃದ್ರೋಗಗಳು, ಬೊಜ್ಜು ಮುಂತಾದ ಗಂಭೀರ ಕಾಯಿಲೆಗಳು ಪ್ರಪಂಚದಾದ್ಯಂತ ವೇಗವಾಗಿ ಹರಡುತ್ತಿವೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಹೃದ್ರೋಗ, ಪಾರ್ಶ್ವವಾಯು, ಉಸಿರಾಟ ಮತ್ತು ಶ್ವಾಸಕೋಶದ ಕಾಯಿಲೆಗಳು ಮತ್ತು ಮಧುಮೇಹವು ಸಾವಿಗೆ ಸಾಮಾನ್ಯ ಕಾರಣವಾಗಿದೆ. ಈ ಅಪಾಯಕಾರಿ ಕಾಯಿಲೆಗಳ ಲಕ್ಷಣಗಳನ್ನು ಸರಿಯಾದ ಸಮಯದಲ್ಲಿ ಗುರುತಿಸಿ ಚಿಕಿತ್ಸೆ ನೀಡಿದಾಗ ಮಾತ್ರ ಅದರಿಂದ ರಕ್ಷಣೆ ಪಡೆಯಲು ಸಾಧ್ಯವೆಂದು ತಜ್ಞರು ನಂಬಿದ್ದಾರೆ. ಈ ಗಂಭೀರ ಕಾಯಿಲೆಗಳಿಗೆ ಅನೇಕ ಚಿಕಿತ್ಸೆಗಳಿವೆ. ಆದರೆ ಭಾರತದಲ್ಲಿ  ಗಿಡಮೂಲಿಕೆಗಳ ಔಷಧಿಯನ್ನೂ ಜನರು ನಂಬುತ್ತಾರೆ. ಮೊದಲೇ ಎಚ್ಚರಿಕೆ ವಹಿಸಿದ್ರೆ ರೋಗ ಬರದಂತೆ ತಡೆಯಬಹುದು. ರೋಗದ ಆರಂಭದಲ್ಲಿಯೇ ಸರಿಯಾದ ಚಿಕಿತ್ಸೆ ಸಿಕ್ಕಿದ್ರೂ ರೋಗದಿಂದ ಬೇಗ ಹೊರಗೆ ಬರಬಹುದು.

Tap to resize

Latest Videos

ಕೆಲ ಗಿಡಮೂಲಿಕೆಗಳು ರೋಗ ಬರದಂತೆ ನಮ್ಮ ದೇಹವನ್ನು ತಡೆಯುತ್ತವೆ. ಗಂಭೀರ ಕಾಯಿಲೆಗಳಿಂದ ದೂರವಿರಬೇಕೆಂದ್ರೆ ನಾವು ಗಿಡಮೂಲಿಕೆಗಳ ಸೇವನೆ ಮಾಡ್ಬೇಕು. ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ಸಾಮರ್ಥ್ಯವನ್ನು ಕೆಲ ಗಿಡದ ಎಲೆಗಳು ಹೊಂದಿವೆ ಎಂಬುದನ್ನು ವಿಜ್ಞಾನವೂ ಬೆಂಬಲಿಸಿದೆ.

ಯಾವ ರೋಗಕ್ಕೆ ಯಾವ ಗಿಡದ ಎಲೆ ಮದ್ದು : 

ಕಿಡ್ನಿ ರೋಗಗಳಿಗೆ ಅಮೇರಿಕನ್ ಜಿನ್ಸೆಂಗ್ ಎಲೆ : ಅನಾರೋಗ್ಯಕರ ಜೀವನಶೈಲಿ ಮತ್ತು ಅಸಮರ್ಪಕ ಆಹಾರ ಸೇವನೆಯಿಂದ ಕಿಡ್ನಿ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುವವರ ಸಂಖ್ಯೆ ಹೆಚ್ಚುತ್ತಿದೆ. ದೇಹದ ತ್ಯಾಜ್ಯವನ್ನು ತೆಗೆದು ಹಾಕುವ ಕೆಲಸವನ್ನು ಮೂತ್ರಪಿಂಡ ಮಾಡುತ್ತದೆ. ಮೂತ್ರಪಿಂಡದ ಕಾಯಿಲೆಗಳಲ್ಲಿ ಮೂತ್ರಪಿಂಡದ ಕಲ್ಲುಗಳು ಸಾಮಾನ್ಯ ಸಮಸ್ಯೆಯಾಗಿದೆ. ಅಮೇರಿಕನ್ ಜಿನ್ಸೆಂಗ್ ಎಲೆಗಳು ಮೂತ್ರಪಿಂಡದ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಅದನ್ನು ನಿಯಮಿತವಾಗಿ ಸೇವನೆ ಮಾಡ್ತಾ ಬಂದಲ್ಲಿ ಸಮಸ್ಯೆ ಕಡಿಮೆಯಾಗುತ್ತದೆ.

ಬೇಸಿಗೆಯಲ್ಲಿ ಸಿಕ್ಕಾಪಟ್ಟೆ ಬಾಯಾರಿಕೆಯಾಗೋ ಸಮಸ್ಯೆಗೆ ಸಬ್ಜಾ ಬೀಜ ಮದ್ದು

ಕೊಲೆಸ್ಟ್ರಾಲ್ ಕಡಿಮೆ ಮಾಡಲು ಕರಿಬೇವಿನ ಎಲೆಗಳು : ಅಡುಗೆಯ ಒಗ್ಗರಣೆಯಲ್ಲಿ ಕರಿಬೇವು ಇರ್ಲೇಬೇಕು. ಚಿತ್ರಾನ್ನ, ಉಪ್ಪಿಟ್ಟು ಸೇರಿದಂತೆ ಅನೇಕ ಆಹಾರಗಳ ಪರಿಮಳವನ್ನು ಇದು ಹೆಚ್ಚಿಸುತ್ತದೆ. ಕರಿಬೇವಿನಲ್ಲಿ ಅನೇಕ ಪದಾರ್ಥಗಳನ್ನು ಮಾಡ್ಬಹುದು. ಬರೀ ಆಹಾರವಾಗಿಯಲ್ಲ, ಔಷಧಿಯಾಗಿಯೂ ಇದು ಕೆಲಸ ಮಾಡುತ್ತದೆ. ಅನೇಕ ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿವೆ.

ಅಧ್ಯಯನದ ಪ್ರಕಾರ, ಕರಿಬೇವಿನ ರಸವು ಮಧುಮೇಹ ರೋಗಿಗಳಲ್ಲಿ ರಕ್ತದಲ್ಲಿನ ಗ್ಲೂಕೋಸ್ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.ಅಷ್ಟೇ ಅಲ್ಲ ತೂಕ ಕಡಿಮೆ ಮಾಡುವ ಗುಣವೂ ಇದರಲ್ಲಿದೆ. ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ನಾಲ್ಕು ಕರಿ ಬೇವಿನ ಎಲೆಗಳನ್ನು ತಿನ್ನುವುದು ಆರೋಗ್ಯಕರ.

ಹೃದಯ ಸಂಬಂಧಿ ಕಾಯಿಲೆಗಳಿಗೆ ನುಗ್ಗೆ ಸೊಪ್ಪು : ನುಗ್ಗೆ ಸೊಪ್ಪು ಕೊಲೆಸ್ಟ್ರಾಲ್ ಕಡಿಮೆ ಮಾಡುವ ಶಕ್ತಿಯನ್ನು ಹೊಂದಿದೆ. ನುಗ್ಗೆ ಸೊಪ್ಪು, ನುಗ್ಗೆ ಕಾಯಿ ಮತ್ತು ನುಗ್ಗೆ ಹೂವುಗಳನ್ನು ಶತಮಾನಗಳಿಂದಲೂ ಭಾರತೀಯ ಮನೆಗಳಲ್ಲಿ ಬಳಸಲಾಗುತ್ತಿದೆ. ನುಗ್ಗೆ ಸೊಪ್ಪು ಹೃದಯದ ಆರೋಗ್ಯವನ್ನು ರಕ್ಷಿಸುವ ಕೆಲಸ ಮಾಡುತ್ತದೆ.

 World Health Day 2022: ಈ ದಿನದ ಇತಿಹಾಸ, ಮಹತ್ವವೇನು ?

ಕ್ಯಾನ್ಸರ್ ಗೆ ಬೆಳ್ಳುಳ್ಳಿ ಎಲೆಗಳು : ಬೆಳ್ಳುಳ್ಳಿಯು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ, ಅಸಂಖ್ಯಾತ ಗುಣಗಳನ್ನು ಮತ್ತು ಪೋಷಕಾಂಶಗಳನ್ನು ಹೊಂದಿದೆ. ಬೆಳ್ಳುಳ್ಳಿಯ ಹಸಿರು ಎಲೆಗಳು ಸ್ತನ ಕ್ಯಾನ್ಸರ್, ಕರುಳಿನ ಕ್ಯಾನ್ಸರ್, ಚರ್ಮದ ಕ್ಯಾನ್ಸರ್, ಮೂತ್ರಕೋಶದ ಕ್ಯಾನ್ಸರ್ ಮತ್ತು ಶ್ವಾಸಕೋಶದ ಕ್ಯಾನ್ಸರ್ ಇತ್ಯಾದಿಗಳ ಅಪಾಯವನ್ನು ಕಡಿಮೆ ಮಾಡುತ್ತದೆ. 

ಮಧುಮೇಹಕ್ಕೆ ಬೇವಿನ ಎಲೆ : ಬೇವಿನ ಕಹಿ ಎಲೆಗಳು ಮಧುಮೇಹದ ಚಿಕಿತ್ಸೆಗೆ ಪರಿಣಾಮಕಾರಿಯಾಗಿದೆ. ಬೇವಿನ ಎಲೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮಧುಮೇಹವನ್ನು ನಿಯಂತ್ರಿಸಲು ಬೇವಿನ ಪುಡಿಯನ್ನು ಬಳಸಬಹುದು. ಕೆಲವು ಒಣಗಿದ ಬೇವಿನ ಎಲೆಗಳನ್ನು ತೆಗೆದುಕೊಂಡು ಅವುಗಳನ್ನು ನಯವಾಗಿ ಪುಡಿ ಮಾಡಿ ದಿನಕ್ಕೆ ಎರಡು ಬಾರಿ ಇದನ್ನು ಸೇವಿಸಬೇಕು.
 

click me!