ಭಾರತದಲ್ಲಿ ಬಿಸಿಲಿನ ತಾಪಮಾನ ತೀವ್ರವಾಗಿ ಹೆಚ್ಚುತ್ತಿದೆ. ಜೊತೆಗೆ ನಿರ್ಜಲೀಕರಣ, ಅಜೀರ್ಣದಂಥಾ ಆರೋಗ್ಯ ಸಮಸ್ಯೆಯೂ ಜನರನ್ನು ಕಾಡ್ತಿದೆ. ಜನರು ಜ್ಯೂಸ್ ಸೇರಿದಂತೆ ಮನೆಯಲ್ಲೇ ಕೆಲವು ಆರೋಗ್ಯಕರ ಪಾನೀಯಗಳನ್ನು ಮಾಡಿ ಕುಡೀತಿದ್ದಾರೆ. ಆದ್ರೆ ನಿರ್ಜಲೀಕರಣಕ್ಕೆ ಇಂಥಾ ಪಾನೀಯಗಳನ್ನು ಕುಡಿಯದೆ ORS ಕುಡಿಯುವಂತೆ WHO ಸೂಚಿಸಿದೆ.
ಭಾರತದಲ್ಲಿ ಬಿಸಿಲಿನ ತಾಪಮಾನ ತೀವ್ರವಾಗಿ ಹೆಚ್ಚುತ್ತಿದೆ. ದಕ್ಷಿಣಭಾರತದಲ್ಲಿ ವಿಪರೀತ ಮಳೆಯಾದರೆ, ಉತ್ತರಭಾರತದಲ್ಲಿ ಬಿಸಿಲಿನ ಹೊಡೆತ ಜನರನ್ನು ಕಂಗೆಡಿಸುತ್ತಿದೆ. ಹೆಚ್ಚುತ್ತಿರುವ ಬಿಸಿಲಿನ ಶಾಖದಿಂದ ಆರೋಗ್ಯ ಸಮಸ್ಯೆ ಸಹ ಹೆಚ್ಚುತ್ತಿದೆ. ಅದರಲ್ಲೂ ಮಕ್ಕಳಲ್ಲಿ ನಿರ್ಜಲೀಕರಣದ ಸಮಸ್ಯೆ ವಿಪರೀತವಾಗಿದೆ. ಅಧಿಕ ತಾಪಮಾನದಿಂದ ಕಾಡುವ ಅತ್ಯಂತ ಸಾಮಾನ್ಯ ಆರೋಗ್ಯ ಸಮಸ್ಯೆಯೆಂದರೆ ಅತಿಸಾರ, ಇದು ಅತಿಯಾದ ನೀರು ಮತ್ತು ಎಲೆಕ್ಟ್ರೋಲೈಟ್‌ಗಳ ನಷ್ಟಕ್ಕೆ ಕಾರಣವಾಗುತ್ತದೆ.
ಭಾರತದಲ್ಲಿ, ಅತಿಸಾರವು ಮಕ್ಕಳ ಮರಣಕ್ಕೆ ಮೂರನೇ ಪ್ರಮುಖ ಕಾರಣವಾಗಿದೆ. ಅತಿಸಾರದಿಂದ ಉಂಟಾಗುವ ನಿರ್ಜಲೀಕರಣವನ್ನು ಸುಲಭವಾಗಿ ತಡೆಗಟ್ಟುವ ಓರಲ್ ರೀಹೈಡ್ರೇಶನ್ ಸಾಲ್ಟ್‌ಗಳ (ORS) ಪ್ರಾಮುಖ್ಯತೆಯ ಹೊರತಾಗಿಯೂ, ಇತ್ತೀಚಿನ NFHS-5 ಡೇಟಾ ಪ್ರಕಾರ ಕೇವಲ 60.6% ಮಕ್ಕಳು ಮಾತ್ರ ಈ ಅಗತ್ಯ ಚಿಕಿತ್ಸೆಯನ್ನು ಪಡೆಯುತ್ತಾರೆ. ನವದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಯ ನಿಯೋನಾಟಾಲಜಿಯ ಹಿರಿಯ ಸಲಹೆಗಾರ ಡಾ.ಪಂಕಜ್ ಗಾರ್ಗ್, ಮಕ್ಕಳಲ್ಲಿ ನಿರ್ಜಲೀಕರಣ ಮತ್ತು ಅತಿಸಾರವನ್ನು ನಿರ್ವಹಿಸುವಲ್ಲಿ ORS ನ ಪ್ರಾಮುಖ್ಯತೆಯನ್ನು ತಿಳಿಸಿದ್ದಾರೆ.
ಉತ್ತರ ಭಾರತದಲ್ಲಿ ಉಷ್ಣಹವೆ: ಬಿರು ಬಿಸಿಲಿಗೆ ಮತ್ತೆ 54 ಮಂದಿ ಸಾವು..!
'ಅತಿಸಾರವು ತ್ವರಿತ ದ್ರವದ ನಷ್ಟ ಮತ್ತು ಎಲೆಕ್ಟ್ರೋಲೈಟ್ ಅಸಮತೋಲನಕ್ಕೆ ಕಾರಣವಾಗುತ್ತದೆ, ಇದು ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ. ORS ಕಳೆದುಹೋದ ದ್ರವಗಳು ಮತ್ತು ಎಲೆಕ್ಟ್ರೋಲೈಟ್‌ಗಳನ್ನು ಮರುಪೂರಣಗೊಳಿಸಲು ಪರಿಣಾಮಕಾರಿ ಪರಿಹಾರವಾಗಿದೆ' ಎಂದು ಡಾ.ಗಾರ್ಗ್ ಹೇಳಿದರು.
ನಿರ್ಜಲೀಕರಣ ತಡೆಯಲು ಮನೆಯಲ್ಲೇ ತಯಾರಿಸಿದ ಪಾನೀಯಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ನಿರ್ಜಲೀಕರಣವನ್ನು ಹದಗೆಡಿಸುವ ಅಥವಾ ತೀವ್ರತರವಾದ ಪ್ರಕರಣಗಳಲ್ಲಿ ಸಾವಿನಂತಹ ಗಂಭೀರ ಆರೋಗ್ಯ ಅಪಾಯಗಳಿಗೆ ಕಾರಣವಾಗುತ್ತದೆ' ಎಂದು ಡಾ ಗಾರ್ಗ್ ಎಚ್ಚರಿಸಿದ್ದಾರೆ.
ದೆಹಲಿ ನಗರದ ಇತಿಹಾಸದಲ್ಲಿಯೇ ದಾಖಲೆಯ ತಾಪಮಾನ, 52.3 ಡಿಗ್ರಿ ಬಿಸಿಲಿಗೆ ಜನ ಕಂಗಾಲು!
ಅತಿಸಾರ ಮತ್ತು ನಿರ್ಜಲೀಕರಣವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸರಿಯಾದ ORS ಅನ್ನು ಆಯ್ಕೆ ಮಾಡುವುದು ಮುಖ್ಯವಾಗಿದೆ. ORS ಮತ್ತು ವಾಣಿಜ್ಯಿಕವಾಗಿ ಲಭ್ಯವಿರುವ ಸಕ್ಕರೆ ಪಾನೀಯಗಳ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯುವುದು ಅತ್ಯಗತ್ಯ. ಈ ಉದ್ದೇಶಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ವಿಶ್ವ ಆರೋಗ್ಯ ಸಂಸ್ಥೆ (WHO) ಅನುಮೋದಿಸಿದ ORS ಸೂತ್ರೀಕರಣವನ್ನು ಆಯ್ಕೆ ಮಾಡಲು ಡಾ.ವಾಲಿ ಸೂಚಿಸಿದರು. ಈ ORS ಪ್ಯಾಕೇಜುಗಳಲ್ಲಿ ಹೆಚ್ಚಿನವುಗಳಲ್ಲಿ WHO ಎಂದು ಬರೆಯಲಾಗುತ್ತದೆ. WHO-ಅನುಮೋದಿತ ORS ಸೂತ್ರೀಕರಣವು ಒಟ್ಟಾರೆ ಆರೋಗ್ಯವನ್ನು ಕಾಪಾಡುತ್ತದೆ ಎಂದು ತಿಳಿಸಿದರು.