ಇಮ್ಯುನಿಟಿ ಹೆಚ್ಚಿಸಿಕೊಳ್ಳಲು ಸೆಲೆಬ್ರಿಟಿಗಳೇನು ಮಾಡ್ತಾರೆ?

By Kannadaprabha News  |  First Published Jul 23, 2020, 9:20 AM IST

ಆರೋಗ್ಯದ ಬಗ್ಗೆ ಸದಾ ಎಚ್ಚರದಿಂದಿರೋ ಸೆಲೆಬ್ರಿಟಿಗಳು ಇಮ್ಯುನಿಟಿ ಹೆಚ್ಚಿಸಿಕೊಳ್ಳಲು ಏನ್‌ ಮಾಡುತ್ತಿದ್ದಾರೆ ಅನ್ನುವ ಕುತೂಹಲ ಹೆಚ್ಚಿನವರಲ್ಲಿದೆ. ಆ ಕುರಿತ ಮಾಹಿತಿ ಇಲ್ಲಿದೆ.


1. ಮಿಲಿಂದ್‌ ಸೋಮನ್‌: ಹಣ್ಣಿನಿಂದಲೇ ದಿನದ ಆರಂಭ

Tap to resize

Latest Videos

ನೇಚರ್‌ ಲವರ್‌ ಮಿಲಿಂದ್‌ ಸೋಮನ್‌ ಆಹಾರ, ಫಿಟ್‌ನೆಸ್‌ ವಿಷಯದಲ್ಲಿ ಕಿಂಗ್‌. ದಿನಕ್ಕೆ ಆರು ಕಿಮೀ ಓಡ್ತಾರೆ. ಸಂಸ್ಕರಿಸಿದ ಆಹಾರ ತಿನ್ನೋದೇ ಇಲ್ಲ. ತರಕಾರಿ ಹಿತ್ತಲಲ್ಲೇ ಬೆಳೆಯುತ್ತಾರೆ. ಬೆಳಗ್ಗೆ ಬರೀ ಹಣ್ಣು ತಿನ್ನೋದು. ‘ಹಸಿ ಹೊಟ್ಟೆಗೆ ತಿನ್ನುವ ಸಾವಯವವಾಗಿ ಬೆಳೆದ ಹಣ್ಣು ಬೆಸ್ಟ್‌ ಇಮ್ಯುನಿಟಿ ಬೂಸ್ಟರ್‌. ಹಾಗಂತ ಗಬ ಗಬನೆ ತಿನ್ನಬೇಡಿ. 1 ಗಂಟೆ ಕಾಲ ಹಣ್ಣುಗಳನ್ನು ನಿಧಾನಕ್ಕೆ ತಿನ್ನುತ್ತಿರಿ’ ಅಂತಾರೆ. ಪ್ರಕೃತಿಗೆ ಹತ್ತಿರವಾದಷ್ಟುರೋಗದಿಂದ ದೂರ ಇರುತ್ತೀರಿ ಅನ್ನೋದು ಇವರ ಥಿಯರಿ.

81 ವರ್ಷದ ಹುಟ್ಟುಹಬ್ಬಕ್ಕೆ 15 Push-ups ಮಾಡಿದ ಮಿಲಿಂದ್ ಸೋಮನ್‌ ತಾಯಿ!

2. ಬಿಪಾಶಾ ಬಸು - ಅರಶಿನ ಮಿಶ್ರಿತ ಕಷಾಯ

ಇನ್‌ಸ್ಟಾಗ್ರಾಮ್‌ನಲ್ಲಿ ತಾವು ದಿನಾ ಕುಡಿಯೋ ಇಮ್ಯುನಿಟಿ ಹೆಚ್ಚಿಸೋ ಕಷಾಯದ ವಿವರ ಬಿಪಾಶಾ ಹಾಕಿದ್ದಾರೆ.

ಆಗ್ರ್ಯಾನಿಕ್‌ ಅರಶಿನ (7 ಸ್ಪೂನ್‌) ಒಣಗಿಸಿ ಪುಡಿಮಾಡಿ. ಶುಂಠಿ ( 2ಸ್ಪೂನ್‌ನಷ್ಟು) ಒಣಗಿಸಿ ಪುಡಿಮಾಡಿಟ್ಟುಕೊಳ್ಳಿ. ಜೀರಿಗೆ (4 ಸ್ಪೂನ್‌), ಕೊತ್ತಂಬರಿ (4 ಸ್ಪೂನ್‌), ಸೋಂಪು (7 ಸ್ಪೂನ್‌), ಕಾಳು ಮೆಣಸು (ಅರ್ಧ ಸ್ಪೂನ್‌), ದಾಲ್ಚೀನಿ (ಅರ್ಧ ಸ್ಪೂನ್‌), ಏಲಕ್ಕಿ ಪುಡಿ (3 ಸ್ಪೂನ್‌) ಇವುಗಳನ್ನು ಎಣ್ಣೆ ಹಾಕದೇ ಹುರಿಯಿರಿ. ಘಮ ಬಂದರೆ ಸಾಕು. ತಣ್ಣಗಾದ ಮೇಲೆ ಇದನ್ನು ಪೌಡರ್‌ ಮಾಡಿ. ಇದಕ್ಕೆ ಅರಿಶಿನ ಪುಡಿ ಮತ್ತು ಶುಂಠಿ ಪೌಡರ್‌ಅನ್ನು ಮಿಕ್ಸ್‌ ಮಾಡಿ. ನೀರು, ಸ್ವಲ್ಪ ಬೆಲ್ಲ ಹಾಕಿ ಮಾಡೋ ಈ ಪುಡಿಯ ಕಷಾಯ ಇಮ್ಯೂನಿಟಿ ಬೂಸ್ಟರ್‌ ಅಂತ ಬಿಪಾಷಾ ಕಂಡುಕೊಂಡಿದ್ದಾರೆ.

ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸಿದ್ದೇ ಬಿಪಾಶಾ ಬಸು ಪಶ್ಚಾತ್ತಾಪಕ್ಕೆ ಕಾರಣವಾಯ್ತಾ?

3. ಶಿಲ್ಪಾ ಶೆಟ್ಟಿ: ಮೂರು ಬಗೆಯ ಇಮ್ಯೂನಿಟಿ ಬೂಸ್ಟರ್‌ಗಳು

ಮೂರು ಬಗೆಯ ಇಮ್ಯುನಿಟಿ ಬೂಸ್ಟರ್‌ಗಳನ್ನು ಶಿಲ್ಪಾ ಶೆಟ್ಟಿಹೇಳ್ತಾರೆ.

1. ಶುಂಠಿ, ತುಳಸಿ, ಸಿನಾಮನ್‌, ಕಾಳು ಮೆಣಸು, ಆಮ್ಲ, ಅರಿಶಿನ, ಬೆಲ್ಲ ಹಾಕಿ ಕಷಾಯ ಮಾಡಿ ಕುಡಿಯಿರಿ.

2. ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಗೆ ಆಮ್ಲ, ಸೋರೆಕಾಯಿ, ಶುಂಠಿ, ತುಳಸಿ, ಸ್ವಲ್ಪ ಉಪ್ಪು ಇವುಗಳನ್ನೆಲ್ಲ ಹಾಕಿ ಜ್ಯೂಸ್‌ ಮಾಡಿ ಸೇವಿಸಿ.

ಈಗ ಶಿಲ್ಪಾ ಶೆಟ್ಟಿ ಕಂಪ್ಲೀಟ್ ಸಸ್ಯಾಹಾರಿ! 

3. ಊಟವಾದ ಅರ್ಧ ಗಂಟೆಯ ನಂತರ ಜೀರಿಗೆ, ಕೊತ್ತಂಬರಿ ಕಾಳು, ಸೋಂಪು ಇವುಗಳನ್ನು ಒಣಗಿಸಿ ಪುಡಿ ಮಾಡಿ ಟೀ ಥರ ಮಾಡ್ಕೊಂಡು ಕುಡಿಯಬಹುದು.

click me!