ಬಾಯಿ ದುರ್ವಾಸನೆ ಸಹಿಸೋದು ಕಷ್ಟ. ಮಾತನಾಡೋರಿಗೆ ಅದ್ರ ಅರಿವಿಲ್ಲವೆಂದ್ರೂ ಮುಂದಿರೋರು ಹಿಂಸೆಪಡಬೇಕು. ನಾನಾ ಕಾರಣಕ್ಕೆ ನಮ್ಮ ಬಾಯಿಯಿಂದ ವಾಸನೆ ಬರುತ್ತದೆ. ಅದನ್ನು ಹೇಗೆ ತಡೆಯೋದು ಎಂಬ ಮಾಹಿತಿ ಇಲ್ಲಿದೆ.
ಬಾಲಿವುಡ್ ಡಾನ್ಸಿಂಗ್ ಕ್ವೀನ್ ಮಾಧುರಿ ದೀಕ್ಷಿತ್ ಪತಿ ವೈದ್ಯರು. ಮಾಧುರಿ ಪತಿ ಡಾ.ಶ್ರೀರಾಮ್ ನೆನೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಅವರು ಯುಟ್ಯೂಬ್ ಚಾನೆಲ್ ನಡೆಸ್ತಿದ್ದು, ಅದರಲ್ಲಿ ಜನರಿಗೆ ಅಗತ್ಯವಿರುವ ಆರೋಗ್ಯದ ಮಾಹಿತಿಯನ್ನು ನೀಡ್ತಿರುತ್ತಾರೆ. ಈಗ ಡಾ.ಶ್ರೀರಾಮ್ ನೆನೆ, ಬಾಯಿಂದ ಬರುವ ವಾಸನೆ ನಿವಾರಣೆ ಮಾಡೋದು ಹೇಗೆ ಎಂಬ ಬಗ್ಗೆ ಮಾರ್ಗದರ್ಶನ ನೀಡಿದ್ದಾರೆ.
ಬೆಳಿಗ್ಗೆ ಎದ್ದಾಗ ಬಾಯಿಂದ ವಾಸನೆ ಬರೋದು ಮಾಮೂಲಿ. ಬ್ರೆಷ್ (Bresh) ಮಾಡಿದ್ಮೇಲೆ ಈ ವಾಸನೆ ಇರೋದಿಲ್ಲ. ಆದ್ರೆ ಕೆಲವರಿಗೆ ಬ್ರೆಷ್ ಮಾಡಿದ್ರೂ ಬಾಯಿಯಿಂದ ವಾಸನೆ ಬರ್ತಿರುತ್ತದೆ. ಆ ವಾಸನೆ (Smell ) ಅವರಿಗೆ ತಿಳಿಯೋದಿಲ್ಲವಾದ್ರೂ ಎದುರಿರುವವರು ಇದ್ರಿಂದ ಹಿಂಸೆ ಅನುಭವಿಸಬೇಕಾಗುತ್ತದೆ. ಅನೇಕ ಬಾರಿ ಈ ಬಾಯಿ ವಾಸನೆ ಮುಜುಗರ ತರಿಸುತ್ತದೆ. ಎಲ್ಲರ ಮುಂದೆ ಮನಸ್ಸು ಬಿಚ್ಚಿ ಮಾತನಾಡಲು ಸಾಧ್ಯವಾಗೋದಿಲ್ಲ. ತಂಬಾಕು ಸೇವನೆ, ಮದ್ಯಪಾನಿಗಳಿಗೆ ಇದು ಸಾಮಾನ್ಯ ಸಮಸ್ಯೆಯಾಗಿದೆ. ಇದಲ್ಲದೆ ಬಾಯಿ ದುರ್ವಾಸನೆಗೆ ಏನು ಕಾರಣ ಹಾಗೂ ಅದಕ್ಕೆ ಪರಿಹಾರ ಏನು ಎಂಬುದನ್ನು ಶ್ರೀರಾಮ್ ನೆನೆ (Sriram Nene) ಹೇಳಿದ್ದಾರೆ. ಬಾಯಿಂದ ವಾಸನೆ ಬರಲು ಕಾರಣವೇನು? : ನಮ್ಮ ಬಾಯಿಯಿಂದ ವಾಸನೆ ಬರಲು ಕಾರಣವೇನು ಎಂಬುದನ್ನು ಡಾ. ಶ್ರೀರಾಮ್ ನೆನೆ ತಿಳಿಸಿದ್ದಾರೆ.
undefined
ಹಾರ್ಟ್ ಅಟ್ಯಾಕ್ ಪ್ರಮಾಣ ಕಳೆದ 10 ವರ್ಷಗಳಲ್ಲಿ ಶೇ.22 ಹೆಚ್ಚಳ: ಡಾ. ಸಿ.ಎನ್. ಮಂಜುನಾಥ್
ಸಾಮಾನ್ಯವಾಗಿ ನಾವು ಉಸಿರನ್ನು ಬಿಡುವಾಗ ಬಾಯಿಯಿಂದ ಬಾಷ್ಪಶೀಲ ಸಲ್ಫರ್ ಸಂಯುಕ್ತವು ಹೊರಬರುತ್ತದೆ. ಇದು ಬಾಯಿಯ ದುರ್ವಾಸನೆಗೆ ಕಾರಣವಾಗುತ್ತದೆ ಎಂದು ಡಾ. ನೆನೆ ಹೇಳಿದ್ದಾರೆ.
ನಾವು ಸರಿಯಾವಿ ಬಾಯನ್ನು ಸ್ವಚ್ಛಗೊಳಿಸದೆ ಹೋದಾಗ ಬಾಯಿ ವಾಸನೆ ಬರುತ್ತದೆ. ಅಂದ್ರೆ ಕೆಲವು ಆಹಾರ ಉತ್ಪನ್ನಗಳು ಬ್ಯಾಕ್ಟೀರಿಯಾವನ್ನು ಹೊಂದಿರುತ್ತವೆ. ನಾವು ಬಾಯಿ ಕ್ಲೀನ್ ಮಾಡದೆ ಹೋದ ಸಂದರ್ಭದಲ್ಲಿ ಇದು ಬಾಯಿ ಮತ್ತು ಹಲ್ಲುಗಳ ನಡುವೆ ಸಿಲುಕಿಕೊಳ್ಳುತ್ತದೆ. ಇದರಿಂದಾಗಿ ಬಾಯಿಯ ದುರ್ವಾಸನೆಯೂ ಉಂಟಾಗುತ್ತದೆ. ಬ್ರೆಷ್ ಹೇಗೆ ಮಾಡ್ಬೇಕು ಎನ್ನುವುದು ಎಲ್ಲರಿಗೂ ತಿಳಿದಿರಬೇಕು. ಸರಿಯಾಗಿ ಬ್ರೆಷ್ ಮಾಡದೆ ಹೋದ್ರೆ ಬಾಯಿ ವಾಸನೆ ಬರುತ್ತದೆ ಎಂದು ನೆನೆ ಹೇಳಿದ್ದಾರೆ.
ಸೈಕಾಟಿಕ್ ಬ್ರೇಕ್ ಡೌನ್… ಸೆಲೆಬ್ರಿಟಿಗಳನ್ನು ಬಿಡದೇ ಕಾಡಿದ ಈ ಮಾನಸಿಕ ಸಮಸ್ಯೆ ಬಗ್ಗೆ ತಿಳಿಯಲೇಬೇಕು….
ಬಾಯಿಯಿಂದ ಬರುವ ದುರ್ವಾಸನೆಗೆ ಬೇರೆ ಕಾರಣವೂ ಇರುತ್ತದೆ. ಹೊಟ್ಟೆ ಸಮಸ್ಯೆ ಕೂಡ ಇದಕ್ಕೆ ಕಾರಣವಾಗಬಹುದು. ಬಾಯಿ ವಾಸನೆಯನ್ನು ನಿರ್ಲಕ್ಷ್ಯ ಮಾಡಿದ್ರೆ ಅದು ನಿಮ್ಮ ಆರೋಗ್ಯವನ್ನು ಹದಗೆಡಿಸಬಹುದು ಎನ್ನುತ್ತಾರೆ ನೆನೆ.
ಬಾಯಿಯಿಂದ ಬರುವ ದುರ್ವಾಸನೆ ಎದೆಯುರಿಗೆ ಕಾರಣವಾಗುತ್ತದೆ. ದುರ್ವಾಸನೆಯು ಕೆಲವು ಸಂದರ್ಭಗಳಲ್ಲಿ ಮಧುಮೇಹದ ಸಂಕೇತವೂ ಆಗಿರಬಹುದು ಎಂದು ನೆನೆ ಹೇಳಿದ್ದಾರೆ.
ಬಾಯಿ ದುರ್ವಾಸನೆ ತಡೆಯುವ ಮಾರ್ಗಗಳು :
• ನಾವು ಹೆಚ್ಚು ಸಿಹಿ ಪದಾರ್ಥಗಳನ್ನು ಸೇವನೆ ಮಾಡಿದ್ರೆ ಅದು ಕೂಡ ನಮ್ಮ ಬಾಯಿಯ ದುರ್ವಾಸನೆಗೆ ಕಾರಣವಾಗುತ್ತದೆ. ಹಾಗಾಗಿ ಹೆಚ್ಚು ಸಿಹಿ ಆಹಾರದಿಂದ ದೂರವಿರುವುದು ಒಳ್ಳೆಯದು. ಅಲ್ಲದೆ ಧೂಮಪಾನ ಮಾಡಬೇಡಿ. ಹೀಗೆ ಮಾಡುವುದರಿಂದ ಬಾಯಿಯಲ್ಲಿ ಸಾವಿರಾರು ಸಂಯುಕ್ತಗಳು ಉಂಟಾಗುತ್ತವೆ. ಇದು ಬಾಯಿಯ ದುರ್ವಾಸನೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದು ನೆನೆ ಹೇಳಿದ್ದಾರೆ.
• ಹೆಚ್ಚು ಈರುಳ್ಳಿ ಮತ್ತು ಬೆಳ್ಳುಳ್ಳಿ ತಿನ್ನುವುದರಿಂದ ಹೆಚ್ಚು ಬಾಷ್ಪಶೀಲ ಸಲ್ಫರ್ ಉತ್ಪತ್ತಿಯಾಗುತ್ತದೆ . ಇದು ಕೆಟ್ಟ ವಾಸನೆಯನ್ನು ಉಂಟುಮಾಡುತ್ತದೆ. ಅದ್ರಲ್ಲೂ ಹಸಿ ಈರುಳ್ಳಿ ಬಾಯಿ ವಾಸನೆಯನ್ನು ಹೆಚ್ಚು ಮಾಡುತ್ತದೆ. ಆದ್ದರಿಂದ ಇದನ್ನು ಸೀಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಿ ಎಂಬುದು ನೆನೆ ಸಲಹೆ.
• ನಿಮ್ಮ ಬಾಯಿಂದ ವಾಸನೆ ಬರಬಾರದು ಅಂದ್ರೆ ನೀವು ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಸೇವನೆ ಮಾಡ್ಬೇಕು. ನೀರು ಕುಡಿಯೋದ್ರಿಂದ ಲಾಲಾರಸವು ಬಾಯಿಯಲ್ಲಿ ಉಳಿಯುತ್ತದೆ. ಇದು ಬಾಯಿಯನ್ನು ಸ್ವಚ್ಛವಾಗಿರಿಸುತ್ತದೆ. ಕೆಟ್ಟ ವಾಸನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
• ಹಲ್ಲಿನ ಸ್ವಚ್ಛತೆ ಬಗ್ಗೆ ಎಲ್ಲರೂ ಗಮನ ಹರಿಸಬೇಕು. ಬೆಳಿಗ್ಗೆ ಮತ್ತು ರಾತ್ರಿ ಬ್ರೆಷ್ ಮಾಡ್ಬೇಕು ಎನ್ನುತ್ತಾರೆ ನೆನೆ.