ತರಕಾರಿಗಳನ್ನು ಸೋಪ್‌ ನೀರಲ್ಲಿ ತೊಳೆದರೆ ಭಾರೀ ಡೇಂಜರ್!

By Suvarna News  |  First Published Jul 23, 2020, 6:38 PM IST

ಭಯ ಎಲ್ಲಿವರೆಗೆ ಬಂದಿದೆ ಅಂದರೆ ನಮ್ಮ ಹೆಚ್ಚಿನ ಮನೆಗಳಲ್ಲಿ ಹಣ್ಣು, ತರಕಾರಿಗಳನ್ನು ಸೋಪ್ ವಾಟರ್‌ನಲ್ಲಿ ತೊಳೆಯೋ ಜಾಯಮಾನ ಶುರುವಾಗಿದೆ. ಆದರೆ ಇದು ಬಹಳ ಡೇಂಜರ್ ಅಂತಾರೆ ತಜ್ಞ ವೈದ್ಯರು.


ಎಲ್ಲಾ ಕಡೆ ಕೋವಿಡ್ ೧೯ ನದೇ ಸುದ್ದಿ. ಬೆಂಗಳೂರಿನಲ್ಲಂತೂ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಟೆಸ್ಟ್ ಪಾಸಿಟಿವ್ ಬಂದ ಕೂಡಲೇ ಹೆದರಿ ಕಂಗಾಲಾಗುವ ರೋಗಿ, ಆಸ್ಪತ್ರೆಗೆ ಅಡ್ಮಿಟ್ ಆಗೋಣ ಅಂತ ಹೊರಟರೆ ಎಲ್ಲಾ ಹಾಸ್ಪಿಟಲ್‌ಗಳಲ್ಲೂ ಬೆಡ್‌ನ ಕೊರತೆ. ಈ ಎಲ್ಲ ಅವಸ್ಥೆಗಳನ್ನು ಕಣ್ಣಾರೆ ಅಥವಾ ಮಾಧ್ಯಮಗಳ ಮೂಲಕ ನೋಡೋ ಜನರಿಗೆ ಕೊರೋನಾ ಬಗ್ಗೆ ಸಿಕ್ಕಾಪಟ್ಟೆ ಭಯ ಶುರುವಾಗಿದೆ. ರೋಗ ಬಂದು ಒದ್ದಾಡೋದಕ್ಕಿಂತ ರೋಗ ಬರದ ಹಾಗೆ ತಡೆಯೋದು ಜಾಣತನ ಅಂತ ಅವರು ಅರಿತುಕೊಂಡಿದ್ದಾರೆ. ನಾವು ಹೊರಗೆ ಜಾಸ್ತಿ ಓಡಾಡದಿದ್ದರೂ ಹೊರಗಿಂದ ಒಳಗೆ ಬರುವ ತರಕಾರಿ, ಹಣ್ಣುಗಳನ್ನು ಮನೆ ತುಂಬಿಸಲೇ ಬೇಕಲ್ವಾ? ಕೋವಿಡ್ ಕೇಸ್‌ಗಳು ಹೆಚ್ಚಿರುವ ಬೆಂಗಳೂರಿನ ಕೆಲವು ಭಾಗಗಳಿಂದ  ತರಕಾರಿ, ಹಣ್ಣುಗಳು ಇಡೀ  ಮಹಾನಗರಕ್ಕೆ ಸಪ್ಲೈ ಆಗುವ ಕಾರಣ ತರಕಾರಿ, ಹಣ್ಣುಗಳಿಂದ ಕೋವಿಡ್ ಹರಡೋ ಭೀತಿ ಇಲ್ಲದಿಲ್ಲ. ರಾಜ್ಯದ ಹೆಚ್ಚಿನ ಭಾಗಗಳಲ್ಲೂ ಇದೇ ಸ್ಥಿತಿ ಇದೆ. 

ಪರಿಸ್ಥಿತಿ ಹೀಗಿರುವಾಗ ತರಕಾರಿ ಹಣ್ಣುಗಳನ್ನು ಎಷ್ಟು ತೊಳೆದರೂ ನಮಗೆ ತೃಪ್ತಿ ಇಲ್ಲ. ಈ ಭಯ ಎಲ್ಲಿವರೆಗೆ ಬಂದಿದೆ ಅಂದರೆ ನಮ್ಮ ಹೆಚ್ಚಿನ ಮನೆಗಳಲ್ಲಿ ಹಣ್ಣು, ತರಕಾರಿಗಳನ್ನು ಸೋಪ್ ವಾಟರ್‌ನಲ್ಲಿ ತೊಳೆಯೋ ಜಾಯಮಾನ ಶುರುವಾಗಿದೆ. ಆದರೆ ಇದು ಬಹಳ ಡೇಂಜರ್ ಅಂತಾರೆ ತಜ್ಞ ವೈದ್ಯರು. ಸೋಪ್‌ ಅಥವಾ ಡಿಟರ್ಜೆಂಟ್ನಲ್ಲಿ ಫಾರ್ಮಲ್ಡಿಹೈಡ್‌ನ ಅಂಶಗಳಿರುತ್ತವೆ. ಸ್ಯಾನಿಟೈಸರ್‌ನಲ್ಲೂ ಇವಿರುತ್ತವೆ. ಇವು ಆಹಾರ ಪದಾರ್ಥಗಳ ಮೂಲಕ ಹೊಟ್ಟೆಗೆ ಹೋದರೆ ಸಾಕಷ್ಟು ಸಮಸ್ಯೆಯಾಗುತ್ತದೆ. ಕರುಳಿನಲ್ಲಿ ನೋವು ಕಾಣಿಸಿಕೊಳ್ಳಬಹುದು. ಇನ್ನೂ ಸಾಕಷ್ಟು ಆರೋಗ್ಯ ಸಮಸ್ಯೆಗಳಾಗುತ್ತವೆ. 

Tap to resize

Latest Videos

ತರಕಾರಿ, ಹಣ್ಣುಗಳನ್ನು ಹೀಗೆ ಶುದ್ಧಗೊಳಿಸಿ
- ಒಮ್ಮೆ ತರಕಾರಿ, ಹಣ್ಣುಗಳನ್ನು ಶುದ್ಧ ನೀರಲ್ಲಿ ಚೆನ್ನಾಗಿ ತೊಳೆಯಿರಿ.
- ಬಳಿಕ ಇದನ್ನು ಬಿಸಿ ನೀರಲ್ಲಿ ಹಾಕಿ. ಅರ್ಧ ಗಂಟೆಯಿಂದ ಒಂದು ಗಂಟೆಗಳ ಕಾಲ ಹಾಗೇ ಬಿಡಿ.
- ಈ ನೀರಿಗೆ ಕಲ್ಲು ಉಪ್ಪು ಅಥವಾ ಹರಳುಪ್ಪು, ಸ್ವಲ್ಪ ಅರಿಶಿನ ಹಾಕಿದರೆ ಉತ್ತಮ.
- ಅರ್ಧ ಗಂಟೆಯ ಬಳಿಕ ಇವುಗಳನ್ನು ನೀರಿಂದ ತೆಗೆದು ಶುದ್ಧ ಬಟ್ಟೆಯಲ್ಲಿ ಒರೆಸಿ ಅಡುಗೆಗೆ ತಿನ್ನೋದಕ್ಕೆ ಬಳಸಿ. 

ಉಪ್ಪಿನಕಾಯಿ ಜ್ಯೂಸ್ ಬಗ್ಗೆ ಕೇಳಿದ್ದೀರಾ?ಆರೋಗ್ಯ ಸಮಸ್ಯೆಗಿದು ರಾಮಬಾಣ 
ಇದರ ಜೊತೆಗೆ ಎರಡು ಲೀಟರ್ ನೀರಿಗೆ ಎರಡು ಸ್ಪೂನ್ ಉಪ್ಪು, ಅರ್ಧ ಕಪ್ ವಿನಿಗರ್ ಹಾಕಿ ಹತ್ತು ನಿಮಿಷ ತರಕಾರಿ, ಹಣ್ಣುಗಳನ್ನು ಇದರಲ್ಲಿ ನೆನೆಸಿಟ್ಟರೂ ಉತ್ತಮ. 

ನಾಯಿ ಜೊತೆ ವರ್ಕೌಟ್‌ ಮಾಡೋ ಅದಿತಿ ರಾವ್‌ ಹೈದರಿ! 

ಇವು ಸರಳವಾಗಿ ತರಕಾರಿ ಹಣ್ಣುಗಳನ್ನು ಸ್ವಚ್ಛಗೊಳಿಸುವ ವಿಧಾನ. ಪರಿಣಿತ ವೖದ್ಯರೇ ಇದನ್ನು ಸೂಚಿಸಿರುವ ಕಾರಣ ನಿರ್ಭೀತಿಯಿಂದ ಬಳಸಬಹುದು. ಈಗ ಮಾರುಕಟ್ಟೆಯಲ್ಲಿ ಹಣ್ಣು, ತರಕಾರಿ ಸ್ವಚ್ಛಗೊಳಿಸಲೆಂದೇ ಕೆಲವು ಉಪಕರಣಗಳು ಬಂದಿವೆ. ಇವು ಹಣ್ಣು, ತರಕಾರಿಗಳನ್ನು ಸ್ವಚ್ಛಗೊಳಿಸುತ್ತವೆ. ಆದರೆ ಅವುಗಳಲ್ಲಿರುವ ಪೌಷ್ಠಿಕಾಂಶಗಳನ್ನು ನಾಶ ಮಾಡೋದಿಲ್ಲ. ಇವು ಹಣ್ಣು, ತರಕಾರಿಗಳನ್ನು ಕ್ಲೀನಾಗಿ ತೊಳೆಯೋದರ ಜೊತೆಗೆ ಅವುಗಳಲ್ಲಿರುವ ರಾಸಾಯನಿಕ ಅಂಶಗಳನ್ನೂ ತೆಗೆದುಹಾಕುತ್ತವೆಯಂತೆ. ಆದರೆ ಇವುಗಳ ಪ್ರಯೋಜನ, ದುಷ್ಪರಿಣಾಮಗಳ ಬಗ್ಗೆ ಇನ್ನಷ್ಟೇ ವರದಿ ಬರಬೇಕಿದೆ. ಕಂಪೆನಿಗಳು ತಮ್ಮ ಉತ್ಪನ್ನಗಳನ್ನು ಬಹಳ ರಂಗು ರಂಗಾಗಿ ಪ್ರಮೋಟ್ ಮಾಡಿದರೂ, ಬಳಸುವ ನಾವು ಪರೀಕ್ಷಿಸದೇ ಖರೀದಿಸುವಂತಿಲ್ಲ. ಇದರ ಜೊತೆಗೆ ಕೆಲವು ಪೌಡರ್‌ಗಳು, ಲಿಕ್ವಿಡ್‌ಗಳೂ ತರಕಾರಿ, ಹಣ್ಣುಗಳ ಸ್ವಚ್ಛತೆಗಾಗಿ ಮಾರುಕಟ್ಟೆಯಲ್ಲಿವೆ. ಆದರೆ ಇವನ್ನೆಲ್ಲ ಖರೀದಿಸುವ ಮೊದಲು ಜಾಗರೂಕತೆಯಿಂದ ಪರೀಕ್ಷಿಸುವುದು ಅತ್ಯಗತ್ಯ. 

ಇಮ್ಯುನಿಟಿ ಹೆಚ್ಚಿಸಿಕೊಳ್ಳಲು ಸೆಲೆಬ್ರಿಟಿಗಳೇನು ಮಾಡ್ತಾರೆ? 

click me!